Idleness ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Idleness ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಏಪ್ರಿಲ್ 21, 2010

ಏನೆಂದು ಹೇಳಲೀ, ನಾನರಿಯೆ!


ಏನೆಂದು ಹೇಳಲೀ, ನಾನರಿಯೆ!

ರುಂಡವಿಲ್ಲ, ಮುಂಡವಿಲ್ಲ ನೀನೇಕೆ, ಎಣಿಸಲೇಕೆ?
ಮರುಗಲೇಕೆ? ಅವೆಲ್ಲವೂ ಇದ್ದಿತು,
ಒಂದು ಕಾಲದಲಿ - ಇದೋ! ಹೀಗಿದ್ದರಬಹುದೆ?
ಮನುಜನ ಬಯಕೆ, ನಾ ಹೇಳಬೇಕೆ?

ರಾಜ-ರಾಜ್ಯದ ವಿಸ್ತಾರದಲಿ ನೊಂದವರೆಷ್ಟೋ,
ಬೆಂದವರೆಷ್ಟೋ ಜೀವಿಗಳು ಬಲ್ಲವರಾರು?
ಮತ-ಧರ್ಮದ ಘನತೆಗೂ, ಜನತೆಗೂ ಹೀಗೆ ಮಾಡುವರೆಂದು
ಕಣ್ಣಿಗೆ ನಾ ಜೀವಂತ ಕಂಡೆನೇನೋ, ನಾನರಿಯೆ?

ನನಗೊಂದು ಕಣ್ಣಿಲ್ಲದಿದ್ದರೂ,
ಕೈ ಇರದಿದ್ದರೂ, ನಷ್ಟವಿಲ್ಲ!
ಮತ್ತೊಬ್ಬರೆರಡು ಕಣ್-ಕಿವಿ-ಕೈ-ಕಾಲ್,
ಇರಬಾರದೆಂದು ಹೀಗೆ ಮಾಡಿದರೋ? ನಾನರಿಯೇ?

ಕೊನೆಗೊಬ್ಬ ರುಂಡವೇಕೆ, ಮುಂಡವೇಕೆ ಈ ಸಿಂಗಾರಿಗೆ?
ಎಂದೆನ್ನ ರುಂಡ ಮುಂಡ ಚೆಂಡಾಡಿ ಹೋದನಲ್ಲಾ??
ಸುಂದರವಾದದ್ದು ತೊಂದರೆಗೆ ಎಂದೆಂದೂ ಬಗೆದು
ಹೀಗೆ ಮಾಡಿದರೋ? ನಾನರಿಯೇ!

ಸದ್ಯ, ಕುಳಿತ ಭಂಗಿಯಲ್ಲಿಯೇ ನಾನಿರುವೆನೆಂಬ ಸಂತಸ
ಹೀಗಾದರೂ ನನ್ನ ನೋಡ್ವರಲ್ಲಾ ಹೃದಯವುಳ್ಳವರು!
ಇಟ್ಟಿಗೆ ಗಾರೆಯಂತೆ ಈ ಬದುಕು, ಒಂದಕೊಂದು
ಹೊಂದಿಕೊಂಡು ಇರಲೆಂದೆ ಹೀಗೆ ಬಿಟ್ಟರೋ, ನಾನರಿಯೆ!

ಮನದ ನೆನಪುಗಳು ಮಾಸಲು, ಅದುವೇ ಪೀಠವಾಗಲು,
ಕಷ್ಟ-ನಷ್ಟ ಬದುಕು, ಹೊಂದಿಕೊಂಡು ಇದಕು, ಎದಕು!
ಇರುವಾಗ ಎದೆಯನ್ನೇ ಬಗೆದರಲ್ಲೋ ಪ್ರೀತಿಯಿಲ್ಲದವರು,
ಹೀಗೆಂದು ಹೇಳಬೇಕೋ ಬೇಡವೋ? ನಾನರಿಯೆ!

[`ಮಯೂರ' ಮಾಸಪತ್ರಿಕೆ: ಅಕ್ಟೋಬರ್ ೨೦೦೯ ರ ಕಲ್ಪನೆ ವಿಭಾಗಕ್ಕೆ ಬರೆದಿದ್ದ, ಆಯ್ಕೆಯಾಗದ ಬರಹ]

ಬುಧವಾರ, ಮಾರ್ಚ್ 10, 2010

ಏನನ್ನು ಬರೆಯಲಿ ಎಂದು ಯೋಚಿಸುತ್ತಾ ಕುಳಿತಿದ್ದೆ...

ಊಟ ಮುಗಿಸಿ ಮನೆಯಿಂದ ಮಧ್ಯಾಹ್ನ ಕಚೇರಿಗೆ ಬಂದೆ. ಏನನ್ನು ಬರೆಯಲಿ ಎಂದು ಯೋಚಿಸುತ್ತಾ ಕುಳಿತಿದ್ದೆ. ಆಗ ನೆನಪಾಗಿದ್ದು ಇದು...

