ಮಂಗಳವಾರ, ಮಾರ್ಚ್ 31, 2009

ಕಂಬದ ಮೇಲಿನ ಬರಹ

ಆ ದಿನ ದೇವಾಲಯದಲ್ಲಿನ ಒಂದು ಸಮಾರಂಭಕ್ಕೆ ಹೋಗಿದ್ದಾಗ ಹೀಗೇಕೆ? ಎಂದು `ಕಂಬದ ಮೇಲಿನ ಬರಹ' ನೋಡಿ ತಲೆ ಕೆರೆದುಕೊಂಡೆ. ಯಾಕಂತೀರಾ? ಇಲ್ಲಿ (ಕಲ್ಲು ಕಂಬದ ಮೇಲೆ) ಹೇಗೆ ಚಪ್ಪಲಿ ಬಿಡುವುದು. ಕಲ್ಲುಕಂಬದ ಮೇಲೆ ಬರೆದಿರುವುದು ಸರಿ. ಅದನ್ನು ಇನ್ನೂ ಸ್ವಲ್ಪ ನೆಲಮಟ್ಟಿಗೆ ಬರೆದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿತು. ಆಗ ಅದನ್ನು ಹೀಗೂ ಬರೆಯಬಹುದಿತ್ತು. (ಚಿತ್ರ ನೋಡಿ)
`ಇದು ಚಪ್ಪಲಿ ಬಿಡುವ ಸ್ಥಳ' ಅಥವಾ 'ಪಾದರಕ್ಷೆಗಳನ್ನು ಇಲ್ಲಿಯೆ ಬಿಡುವುದು' ಎಂದು ಹೀಗೆಲ್ಲಾ ಬರೆದಿದ್ದರೆ `ತಲೆ ಕೆರೆದುಕೊಳ್ಳಬೇಕಿರಲಿಲ್ಲ'. ಆದರೆ, ಅಲ್ಲಿದ್ದದ್ದು...
ಅವರು ಬರೆದಿದ್ದರಲ್ಲಿ ತಪ್ಪೇನೂ ಇಲ್ಲ ಎಂದೂ ಯೋಚಿಸಿದೆ. ಏಕೆಂದರೆ, ಕೆಲವರು `ದಯವಿರದೆ' ಎಲ್ಲೆಂದರಲ್ಲಿ ಚಪ್ಪಲಿಬಿಟ್ಟು ಅಥವಾ ಬಿಡದೇ ಹೋಗಬಹುದು (ದೇವಾಲಯದ ಸಮೀಪಕ್ಕೆ) ಎಂದೂ ಇರಬಹುದು ಅಥವಾ ಅಲ್ಲಿರುವ ಪ್ರಾಂಗಣದಲ್ಲಿ ಹೋಮ-ಹವನ, ಊಟೋಪಚಾರ ಇವೆಲ್ಲಾ ನಡೆಯುತ್ತಿರುತ್ತವಾದ್ದರಿಂದ ಹಾಗೆ ಬರೆದಿರಲೂ ಬಹುದು ಅನಿಸಿತು. ಆದರೂ ಸೀರಿಯಸ್ಸಾಗಿ ತಗೊಂಡರೆ ಸಕತ್ತಾಗಿ ನಗಬಹುದು ಅನಿಸಿತು. ಅದಕ್ಕೇ ಕೈಯಲ್ಲಿದ್ದ ಕ್ಯಾಮೆರಾದಿಂದ ಕ್ಲಿಕ್ಕಿಸಿದೆ ನಂತರ ಪುಟ್ಟಪದಗಳೊಡನೆ ಬ್ಲಾಗಿಸಿದೆ.
ನೀವೇನಂತೀರಿ? ಎಂದು ಕ್ಷಣ ಚಿಂತಿಸುತ್ತಾ ....!!!!

ಶನಿವಾರ, ಮಾರ್ಚ್ 28, 2009

ಎಲ್ಲೆಲ್ಲು ಸೌಂದರ್ಯವೇ... ಎಲ್ಲೆಲ್ಲು ಸಂಗೀತವೇ...

