ಬುಧವಾರ, ಏಪ್ರಿಲ್ 15, 2009

ಬ್ರೂಸ್ ಲೀ ನುಡಿಗಳು

ಸಸ್ನೇಹಿಗಳೇ,

ಮೊನ್ನೆ ದಿನ ನನ್ನ ಕ್ಯಾಮೆರಾಕ್ಕೆ ಸೆಲ್ ಹಾಕಿ ಪರೀಕ್ಷಿಸುವಾಗ ಸುತ್ತ ಕಣ್ಣಾಡಿಸಿದೆ. ಯಾವುದಾದ್ರೂ ಚಿತ್ರ ತೆಗೆಯೋಕೆ. ಯಾವ ಚಿತ್ರ ತೆಗೆಯೋದು? ಕಿಟಕಿಯಿಂದ ಬರೀ ಒಣಹುಲ್ಲುಗಳು ಕಾಣುತ್ತಿವೆ. ಸರಿ, ಕಚೇರಿಯಲ್ಲಿ ಗಣಕಯಂತ್ರ, ಪಂಖಾ ಇತ್ಯಾದಿ ಕಾಣಿಸಿತು. ಇವೆಲ್ಲ ಸರಿಯಲ್ಲ ಅನಿಸಿತು. ಹಾಗೇ ನನ್ನ ಬಲಗಡೆಗೆ ತಿರುಗಿದೆ. ಅದೇ ದಿನವೂ ನೋಡುತ್ತಿದ್ದ ಕೋಟುಗಳು. ಇವು ಅಂತಿಂತಹ ಕೋಟುಗಳಲ್ಲ. ಒಂದು ಕಾಲದಲ್ಲಿ ಜಗತ್ತಿನ ಸಿನೆಮಾ ಪ್ರೇಮಿಗಳಿಗೆ ಅದರಲ್ಲಿಯೂ ಯಾವುದೇ ಹಿರಿ-ಕಿರಿ ಎಂಬ ಭೇದಭಾವವಿಲ್ಲದೆ ರಂಜಿಸಿದ, ಅತಿ ಕಿರಿಯ ವಯಸ್ಸಿನಲ್ಲಿಯೇ ಅಗಲಿದ ಕರಾಟೆ ಕಿಂಗ್ `ಬ್ರೂಸ್ ಲೀ'ಯ ನುಡಿಮುತ್ತುಗಳು. ನನ್ನ ಕಚೇರಿ ಕೊಠಡಿಯಲ್ಲಿ ಬ್ರೂಸ್ ಲೀ ನುಡಿಗಟ್ಟುಗಳನ್ನು ಪ್ರಿಂಟಿಸಿ ಹಾಕಿಕೊಂಡಿದ್ದೆ. ಅದನ್ನೇ ಕ್ಯಾಮೆರಾದಲ್ಲಿ ಸೆರೆಹಿಡಿದೆ.

ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಮೊದಲಿಗೆ ಅಳವಡಿಸಿಕೊಳ್ಳಬೇಕಾದ ಒಂದಂಶವನ್ನು `ಬ್ರೂಸ್‌ ಲೀ' ಯ ಈ ನುಡಿಯನ್ನು ಮನನ ಮಾಡಿಕೊಂಡರೆ ಜೀವನ ಸುಖವೆಂಬುದರಲ್ಲಿ ಎರಡು ಮಾತಿಲ್ಲ ಅಲ್ಲವೇ ಎಂದು ಒಂದು ಕ್ಷಣ ಅನಿಸಿತು. ಅದೇನೆಂದರೆ, ಅದೇನೆಂದರೆ, ಕಾಂಪಿಟಿಷನ್‌: ಇಟ್ ರಿಕ್ವೈರ್‍ಸ್ ಕಂಟ್ರೋಲ್ಡ್ ಕ್ರುಯೆಲ್ಟಿ. (ಫೋಟೋ: ಚಂದ್ರಶೇಖರ ಬಿ.ಎಚ್. ೨೦೦೯)

ನಿಮಗೇನನ್ನಿಸರಬಹುದು? ಎಂದು ಕ್ಷಣ ಕುತೂಹಲದಿಂದ ಕಾದಿರುವೆ.
ವಿಶ್ವಾಸದೊಂದಿಗೆ,

2 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ,
ಅವರ ನುಡಿಮುತ್ತುಗಳನ್ನು ನಮಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನನಗೂ ಅವರ ಚಲನಚಿತ್ರ ತುಂಬಾ ಇಷ್ಟವಾಗುತ್ತದೆ.

ಕ್ಷಣ... ಚಿಂತನೆ... ಹೇಳಿದರು...

ಧನ್ಯವಾದಗಳು ಸರ್‍, ನನಗೂ ಸಹ ಆತನ ಚಿತ್ರಗಳೆಂದರೆ ಇಷ್ಟ.