ಶುಕ್ರವಾರ, ಮಾರ್ಚ್ 26, 2010

ಚೆರ್ರಿ ಹೂಗಳು ಅರಳುವ ಸಮಯಾ...

ಏಪ್ರಿಲ್ ತಿಂಗಳ ಆರಂಭದಲ್ಲಿ ಚೆರ್ರಿ ಹೂಗಳ ವೀಕ್ಷಣೆಯ ಸಂಭ್ರಮ ಜಪಾನಿನಲ್ಲಿ ಶುರುವಾಗುತ್ತದೆ. ಈ ಚೆರ್ರಿ ಹೂ ವೀಕ್ಷಣೆಯೇ ಒಂದು ವಿಶೇಷವಾದ ಸಂಗತಿ. ಜಪಾನಿನಲ್ಲಿ ಬೆಳೆವ ಚೆರ್ರಿ ಮರದ ಹಣ್ಣುಗಳನ್ನು ತಿನ್ನಲು ಆಗುವುದಿಲ್ಲ. ಆದರೆ, ಹೂವು, ಮರ ಎಲ್ಲ ಜಪಾನಿನ ಜನರ ಜೀವನಶೈಲಿಯೊಂದಿಗೆ ಬೆರೆತು, ಬೆಳೆಯುತ್ತಾ ಬಂದಿದೆ.

ಚೆರ್ರಿ ಮರಗಳು ಹೂ ಬಿಡುವ ಕಾಲ ಅಲ್ಲಿನ ಹವಾಮಾನ, ವಾತಾವರಣಕ್ಕೆ ತಕ್ಕಂತೆ ಏಪ್ರಿಲ್‍ ತಿಂಗಳಿನಿಂದ ಶುರುವಾಗಿ ಅಕ್ಟೋಬರ್‍ ತಿಂಗಳವರೆಗೂ ಸಾಗುತ್ತದೆ. ಹಾಗಿದ್ದರೆ, ಈ ಹೂಗಳ ಅಂದವನ್ನು ನಾವೂ ಸವಿಯುವ ಬನ್ನಿ.

ಜಪಾನೀ ಭಾಷೆಯಲ್ಲಿ ಚೆರ್ರಿ ಹೂವನ್ನು `ಸಕೂರ / ಸಕೂರ' (Sakura) ಎಂದು ಕರೆಯುತ್ತಾರೆ. internet chitra, thanks to googlesearchಈ ಪದವು `ಸಕೂಯ' ಪದದ ಅಪಭ್ರಂಶದಿಂದ `ಜ಼ಕೂರ' ಎಂಬ ಪದ ಬಳಕೆಗೆ ಬಂದಿದೆ. `ಸಕೂಯ' ಎಂದರೆ ಹೂ ಅರಳುವುದು ಎಂದು ಅರ್ಥ. ಈ ಹೆಸರು ಕೋನೋ-ಹನ-ಸಕೂಯ-ಹಿಮೆ (Kono-hana-skuya-Hime)ಎಂಬ ರಾಜಕುಮಾರಿಯ ಹೆಸರಿನೊಂದಿಗೆ ಬಂದಿದೆ. ಈಕೆಯ ಪ್ರತಿಮೆ ಮೌಂಟ್‍ ಫ಼್ಯೂಜ಼ಿಯಲ್ಲಿ ಸ್ಥಾಪಿತವಾಗಿದೆ. ಈ ಉದ್ದನೆಯ ಹೆಸರಿನ ಅರ್ಥವನ್ನು ಹೆಸರಿನಲ್ಲಿರುವ ಪದಗಳಿಗೆ ಸಮವಾಗಿ ಅನುವಾದಿಸಿದರೆ `ಮರ-ಹೂಗಳು-ಅರಳು-ರಾಜಕುಮಾರಿ' ಎಂದಾಗುತ್ತದೆ. ಈಕೆಗೆ ಮೇಲಿನ ಹೆಸರು ಬರಲೂ ಒಂದು ದಂತಕಥೆಯಿದೆ. ಅದೇನೆಂದರೆ, ಈಕೆಯನ್ನು ದೇವತೆಗಳು ಸ್ವರ್ಗದಿಂದ ಚೆರ್ರಿ ಮರದ ಮೇಲೆ ಬೀಳಿಸಿದರಂತೆ ಮತ್ತು ಅದರಿಂದಾಗಿ ಚೆರ್ರಿಮರದ ಅರಳಿದ ಹೂವು ಜಪಾನಿನ ರಾಷ್ಟ್ರೀಯ ಹೂವಾಗಿದೆ. ಟೋಕಿಯೋ ನಗರಾಡಳಿತವು ಜೂನ್‍ ೨೨, ೧೯೮೪ ರಲ್ಲಿ ರಾಷ್ತ್ರೀಯ ಹೂವೆಂದು ಘೋಷಿಸಿತು.

