ಶುಕ್ರವಾರ, ಜೂನ್ 18, 2010

ಬದುಕೆಂಬ ಬದುಕು


ಬದುಕು ಮುಳ್ಳಿನ ಹಾದಿ
ನಡೆ ನೀನು ದಿಟ್ಟ ಹೆಜ್ಜೆಯಲಿ
ಸಾಗುವುದು ರಹದಾರಿ
ಭವ್ಯ ಜೀವನದ ಸಾರವನು ತೋರಿ

ಬೆದರದಿರು, ಬೆಚ್ಚದಿರು
ಭಾವಪ್ರಭಾವಗಳಿಗೆ ಒಳಗಾಗದೆ
ನಡೆಯುತಿರು, ನುಡಿಯುತಿರು
ನಿತ್ಯ ಸತ್ಯದಾ ಹಾದಿಯಲಿ

ದೂರದಿರು, ಮರುಗದಿರು
ವ್ಯರ್ಥ ಮಿಥ್ಯತೆಗೆ ಬಲಿಯಾಗಿ
ದುಡಿಯುತಿರು, ನೆನೆಯುತಿರು
ಸತ್ಯ ಸಾರ್ಥಕತೆಗೆ ಜೊತೆಯಾಗಿ

ಬರುವುದು ಬದುಕಿನಲಿ
ಹೂವನದ ಸೊಬಗು, ಮುಳ್ಳಿರದ
ಹೂವಿಲ್ಲ, ನೋವಿರದ ಬಾಳಿಲ್ಲ
ನಲಿವಿರದ ಬದುಕಿಲ್ಲ ತಿಳಿಯುತಲಿ
ಸಾಗುತಿರು ನಿನ್ನ ಗುರಿಯ ದಾರಿಯಲ್ಲಿ

- ಚಂದ್ರಶೇಖರ ಬಿ.ಎಚ್.

10 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಚೆನ್ನಾಗಿದೆ ಸರ್

PARAANJAPE K.N. ಹೇಳಿದರು...

ತು೦ಬ ಚೆನ್ನಾಗಿದೆ, ಕೊನೆಯ ನಾಲ್ಕು ಸಾಲುಗಳು ಅರ್ಥಗರ್ಭಿತವಾಗಿದೆ.

Dr.D.T.Krishna Murthy. ಹೇಳಿದರು...

ಕವನ ಚೆನ್ನಾಗಿದೆ.ಡಿ.ವಿ.ಜಿ.ಯವರ 'ಬಾಳ್ಕೆಯಲಿ ನೂರೆಂಟು ತೊಡಕು ತಿಣುಕುಗಳುಂಟು'ಎಂಬ ಸಾಲುಗಳು ನೆನಪಿಗೆ ಬಂತು.

ಮನದಾಳದಿಂದ............ ಹೇಳಿದರು...

ಚಂದದ ಕವನ.........
ಅರ್ಥಗರ್ಭಿತ ಸಾಲುಗಳು.

ಸೀತಾರಾಮ. ಕೆ. / SITARAM.K ಹೇಳಿದರು...

ತು೦ಬಾ ಸರಳ ಶಬ್ದದಲ್ಲಿ ಸೊಗಸಾಗಿ ಬದುಕ ಹಾದಿಯ ಪಯಣದ ಅನುಭವ ನೀಡಿದ್ದಿರಾ! ಅದರೆ "ನಡೆಯುತಿರು ನುಡಿಯುತಿರು ಸತ್ಯಾಸತ್ಯತೆಯ ಹಾದಿಯಲ್ಲಿ" ಇಲ್ಲಿ "ಸತ್ಯ-ಅಸತ್ಯ -ತೆ" ಬದಲು "ಸತ್ಯದಾ" ಅಥವಾ "ನಡೆಯುತಿರು ನುಡಿಯುತಿರು ಸಥ್ಯವನ್ನೆ ಕ್ರಮಿಸುವಲ್ಲಿ ಸತ್ಯಾಸತ್ಯತೆಯ ಹಾದಿಯಲ್ಲಿ"ಇದ್ದರೆ ಸರಿ ಇರುತ್ತದೆ ಎನಿಸಿತು. ಯಾಕೆ೦ದರೆ ಸತ್ಯದ ಹಾದಿಯಲ್ಲಿ ನಡೆ -ನುಡಿ ಎನ್ನುವದು ಸರಿಯಾದ ಮಾರ್ಗದರ್ಶನವಲ್ಲವೇ.

shivu.k ಹೇಳಿದರು...

ಬದುಕೆಂಬ ಬದುಕು..ಶೀರ್ಷಿಕೆ ಚೆನ್ನಾಗಿದೆ. ಅದಕ್ಕೆ ತಕ್ಕಂತ ಪದ್ಯಗಳು.

ಕ್ಷಣ... ಚಿಂತನೆ... ಹೇಳಿದರು...

ಎಂದೋ ಬರೆದಿದ್ದ ಸಾಲುಗಳಿಗೆ 'ಕೊನೆಯ ಸಾಲನ್ನು' ಸೇರಿಸಿ ಇಲ್ಲಿ ಅಂಚಿಸಿದ್ದೆ. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಹಾಗೂ ಕೆಲವು ಸಲಹೆಗಳನ್ನು ಸೂಚಿಸಿದವರಿಗೂ, ಡಿವಿಜಿಯವರ ಸಾಲನ್ನು ನೆನಪಿಸಿಕೊಂಡವರಿಗೂ,... ನನ್ನ ಧನ್ಯವಾದಗಳು.
ಹೀಗೆಯೆ ಬರುತ್ತಿರಿ. ಓತಪ್ರೋತವಾಗಿ ನಿಮ್ಮೆಲ್ಲರ ಪ್ರೋತ್ಸಾಹ ಸಿಗುತ್ತಿರಲಿ.

ಸ್ನೇಹದಿಂದ,

ಅನಂತ್ ರಾಜ್ ಹೇಳಿದರು...

ಬದುಕಿನ ಪಯಣದ ಚಾರಣರಿಗೆ ಕಿವಿ ಮಾತುಗಳು ಸೊಗಸಾಗಿ ಮೂಡಿ ಬ೦ದಿದೆ. ಅದರಲ್ಲಿ ನನಗೆ ಸ೦ಶಯ ಬ೦ದದ್ದು ಈ ಸಾಲುಗಳಲ್ಲಿ.."ಬೆದರದಿರು, ಬೆಚ್ಚದಿರು
ಭಾವಪ್ರಭಾವಗಳಿಗೆ ಒಳಗಾಗಿ ನಡೆಯುತಿರು"
"ಒಳಗಾಗದೆ ನಡೆಯುತಿರು"..ಎ೦ದಿರಬೇಕಿತ್ತೆ? ಕವಿ ಭಾವದಲ್ಲಿ ಏನಿತ್ತು ಅನ್ನುವುದುನನಗೆ ತಿಳಿಯುವ ಕುತೂಹಲ ಅಷ್ಟೆ..

ಅನ೦ತ್

ಕ್ಷಣ... ಚಿಂತನೆ... ಹೇಳಿದರು...

ಅನಂತ ಸರ್‌ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಒಂದು ಸಣ್ಣ ಕಾಗುಣಿತ ದೋಷವನ್ನು ಸರಿ ಮಾಡಿದ್ದೇನೆ. ಬಿಡುವಿದ್ದಾಗ ನೋಡಿ. ಹೀಗೆಯೆ ಬರುತ್ತಿರಿ.
ಸ್ನೇಹದಿಂದ,

Raaji (ರಾಜಿ) ಹೇಳಿದರು...

chandru sir tumba chennagide.....