ಶುಕ್ರವಾರ, ಏಪ್ರಿಲ್ 23, 2010

ಮುತ್ತಿನ ಹನಿಗಳು - ಮಲ್ಲಿಗೆಯ ಚಲ್ಲಿದವು

ಮೊನ್ನೆ ಸಂಜೆ (೨೧.೦೪.೨೦೧೦ ರಂದು) ಕಚೇರಿಯ ಕೆಲಸದಲ್ಲಿ ನಿರತನಾಗಿದ್ದೆ. ನನ್ನ ಕೊಠಡಿಯ ಪಕ್ಕದಲ್ಲಿಯೇ ಕಿಟಕಿಗೆ ಹತ್ತಿರವೇ ನಾನು ಕುಳಿತುಕೊಳ್ಳುವುದು. ಹೊರಗೆ ಹಸಿರನ್ನು, ಆಗಾಗ ಗಾಳಿಯನ್ನು ಸವಿಯುವ ಭಾಗ್ಯ ನನ್ನದಾಗಿದೆ. ಹೀಗಿರುವಾಗ, ಸಂಜೆ ನಾಲ್ಕರ ಸಮಯದಲ್ಲಿ ಗಾಳಿ ಬೀಸುತ್ತಲಿದೆ. ಅದೂ ವಿಪರೀತ ಜೋರಾಗಿ, ಅದರಿಂದಾಗಿ ಮರಗಳು, ಕೊಂಬೆರೆಂಬೆಗಳು ತೂಗಾಡುತ್ತಾ... ಭೂಮಿಗೆ ನಮಿಸುವಂತೆ ಆಡುತ್ತಿವೆ. ಅದೇ ಸಮಯದಲ್ಲಿ ಮೋಡ ಕವಿದ ವಾತಾವರಣ. ಜೊತೆಗೆ ಮಿಂಚಿನ ಚಿತ್ತಾರ, ಗುಡುಗು-ಸಿಡಿಲಿನ ಆರ್ಭಟ. ಒಂದೊಂದೇ ಹನಿಗಳು ನೆಲವನ್ನು ಮುಟ್ಟುತ್ತಾ... ರಭಸವಾಗಿ, ಫಟ್‌, ಫಟ್‌, ಎಂದು ಬೀಳುತ್ತಲಿವೆ.

ಸ್ವಲ್ಪ ಹೊತ್ತು ಮಳೆಯೊಂದಿಗೆ ಗಾಳಿ, ಕಣ್ಕೋರೈಸುವ ಮಿಂಚು, ಸಿಡಿಲು.. ಅಬ್ಬಬ್ಬಾ... ಭಯಾನಕವಾಗಿತ್ತು. ಏಕೆಂದರೆ, ಕಿಟಕಿಯ ಹತ್ತಿರವೇ ಕುಳಿತಿದ್ದೆ. ತಕ್ಷಣಕ್ಕೆ ವಿದ್ಯುತ್ ಕೈಕೊಟ್ಟಿತು. ಗಣಕಯಂತ್ರ ಸ್ಥಬ್ಧವಾಯಿತು. ಕಿಟಕಿಯ ಗಾಜುಗಳಿಗೆ ಟಪ್, ಟಪ್ ಎಂದು ಬೀಳುತ್ತಿದ್ದ ಹನಿಗಳೊಂದಿಗೆ `ಆಲಿಕಲ್ಲಿನ' ಸಿಂಚನ.

ಕಚೇರಿಯಿಂದ ಹೊರಬಂದು ನಿಂತೆವು. ಅಗೋ! ಆಲಿಕಲ್ಲು, ಅಲ್ಲೊಂದು, ಇಲ್ಲೊಂದು ಎನ್ನತ್ತಾ... ಅವುಗಳನ್ನು ಹೆಕ್ಕುತ್ತಿದ್ದಂತೆಯೇ.. ವರ್ಷಧಾರೆಯೊಡಗೂಡಿ `ಬಿಳಿಯ ಮುತ್ತಿನ ಹರಳಿನಂತೆ, ಮಲ್ಲಿಗೆಯಂತೆ ಹುಲ್ಲುಹಾಸಿನ ಮೇಲೆಲ್ಲಾ ಆಲಿಕಲ್ಲಿನ ಸುರಿಮಳೆ'. ಅವುಗಳನ್ನು ನನ್ನ ಪುಟ್ಟ ಕ್ಯಾಮೆರಾದಿಂದ ಸೆರೆಹಿಡಿಯುವ ಸಾಹಸ ಮಾಡಿದ್ದೇನೆ. ಇದೋ ನಿಮಗಾಗಿ, ನಿಮ್ಮ ಖುಷಿಗಾಗಿ!