ಚೆರ್ರಿ ಜಪಾನೀಯರ ಜೀವನದೊಂದಿಗೆ ಬೆರೆತಿರುವುದಲ್ಲದೆ, ರಾಷ್ಟ್ರೀಯತೆಯ ಪ್ರತೀಕವಾಗಿದೆ. ಹೇಗೆಂದರೆ, ಒಬ್ಬ ಸಮುರಾಯ್‍ನ ಜೀವನಶೈಲಿಗೆ ಈ ಹೂವನ್ನು ಹೋಲಿಸುತ್ತಾರೆ. ಏಕೆಂದರೆ, ಪ್ರಾಚೀನ ಕಾಲದಲ್ಲಿ ಸಮುರಾಯ್‍ಗಳು ತಮ್ಮ ರಾಜ, ಯಜಮಾನರಿಗಾಗಿ ತ್ಯಾಗ-ಬಲಿದಾನಗಳಿಗೆ ಯಾವುದೇ ಸಂದರ್ಭದಲ್ಲೂ ತಮ್ಮ (ಮುಖ್ಯವಾಗಿ ಯುದ್ಧಗಳಲ್ಲಿ) ಸಜ್ಜಾಗಿರುತ್ತಿದ್ದರು ಮತ್ತು ಅವರ ಜೀವಿತಾವಧಿಯೂ ಕಡಿಮೆಯಿರುತ್ತಿತ್ತು. ಹೀಗಾಗಿ ಚೆರ್ರಿ ಹೂಗಳನ್ನು ಸಮುರಾಯ್‍ಗಳಿಗೆ ಹೋಲಿಸುತ್ತಾರೆ. ಏಕೆಂದರೆ, ಈ ಹೂಗಳು ಮೂರುದಿನಗಳಿಗಿಂತ ಹೆಚ್ಚಿಗೆ ದಿನಗಳು ಉಳಿಯಲಾರವು. ಆದರೆ ಹೂವುಗಳ ಆಕರ್ಷಣಾ ಶಕ್ತಿ ಅಧಿಕ. ಜಪಾನೀಯರಲ್ಲಿ ನುಡಿಗಟ್ಟೊಂದು `ಸಮುರಾಯ್‍ಗಳು ಹೇಗೋ ಹಾಗೆ ಚೆರ್ರಿ ಹೂಗಳು' ಎಂದು ಹೇಳುತ್ತದೆ. ಇದರಿಂದಲೂ ಸಹ ಈ ಹೂವು ರಾಷ್ಟ್ರೀಯತೆಯನ್ನು ಬಿಂಬಿಸುತ್ತದೆ ಎಂದು ತಿಳಿಯಬಹುದು.

