ಮಂಗಳವಾರ, ಏಪ್ರಿಲ್ 13, 2010

ಓಹ್, ಎಂಥಾ ಬಿಸಿಲು.


ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಉಷ್ಣಾಂಶ. ಬಹಳ ವರ್ಷಗಳ ಮೇಲೆ ದಾಖಲೆ ಬರೆಯಿತು.

ಓಹ್, ಎಂಥಾ ಬಿಸಿಲು.
ಮಂಡೆಯಲ್ಲ ಬಿಸಿ...
ಎಷ್ಟು ನೀರು ಕುಡಿದರೂ ಸಾಲದು...
ಸೆಖೆ... ಕರೆಂಟ್ ಇಲ್ಲ...
ಫ್ಯಾನ್ ಇಲ್ಲ...
ಫ್ಯಾನ್ ಇದ್ದರೂ ಕರೆಂಟ್‌ ಇಲ್ಲ...

Photo: Chandrashekara B.H. Oct2008
ಕೆಲಸಕ್ಕೆ ಬಂದರೆ ಬುದ್ಧಿಗೇ ಗುದ್ದಿ
ಮಗುಮ್ಮಾಗಿ ನೀರುಣಿಸಿ, ನೀರಿಳಿಸಿ
ಬಸವಳಿಯುವಂತೆ ಮಾಡಿದೆ, ಈ ಬಿರುಬಿಸಿಲು.
ಬಿಸಿ ಗಾಳಿಯನು ತಾ ಬೀಸುತಿರಲು...

ವಾಹ್! ಮೋಡ ಕವಿಯುತ್ತಿದೆ...
ಸಂಜೆಗೆ ಮಳೆ ಬರುವ ಸೂಚನೆ...
ಗಾಳಿ ಬೀಸಿದೆ... ಗುಡುಗಿನ ಸದ್ದು ಕೇಳಿದೆ...
ಒಂದೆರಡು ಹನಿ.. ಹನಿ... ಸಿಂಚನ...

ಓಹ್, ಕರೆಂಟು ಕೈಕೊಟ್ಟಿತು.
ಕಾರಣ.. ನೀರಿಲ್ಲ, ಮಳೆಯಿಲ್ಲ...
Photo: Chandrashekara B.H. Oct2008
ಮಳೆಗೆ ಬೇಕಿದ್ದಂತಹ ಮರಗಳೂ ಇಲ್ಲ,
ಮೋಡವೂ ಇಲ್ಲ... ಗೊಣಗಾಟ ತಪ್ಪಿಲ್ಲ...

ಇದ್ದಬದ್ದ ಮರಗಳನೆಲ್ಲ ಕದ್ದು, ಕಂಡು ಕತ್ತರಿಸಿ
ಮಾನವರಿಗೆ ಸ್ಮಾರಕ ನಿರ್ಮಿಸುವಲ್ಲಿ ಸಫಲ
ಆದರೆ, ಮರಗಳಿಗೆ, ವನ್ಯಸಂಪತ್ತಿಗೆ ಸ್ಮಾರಕ
ಅದಾಗಲೇ ಆಗಿದೆ ಕಾಂಕ್ರೀಟ್‌ ವನದಲ್ಲಿ...

ಇಷ್ಟೊತ್ತಿಗಾಗಲೇ ಮಳೆ ಬೀಳಬೇಕಿತ್ತು
ಬೆಂಗಳೂರಿನಲ್ಲಿ ೩೫ ಡಿಗ್ರಿ ಉಷ್ಣಾಂಶ ಎಂದರೆ
ಮಳೆ ಗ್ಯಾರಂಟಿ... ಬರುವಂತಿದ್ದ
ಮಳೆ ಮುನಿಸಿಕೊಂಡು ಎತ್ತಲೋ ಹೋಯಿತು...

ಮಳೆ ಬಂದರೆ ಭೂಮಿ ತಂಪು, ಮನಕೆ ರೋಮಾಂಚನ...
ಆದರೆ... ತುಂಬಿದ್ದ ಮೋಡ ಮರೆಯಾಯಿತು...
ತಾರಾಲೋಕ ನಸುನಕ್ಕಿತು...
ವರುಣನ ಕೃಪೆ ಇಲ್ಲವಾಯಿತು...

ನಿನ್ನೆಯ ದಿನ ಬರಬೇಕಿದ್ದ ಮಳೆ...
ಗಾಳಿಬಂದೆಡೆಗೆ ತೂರು ಎಂಬಂತೆ
ಎತ್ತಲೋ ಹೋಯಿತು.
ಮನಕ್ಕೆ, ವನಕ್ಕೆ ನೀರಿಲ್ಲವಾಯಿತು...

7 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಮಳೆರಾಯ ಕೂಡ ಈಗಿನ ರಾಜಕಾರಣಿಯ೦ತೆ, ಗಾಳಿ ಬ೦ದೆಡೆಗೆ ತೋರಿಕೊಳ್ಳುವ ತರಹದ ಆಸಾಮಿ. ನಿಮ್ಮ ಕವನದ ಕಾರಣ ದಿ೦ದಲಾದರೂ ಮಳೆ ಬರಲಿ ನಮ್ಮೆಲ್ಲ ಉರಿ ತಾಪ ಪ್ರತಾಪ ಗಳು ನೀಗಲಿ.