ಸ್ನೇಹದಿಂದ,Photo:Chandrashekara BH, 210410; ಚಂದ್ರಶೇಖರ ಬಿ.ಎಚ್.
Photo:Chandrashekara BH, 210410; ಚಂದ್ರಶೇಖರ ಬಿ.ಎಚ್.
Photo:Chandrashekara BH, 210410; ಚಂದ್ರಶೇಖರ ಬಿ.ಎಚ್.
Photo:Chandrashekara BH, 210410; ಚಂದ್ರಶೇಖರ ಬಿ.ಎಚ್.
ಛಾಯಾಚಿತ್ರ/ಬರಹ: ಚಂದ್ರಶೇಖರ ಬಿ.ಎಚ್.

16 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಮಳೆಯ ಚಿತ್ರಗಳು ಚೆನ್ನಾಗಿವೆ. ಆಲಿಕಲ್ಲನ್ನು ಮಳೆಯಲ್ಲಿ ನೆನೆದು ಹೆಕ್ಕುವ ನಿಮ್ಮ ಪರಿ ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು.

ಸೀತಾರಾಮ. ಕೆ. ಹೇಳಿದರು...

ಚಿತ್ರಗಳು ಚೆನ್ನಾಗಿ ಬ೦ದಿವೆ. ಆಲಿಕಲ್ಲನ್ನು ಹೆಕ್ಕಿ ತೊಳೆದು ಲೋಟೆಯಲ್ಲಿಟ್ಟು ನೀರಾದ ಮೇಲೆ ಗುಟುಕರಿಸುತ್ತಿದ್ದ ( ಆಗ ಫ಼್ರಿಡ್ಜ್ ಇರಲಿಲ್ಲವಲ್ಲ ಐಸ್ ತು೦ಡಿಗೆ ಸೋಡಾ ಅ೦ಗಡಿಗೆ ಹೋಗಬೇಕಿತ್ತು) ನಮ್ಮ ಬಾಲ್ಯದ ಚಿತ್ರ ಕಣ್ಣ ಮು೦ದೆ ನೆನಪಿಗೆ ಬ೦ತು. ವಿಷಯ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

shivu.k ಹೇಳಿದರು...

ಸರ್,

ನಮ್ಮ ಕಡೆಯೂ ಅಲಿಕಲ್ಲೂ ಸಕ್ಕತ್ತಾಗಿ ಬಿತ್ತು. ಮಳೆ ಕಡಿಮೆಯಾದಮೇಲೆ ಮಕ್ಕಳೊಂದಿಗೆ ಆಲಿಕಲ್ಲು ಅಯ್ದಿದ್ದು ತುಂಬಾ ಖುಷಿಕೊಟ್ಟಿತ್ತು. ನಿಮ್ಮ ಫೋಟೊಗಳು ಚೆನ್ನಾಗಿವೆ...
ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಡಾ.ಕೃಷ್ಣಮೂರ್ತಿ.ಡಿ.ಟಿ. ಹೇಳಿದರು...

ಬರಹ ಮತ್ತು ಫೋಟೋಗಳು ಚೆನ್ನಾಗಿವೆ.ಮತ್ತಷ್ಟು ಬರಹಗಳು ಬರಲಿ ಎಂದು ಹಾರೈಸುತ್ತೇನೆ .ನಮಸ್ಕಾರಗಳು.

ವನಿತಾ / Vanitha ಹೇಳಿದರು...

ಚೆಂದದ ಫೋಟೋ ಮತ್ತು ಬರಹ..ನಮ್ಮಲ್ಲೂ ಅಪರೂಪಕ್ಕೊಮ್ಮೆ ಆಲಿಕಲ್ಲು ಮಳೆ ಬೀಳುತ್ತದೆ..

AntharangadaMaathugalu ಹೇಳಿದರು...

ಹುಲ್ಲು ಹಾಸಿನ ಮೇಲೆ ಮುತ್ತಿನ ಮಣಿಗಳಂತೆ ಆಲಿಕಲ್ಲುಗಳು ತುಂಬಾ ಮುದ್ದಾಗಿವೆ... ಚಿತ್ರಗಳಿಗೆ ಹೊಂದುವಂತೆ ನಿಮ್ಮ ಬರಹ ಕೂಡ ಚೆನ್ನಾಗಿದೆ...........