ಜಪಾನೀಯರಿಗೆ ಹೂವಿನ ಬಗ್ಗೆ ಕೇಳಿದಾಗ ಹೆಮ್ಮೆಯಿಂದ ಚೆರ್ರಿ ಹೂಗಳ ಬಗ್ಗೆ ಹೇಳುತ್ತಾರೆ. ಏಕೆಂದರೆ, ಜಪಾನಿನಲ್ಲಿ ಬೆಳೆಯುವ ಚೆರ್ರಿ ಹೂಗಳು ವಿಶ್ವದ ಬೇರೆಲ್ಲೂ ಬೆಳೆಯುವುದಿಲ್ಲ ಎಂಬುದು ಮುಖ್ಯ. ಬೇರೆ ದೇಶಗಳಲ್ಲಿ ಹಣ್ಣುಬಿಡುವ ಚೆರ್ರಿ ಮರಗಳು ಹೆಚ್ಚಿದ್ದರೂ ಜಪಾನಿನಲ್ಲಿ ಮಾತ್ರ ಹೂಬಿಡುವ ಚೆರ್ರಿ ಮರಗಳು ಹೆಚ್ಚು. ಅದಕ್ಕೇ ಚೆರ್ರಿ ಹೂ ಅಥವಾ ಸಕೂರವನ್ನು Japanese Flowering Cherry in English ಎಂದು ಕರೆಯುತ್ತಾರೆ.

ಈ ಹೂವಿನ ಪ್ರವರ/ವಿವಿರ ಹೀಗಿದೆ:

Kingdom = Plantae
Division = Magnoliophyta
Class = Magnoliopsida
Order = Rosales
Family = Rosaceae
Subfamily = Prunoideae
Genus = Prunus

ಬಹಳ ಹಿಂದಿನ ಕಾಲದಿಂದಲೂ ಜಪಾನೀಯರು ಚೆರ್ರಿ ಹೂಗಳನ್ನು ಪ್ರೀತಿ, ಪ್ರೇಮದ ಸಂಕೇತವಾಗಿ ಕಾಣುತ್ತಾ, ಬಳಸುತ್ತಾ ಬಂದಿದ್ದಾರೆ. ಕಾವ್ಯ, ಚಿತ್ರಕಲೆ ಮುಂತಾದವುಗಳಲ್ಲಿ ಕವಿಗಳಿಗೆ, ಕಲಾಕಾರರಿಗೆ ಚೆರ್ರಿ ಹೂಗಳೇ ಸ್ಫೂರ್ತಿಯಾಗಿ ವರ್ಣಿಸಲ್ಪಟ್ಟಿವೆ. ಜಪಾನೀಯರಿಗೆ ಹೂ ಎಂದಾಗ, ಅವರಿಗೆ ಜ಼ಕೂರ/ಚೆರ್ರಿ ಹೂವೇ ಪ್ರತಿಬಿಂಬಿತವಾಗುತ್ತದೆ. ಏಕೆಂದರೆ, ಜಪಾನ್ ಭಾಷೆಯಲ್ಲಿ ಹೂವಿಗೆ `ಹಾನಾ' ಎಂದು ಕರೆಯುತ್ತಾರೆ. ಹೀಗಾಗಿಯೇ `ಹಾನಾಮಿ' (Hanami) ಹೂ ವೀಕ್ಷಣೆ Photo Courtesy by Sri Srivathsa Joshi from WDC - taken in WDC, USAಎಂದಾಗ ಜ಼ಕೂರ/ಚೆರ್ರಿ ಹೂಗಳು ಅವರ ಮನಸ್ಸಿಗೆ ಬರುತ್ತದೆಯೇ ವಿನಹ ಬೇರೆ ಹೂಗಳ ವಿಷಯ ಬರುವುದಿಲ್ಲ.

