ಶನಿವಾರ, ಮೇ 23, 2009

ನೀ ಏನೇ ಮಾಡು ಹೆದರುವೆನೇನು?

Photo by Chandrashekara B.H. ಇದು ಯಾವ ಕೀಟ ಎಂದು ನನಗೆ ತಿಳಿಯದು. ಸುಂದರವಾದ ಕೀಟ. ಆದರೆ, ಇದು ಮಧ್ಯಾಹ್ನ ಕಚೇರಿ ಆವರಣದಲ್ಲಿದ್ದ ಟ್ಯೂಬ್‌ಲೈಟ್ ಬೆಳಕಿಗೆ ಹಾರುತ್ತಲೇ ಇತ್ತು.

ಕಾಫಿ ಮುಗಿಸಿ ಬಂದಾಗ ನೆಲದ ಮೇಲೆ ಬಿದ್ದು ಅತ್ತಿತ್ತ ಹೊರಳಾಡುತ್ತಿತ್ತು. ಅದನ್ನು ಒಂದು ಕಾಗದದ ಮೇಲೆ ಹಿಡಿದು ಟೇಬಲ್ಲಿನ ಮೇಲೆ ಇಟ್ಟೆ. ಆದರೆ, ಅದರ ಒಂದೆರಡು ಕಾಲುಗಳು ಸ್ವಾಧೀನ ತಪ್ಪಿ ಪದೇ ಪದೇ ಉಲ್ಟಾ ಬೀಳುತ್ತಿತ್ತು. ಹಾರಲು ಆಗುತ್ತಿಲ್ಲ. ಬಳಿಯಲ್ಲಿಯೇ ಇದ್ದ ಕ್ಯಾಮೆರಾದಿಂದ ಒಂದಷ್ಟು ಚಿತ್ರ ಕ್ಲಿಕ್ಕಿಸಿದೆ. ಅದು ಅತ್ತಿತ್ತ ಸ್ವಲ್ಪ ಹೊತ್ತು ಸರಿದಾಡುತ್ತಿತ್ತು. ಸಂಜೆಯವರೆಗೂ ಅದುಹಾಗೇ ಇತ್ತು. ಕಚೇರಿ ಸಮಯ ಮುಗಿಯಿತು. ಮನೆಗೆ ಹೊರಟೆ.

ಮಾರನೇ ದಿನ ಬಂದು ನೋಡಿದರೆ ಅದು ಇಹಲೋಕ ತ್ಯಜಿಸಿತ್ತು.

`ನೀ ಏನೇ ಮಾಡು ಹೆದರುವೆನೇನು? ಹ.ಹಾ.. ಬಾಳುವೆನು ನೋಡು'

ಎಂದು ಅಣಕಿಸುತ್ತಾ ಮತ್ತೆ ಮತ್ತೆ ಟ್ಯೂಬ್‌ಲೈಟ್‌ ಬೆಳಕಿನತ್ತ ಹಾರುತ್ತಲೇ ಇದ್ದದ್ದು ಬೆಳಕಿನಡಿಯಲ್ಲಿಯೇ ಜೀವ ಕಳೆದುಕೊಂಡಿತ್ತು.

ಪತಂಗ, ಕೀಟ ಪ್ರಪಂಚದವೆಲ್ಲ ಹೀಗೆಯೇ ಬೆಳಕಿನೆಡೆಗೆ ಸಾಗಿ, ದಾರಿ ತಪ್ಪಿ ಪ್ರಾಣ ಬಿಡುತ್ತಲೇPhoto by Chandrashekara B.H. ಇರುತ್ತವೆ. ಇವುಗಳ ಕಥೆ ಹೀಗಾದರೆ, ಮಾನವನು ಬೆಳಕಿನಿಂದ ಕತ್ತಲಿನೆಡೆಗೆ ಸಾಗಿ ತನ್ನ ಅಧೋಗತಿಯನ್ನು ತಂದು ಕೊಳ್ಳುವುದೂ ಉಂಟಲ್ಲವೇ?

