ಶನಿವಾರ, ಮೇ 16, 2009

ಪುಸ್ತಕಗಳನ್ನು ಆರಿಸಿಕೊಳ್ಳುವ ಬಗೆ ಹೇಗೆ?

ಓದುವಿಕೆ ಎಂದರೆ ಕೇವಲ ಶಾಲಾ-ಕಾಲೇಜು ಪುಸ್ತಕಗಳನ್ನು ಮಾತ್ರವೇ ಓದುವುದು ಎಂದು ತಿಳಿಯುವುದು ಸರಿಯಲ್ಲ. ಏಕೆಂದರೆ, ಓದುವಿಕೆ ಅಥವಾ ಓದು ಎಂಬುದು ಸರ್ವವ್ಯಾಪಿ ಪ್ರಕ್ರಿಯೆ. ಆದರೆ, ಓದುವುದು ಏನನ್ನು ಎಂಬ ಪ್ರಶ್ನೆ ಬಂದಾಗ ಉತ್ತರಿಸಲು ಕಷ್ಟವೆನಿಸುತ್ತದೆ. ಶಾಲಾ-ಕಾಲೇಜು ಇವುಗಳ ಪಾಠಪ್ರವಚನಗಳ ಓದುವಿಕೆಯು ಅದು ಶಿಕ್ಷಣಕ್ರಮಕ್ಕೆ, ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಇರುತ್ತದೆ. ಹಾಗಿದ್ದರೆ ಒಬ್ಬ ಓದುಗನಿಗೆ ಬೇಕಾದ ಓದು ಯಾವುದು ಅಥವಾ ಪುಸ್ತಕಗಳು ಯಾವುವು? ಒಬ್ಬೊಬ್ಬ ಓದುಗನಲ್ಲಿಯೂ ಓದುವಿಕೆಯ ಅಭಿರುಚಿ ಬೇರೆಯಾಗಿರುತ್ತದೆ. ಕೆಲವರಿಗೆ ಕಥೆ, ಕಾದಂಬರಿಗಳಲ್ಲಿ ಆಸಕ್ತಿಯಿದ್ದರೆ ಕೆಲವರಿಗೆ ವಿಜ್ಞಾನದ ಬಗೆಗಿನ ಪುಸ್ತಕಗಳನ್ನು ಓದುವಾಸಕ್ತಿಯಿರುತ್ತದೆ. ಹಾಗೆಂದ ಮಾತ್ರಕ್ಕೆ ಕೇವಲ ಕಥೆ, ಕಾದಂಬರಿ, ವಿಜ್ಞಾನ ವಿಷಯವುಳ್ಳ ಪುಸ್ತಕಗಳನ್ನೇ ಓದಬೇಕೆಂದೇನಿಲ್ಲ. ಒಂದು ಒಳ್ಳೆಯ ಪುಸ್ತಕ ಒಬ್ಬ ಉತ್ತಮ ಮಿತ್ರನಿದ್ದಂತೆ. ಮಿತ್ರರನ್ನು ಆಯ್ಕೆ ಮಾಡುವಾಗ ಇರುವ ನಮ್ಮ ಯೋಚನಾ ಲಹರಿಯಂತೆ, ಪುಸ್ತಕಗಳನ್ನು ಓದಲು ಆರಿಸಿಕೊಳ್ಳುವಲ್ಲಿಯೂ ಸಹ ಒಮ್ಮತವಿರುತ್ತದೆ ಎನ್ನಬಹುದು.


ಹಾಗಾದರೆ, ಪುಸ್ತಕಗಳನ್ನು ಆರಿಸಿಕೊಳ್ಳುವ ಬಗೆ ಹೇಗೆ? ಇದಕ್ಕೂ ಸಹ ಓದುಗನಲ್ಲಿ ಅಂತರ್ಮುಖಿಯಾಗಿ ಕುಳಿತಿರುವ ಮತ್ತೊಬ್ಬ ಓದುಗನಿರುತ್ತಾನೆ. ಅವನ ಅಂತರಂಗಕ್ಕೆ, ಮನೋಧರ್ಮಕ್ಕೆ ಒಗ್ಗುವಂತಹ ಪುಸ್ತಕಗಳನ್ನು ಆರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ.


ಯಾರೋ ಹೇಳಿದರೆಂದೋ, ಅಥವಾ ಪುಸ್ತಕದ ಹಿನ್ನುಡಿಯನ್ನು ಓದಿಯೋ, ಜಾಹಿರಾತಿನಲ್ಲಿ ಕಂಡದ್ದೋ, ಬುಕ್ಸ್ಟ್ಯಾಂಡಿನಲ್ಲಿ ನೋಡಿದ್ದೋ, ಬೆಸ್ಟ್ ಸೆಲ್ಲರ್‍ ಎಂಬ ಕಾರಣದಿಂದಲೋ ಪುಸ್ತಕಗಳನ್ನು ಆರಿಸುವುದು ತರವೇ? ಹಾಗಿದ್ದರೆ ಪುಸ್ತಕವನ್ನು ನೀವುಗಳು ಹೇಗೆ ಆಯ್ಕೆ ಮಾಡುತ್ತೀರಿ?


ನನ್ನ ಮನಸಿಗೆ ಹೊಳೆದ ವಿಚಾರವನ್ನು ಇಲ್ಲಿ ಬರೆದಿದ್ದೇನೆ. ನೀವೇನಂತೀರಿ ಈ ವಿಚಾರವಾಗಿ?