ಚೆರ್ರಿ ಮರಗಳನ್ನು ವಿಸ್ತಾರವಾಗಿ ಬೆಳೆಯಲಾಗುತ್ತದೆ. ಇವು ಸಮತಟ್ಟು ಪ್ರದೇಶಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಅಗಲವಾಗಿ ಆಳವಾಗಿ ಬೇರೂರುತ್ತ ಬೆಳೆಯಬಲ್ಲ ಮರಗಳು. ಸುಮಾರು ನಲವತ್ತರಿಂದ ಐವತ್ತು ವರ್ಷವಾಗುವ ವೇಳೆಗೆ ಚೆರ್ರಿ ಮರಗಳು ಮೂವತ್ತರಿಂದ ನಲವತ್ತು ಅಡಿಗಳಷ್ಟು ಬೆಳೆಯುತ್ತವೆ. ಅಲ್ಲದೆ ಇದರ ಕೊಂಬೆಗಳು ಮೂರ್‍ನಾಲ್ಕು ಕವಲುಗಳಿಂದ ಕೂಡಿ ಸುಮಾರು ಆರು-ಎಂಟು ಅಡಿಗಳ ವ್ಯಾಸವುಳ್ಳದ್ದಾಗಿ ಬೆಳೆಯುತ್ತವೆ.

ಚೆರ್ರಿ ಮರಗಳನ್ನು ಹೆಚ್ಚಾಗಿ ನದೀ ತೀರಗಳಲ್ಲಿ ಬೆಳೆಯುವುದು ಕಂಡುಬರುತ್ತದೆ. ಇವುಗಳು ಆಳಕ್ಕೆ ಬೇರೂರಿ ಬೆಳೆಯುವುದರಿಂದ ಮಣ್ಣಿನ ಸವಕಲು, ಕುಸಿತ ತಡೆಗಟ್ಟುವಲ್ಲಿ ಸಹಕಾರಿ ಎಂದು ಹೇಳುತ್ತಾರೆ.

ಚೆರ್ರಿ ಮರಗಳು ವಿವಿಧ ಬಗೆಯ, ವಿವಿಧ ಕಾಲಗಳಲ್ಲಿ ಜಪಾನಿನಲ್ಲಿ ಬೆಳೆಯುತ್ತವೆ. ಇವುಗಳು ಚೆರ್ರಿಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಕೆಲವು, ಯಾಮಾ-ಜ಼ಕೂರ ಅಥವಾ (Mountain Cherry), ಇಟೋ-ಜ಼ಕೂರ ಅಥವಾ (Weeping Cherry), ಹಿಗಾನ್‍-ಜ಼ಕೂರ (Equinox Cherry), ಟಕಾನೆ-ಜ಼ಕೂರ (Peak Cherry), ಕಾನ್-ಜ಼ಕೂರ/ಗನ್‍ಜಿತ್ಸು-ಜ಼ಕೂರ ಅಥವಾ ಹೊಸವರ್ಷದ ಚೆರ್ರಿ (New Year Cherry), ಶಿರೋ-ಜ಼ಕೂರ/ಮಿಯಾಮ-ಜ಼ಕೂರ (Deep Mountain Cherry), ಮೆಜಿರೊ-ಜ಼ಕೂರ/ಕೋಮೆ-ಜ಼ಕೂರ ಅಥವಾ ರೈಸ್ ಚೆರ್ರಿ (Rice Cherry), ಇತ್ಯಾದಿಗಳಿವೆ.