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಚಂದ್ರು...

ನಿಮ್ಮ ಫೋಟೊಗಳನ್ನು ನೋಡಿ "ಇಂಟರ್ ನೆಟ್ಟಿನಿಂದ" ತಂದಿದ್ದು ಅಂದುಕೊಂಡೆ...

ಬಹಳ ಸೊಗಸಾಗಿ ಫೋಟೊ ತೆಗೆಯುತ್ತೀರಿ ನೀವು...

ನಿಮ್ಮ ವಿವರಣೆಯೂ ಚೆನ್ನಾಗಿದೆ....

ಅಭಿನಂದನೆಗಳು...

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸಿದ ಆಲಿಕಲ್ಲು ಮಳೆಗೆ ಧನ್ಯವಾದಗಳನ್ನು ತಿಳಿಸುವೆ. ನಿಮ್ಮ ಅನಿಸಿಕೆಗಳುಗೆ ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಸೀತಾರಾಮ ಸರ್‍, ನಿಮ್ಮ ಚಿಕ್ಕಂದಿನ ಚಿತ್ರವು ಚಕ್ಷುಗಳೆದುರಿಗೆ ಬಂದ್ದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ. ಹೀಗೆಯೆ ಬರುತ್ತಿರಿದ. ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಅವರೆ ಮಳೆ ನಿಂತ ಮೇಲೆಯೂ ಬಹಳ ಹೊತ್ತು ಈ ಆಲಿಕಲ್ಲುಗಳು ಕರಗಿರಲಿಲ್ಲ. ನಿಮ್ಮ ಖುಷಿ ಹಂಚಿಕೊಂಡಿದ್ದೀರಿ ಮತ್ತು ಚಿತ್ರ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಡಾ. ಕೃಷ್ಣಮೂರ್ತಿಯವರೆ, ಬರಹ ಮತ್ತು ಚಿತ್ರಗಳು ನಿಮಗಿಷ್ಟವಾಗಿದ್ದು ಪ್ರೋತ್ಸಾಹಿಸಿದ್ದೀರಿ. ಹೀಗೆಯೆ ಬರುತ್ತಿರಿ.
ನಿಮ್ಮ ಬ್ಲಾಗಿಗೆ ಭೇಟಿಕೊಡುವೆ.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ವನಿತಾ ಅವರೆ, ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಶ್ಯಾಮಲಾ ಅವರೆ, ಬರಹ-ಚಿತ್ರಗಳನ್ನು ಇಷ್ಟಪಟ್ಟಿದ್ದೀರಿ. ವಂದನೆಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಪ್ರಕಾಶಣ್ಣ,

ನಿಮಗೆ ಹಾಗನ್ನಿಸಿದ್ದು ಸಹಜ. ನನಗೆ ತಕ್ಷಣಕ್ಕೆ ಕ್ಯಾಮೆರ ಇದ್ದರೂ ಎಲ್ಲೆಲ್ಲೂ ನೀರು ಎರಚುತ್ತಿದ್ದರಿಂದ ಫೋಟೋಗಳು ಸರಿಯಾಗಿ ತೆಗೆಯಲಾರದೆ `ಮಂಕಾಗಿವ/ಬ್ಲರ್‍' ಆಗಿವೆ. ಬರಹ ಮತ್ತು ಫೋಟೋಗಳು ನಿಮಗಿಷ್ಟವಾಗಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಅಭಾರಿ.

ಸ್ನೇಹದಿಂದ,

Venkatakrishna.K.K. ಹೇಳಿದರು...

ಚೆಂದದ ಫೋಟೋ ಮತ್ತು ಬರಹ.
ಹುಲ್ಲು ಹಾಸಿನ ಮೇಲೆ ಮುತ್ತಿನ ಮಣಿಗಳಂತೆ ಆಲಿಕಲ್ಲುಗಳು.
ಅಭಿನಂದನೆಗಳು...

PaLa ಹೇಳಿದರು...

ಆಲಿಕಲ್ಲಿನ ಮಳೆ ನೋಡದೆ ಯಾವ ಕಾಲ ಆಯ್ತೋ... ನಿಮ್ಮ ಬರಹದಿಂದ, ಚಿತ್ರಗಳಿಂದ ನೆನಪು ಮೂಡಿಸಿದ್ದಕ್ಕೆ ವಂದನೆಗಳು