ಶನಿವಾರ, ಜೂನ್ 20, 2009

ಮಾತು ಮತ್ತು ಮೌನ

ಬಹದ್ದೂರ್‌ ಗಂಡು ಚಲನಚಿತ್ರದಲ್ಲಿ ಬರುವ ಈ ಹಾಡನ್ನು ಡಾ ರಾಜ್‌ ಕಂಠಸಿರಿಯಲ್ಲಿ ಕೇಳದವರಾರು?

ಮುತ್ತಿನಂಥ ಮಾತೊಂದು ಗೊತ್ತೇನಮ್ಮ
ನಿನಗೆ ಗೊತ್ತೇನಮ್ಮ,
ನಾವು ...

ಆದರೆ ಮೌನವೂ ಸಹ ಮಾತು ಎಂಬುದನ್ನು ಯಾರಾದರೂ ನಂಬುತ್ತಾರಾ?!!

ನನಗೊಂದು ವಿದ್ಯುನ್ಮಾನ ಅಂಚೆಯಲ್ಲಿ ಬಂದ ಚಿತ್ರದೊಡನೆ ಇದ್ದ ವಾಕ್ಯಗಳು (ಆಂಗ್ಲದಲ್ಲಿ: If you do not understand my silence, how can you understand my words?) ಹೀಗಿದ್ದವು. `ನನ್ನ ಮೌನವನ್ನೇ ಅರ್ಥಮಾಡಿಕೊಳ್ಳಲಾರದ ನೀನು, ನನ್ನ ನುಡಿಗಳನ್ನು ಹೇಗೆ ಅರ್ಥಮಾಡಿಕೊಳ್ಳುವೆ?' ಎಂದು ಒಬ್ಬ ಯುವತಿ ಮರವವೊಂದನ್ನು ಒರಗಿ ಕೇಳುತ್ತಾ ನಿಂತಿರುವ ಚಿತ್ರವಿತ್ತು.

There are three kinds of silence. Silence from words is good, because inordinate speaking tends to evil. Silence, or rest from desires and passions, is still better, because it promotes quietness of spirit. But the best of all is silence from unnecessary and wandering thoughts, because that is essential to internal recollection, and because it lays a foundation for a proper regulation and silence in other respects.- Madame Guyon.

ಶ್ರೀ ರಮಣ ಮಹರ್ಷಿಗಳ ಒಂದು ನುಡಿಮುತ್ತು ಹೀಗಿದೆ. `ಸೈಲೆನ್ಸ್ ಇಸ್ ದ ಬೆಸ್ಟ್ ಎಲಕ್ವೆನ್ಸ್' ಅಂತ (ಈ ವಾಕ್ಯವನ್ನು ಯಾವುದೋ ಒಂದು ಆಂಗ್ಲ ಲೇಖನದಲ್ಲಿ ಓದಿದ್ದ ನೆನಪಾಗಿ ಇಲ್ಲಿ ಬರೆದೆ).

ನುಡಿದರೆ ಮುತ್ತಿನ ಹಾರದಂತಿರಬೇಕು... ಎಂದೂ ವಚನಕಾರರು ಹೇಳಿದ್ದಾರೆ.

ವಿಶ್ವ ಧರ್ಮ ಸಮ್ಮೇಳನದಲ್ಲಿ ಶ್ರೀ ಸ್ವಾಮಿ ವಿವೇಕಾನಂದರಿಂದ ಹೊರಬಂದ ಆ ನುಡಿಗಳು ಎಂತಹ ಸಂಚಲನ ಮೂಡಿಸಿತ್ತು ಎಂದು ಎಲ್ಲರೂ ಬಲ್ಲವರೇ ಆಗಿದ್ದೇವೆ.