ಅಚ್ಚರಿಯೆಂದರೆ ಚೆರ್ರಿ ಹಣ್ಣುಗಳು ತಿನ್ನಲು ಅನುಪಯುಕ್ತವಾಗಿದ್ದರೂ ಸಹ ಮರವು ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಈ ಮರಗಳು ತುಂಬಾ ಬೆಲೆ ಬಾಳುವಂತಹವು. ಇದರ ಕಾಂಡಗಳು ಗಟ್ಟಿಯಾಗಿದ್ದು, ಅವುಗಳಿಂದ ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಅಲ್ಲದೆ, ಬಹಳ ಹಿಂದೆ ಮುದ್ರಣ ಕ್ಷೇತ್ರದಲ್ಲಿ ಚಿತ್ರಗಳ ಅಚ್ಚುಗಳನ್ನು ಮಾಡಿ ಉಪಯೋಗಿಸುತ್ತಿದ್ದರಂತೆ. ಅಲ್ಲದೆ ಬಟ್ಟೆಗಳ ಮೇಲೆ ಬಣ್ಣ ಬಣ್ಣದ ಹೋಗಳ ಚಿತ್ತಾರಕಾಗಿ ಇವುಗಳಿಂದ ಅಚ್ಚುಗಳನ್ನು ಮಾಡಿ ಉಪಯೋಗಿಸುತ್ತಿದ್ದರಂPhoto Courtesy by Sri Srivathsa Joshi from WDC - taken in WDC, USAತೆ.

ಚೆರ್ರಿ ಹಣ್ಣುಗಳು ತಿನ್ನಲು ಬಾರದಿದ್ದರೇನು, ಹೂಗಳಿಂದ ವಿಶೇಷ ಪಾನೀಯ ತಯಾರಿಸುತ್ತಾರೆ. ಚೆರ್ರಿ ಹೂಗಳನ್ನು ಲವಣಯುಕ್ತ ಬಿಸಿನೀರಿನಲ್ಲಿ ನೆನೆ ಹಾಕಿ ಸಂರಕ್ಷಿಸುತ್ತಾರೆ. ಇದರಿಂದ ಸುವಾಸನಾಭರಿತ ಪಾನೀಯ ತಯಾರಾಗುತ್ತದೆ. ರುಚಿಕರವಾದ ಪಾನೀಯವಿದು. ಮದುವೆ ಸಮಾರಂಭಗಳಲ್ಲಿ ಚಹಾ ನೀಡದೆ, ಈ ವಿಶೇಷ ಪಾನೀಯ (ಚೆರ್ರಿ ಹೂವಿನ) ವಿತರಣೆಯಾಗುತ್ತದೆ. ಇದು ಶುಭದಾಯಕವೆಂದು ಹೇಳುತ್ತಾರೆ. ಚಹಾ ವಿತರಣೆಯನ್ನು ಮದುವೆ ಮುಂತಾದ ವಿಶೇಷ ದಿನಗಳಲ್ಲಿ ನೀಡಿದರೆ, ಅದರಿಂದ ಕೆಡುಕುಂಟಾಗುತ್ತದೆ, ಮದುವೆ ಮುರಿಯುತ್ತದೆ ಎಂಬ ನಂಬಿಕೆ ಜಪಾನೀಯರಲ್ಲಿದೆ.

ಚೆರ್ರಿ ಹೂ ವೀಕ್ಶಣೆಗಾಗಿ ಜನರು ಕಚೇರಿಗಳಿಗೆ, ಅ೦ಗಡಿಗಳಿಗೆ, ಒಟ್ಟಿನಲ್ಲಿ ತಮ್ಮ ದೈನಂದಿನ ಕೆಲಸದಿಂದ ಬಿಡುವು ಪಡೆದು ತಮಗೆ ಅನುಕೂಲವಾದ ಸ್ಥಳಗಳಿಗೆ ಪ್ರವಾಸ ಹೊರಡುತ್ತಾರೆ. ಚೆರ್ರಿ ವೀಕ್ಷಣೆಯ ತಾಣಗಳಲ್ಲಿ ಸದ್ದು ಗದ್ದಲದ, ಜನಜಂಗುಳಿ, ಜನರ ಕೇಕೆ, ಕುಣಿತ ಎಲ್ಲ ಇಲ್ಲಿ ಮೇಳೈಸುವಂತಹ ಕಾಲವಾಗಿರುತ್ತದೆ. ಕೆಲವರು ಇವುಗಳಿಂದ ದೂರವಿರುವ ಪ್ರಶಾಂತ ಪರಿಸರಕ್ಕಾಗಿ ದೂರದ ಊರುಗಳಿಗೂ ಪ್ರವಾಸ ಹೊರಡುತ್ತಾರೆ.