ಎಲ್ಲೆಲ್ಲು ಸೌಂದರ್ಯವೇ... ಎಲ್ಲೆಲ್ಲು ಸಂಗೀತವೇ...
ಹೌದು. ಚರ-ಅಚರಗಳೆಲ್ಲದರಲ್ಲಿಯೂ ಒಂದಲ್ಲಾ ಒಂದು ಸುಂದರತೆ, ಸುಮಧುರ ಧ್ವನಿಯನ್ನು ಕಾಣ/ಕೇಳಬಹುದು. ನೋಡುವ ಕಣ್ಣೋಟದಲ್ಲಿ ಎಲ್ಲ ಚೆಂದ ಅಡಗಿದೆ. ಅದನ್ನು ಕಾಣುವ ಕಣ್ಣುಗಳು ಮಾತ್ರ ತಮ್ಮಷ್ಟಕ್ಕೆ ತಾವೇ ಸೌಂದರ್ಯವನ್ನು ಆಸ್ವಾದಿಸುತ್ತವೆ. ಕರ್ಣಗಳು ಗೀತಗಾಯನವನ್ನು ಕೇಳಿ ಆನಂದಿಸುತ್ತವೆ. ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳಲ್ಲಿಯೂ, ಮಾನವನಲ್ಲಿಯೂ ಈ ಸೌಂದರ್ಯಪ್ರಜ್ಞೆಯನ್ನು ಗುರುತಿಸುವ ಶಕ್ತಿ ಕಣ್ಣುಗಳು ಮಾತ್ರ ಕಡಿಮೆಯಿರಬಹುದೇನೋ ಎಂದು ಒಮ್ಮೊಮ್ಮೆ ಅನಿಸಬಹುದು. ಕಾರಣ: ಕಂಫ್ಯೂಶಿಯಸ್‌ನ ಈ ಮುಂದಿನ ಮಾತುಗಳನ್ನು ಅರ್ಥೈಸಿಕೊಂಡರೆ ಹೀಗನ್ನಿಸಬಹುದು ಅಥವಾ ಅನಿಸದಿರಲೂ ಬಹುದು. ಅದೇ ಆಂಗ್ಲ ತರ್ಜುಮೆಯು "Everything has its beauty but not everyone sees it.- ಈ ರೀತಿಯಿದೆ. ನೀವೇನಂತೀರಿ???

ಗುರುವಾರ, ಮಾರ್ಚ್ 26, 2009

ಹೊಸ ವರುಷದ ಶುಭಾಶಯಗಳು - ಯುಗಾದಿ 2009



ಎಲ್ಲರಿಗೂ ಹೊಸ ವರುಷದ ಶುಭಾಶಯಗಳು. ವಿರೋಧೀ ನಾಮ ಸಂವತ್ಸರವು ಎಲ್ಲರಿಗೂ ಯಾವುದೇ ವಿರೋಧವಿಲ್ಲದಂತೆ ಸುಖ, ಶಾಂತಿ, ನೆಮ್ಮದಿಯನ್ನು ವಿರೋಧಾಭಾಸವಿಲ್ಲದೆ ಹಂಚಲಿ ಎಂದು ಹಾರೈಸುವೆ.

ಫೋಟೋಗಳು: ಚಂದ್ರಶೇಖರ ಬಿ.ಎಚ್. 2009

ಮಂಗಳವಾರ, ಮಾರ್ಚ್ 24, 2009

ಈ ಸಂಭಾಷಣೆ...

ಆ ದಿನ ಕ್ಯಾಮೆರಾ ಹಿಡಿದು ಮನೆ ಮತ್ತು ಕಚೇರಿಯ ಕ್ಯಾಂಪಸ್ಸಿನಲ್ಲಿ ಸಂಜೆ ಸುತ್ತಾಡುತ್ತಿದ್ದೆ.
ಹಸಿರು ತುಂಬಿದ ಮರದಾಳದಿಂದ ಹಕ್ಕಿಗಳ ಕೂಗು. ದಿನವೂ ಆಲಿಸುತ್ತಿದ್ದ ಅದೇ ಗಿಲಿವಿನ್ದೀನ್ ಕೂಗು. ಹಸಿರು ಎಲೆಗಳ ನಡುವೆ ಈ ಗಿಳಿಗಳು ಕಾಣುತ್ತಿಲ್ಲ, ಆದರೆ ಸದ್ದು ಮಾತ್ರ ಕೇಳುತ್ತಿದೆ.
ಅಲ್ಲಿಯೇ ಮತ್ತೆ ಸುತ್ತಾಡುತ್ತಿದ್ದಾಗ ನನ್ನ ಕಣ್ಣಿಗೆ ಈ ದೃಶ್ಯಾವಳಿ ಬಿದ್ದಿತು. ಸರಿ, ಕೈಯಲ್ಲಿಯೇ ಕ್ಯಾಮೆರಾ ಇತ್ತಲ್ಲ! ಒಂದೆರಡು ಸ್ನ್ಯಾಪ್‌ ಕ್ಲಿಕ್ಕಿಸಿದೆ.