AntharangadaMaathugalu ಹೇಳಿದರು...

ಎಲ್ಲರ ಮನದ ಮಾತುಗಳನ್ನೂ... ಗೊಣಗಾಟಗಳನ್ನೂ... ಸುಂದರವಾಗಿ ಅಕ್ಷರಗಳಿಗಿಳಿಸಿದ್ದೀರಿ.. ನಿನ್ನೆ ರಾತ್ರಿ ಎಲ್ಲರೂ ಆಸೆಯಿಂದ ಮೊಗವೆತ್ತಿ... ಆಗಸ ವೀಕ್ಷಿಸಿದ್ದೇ ಬಂತು.. ಆದರೆ ವರುಣನ ಕೃಪೆ ಏನೇನೂ ಸಾಲದು... ಮಿಂಚು, ಗುಡುಗುಗಳಿಗೆ ಹೆದರಿ, ಇವರು ವಿದ್ಯುತ್ ತೆಗೆದು, ಮತ್ತೆ ಅದೇ ಗೋಳಿನ ಕಥೆಯಾಯ್ತು...
ನಿಮ್ಮ ಬರಹ ಓದಿ ಮನಸ್ಸಿನ ಮಾತುಗಳೆಲ್ಲಾ ಆಚೆ ಬಂದು ಮನ ಹಗುರ ಆಯ್ತು... ಚೆನ್ನಾಗಿದೆ..

ಸಾಗರದಾಚೆಯ ಇಂಚರ ಹೇಳಿದರು...

ಬೆಂಗಳೂರಿನ ಮಳೆ ಕೂಡಾ ರಾಜಕೀಯ ಆಟಕ್ಕೆ ಸಿಕ್ಕಿ ತತ್ತರಿಸಿದೆ ಅನಿಸುತ್ತಿದೆ ಆಲ್ವಾ :)
ತುಂಬಾ ಚೆನ್ನಾಗಿ ಬರೆದಿದ್ದೀರಿ
ಮನುಷ್ಯನ ಹಣದ ದಾಹಕ್ಕೆ ಬೆಂಗಳೂರು ಬಲಿಯಾಗುತ್ತಿದೆ
ಪ್ರಕ್ರತಿಗೆ ವಿರುದ್ಧವಾಗಿ ಹೋದರೆ ನಾಶ ಖಂಡಿತಾ

shivu.k ಹೇಳಿದರು...

ಸರ್,

ನಿಮ್ಮ ಆಶಯವೇ ನಮ್ಮ ಆಸೆಯೂ ಕೂಡ..ಒಂದು ಜೋರು ಮಳೆ ಬಂದರೆ ಮನೆ ಮತ್ತು ಮನ ನಿಜಕ್ಕೂ ತಂಪು. ವಿದ್ಯುತ್ ವಿಚಾರದಲ್ಲಿ ಸರ್ಕಾರದ ಧೋರಣೆ ಕಂಡು ಸಿಟ್ಟು ಬರುತ್ತಿದೆ....ನಮ್ಮ ತೆರಿಗೆ ಹಣವನ್ನೆಲ್ಲಾ ಮಜಾ ಉಡಾಯಿಸುತ್ತಾರೆ...ಅದ್ರೆ ನೀರು ವಿದ್ಯುತ್ತಿಗಾಗಿ ಖರ್ಚು ಮಾಡಲು ಅವರ ಬಳಿ ಹಣವಿಲ್ಲ...

ಅನಾಮಧೇಯ ಹೇಳಿದರು...

ninneya, ivattina male nammannella swalpa tampu maadide allawa??

ಕ್ಷಣ... ಚಿಂತನೆ... ಹೇಳಿದರು...

ಮಳೆಗಾಗಿ ಜನರು ತಹತಹಿಸುತ್ತಿದ್ದರು. ಹಾಗೆಯೇ ಮಳೆಯ ಸಿಂಚನವಾಗಿದೆ.
ನಿಮ್ಮೆಲ್ಲರ ಅನಿಸಿಕೆಗಳಿಗೆ ವಂದನೆಗಳು. ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

ಸೀತಾರಾಮ. ಕೆ. / SITARAM.K ಹೇಳಿದರು...

ಬಿಸಿಲಿನ ಬೇಗೆಗೆ ತತ್ತರಿಸಿ ಮಳೆಗೆ ಕಾಯುತ್ತಿರುವೆವು. ಮಳೆರಾಯ ಮುನಿಸಿದ್ದಾನೆ ಅನ್ನುವ ಹಾಗಿಲ್ಲ ಅವನು ಬರುವದು ಇನ್ನು ದೂರ. ಬೇಸಿಗೆಯ ಬವಣೆಯನ್ನ ಚೆನ್ನಾಗಿ ವಿವರಿಸಿದ್ದಿರಾ..