ಒಟ್ಟಿನಲ್ಲಿ ನಾವೆಲ್ಲ ಪಕ್ಷಿ ವೀಕ್ಷಣೆ, ಪ್ರಾಣಿ ವೀಕ್ಷಣೆ ಬಗ್ಗೆ ಕೇಳಿ, ನೋಡಿದ್ದೆವಾದರೂ ಹೂಗಳ ಪ್ರದರ್ಶನದ ಬಗ್ಗೆಯೂ ತಿಳಿದಿದ್ದೆವು. ಚೆರ್ರಿ ಹೂವಿನ ವೀಕ್ಷಣೆಗಾಗಿ ಜಪಾನಿಗೆ ವಿಶ್ವದ ನಾನಾ ಭಾಗಗಳಿಂದ ಪ್ರವಾಸ ಬರುತ್ತಾರೆ ಎಂದರೆ ಅಚ್ಚರಿಯೆ ಹೌದು. ಅಲ್ಲದೆ, ಚೆರ್ರಿ ಹೂಗಳ ವೀಕ್ಷಣೆ ಮತ್ತು ಚೆರ್ರಿ ಹೂಗಳು ಜಪಾನೀಯರ ಜೀವನಶೈಲಿಯಲ್ಲಿ ಒಂದಾಗಿ ಶತಮಾನಗಳಿಂದ ಬೆಸೆದುಕೊಂಡು, ಒಂದು ಸಂಸ್ಕೃತಿಯ, ರಾಶ್ಟ್ರೀಯತೆಯ ಪ್ರತೀಕವಾಗಿ ಇಂದಿಗೂ ಉಳಿದುಬಂದಿದೆ ಎಂದರೆ ಮತ್ತೂ ಅಚ್ಚರಿಯಾಗುತ್ತದೆ, ಅಲ್ಲವೆ?


ಲೇಖನ ಸಂಗ್ರಹ: ಚಂದ್ರಶೇಖರ ಬಿ.ಎಚ್.
Photo Courtesy: Google Search and Sri Srivathsa Joshi , WDC.

15 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಹೊಸ ಮಾಹಿತಿಯೊ೦ದನ್ನು ಸ೦ಗ್ರಹಿಸಿ ನೀಡಿದ್ದಿರಾ... ಧನ್ಯವಾದಗಳು.

PARAANJAPE K.N. ಹೇಳಿದರು...

ಉತ್ತಮ ಮಾಹಿತಿ, ಚೆನ್ನಾಗಿದೆ

PARAANJAPE K.N. ಹೇಳಿದರು...

ಉತ್ತಮ ಮಾಹಿತಿ, ಚೆನ್ನಾಗಿದೆ

Shweta ಹೇಳಿದರು...

tumba olleya sangraha sir..dhanyavaadagalu

ಕ್ಷಣ... ಚಿಂತನೆ... ಹೇಳಿದರು...

ಶ್ರೀ ಸೀತಾರಾಮ, ಶ್ರೀ ಪರಾಂಜಪೆ ಹಾಗೂ ಶ್ವೇತಾ ಅವರೆ, ನಿಮ್ಮೆಲ್ಲರ ಅನಿಸಿಕೆಗಳಿಗೆ ಧನ್ಯವಾದಗಳು.

ಈ ಲೇಖನವನ್ನು ಬಹಳ ವರ್ಷಗಳ ಹಿಂದೆ ಬರೆದಿದ್ದೆ. ಈಗ ಸ್ವಲ್ಪ ಬದಲಾವಣೆಮಾಡಿ ಬರೆದೆ.

ಸ್ನೇಹದಿಂದ,

ಮನದಾಳದಿಂದ............ ಹೇಳಿದರು...

nice collection sir, thanks for given infarmation.