ಓದುಗರಲ್ಲಿ ಈ ಕೀಟದ ಗುರುತು ಮತ್ತು ಅದರ ಬಗೆಗಿನ ಮಾಹಿತಿಯಿದ್ದರೆ ತಿಳಿಸಿ.

5 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕ್ಷಣ ಚಿಂತನೆ...

ನಾವೇ ನಮ್ಮ ಕೈಯ್ಯಾರೆ ಕೆಲವು ಬಾರಿ ಈ ಥರಹ ಮಾಡಿಕೊಳ್ಳುತ್ತೇವೆ...

ಬೆಳಕಿನೆಡೆಗೆ ಹೋಗಲಿಕ್ಕೂ ಪ್ರಯತ್ನ, ಸಾಧನೆ ಬೇಕು.
ನಿಮ್ಮ ಬರಹ ಇಷ್ಟವಾಯಿತು..

ನಿಮ್ಮ ಲೇಖನ ಓದಿದಾಗ ನನಗೆ ಹಿಂದಿ ಹಾಡು ನೆನಪಾಗುತ್ತಿದೆ..
"ಪಲ್... ಪಲ್.. ದಿಲ್.. ಕೇ.. ಪಾಸ್" ಹಾಡಿನಲ್ಲೊಂದು ಸಾಲು ಬರುತ್ತದೆ..

"ಜಲನೇಮೆ ಕ್ಯಾ ಮಜಾ ಹೈ... ಪರವಾನೆ ಜಾನತೇ ಹೈ..."

ಅರ್ಥವಾಯಿತಾ...?
ಈ ಹಾಡು ಕೇಳಿದ್ದೀರಾ...?

Ramagopalarya ಹೇಳಿದರು...

i liked your article. . . very interesting. . your comparision of an insect which goes towards light and dies and man going towards darkness to die. . really thought provoking. . TAMASOMA JYOTHIRGAMAYA. . . Thnx, Yours, Ramagopala

ಕ್ಷಣ... ಚಿಂತನೆ... Thinking a While.. ಹೇಳಿದರು...

ರಾಮಗೋಪಾಲ ಅವರೆ, ಬ್ಲಾಗಿಗೆ ಸ್ವಾಗತ.

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.

ಹೀಗೆಯೆ ಬರುತ್ತಿರಿ, ಬರೆಯುತ್ತಿರಿ.

shivu ಹೇಳಿದರು...

ಸರ್,

ಮತ್ತೆ ಈ ಲೇಖನಕ್ಕೆ ಬರುವುದು ತಡವಾಯಿತು ಕ್ಷಮೆಯಿರಲಿ...

ಹೆದರುವ ಲೇಖನಕ್ಕೆ ಬಂದರೆ ಒಂದು ಕೀಟದ ಬಗ್ಗೆ ಇದೆ. ಅದರ ಫೋಟೋ ಚೆನ್ನಾಗಿದೆ..

ಲೇಖನದಲ್ಲಿ ಮತ್ತೆ ಮಾನವನ ಜೀವನವನ್ನು ಹೋಲಿಕೆ ಮಾಡಿ ಆಧ್ಯಾತ್ಮಕ್ಕೆ ಸೆಳೆದಿದ್ದೀರಿ...
ಕತ್ತಲು-ಬೆಳಕು ಕೀಟ ಮತ್ತು ಮಾನವನಿಗೆ ಹೇಗೆ ವಿರುದ್ಧವಾಗಿ ವರ್ತಿಸುತ್ತವೆ ಅಂತ ಚಿಕ್ಕದಾಗಿ ಚೊಕ್ಕವಾಗಿ ವಿವರಿಸಿದ್ದೀರಿ..

ಅಭಿನಂದನೆಗಳು

ಕ್ಷಣ... ಚಿಂತನೆ... Thinking a While.. ಹೇಳಿದರು...

ಶಿವು ಸರ್‍, ನಿಮ್ಮ ಅನಿಸಿಕೆಗಳಿಗೆ ಮತ್ತು ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು. ನೀವು ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೇಳುವುದು ಬೇಡ ಎಂದು ನನ್ನ ಕೋರಿಕೆ.
ಸ್ನೇಹದೊಂದಿಗೆ,