ಶುಕ್ರವಾರ, ಡಿಸೆಂಬರ್ 11, 2009

ಉದಯರವಿಯ ಮೊದಲ ಕಿರಣ..

©Chandrashekara B.H. Photo taken on June2009 at ISEC

ಉದಯರವಿಯ ಮೊದಲ ಕಿರಣ..

ಚುಂಬಿಸಿದೆ ತರುಲತೆಗಳ ಮೇಲಿನ
ಮಿನುಗುತಿರುವ ಇಬ್ಬನಿಯ ಹನಿಗಳನು
ಮೆಲ್ಲನೆ ನಾಚುತಿವೆ ಹಿಮದ ಮಣಿಗಳು
ಹೂ ದಳದಲಿ, ರವಿಯ ಕಿರಣದಾ ಸ್ಪರ್ಶಕೆ

ದಿನಕರನ ಪ್ರೀತಿಯ ಪ್ರಥಮ ಕಿರಣ
ತಂದಿದೆ, ಇಳೆಯ ಜೀವಿಗಳೀಗೆ ಹೊಸ ಚೇತನ
ಬಾನಿನಲ್ಲಿ ಹರಡಿರುವ ಮೇಘಗಳ ನಡುವಿನಲ್ಲಿ,
ತಂಗಾಳಿಯ ಸೊಬಗಿನಲ್ಲಿ ಹಕ್ಕಿಗಳ ಪಯಣ

ಇದನೆಲ್ಲ ಕಂಡು ಮುದದಿಂದ ಹಾಡುತಿದೆ, ನನ್ನ ಮನ
ಓ ರವಿರಾಜನೆ, ನಿನಗೆ ನಮನ, ನೀನೆ ನಮ್ಮ ಬಾಳಿನ
ದಾರಿಯ ದೀವಿಗೆ, ನೀನಲ್ಲದೆ ನಮಗಿನ್ನಾರು
ತೋರುವರು ದಾರಿಯನು, ಆ ಹಾದಿ ಸೇರಿಸುವ ಗುರಿಯನ್ನು.
ಚಂದ್ರಶೇಖರ ಬಿ. ಎಚ್. ೧೪೬೯೧

8 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಎಂಥ ಸುಂದರ ಸಾಲುಗಳು
ಮುಂಜಾನೆಯ ವರ್ಣನೆ ಸೊಬಗು ಮನದಲ್ಲಿ ನಿಂತಂತಿದೆ
ಸುಂದರ ಕವನ

shivu.k ಹೇಳಿದರು...

ಮುಂಜಾನೆಯ ಸೊಬಗನ್ನು ಕವನದ ಸಾಲುಗಳಲ್ಲಿ ಚೆನ್ನಾಗಿ ವಿವರಿಸಿದ್ದೀರಿ...ಇಷ್ಟವಾಯಿತು ಸರ್.

Raghu ಹೇಳಿದರು...

ಸುಂದರವಾದ ಸಾಲುಗಳು...
ನಿಮ್ಮವ,
ರಾಘು.

ಕ್ಷಣ... ಚಿಂತನೆ... ಹೇಳಿದರು...

ಗುರುಮೂರ್ತಿ ಮತ್ತು ಶಿವು ಸರ್‍, ಈ ಕವನವನ್ನು ಬರೆದದ್ದು ಕೆಲವು ವರ್ಷಗಳ ಹಿಂದೆ. ಕವನವು ನಿಮಗೆ ಇಷ್ಟವಾಗಿದ್ದಕ್ಕೆ ಮತ್ತು ಅನಿಸಿಕೆ/ಪ್ರೋತ್ಸಾಹಕ್ಕೆ ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ರಾಘು ಅವರೆ, ನನ್ನ ಬ್ಲಾಗಿಗೆ ಬಂದಿದ್ದು, ನಿಮ್ಮ ಅನಿಸಿಕೆಯನ್ನು ತಿಳಿಸಿದ್ದೀರಿ. ನಿಮಗೆ ಸ್ವಾಗತ ಮತ್ತು ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

AntharangadaMaathugalu ಹೇಳಿದರು...

ಚಂದ್ರು ಅವರೇ..
ಕವನ ತುಂಬಾ ಸುಂದರವಾಗಿದೆ........

PARAANJAPE K.N. ಹೇಳಿದರು...

ನಿಮ್ಮ "ಉದಯರವಿಯ ಮೊದಲ ಕಿರಣ" ಕ್ಕೆ ನಾನು ಮೊನ್ನೇನೆ ಕಾಮೆ೦ಟು ಹಾಕಿದ್ದೆ. ಆದರೆ ತಾ೦ತ್ರಿಕ ದೋಷ ದಿ೦ದ ಅದು ದಾಖಲಾಗಿಲ್ಲ ಎ೦ಬುದು ತಡವಾಗಿ ನನ್ನ ಗಮನಕ್ಕೆ ಬಂತು. ದಿನಕರನಿಗೆ ನಮನ ಚೆನ್ನಾಗಿ ಮೂಡಿ ಬ೦ದಿದೆ.

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾ, ಪರಾಂಜಪೆ ಸರ್‍, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಕವನ ಇಷ್ಟಪಟ್ಟಿದ್ದೀರಿ. ಹೀಗೆ ಬರುತ್ತಿರಿ.
ಸ್ನೇಹದಿಂದ,