ಪ್ರತಿಯೊಬ್ಬ ವ್ಯಕ್ತಿಯ ಮಾತಿಗೂ ಬೆಲೆ/ಗೌರವ ಬರುವುದು ಹೀಗೆಯೇ ಅಲ್ಲವೆ? ಇಲ್ಲಿ ಬೆಲೆ ಎಂದರೆ ಹಣದ ರೂಪ ಎಂದು ತಿಳಿಯಬಾರದು. ಒಂದು ಪ್ರಭಾವೀ ವ್ಯಕ್ತಿತ್ವದ ಅನುಭಾವ ಎಂದು ಅರಿಯಬೇಕು.
ನಿಮ್ಮ ಮಾತಿಗೂ ಬೆಲೆಯಿದೆ. ಉದಾಹರಣೆ ಬೇಕೆ? ಅದೇ ಇದೀಗ ವಿಶ್ವದೆಲ್ಲ ಜನರ ನಡುವೆ ಸಂಪರ್ಕವೇರ್ಪಡಿಸುವ, ಇಡೀ ವಿಶ್ವವನ್ನೇ ಅಂಗೈಯಗಲದ ದರ್ಪಣದಲ್ಲಿ ತೋರಿಸಬಲ್ಲ, ಕೇಳಿಸಬಲ್ಲ, ಸಾಧನ - ಮೊಬೈಲ್‌ ಎಂಬುದು. ನೀವು ಮಾತಾಡಿದಂತೆ ನಿಮ್ಮ ಮಾತಿಗೆ ಬೆಲೆ ಕಟ್ಟಿ ಸಂಪರ್ಕದಾರರು ಇಂತಿಷ್ಟು ಹಣವಾಯಿತೆಂದು ಅಲ್ಲಿಯೇ, ಆ ಕ್ಷಣವೇ ತೋರಿಸುವುದಿಲ್ಲವೇ? ಅದಕ್ಕೇ ನಿಮ್ಮ ಮಾತಿಗೂ ಬೆಲೆಯಿದೆ ಎಂದದ್ದು. ಹಾಗೂ ಕಂಪನಿಗೆ ನಿಮ್ಮ ಮಾತಿನಿಂದ ದುಡ್ದು ಸೇರುತ್ತಿರುವುದು.

ಮಾತೇ ಮುತ್ತು, ಮಾತೇ ಮೃತ್ಯು ಎಂಬ ನಾಣ್ಣುಡಿಯೂ ಇದೆ.

ಮಾತೇ ಮುತ್ತು,
ಕೆಲವೊಮ್ಮೆ ಅಥವಾ ಸಾಮಾನ್ಯವಾಗಿ ಜನರು ಬೆಣ್ಣೆ ಹಚ್ಚಿ ಮಾತಾಡುತ್ತಾರೆ. ಇಲ್ಲಿ ಬೆಣ್ಣೆಗೆ ಬೆಲೆ ಕಟ್ಟಬೇಕೆ? ಬೇಡವೇ? ಎಂಬ ಜಿಜ್ಞಾಸೆ ಇದ್ದರೆ ಬೆಲೆ ನೀವಾಗಲೇ ಒಂದಲ್ಲಾ ಒಂದು ರೂಪದಲ್ಲಿ ಕಟ್ಟಿಕೊಟ್ಟಿರುತ್ತೀರಿ. ಪರವೂರಿನಲ್ಲಿ ಇಂತಹ ಅನುಭವಗಳು ಒಬ್ಬರಲ್ಲಾ ಒಬ್ಬರಿಗೆ ಆಗಿರುವಂತಹುದೇ! ಸಾರ್‌/ಅಣ್ಣ/ಅಕ್ಕ, ನಮ್ಮದು ಇಂಥ ಊರು, ನಿನ್ನೆ ರೈಲಿನಲ್ಲಿ/ಬಸ್ಸಿನಲ್ಲಿ ಬರುವಾಗ ಹಣ, ಬಟ್ಟೆ ಎಲ್ಲ ಕಳವಾಯಿತು. ಊರಿಗೆ ಹೋಗಲು ಹಣ ಸ್ವಲ್ಪ ಕಡಿಮೆ ಇದೆ. ಪ್ಲೀಸ್‌ ನೀವು ಒಂದಿಷ್ಟು ಸಹಾಯ... ಎಂದಾಗ ಹೆಮ್ಮೆಯಿಂದ ಉಪಕರಿಸಲು ಹೋಗಿ ಅಪಕರಿಸಿಕೊಂಡವರೇ ಇದ್ದರೂ ಅಚ್ದರಿಯಿಲ್ಲ. ಇಲ್ಲಿ ಅವನ ಬೇಡುವ ಮಾತಿಗೆ ಮರುಳಾಗಿ, ಕನಿಕರಿಸಿ ಹಣ ಕಳೆದುಕೊಂಡವರೂ ಕಡಮೆಯೇನಿಲ್ಲ. ಇಲ್ಲಿ ಅವನ ಮಾತಿಗೆ ಬೆಲೆ ಸಿಕ್ಕದೆ. ನಿಮ್ಮ ಮೌನಕ್ಕೆ ನಷ್ಟವಾಗಿದೆ ಎಂದೂ ತಿಳಿಯಬಹುದು.

ಮಾತಾಡುವುದಿದ್ದರೂ ತೂಕವರಿತು, ಇತರರಿಗೆ ಬೇಸರವಾಗದಂತೆ, ಅರ್ಥವಾಗುವಂತೆ, ಮನನೋಯಿಸದಂತೆ, ಸ್ಪಷ್ಟವಾಗಿ ಆಡಬೇಕು.