Ittigecement ಹೇಳಿದರು...

ಚಂದ್ರು...

ಚೆರ್ರಿ ಹಣ್ಣಿನ ರುಚಿ ಗೊತ್ತಿತ್ತು...
ಇಷ್ಟೆಲ್ಲ ಮಾಹಿತಿ ಇರಲಿಲ್ಲ...
ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ...

ಇಂದು ನಿಮ್ಮ ಎಲ್ಲ ಲೇಖನಗಳನ್ನು ಓದಿ ಮುಗಿಸಿದೆ...

ಎಲ್ಲವೂ ಚೆನ್ನಾಗಿವೆ...

ಅಭಿನಂದನೆಗಳು...

ಕ್ಷಣ... ಚಿಂತನೆ... ಹೇಳಿದರು...

ಮನದಾಳದಿಂದ,
ಲೇಖನ ಮೆಚ್ಚಿಗೆಯಾಗಿದ್ದಕ್ಕೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶಣ್ನ,
ನನ್ನೆಲ್ಲ ಬರಹ ಓದಿದ್ದಕ್ಕೆ ಧನ್ಯವಾದಗಳು.

ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಪ್ರತಿಕ್ರಿಯೆ ನೀಡಿದ್ದೀರಿ. ಸಂತಸವಾಯಿತು.

ಕ್ಷಣ... ಚಿಂತನೆ... ಹೇಳಿದರು...

ಈ ಬರಹಕ್ಕೆ ಪ್ರತಿಕ್ರಿಯೆ ತೋರಿದ ಎಲ್ಲರಿಗೂ ಧನ್ಯವಾದಗಳು.

ಸ್ನೇಹದಿಂದ,

ಸಾಗರದಾಚೆಯ ಇಂಚರ ಹೇಳಿದರು...

ಸರ್
ಚೆರ್ರಿ ಹೂವು ಬೆಳೆಯುವ ಸಮಯದಲ್ಲೇ ನಾನು ಅಲ್ಲಿಗೆ ಭೇಟಿ ಇಟ್ಟಿದ್ದೆ
ನಿಜಕ್ಕೂ ಇದೊಂದು ಅದ್ಭುತ ರಮಣೀಯ ದ್ರಶ್ಯ

ಕ್ಷಣ... ಚಿಂತನೆ... ಹೇಳಿದರು...

ಗುರು ಅವರೆ, ನೀವು ಅಂತಹ ಒಂದು ಸಮಯದಲ್ಲಿ ಭೇಟಿಕೊಟ್ಟಿದ್ದನ್ನು ನಮ್ಮೊಡನೆ ಹಂಚಿಕೊಂಡಿರುವಿರಿ. ನಿಮ್ಮ ಅನುಭವಗಳನ್ನು ಬ್ಲಾಗಿನಲ್ಲಿ ತಿಳಿಸಿರಿ ಎಂದು ವಿನಂತಿ.
ಧನ್ಯವಾದಗಳು.
ಸ್ನೇಹದಿಂದ,

PaLa ಹೇಳಿದರು...

ಒಳ್ಳೇ ಮಾಹಿತಿ.. ಒಳ್ಳೇ ಸಂಗ್ರಹ.. ಧನ್ಯವಾದ

Chaithrika ಹೇಳಿದರು...

ಬಹಳ ಒಳ್ಳೆಯ ಮಾಹಿತಿ. ಓದಲು ಖುಷಿಯಾತಿತು.

ಕ್ಷಣ... ಚಿಂತನೆ... ಹೇಳಿದರು...

Chaitrika ಲೇಖನ ಮೆಚ್ಚಿಗೆಯಾಗಿದ್ದಕ್ಕೆ ಧನ್ಯವಾದಗಳು.
ಹೀಗೆಯೆ ಬರುತ್ತಿರಿ.