ಸೋಮವಾರ, ಡಿಸೆಂಬರ್ 8, 2008

ಇತ್ತೀಚೆಗೆ ಓದಿದ್ದು -1: ಜಿ.ಎಲ್.ಸ್ವಾಮಿ.

ಇತ್ತೀಚೆಗೆ ಓದಿದ್ದು...
ಪುಸ್ತಕ: ಬಿ.ಜಿ.ಎಲ್.ಸ್ವಾಮಿ. ಡಾ ಮುಳುಕುಂಟೆ ರಮೇಶ್ ಇವರ ಮತ್ತು ಡಾ ಪ್ರಧಾನ್‌ ಗುರುದತ್ತರ ಸಂಪಾದಕತ್ವದಲ್ಲಿ ಮೂಡಿಬಂದಿರುವ ಪುಸ್ತಕ. ವ್ಯಕ್ತಿಚಿತ್ರ ಮತ್ತು ಬಿ.ಜಿ.ಎಲ್. ಸ್ವಾಮಿಯವರು ಬರೆದಿರುವ ವಿಜ್ಞಾನ ಲೇಖನಗಳು ಮತ್ತು ಪುಸ್ತಕಗಳು, ಅವುಗಳಲ್ಲಿನ ಎಳೆಗಳು, ಹೀಗೆ ಈ ಪುಸ್ತಕವನ್ನು ಪುಟ್ಟದಾದ ಒಂದು ವೃಕ್ಷದಂತೆ ಬೆಳೆಸಿದ್ದಾರೆ. ಓದುತ್ತಾ ಹೋದಂತೆ, ಬಿ.ಜಿ.ಎಲ್. ಸ್ವಾಮಿಯವರು ಬರೆದಿರುವ ಎಲ್ಲವನ್ನೂ ತಪ್ಪಿಸಿಕೊಳ್ಳದೇ ಓದಬೇಕೆಂಬ ಹಂಬಲ, ಆಸಕ್ತಿಯನ್ನು ಉಂಟುಮಾಡುವಲ್ಲಿ ಲೇಖಕರು ಸೂಕ್ಷ್ಮವಾಗಿ ಸೂಚಿಸುತ್ತಾರೆ. ಒಟ್ಟಿನಲ್ಲಿ ಈ ಹೊತ್ತಗೆಯು ಎಲ್ಲ ವಯೋಮಾನದವರಿಗೂ ಒಂದು ವಿಶಿಷ್ಟ ಪರಿಕರವಾದುದಾಗಿದೆ. ನವಕರ್ನಾಟಕ ಪ್ರಕಾಶನದ ಪ್ರಕಟಣೆ.

ಹೂ ಇಸ್ ಅ ಫ್ರೆಂಡ್?

No person is your friend who demands your silence, or denies your right to grow. - Alice Walker

ಶನಿವಾರ, ಡಿಸೆಂಬರ್ 6, 2008

ಮುತ್ತಿನ ಹನಿಗಳೂ...


ಆ ಆಗಸ್ಟಿನಲ್ಲಿ, ಮುಂಜಾವಿನಲ್ಲಿ ಮಳೆಯು ಬಂದಾಗ, ಕಿಟಕಿಯಿಂದ ನೋಡಿದಾಗ, ಎಲೆಗಳ ಮೇಲೆ ಮಳೆಹನಿಗಳ ಬಿಂದುಗಳು ಸೂರ್ಯರಶ್ಮಿಗೆ ಪ್ರತಿಫಲಿಸಿದಾಗ, ಕಂಡಿದ್ದು ಮುತ್ತಿನ ಹನಿಗಳು....

ಮಂಗಳವಾರ, ಡಿಸೆಂಬರ್ 2, 2008