
ಶುಕ್ರವಾರ, ಜನವರಿ ೩೦, ೧೯೪೮ನೇ ಇಸವಿ. ಇಂದಿಗೆ, ಅಂದರೆ ೩೦ನೇ ಜನವರಿ ೨೦೦೯ ಕ್ಕೆ ೬೧ ವರ್ಷಗಳು, ೭೩೨ ತಿಂಗಳುಗಳು, ೩೧೮೩ ವಾರಗಳು, ೨೨೨೮೧ ದಿನಗಳು, ೫೩೪೭೪೪ ಘಂಟೆಗಳು, ೩೨೦೮೪೬೭೬ ನಿಮಿಷಗಳು ಹಾಗೂ ೧೯೨೫೦೮೦೬೦೧ ಸೆಕೆಂಡುಗಳಷ್ಟು ಇತಿಹಾಸದ ಪುಟಗಳನ್ನು ತೆರೆದಾಗ ನಡೆದ ಘಟನೆ - ಮಹಾತ್ಮಾ ಗಾಂದಿಯವರ ಹತ್ಯೆ. ಅಕಸ್ಮಾತ್ತಾಗಿ ಲೈಬ್ರರಿಯಿಂದ ಎರವಲು ತಂದಿದ್ದ ಶ್ರೀ ನಾಡಿಗ ಕೃಷ್ಣಮೂರ್ತಿಯವರ `ನಾಡಿಗರ ಬರಹಗಳು' ಪುಸ್ತಕವನ್ನು ಈವತ್ತು (೩೦.೧.೨೦೦೯) ಓದುತ್ತಿರುವಾಗ ಈ ಮೇಲಿನ ಅಧ್ಯಾಯವು ಓದುವಿಕೆಗೆ ಬಂದಿದ್ದು ಕಾಕತಾಳೀಯ. ಹೀಗಿರುವಾಗ ಬಾಪೂಜಿಗೆ ನನ್ನ ಒಂದು ನಮನ.