ಶನಿವಾರ, ಜನವರಿ 23, 2010

ನೇತಾಜಿಯವರಿಗೆ ನಮನ

ಇಂದು ಜನವರಿ ೨೩.

೧೮೯೭ ರ ಜನವರಿ ೨೩ ನೇತಾಜಿ ಸುಭಾಷ ಚಂದ್ರ ಬೋಸರ ಜನ್ಮದಿನ. ಅವರನ್ನು ನೆನೆವ ದಿನ. ಮಹಾನ್ ದೇಶಭಕ್ತ, ಅಪ್ರತಿಮ ಧೈರ್ಯಶಾಲಿಯಾಗಿದ್ದ ಇವರು ಭಾರತದಿಂದ ಬ್ರಿಟಿಷರನ್ನು ಹೊರಹಾಕಲು, ಭಾರತಕ್ಕೆ ಸ್ವಾತಂತ್ರ್‍ಯವನ್ನು ಗಳಿಸಿಕೊಡಲು ಇಂಡಿಯನ್ ನ್ಯಾಷನಲ್‌ ಆರ್ಮಿ ಸ್ಥಾಪಿಸಿದರು. ಸ್ವಾತಂತ್ರ್‍ಯ ಹೋರಾಟಗಾರರಲ್ಲಿನ ಪ್ರಮುಖರು. ಇವರ ಪ್ರಮುಖ ಉಕ್ತಿ: 'ಗಿವ್ ಮಿ ಬ್ಲಡ್, ಐ ವಿಲ್ ಗಿವ್ ಯು ಇಂಡಿಪೆಂಡೆನ್ಸ್' ಎಂಬುದು.

ಹೆಚ್ಚಿನ ಓದಿಗಾಗಿ: http://culturalindia.net/leaders/netaji-subhash-chandra.html ಅಥವಾ www.missionnetaji.org/ ಅಥವಾ www.netaji.org ನೋಡಬಹುದು.

ಇಂತಹ ಧೀರೋದಾತ್ತ ಚೇತನವನ್ನು ನೆನೆವ ದಿನ ಇದು. ನೇತಾಜಿಗೆ ನಮನಗಳು.

6 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ನೇತಾಜಿಯವರಿಗೆ ನಮ್ಮ ನಮನಗಳು

PARAANJAPE K.N. ಹೇಳಿದರು...

ನೇತಾಜಿ ಯವರಿಗೆ ನನ್ನದೂ ಒಂದು ಸಲಾಮು, ಇ೦ತಹ ಅಸೀಮ ದೇಶಪ್ರೇಮಿಗಳನ್ನು ನಾವು ಮರೆಯುತ್ತಿದ್ದೇವೆ ಮತ್ತು ಕೇವಲ ಜನ್ಮ ದಿನಗಳಿಗೆ ಅವರ ನೆನಪನ್ನು ಸೀಮಿತ ಗೊಳಿಸಿ ದ್ದೇವೆ ಎ೦ಬುದೇ ಬೇಸರದ ವಿಷಯ.

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಮತ್ತು ಪರಾಂಜಪೆ ಸರ್‍, ನೇತಾಜಿಯವರ ಬಗ್ಗೆ ಒಂದು ಲೇಖನ ಬರೆಯಲು ಪ್ರಯತ್ನಿಸಿದ್ದೆ. ಆದರೆ, ಸಮಯಾಭಾವದಿಂದ ಆಗದೇ, ಇಷ್ಟಕ್ಕೆ ನೆನಪಿಸಿಕೊಳ್ಳುವಂತಾಯಿತು.

shivu ಹೇಳಿದರು...

ಸರ್,

ನನ್ನ ಕಡೆಯಿಂದಲೂ ನೇತಾಜಿಯವರಿಗೆ ನಮನಗಳು.

AntharangadaMaathugalu ಹೇಳಿದರು...

ತಡವಾದರು ಪರವಾಗಿಲ್ಲವೆಂದು ಪ್ರತಿಕ್ರಿಯೆ ಹಾಕುತ್ತಿದ್ದೇನೆ... ೨೩ರಂದು ನೇತಾಜಿಯವರನ್ನು ನಾವೂ ನೆನೆದೆವು. ಅವರು ನನ್ನ ನೆಚ್ಚಿನ ನಾಯಕರು. ಧನ್ಯವಾದಗಳು ಚಂದ್ರು..

ಶ್ಯಾಮಲ

ಕ್ಷಣ... ಚಿಂತನೆ... bhchandru ಹೇಳಿದರು...

ನೇತಾಜಿಯವರನ್ನು ನೆನಪಿಸಿಕೊಂಡ ಎಲ್ಲರಿಗೂ ಧನ್ಯವಾದಗಳು.

ಸ್ನೇಹದಿಂದ,