ಮಾತೇ ಮೃತ್ಯು

ಇದೊಂದು ವಿಧವಾದರೆ, ಇಂದೇನಾಗಿದೆ? ಮಾತಾಡಿದರೆ ಹೊಡಿ ಬಡಿ ಕಡಿ ಎಂಬಂತಾಗಿದೆಯಲ್ಲ. ಇಬ್ಬರ ಜಗಳದ ನಡುವೆ ಸಂಧಾನವೆಂಬ ಮಾತಿಗೆ ಹೋದವರೆದೆಷ್ಟೋ ಮಂದಿ ಹೊಡೆತ ಅಥವಾ ಪ್ರಾಣವನ್ನೇ ಕಳೆದುಕೊಂಡ ಪ್ರಸಂಗಗಳು ಪ್ರತಿನಿತ್ಯ ಒಂದಲ್ಲಾ ಒಂದು ದಿನಪತ್ರಿಕೆಯಲ್ಲಿ ಓದುತ್ತಿರುತ್ತೇವೆ. ಇಲ್ಲಿ ಮಾತಿಗೆ ಪ್ರಾಣದ ಬೆಲೆಯೇ ತೆತ್ತಾಗಿದೆ.

'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಗಾದೆಯೇ ಇದೆ.

`ಬಂಗಾರದ ಮನುಷ್ಯ' ಚಲನಚಿತ್ರದ ಕೊನೆಯ ದೃಶ್ಯದಲ್ಲಿ ರಾಜೀವ (ಡಾ ರಾಜ್) ಊಟಕ್ಕೆ ಕುಳಿತಿರುವಾಗ ಕೇಶವ (ವಜ್ರಮುನಿ) ಆಡುವ ಮಾತುಗಳು ಎಂತಹ ಪ್ರಭಾವ ಬೀರಿದೆ. ಆ ಕೊನೆಯ ದೃಶ್ಯ ಯಾರಿಗೇ ಆಗಲೀ ಒಮ್ಮೆ ಛಳಕು ಹುಟ್ಟಿಸದಿರದು. ಅದರಿಂದಾಗುವ ಪರಿಣಾಮಗಳು ಆತಂಕಕಾರಿಯಾಗಿರುತ್ತವೆ ಎಂದರೆ ತಪ್ಪಾಗದು.

ಅದಕ್ಕಿಂತ ಈ ನಾಣ್ಣುಡಿ: "ಮಾತು ಬೆಳ್ಳಿ, ಮೌನ ಬಂಗಾರ" ಇದನ್ನು ಸಂದರ್ಭಾನುಸಾರಕ್ಕೆ ಉಪಯೋಗಿಸಿಕೊಂಡರೆ ಒಳಿತಲ್ಲವೆ? ನೀವೇನಂತೀರಿ?

10 ಕಾಮೆಂಟ್‌ಗಳು:

Ittigecement ಹೇಳಿದರು...

ಕ್ಷಣ ಚಿಂತನೆ....

ಮಾತಿನ ಬಗೆಗೆ ಬಹಳ ಚಂದದ ಲೇಖನ...
ಬಹಳಷ್ಟು ವಿಷಯಗಳು...
ಚಿಂತನೆಗೆ ಹಚ್ಚುವಂಥವುಗಳು....

ಇಷ್ಟವಾಯಿತು....

shivu.k ಹೇಳಿದರು...

ಕ್ಷಣ ಚಿಂತನೆ ಸರ್,

ಮಾತಿನ ಬಗೆಗೆ ಸೊಗಸಾದ ಅವಲೋಕನ. ಹಾಗೆ ಮೌನದ ಬಗೆಗೆ ಅದಕ್ಕಿಂತ ಅಂದರೆ ಬಂಗಾರದಂತ ವಿಶ್ಲೇಷಣೆ...

ಇವರಡರ ಆಗು-ಹೋಗುಗಳನ್ನು ಉದಾಹರಣೆ ಸಹಿತ ಚೆನ್ನಾಗಿ ಬರೆದಿದ್ದೀರಿ....

ಒಂದು ಸೊಗಸಾದ ತೂಕಬದ್ದ ಮತ್ತು ಅರ್ಥವತ್ತಾದ ವಿವರಣೆ...

ಧನ್ಯವಾದಗಳು..

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಚಂದ್ರಶೇಖರ್ ಸರ್,
ಮಾತು-ಮೌನ ದ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದೀರಿ. ಚಿಂತಿಸುವಂತೆ ಮಾಡಿದೆ.

