ಶುಕ್ರವಾರ, ಮೇ 8, 2009

ಬೆಂಕಿಚೆಂಡು

ಅದೊಂದು ಮುಂಜಾನೆಯಲ್ಲಿ ಅರಳಿದ್ದ ಈ ಹೂವಿನ ಛಾಯಾಚಿತ್ರ ತೆಗೆದಿದ್ದೆ. ಬೆಳಕು ಸಾಲದೆ ಈ ಚಿತ್ರ ಮೂಡುತ್ತದೋ ಇಲ್ಲವೋ ಎಂಬ ಆತಂಕವಿತ್ತು. ಅದರೆ, ಈ ಹೂವಿನ ಹೆಸರು ತಿಳಿದಿರಲಿಲ್ಲ. ಸ್ನೇಹಿತರ ಮೂಲಕ ತಿಳಿದದ್ದು "ಡಾ.ರಾಜ್‍ರವರ ಗೀತೆಯ ಬಹದ್ದೂರ್ ಗಂಡು ಚಿತ್ರದ ಈ ಸಾಲಿನಲ್ಲಿ ಬರುವ `ಬೆಂಕಿಚೆಂಡು'. ಹೌದು. ಈ ಹೂವಿನ ಹೆಸರು `ಫೈರ್ಬಾಲ್ ಲಿಲ್ಲಿ' (Fireball Lily) ಎಂದು.

ಈ ಹೂವಿನ ದಳಗಳ ತುದಿಯಲ್ಲಿ ಸಣ್ಣ ಬೆಂಕಿಯ ಕಿಡಿಯಂತೆ ಕಾಣುವುದರಿಂದ ಮತ್ತು ಇಡೀ ಹೂವನ್ನು ನೋಡಿದಾಗ ಚೆಂಡಿನಂತೆ ಕಾಣುವುದರಿಂದ ಈ ಹೆಸರು ಬಂದಿರಬಹುದು. ಇದರ ವೈಜ್ಞಾನಿಕ ಹೆಸರು ಸ್ಕಾಡೋಕ್ಸಸ್ ಮಲ್ಟಿಫ಼್ಲೋರಸ್‍ (Scadoxus multiflorus). ಕಾರ್ಕಳದ ಮಿತ್ರರೊಬ್ಬರು ಇದರ ಹೆಸರನ್ನು (Haemanthus multiflorus) ಎಂದು ತಿಳಿಸಿದರು. ಈ ಹೂವಿನ ಕುಟುಂಬದ ಹೆಸರು ಆಆಈಡಾಏಆಏ.ಇದರ ತವರು Africa. ಅದರೆ ಇವುಗಳನ್ನು ಮನೆಯ ಕೈದೋಟಗಳಲ್ಲಿ ಕಾಣಬಹುದು. ಇದು ಸಣ್ಣಪ್ರಮಾಣದ ವಿಷಕಾರಿ ಸಸ್ಯ. ಇದರ ಹೂವಿನದಳಗಳಲ್ಲಿ ವಿಷವಿರುತ್ತದೆ. ಇದನ್ನು ತಿಂದರೆ ವಾಂತಿ, ತಲೆಸುತ್ತುವಿಕೆ, ಬಾಯಿ ಒಣಗುವಿಕೆ ಇತ್ಯಾದಿ ಪರಿಣಾಮ ಬೀರುತ್ತದೆ. ಈ ಹೂವಿಗೆ ಬ್ಲಡ್‍ ಲಿಲ್ಲಿ, ಫುಟ್ ಬಾಲ್ ಲಿಲ್ಲಿ, ಬ್ಲಡ್‍ ಫ್ಲವರ್, ಕ್ಯಾಥೆರೀನ್‍ ವ್ಹೀಲ್‍, ಪಾಯ್ಸನ್‍ ರೂಟ್, ಬ್ಲಡ್‍ಬ್ಲಮ್‍, ಗಿಫ್ಟ್‍ವೊರ್ಟೆಲ್ ಎಂದೂ ಹೆಸರುಗಳಿವೆ.
ಚಿತ್ರ-ಲೇಖನ: ಚಂದ್ರಶೇಖರ ಬಿ.ಎಚ್.

2 ಕಾಮೆಂಟ್‌ಗಳು:

shivu.k ಹೇಳಿದರು...

ಬೆಂಕಿಚೆಂಡಿನ ಫೋಟೋ ಚೆನ್ನಾಗಿದೆ...ಅದರ ವೈಜ್ಞಾನಿಕ ಹೆಸರು ಕೂಡ ಗುರುತಿಸಿದ್ದೀರಿ...

ಧನ್ಯವಾದಗಳು

ಕ್ಷಣ... ಚಿಂತನೆ... ಹೇಳಿದರು...

ಸರ್‍, ಧನ್ಯವಾದಗಳು. ಇದನ್ನು ನಾನು ಮೇ ಫ್ಲವರ್‍ ಎಂದು ತಿಳಿದಿದ್ದೆ. ನಾನು ಕೆಲವಾರು ಮಿತ್ರರನ್ನು ಸಂಪರ್ಕಿಸಿ ಈ ಹೂವಿನ ಬಗ್ಗೆ ತಿಳಿದುಕೊಂಡೆ.