4 ಕಾಮೆಂಟ್‌ಗಳು:

Ittigecement ಹೇಳಿದರು...

ಕ್ಷಣ ಚಿಂತನೆ.....

ಬಹಳ ಮುಖ್ಯವಾದ ವಿಷಯ ಇದು....

ನಾನು ಅಷ್ಟೆಲ್ಲ ಗಂಭೀರ ಓದುಗನಲ್ಲ...
ನನಗೆ ಲೇಖಕನ ಬರೆಯುವ ಶೈಲಿ, ಮತ್ತು ವಿಷಯ ಮುಖ್ಯವಾಗುತ್ತದೆ...
ಕೆಲವೊಮ್ಮೆ ವಿಷಯ ಚೆನ್ನಾಗಿದ್ದರೂ ಶೈಲಿ ಇಷ್ಟವಾಗದಿದ್ದರೂ ಓದುತ್ತೇನೆ ಕಷ್ಟಪಟ್ಟು.

ಶೈಲಿ ಚೆನ್ನಾಗಿದ್ದು ವಿಷಯ ಬೋರಾಗಿದ್ದರೆ ಹೇಗೆ ಓದುವದು...?

ಚಿಂತನೆಗೆ ಹಚ್ಚುವ ನಿಮ್ಮ ಈ ಬರಹ ಇಷ್ಟವಾಯಿತು...

shivu.k ಹೇಳಿದರು...

ಸರ್,

ಇದು ತುಂಬಾ ಒಳ್ಳೆ ವಿಚಾರ. ಓದುಗರ ಅಭಿಪ್ರಾಯಕ್ಕಿಂತ ಅವನ ಒಳಮನಸ್ಸಿನ ಓದುಗನ ಅಭಿರುಚಿಗೆ ತಕ್ಕಂತೆ ಆಯ್ಕೆಯೂ ಆಗುತ್ತದೆ.

ನಿನ್ನೆ ರೈಲಿನಲ್ಲಿ ಪ್ರಯಾಣಿಸುವಾಗ ಪುಸ್ತಕ ಮಾರಾಟ ಮಾಡುವ ಯುವಕರಿಂದ ಒಂದಷ್ಟು ಕೊಂಡುಕೊಂಡೆ. [ಅವು ೧೦ ರೂ ನಿಂದ ೫೦ ರೂಪಾಯಿಗಳ ಬೆಲೆಯವರೆಗೆ ಮಾತ್ರ ಇರುತ್ತವೆ]ಅವುಗಳಲ್ಲಿ ಗಾದೆ ಮಾತು, ಶ್ತೋತ್ರಗಳು. ಇವೆರಡು ನನ್ನಾಕೆ ಇಷ್ಟಪಟ್ಟಳು. ನಾನು ತೆನಾಲಿರಾಮ, ಅಕ್ಬರ ಬೀರಬಲ್ ಕತೆ,
ಆಯುರ್ವೇದ, ಜೊತೆಗೆ ಒಂದೆರಡು ಸರಳ ವಿಜ್ಞಾನವೂ ಸೇರಿತ್ತು.

ಇವುಗಳನ್ನು ಕೊಂಡುಕೊಂಡಿದ್ದು ನಾನು ಓದುವುದು ಮತ್ತು ನಂತರ ಯಾರಿಗಾದರೂ ಮಕ್ಕಳಿಗೆ ಓದಲು ಕೊಟ್ಟುಬಿಡುವುದು. ನಾನು ರೈಲಿನಲ್ಲಿ ಕೊಳ್ಳುವ ಉದ್ದೇಶ ಇದೇನೆ. ಇದು ಬಿಟ್ಟು ಬೇರೆ ನನಗಾಗಿ ಕೊಳ್ಳುವ ಪುಸ್ತಕಗಳು ಅನೇಕವು ಇವೆ. ಫೋಟೋಗ್ರಫಿಗೆ ಸಂಭಂದಪಟ್ಟಿದ್ದು. ಸಾಹಿತ್ಯ, ಕಾದಂಬರಿ, ಇತ್ತೀಚೆಗೆ ನನಗೆ ಲಲಿತ ಪ್ರಭಂದಗಳು ಹೆಚ್ಚು ಇಷ್ಟವಾಗುತ್ತವೆ...

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಸರ್‍, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನಾನು ಈ ವಿಷಯದ ಬಗ್ಗೆ ಮತ್ತಷ್ಟು ವಿಷದವಾಗಿ ಬರೆಯಬೇಕಿತ್ತು. ಆದರೆ, ಯೋಚನಾ ಲಹರಿ ಹರಿಯದೇ ಅಷ್ಟಕ್ಕೇ ನಿಲ್ಲಿಸಿದ್ದೆ. ಮತ್ತೊಮ್ಮೆ ಯಾವಾಗಲಾದರೂ ಇನ್ನಷ್ಟು ವಿಚಾರ ಬರೆಯುವೆ.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ನಿಮ್ಮ ಈ ಒಂದು ವಿಚಾರಕ್ಕೆ ಧನ್ಯವಾದಗಳು. ಇದು ಒಂದು ವಿಧದಲ್ಲಿ ಪುಸ್ತಕ/ಓದುವಿಕೆಯ ಹವ್ಯಾಸವನ್ನು ಇತರರಿಗೂ ಹಂಚುವ ಒಂದು ಉತ್ತಮ ಯೋಚನೆ ನಿಮ್ಮದು. ಹೀಗೆಯೆ ಬರುತ್ತಿರಿ, ಬರೆಯುತ್ತಿರಿ.