ಅಲ್ಲಿ ೩ ಗಿಳಿಗಳ ಸಂಭಾಷಣೆ. ಆಗ ನೆನಪಾಗಿದ್ದು `ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ, ಅತಿ ನವ್ಯ ರಸ ಕಾವ್ಯ' ಗೀತೆ.
ಆದರೆ ಅಲ್ಲಿರುವುದು ೩ ಗಿಳಿಗಳು. ಆ ಹಾಡಿಗೂ ಈ ಗಿಳಿಗಳಿಗೂ ಸಂಬಂಧವಿರದು ಎನಿಸಿತು. ಹಾಗೆಯೇ ಚಿಂತಿಸುತ್ತಿದ್ದಾಗ "ಯಾರು ಹಿತವರು ಈ ೩ ವರೊಳಗೆ " ಎಂದು ದಾಸರಪದ ನೆನಪಾದರೆ...
ಆ ೩ ವರಲ್ಲಿ (ಗಿಳಿಗಳಲ್ಲಿ) ಒಂದು ನಾ ಹೋಗಿಬರುವೆ ಎಂದು ಹಾರಿಹೋಗಬೇಕೆ?
ಆಗ ನಾ ಹಾಡಲು ನೀ ಹಾರಿಹೋಗಬೇಕು (ನಾ ಹಾಡಲು ನೀವು ಹಾಡಬೇಕು ಬದಲಾಗಿ)ಎಂದು ಯೋಚಿಸಿರಬೇಕೆ ಈ ಇಬ್ಬರಲ್ಲಿ ಒಬ್ಬರು??!!
ಹೀಗೆ ಒಂದೆರಡು ನಿಮಿಷಗಳ ಈ ಸಂಭಾಷಣೆ ಒಂದು ಗಿಳಿಯು ಹಾರಿಹೋಗುವಲ್ಲಿ ಮುಕ್ತಾಯವಾಯಿತು.
ಗಿಳಿವಿಂಡಿನ ಬಗೆಗಿನ ಹಾಡನ್ನು http://puttanaputa.blogspot.com/2008/08/blog-post_2044.html ಈ ಪುಟ್ಟನಪುಟದಲ್ಲಿ ಓದಿದರೆ ನಿಮಗೇನು ಅನಿಸಬಹುದು?

ಬುಧವಾರ, ಮಾರ್ಚ್ 18, 2009

ಮನೆ - ಮನಗಳಲ್ಲಿ ...




ಮನಸ್ಸು ಹಾಗೂ ಮನೆಯನ್ನು ಒಡೆಯುವುದು ಎಷ್ಟು ಸುಲಭದ ಕೆಲಸ. ಆದರೆ ಅದನ್ನೇ ಒಂದುಗೂಡಿಸುವುದು ಅಥವಾ ಕಟ್ಟುವುದು ಎಷ್ಟು ದುಸ್ತರ ಅಲ್ಲವೇ?
ಇಲ್ಲಿ ಸೊಗಸಾಗಿ ಬೆಳೆಯುತ್ತಿದ್ದ ಹುತ್ತವನ್ನು ಕಡಿದು ಬೇರೆಡೆ ಸ್ಥಳಾಂತರಿಸಲು ಪ್ರಯತ್ನಿಸಿ ಕೊನೆಗೆ ಅದರ ಮೇಲ್ಭಾಗ ಇಬ್ಭಾಗವಾದಾಗ ಅಲ್ಲಿಯೇ ಬಿಟ್ಟಿದ್ದಾರೆ. ಆದರೆ ಮತ್ತೆ ಗೆದ್ದಲುಹುಳುಗಳು ಸ್ವರಕ್ಷಣೆಗಾಗಿ ಮತ್ತೆ ಗೂಡು ಮಾಡಿಕೊಳ್ಳುತ್ತಿವೆ. ಹೀಗೆಯೇ ಮಾನವ, ಪಶು ಪಕ್ಷಿ ಜೀವನಗಳೂ ನಿರಂತರ ಸಾಗುತ್ತಿದೆ ಎಂದು ಅನಿಸುತಿದೆ ಈ ಕ್ಷಣ....