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಸರ್‍, ಈ ಒಂದು ವಿಷಯದ ಬಗ್ಗೆ ಮತ್ತಷ್ಟು ಬರೆಯೋಣ ಎಂದು ಮೊದಲು ಯೋಚಿಸಿದ್ದೆ. ಆದರೆ, ಅದೇ ಬೃಹತ್ತಾಗಿ ಓದುಗರಿಗೆ ಬೇಸರವಾಗದಿರಲಿ ಎಂದು ಇಷ್ಟಕ್ಕೇ ಸೀಮಿತಗೊಳಿಸಿದೆ.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

ಕ್ಷಣ... ಚಿಂತನೆ... ಹೇಳಿದರು...

ಮಲ್ಲಿಕಾರ್ಜುನ ಸರ್‍, ಲೇಖನ ಮೆಚ್ಚಿದ್ದಕ್ಕೆ ಮತ್ತು ನಿಮ್ಮನ್ನು ಚಿಂತನೆಗೆ ಹಚ್ಚುವಂತೆ ಮಾಡಿದೆ ಎಂದು ತಿಳಿಸಿದ್ದೀರಿ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಲು.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

Savitha.B.C ಹೇಳಿದರು...

ಹೌದು, ಚಂದ್ರು ಸರ್, ನಿಮ್ಮ ಲೇಖನ ತುಂಬ ಚೆನ್ನಾಗಿದೆ, ಆದರೆ ಅತಿಯಾದ ಮಾತು ಹಾನಿಕಾರಕ ಮತ್ತು ಮಿತಿಯಾದ ಮಾತು ಸುಂದರ ಬಾಳಿಗೆ ಪ್ರೇರಕ..........ಅಂತೆಯೇ ಮಾತು ಇತಿ-ಮಿತಿಯಲ್ಲಿದ್ದು ಎಲ್ಲರಿಗೂ ಸಂತೋಷ ನೀಡುವಂತಿರಬೇಕು... ನಮ್ಮ ಮಾತಿನಿಂದ ಬೇರೆಯವರ ಮನಸ್ಸು ನೋಯಿಸಲು ಯಾರಿಗೂ ಅಧಿಕಾರವಿಲ್ಲ ಅಲ್ಲವೇ?

ಕ್ಷಣ... ಚಿಂತನೆ... ಹೇಳಿದರು...

savitha, nimma abhipraayagaLige haudu. heegeye baruttiri/bareyuttiri.

chandru,

ಅನಾಮಧೇಯ ಹೇಳಿದರು...

ಇದೇ ಮೊದಲು ನಿಮ್ಮ ಪೋಸ್ಟ್ ಓದುತ್ತಾ ಇರೋದು. ನನ್ನನ್ನು ಸೆಳೆದಿದ್ದು ನಿಮ್ಮ 'ಕನ್ನಡ' ...ಬರವಣಿಗೆಯ ಶೈಲಿ...
ಯಾವುದು ಅತಿಯಾದ್ರೂ ಕಷ್ಟವೇ ಅಲ್ವಾ?? ತುಂಬಾ ಮಾತಾಡ್ತಾ ಇದ್ರೆ ಯಾಕಾದ್ರೂ ಸುಮ್ನೇ ಇರಬಾರ್ದು ಅಂತೀವಿ; ಅದೇ ಸುಮ್ಮನೇ ಇದ್ರೆ, ಯಾಕೆ ಏನೂ ಹೇಳ್ತಾ ಇಲ್ಲ ಅಂತೀವಿ!!! ಸಂಧರ್ಭಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಬಂದ್ರೆ ಅದು ಪರಿಣಾಮಕಾರಿ ಆಗಿರುತ್ತೆ!!
ನನ್ನ ಬರವಣಿಗೆಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ಕ್ಷಣ... ಚಿಂತನೆ... ಹೇಳಿದರು...

ಸುಮನಾ ಮೇಡಂ, ನನ್ನ ಬ್ಲಾಗಿಗೆ ಮೊದಲ ಭೇಟಿಗೆ ಸುಸ್ವಾಗತ ಮತ್ತು ಬ್ಲಾಗ್ ಬಳಗದಲ್ಲಿ ಸೇರಿರುವುದು ಸಂತಸವಾಗಿದೆ. ನನ್ನ ಲೇಖನದ ಬಗ್ಗೆ ಮೆಚ್ಚುಗೆಗೆ ಧನ್ಯವಾದಗಳು. ನಿಮ್ಮಗಳ ಪ್ರೋತ್ಸಾಹವೇ ಬರವಣಿಗೆಗೆ ಸ್ಫೂರ್ತಿ. ಹೀಗೆಯೆ ಬರುತ್ತಿರಿ. ಧನ್ಯವಾದಗಳು ಮತ್ತೊಮ್ಮೆ,

ವಿಶ್ವಾಸದೊಂದಿಗೆ,

ಚಂದ್ರಶೇಖರ ಬಿ.ಎಚ್.