ಆ ನಂತರ ಬಂದ ಪ್ರತಿಕ್ರಿಯೆಗಳಲ್ಲಿ, ಸಾಗರದಾಚೆಯಿಂದೊಬ್ಬರು ಕವನ ಬರೆಯಿರಿ ಎಂದರೆ, ಅಂತರಂಗದ ಮಾತುಗಳನ್ನೂ ಸೇರಿಸಿದ್ದರೆ ಚೆನ್ನಾಗಿತ್ತು ಎಂಬ ಸಲಹೆಗಳನ್ನು ಓದುತ್ತಿರುವಾಗ, ಶ್ರೀ ಸೀತಾರಾಮರು ಒಂದು ಕವನ ರಚಿಸಿ ಕಾಮೆಂಟ್ ಬಾಕ್ಸಿನಲ್ಲಿ ಹಾಕಿದ್ದರು. ಇದನ್ನು ಸೇರಿಸಲೋ ಬೇಡವೋ ಇಲ್ಲಿ ಎಂಬ ಗೊಂದಲದಲ್ಲಿರುವಾಗ ಗೊಂದಲಕ್ಕೆ (ಜೀವನ) ಮುಕ್ತಿಯನ್ನು ಕೊಟ್ಟಂತೆ ಸಲಹಿಸಿದವರ ಮಾತಿನಂತೆ, ಶ್ರೀ ಸೀತಾರಾಮರ ಈ ಗುಟುಕನ್ನು (ಕವನ) ಅವರ ಅನುಮತಿಯಿದೆ ಎಂಬ ಭಾವನೆಯಿಂದ ಇಲ್ಲಿ ಅಳವಡಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಾ...
ಹರಿವ ನದಿಯ ತಟದಿ
ನಿಶ್ಚಲ ಬ೦ಡೆ
ಹರಿವಾಸೆ ಬ೦ಡೆಗೆ
ನದಿಯ ನೋಡಿ
ನಿಶ್ಚಲವಾಗುವಾಸೆ ನದಿಗೆ
ಬ೦ಡೆಯ ನೋಡಿ
ನದಿ ನಿಶ್ಚಲವಾಗದು
ಬ೦ಡೆ ಹರಿಯದು
ಇದು ಪ್ರಕೃತಿಯ ನಿಯಮ.
ಆದರೇ...
ತಟದಲ್ಲಿರುವ ಹಕ್ಕಿಗಳೇ
ಗು೦ಪಿನಲ್ಲಿದ್ದು ನೀವೇಕೆ ಏಕಾ೦ಗಿ?
ಹರಿಯಬಹುದಾದರೂ ನಿಶ್ಚಲವೇಕೇ?
ನೀವೂ ಹರಿಯಬಹುದು-ನಿಶ್ಚಲರಾಗಬಹುದು
ಗು೦ಪಿನಲಿ ಏಕಾ೦ಗಿಯಾಗಿರಬಹುದು
ಏಕಾ೦ಗಿತನದಲ್ಲಿ ಗು೦ಪೆನಿಸಬಹುದು
ಇದು ನಿಮಗೆ ಪ್ರಕೃತಿ ನೀಡಿದ ಆಯ್ಕೆ
ತಮ್ಮ ಚಿತ್ರಕ್ಕೆ ನನ್ನದೊ೦ದು ಗುಟುಕು.

೧೧.೦೩.೨೦೧೦


ಬುಧವಾರ, ಅಕ್ಟೋಬರ್ 7, 2009

ಏಳು, ಎಚ್ಚರಗೊಳ್ಳೋ...

K¼ÀÄ, JZÀÑgÀUÉÆ¼ÉÆî AiÀÄĪÀPÀ

K¼ÀÄ, JZÀÑgÀUÉÆ¼ÉÆî AiÀÄĪÀPÀ

EzÉÆÃ §A¢ºÀÄzÀÄ ¤£ÀUÉ ªÀ¸ÀAvÀPÁ®

ªÀÄgÀÄUÀ¢gÀÄ «ÄAazÀ PÁ®PÉÌ

«ÄÃgÀ¢gÀÄ ¤£Àß «ªÉÃPÀ

w½AiÉÄ ¤Ã£ÀÄ CzÀgÀ vÀÆPÀ

CzÀÄ ¤ÃqÀĪÀÅzÀÄ eÁÕ£ÀzÁ ¨É¼ÀPÀÄ

EgÀ° ¤£ÀUÉ ¸ÀAAiÀĪÀÄzÀ ¸ÀAPÉÆÃ¯É

¨ÉÃqÀ F ¸ÀA±ÀAiÀÄzÀ ¨Á¼ÉÃ

¨ÉÃqÀÄ ¤Ã£ÀÄ ±ÁAwAiÀÄ

©lÄÖ©qÀÄ PÁæAwAiÀÄ

©qÀzÉ ¥ÀqÉAiÉÆ eÁÕ£À

ºÉÆqÉzÉÆÃr¸ÀÄ ¤£Àß CeÁÕ£À

¤£ÀVzÉ C£ÀAvÀ ±ÀQÛ

w½ ¤Ã£ÀÄ ¨Á¼ÀĪÀ AiÀÄÄQÛ

¤Ã£ÀÄ §jAiÀÄ zÉúÀªÀ®èªÉÇÃ

¤Ã£ÀÄ DvÀä£ÁVgÀĪÉAiÉÆÃ

EzÀ£ÀÄ ªÀÄgÉAiÀÄ¢gÀÄ PÉÆ£ÉvÀ£ÀPÀ

¤ÃqÀĪÀÅzÀÄ ¤£ÀUÉ eÁÕ£ÀzÁ ¨É¼ÀPÀÄ

K¼ÀÄ, JZÀÑgÀUÉÆ¼ÉÆî AiÀÄĪÀPÀ

EzÉÆÃ §A¢ºÀÄzÀÄ ¤£ÀUÉ ªÀ¸ÀAvÀPÁ®

["«£ÀAiÀÄ" PÁ¯ÉÃdÄ ¥ÀwæPÉAiÀİè (Dgï.«. PÁ¯ÉÃdÄ) ¥ÀæPÀlªÁzÀ ¥ÀæxÀªÀÄ PÀªÀ£À: 1990-91]