ಸೋಮವಾರ, ಮಾರ್ಚ್ 16, 2009

ಜಲಲ.. ಜಲಲ... ಜಲಧಾರೆ...


ಕಾವೇರಿ.. ಬೆಡಗಿನ ವಯ್ಯಾರೀ.....
ಜಲಲ.. ಜಲಲ... ಜಲಧಾರೆ...
ತುಂತುರು ಅಲ್ಲಿ ನೀರ ಹಾಡು...
ನಿನ್ನೆ ದಿನ ಬೃಂದಾವನ ಉದ್ಯಾನವನಕ್ಕೆ ಭೇಟಿ ಕೊಟ್ಟಾಗ, ಅಲ್ಲಿ ನರ್ತಿಸುವ ಕಾರಂಜಿಯ ಕಂಡಾಗ ಈ ಎಲ್ಲ ಹಾಡುಗಳ ಸಾಲುಗಳೂನೆನಪಾದವು. ಅಂತಹ ಅಮರ ಗೀತೆಗಳನ್ನು ಬರೆದ ಎಲ್ಲರಿಗೂ ನಮನಗಳು.
ಇಷ್ಟೇ ಅಲ್ಲ, ನೀರೆಂಬುದು ಜೀವಕ್ಕೆ ಆಧಾರ. ನೀರನ್ನು ಉಳಿಸಿ,ನೀರನ್ನು ಮಿತವಾಗಿ ಬಳಸಿದರೆ ಮನುಕುಲ, ಜೀವಸಂಕುಲ ಉದ್ಧಾರ.
ಫೋಟೋಗಳು: ಚಂದ್ರಶೇಖರ ಬಿ.ಎಚ್.೨೦೦೯

ಗುರುವಾರ, ಮಾರ್ಚ್ 12, 2009

ಅಜ್ಞಾನತಿಮಿರಾಂಧಸ್ಯ

"Ignorance is the night of the mind, but a night without moon and star." -Confucius
ಈ ಮೇಲಿನ ಮಾತನ್ನು ಕನಫ್ಯೂಷಿಯಸ್ ಹೇಳಿಕೆಯ ಅನುವಾದವನ್ನು ಅಥವಾ ಭಾವಾರ್ಥವನ್ನು ಭಾರತೀಯರ ಸಂಸ್ಕೃತ ಸುಭಾಷಿತಗಳಲ್ಲಿ, ಶ್ಲೋಕಗಳಲ್ಲಿ ಕಾಣಬಹುದು. ಜ್ಞಾನವೇ ಬೆಳಕು, ಅಜ್ಞಾನವೇ ಇರುಳು ಎಂದು ಕಸ್ತೂರಿ ಕನ್ನಡದಲ್ಲಿಯೂ ಹೇಳಬಹುದು. ಇಲ್ಲಿಯೂ ಸಹ ಜ್ಞಾನವೆಂದರೆ ಅದೊಂದು ರೀತಿಯ ಪ್ರಖರ ಜ್ಯೋತಿಯಂತೆ, ಸೂರ್ಯನಂತೆ. ಅದೇ ಅಜ್ಞಾನವಾದರೆ, ನೀರಸ ರಾತ್ರಿಯಲ್ಲಿ ಅದರಲ್ಲಿಯೂ ಚಂದ್ರನ ಬೆಳಕಿಲ್ಲದ ಮೋಡಮುಸುಕಿದ ಆಕಾಶದಲ್ಲಿ ಇರುವಂತೆಯೇ ಆಗಿದ್ದು ಕತ್ತಲಕೂಪದಲ್ಲಿ ಬೀಳುವುದೇ ಆಗಿದೆ. ಶ್ರೀ ಗುರು ಸ್ತೋತ್ರದಲ್ಲಿ ಗುರುವಿನ ಮಹತ್ವವನ್ನು ಸಾರಿದ್ದು ಹೀಗೆ ಹೇಳಲಾಗಿದೆ.
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮ:
ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಕಣ್ಣುಗಳನ್ನು ಜ್ಞಾನವೆಂಬ ಶಲಾಕೆ (ಸೂಜಿ) ಯಿಂದ ತೆರೆದು ಅಜ್ಞಾನವನ್ನು ಹೊಡೆದೋಡಿಸುವವರು ಯಾರೋ ಅಂತಹ ಗುರುವಿಗೆ ನಮನಗಳು.
ಫೋಟೋ: ಚಂದ್ರಶೇಖರ ಬಿ.ಎಚ್.,೨೦೦೯

