ಎಪಿಸೋಡ್ -೧
ಹೆಲ್ಲೋ ಸಾರ್,
ಎಲ್ಲಿಗೆ ಸಾರ್,ಯಾವ್ ಸ್ಟಾಪು?
ನನಗ್ಗೊತ್ತು ಬಿಡ್ರಿ.
ಸರಿ, ಪಾಸೋ, ಟಿಕೆಟೋ
ಪಾಸು.
ಇದು ಮೊನ್ನೆ ಬಸ್ಸಿನಲ್ಲಿ ನಡೆದ ಚಿಕ್ಕ ಸಂಭಾಷಣೆ.
ಬಸ್ಸು ಸಿಗ್ನಲ್ಲಿನಲ್ಲಿ ಎಡಕ್ಕೆ ತಿರುಗಿತು. ಆಗ ಆ ವ್ಯಕ್ತಿ, ಯಾಕ್ರೀ ಈ ಕಡೆ ಹೋಗ್ತೀರಾ? ರಿಂಗ್ ರೋಡಿನಲ್ಲಿ ಹೋಗ್ರೀ?
ನೀ ಹೋಗಪ್ಪ. ನೀನು ಸರಿದಾರಿಲೇ ಹೋಗ್ತಿದೀಯ. ಮತ್ತು ಅಲ್ಲಿದ್ದ ಬಹುಪಾಲು ಪ್ರಯಾಣಿಕರಿಗೆ ಅದು ಗೊತ್ತಿರುವ ವಿಚಾರವಾಗಿತ್ತು. ಬಸ್ಸು ಸರಿಯಾದ ಮಾರ್ಗದಲ್ಲಿಯೇ ಹೋಗುತ್ತಿದೆ.
ರೀ, ನಿಲ್ಲಿಸ್ರೀ. ಯಾಕ್ರೀ ರೂಟ್ ಚೇಂಜ್ ಮಾಡ್ತೀರಾ? ಇದು ಆ ವ್ಯಕ್ತಿಯ ಪ್ರಶ್ನೆ. ನಾನು ಡ್ರೈವರ್ ಕೇಳಿದ್ದೆ, ಹೋಗುತ್ತೆ ಅಂದಿದ್ರು ಅದಕ್ಕೆ ರಿಂಗ್ ರೋಡು ಎಂದಿದ್ದು, ಆ ವ್ಯಕ್ತಿಯ ಮಾತು.
ಆದರೆ, ನಿರ್ವಾಹಕ ಹೇಳಿದ್ದು. ನಾ ಕೇಳಿದಾಗ ನನಗ್ಗೊತ್ತು, ನಾನೆಲ್ಲಿಗೆ ಹೋಗೋದು ಅಂದೆ. ಇದೀಗ ತರಲೆ ....
ಕೊನೆಗೆ ಸಿಗ್ನಲ್ಲಿನಲ್ಲಿ ಆ ವ್ಯಕ್ತಿ ಇಳಿದು ಹೋದ.
****
ಎಪಿಸೋಡ್ -೨
ಸಾರ್, ಟಿಕೆಟೋ, ಪಾಸೋ.
ಆ ಪ್ರಯಾಣಿಕ ಸೀಟುಗಾಗಿ ತಡಕಾಡಿ (ಖಾಲಿ ಇದ್ದ ಬಸ್ಸಿನಲ್ಲಿ) ಕೊನೆಯ ಸೀಟಿಗೆ ಹೋದ.
ರೀ, ಸ್ಟೇಜ್ ಇದೆ ಮುಂದೆ, ನಿಮ್ದು ಟಿಕೆಟೋ, ಪಾಸೋ? ಮತ್ತದೇ ಪ್ರಶ್ನೆ.
ಪ್ರಯಾಣಿಕ ಹೇಳಿದ್ದು: ಬೇಕಾದ್ರೆ ತೊಗೊತೀನಿ.
ಅಲ್ರೀ, ಕೇಳಿದ್ದಕ್ಕೆ ಸರಿಯಾಗಿ ಹೇಳ್ರೀ.
ನೀವೇನ್ ಕೇಳೋದು? (ಆತನ ಧೋರಣೆ ಹೀಗಿತ್ತು), ನಂತರ `ಪಾಸು' ಎಂದು ಆತ ಹೇಳುವಷ್ಟು ವ್ಯವಧಾನವೇ ಇಲ್ಲದಂತೆ ಹೇಳಿದ.
--------------
ಈ ಎರಡೂ ಘಟನೆಗಳಲ್ಲಿ ಅವಿದ್ಯಾವಂತರಿರಲಿಲ್ಲ. ಆದರೂ ಹೀಗೇಕೆ? ಒಂದು ಚಿಕ್ಕ ಪ್ರಶ್ನೆಗೆ ಇಷ್ಟೊಂದು ಮಾತಿಗೆ ಮಾತು ಬೆಳೆದು, ಇತರ ಪ್ರಯಾಣಿಕರಿಗೂ ಕಿರಿಕಿರಿ, ಕಿರುಚಾಟ, ಕಂಡಕ್ಟರ್-ಡ್ರೈವರ್ - ಇವರ ತಾಳ್ಮೆಗೆ ಕಡಿವಾಣ ಹಾಕುವಂತೆ ಯಾಕೆ ಹೀಗೆ ವಿದ್ಯಾವಂತ ಜನರೇ ವರ್ತಿಸುತ್ತಾರೆ. ಇಂದಿನ ವೇಗಕ್ಕೆ, ದುಡಿಮೆಗೆ ಹೊಂದಾಣಿಕೆ ಆಗುತ್ತಿಲ್ಲದಿರುವುದರಿಂದಲೇ ಅಥವಾ ಅವನೇನು ಮಹಾ? ಎಂಬ ಧೋರಣೆಯಿಂದಲೇ?
ಅದರಲ್ಲಿಯೂ ಈ ಎರಡೂ ಘಟನೆಗಳು ನಡೆದಿದ್ದು ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದಾಗ ಮತ್ತು ಭಾನುವಾರದಂದು. ರಜಾ ದಿನದಂದೇ ಹೀಗಿದ್ದರೆ, ಇನ್ನು ಪ್ರತಿದಿನ ಪ್ರಯಾಣಿಕರ ಈ ಬೇಜವಾಬ್ದಾರಿ ಉತ್ತರಗಳು ಇನ್ನು ಹೇಗಿರಬಹುದು?
ಇದರಿಂದ ಆಗುವ ತೊಂದರೆಗಳು ಅನೇಕವೆಂದರೆ ಅತಿಶಯವೇನಲ್ಲ. ನೀವೇನಂತೀರಿ?
1 ಕಾಮೆಂಟ್:
ಸರ್,
ಖಂಡಿತ ಇದು ಬೇಜವಾಬ್ದಾರಿ. ಜೊತೆಗೆ ಸ್ವಲ್ಪ ಆಹಾಂ ತೊಂದರೆ ಕೂಡ ಇದೆಲ್ಲಾ ಮಾಡಿಸುತ್ತೆ...
ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