ಶನಿವಾರ, ಮಾರ್ಚ್ 7, 2009

ವಿಶ್ವ ಮಹಿಳಾ ದಿನಾಚರಣೆ


ವಿಶ್ವ ಮಹಿಳಾ ದಿನಾಚರಣೆ - ಮಾರ್ಚ್ ೮
ವಿಶ್ವದೆಲ್ಲ ಮಹಿಳೆಯರಿಗೂ ಶುಭಾಶಯಗಳು.

ಟೀಚರ್ - ಗುರು ??


"The teacher is only as water to the soil. He cannot grow a pomegranate from a mustard seed."
-Caine
ಗುರು ಎಂದರೆ ಯಾರು? ಏನು? ಎಂಬುದಕ್ಕೆ ಈ ಮೇಲಿನ ಉದಾಹರಣೆಯಾದರೆ, ನಾವುಗಳು ಭಾರತೀಯರು ಹೀಗೆ ಹೇಳಬಹುದು. ಗುರು: ಬ್ರಹ್ಮ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ: ಗುರು: ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮ:

ಸೋಮವಾರ, ಮಾರ್ಚ್ 2, 2009

ideal ಹುಡುಕಾಟ ಮತ್ತು ದೇವರು


ಹುಡುಕಾಟ - ಇಂದು ನನ್ನ ಮೊಬೈಲಿಗೆ ಒಂದು ಸಂದೇಶವನ್ನು ನನ್ನ ಸಹೋದ್ಯೋಗಿಯ ಪುಟ್ಟ ಮಗಳು ಕಳಿಸಿದ್ದಳು. ಅದು ಹೀಗಿತ್ತು.
Never keep on going behind the things that you know you won't get. Instead try the one which is always near your hand.
ಈ ಮೇಲಿನ ಮಾತು ಎಷ್ಟು ಔಚಿತ್ಯಪೂರ್ಣದ್ದು. ಈ ಮಾತುಗಳನ್ನು ನಾವು ಲೌಕಿಕ ಹಾಗೂ ಆಧ್ಯಾತ್ಮಿಕವಾಗಿ ಯೋಚಿಸಿದರೆ ಹೇಗಿರುತ್ತದೆ? ಇದನ್ನೇ ಶ್ರೀ ರಾಮಕೃಷ್ಣ ಪರಮಹಂಸರು ಹೀಗೆ ಹೇಳುತ್ತಿದ್ದರಂತೆ. "ಮನೆಯ ಹತ್ತಿರದಲ್ಲಿಯೇ ಇರುವ ದೇವಮಂದಿರವನ್ನು ಬಿಟ್ಟು ದೂರದೂರದ ಊರುಗಳಾಚೆ ಇರುವ ದೇವಾಲಯಗಳಿಗೆ ಜನರು ಹೋಗುವುದರಲ್ಲಿ ಆಸಕ್ತರು" ಎಂದು. ಇದನ್ನೇ ಕವಿವಾಣಿಯೊಂದು "ಎಲ್ಲೋ ಹುಡುಕುವೆ ಇಲ್ಲದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ..." ಎಂಬುದನ್ನು ನೆನೆಯಬಹುದು. ಹಾಗೆಯೇ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: In one word, this ideal is that you are divine. ನೀವೇನಂತೀರಿ ?
ಫೋಟೋ: ಚಂದ್ರಶೇಖರ ಬಿ.ಎಚ್. ಡಿಸೆಂಬರ್‍ ೨೦೦೭