ಸೋಮವಾರ, ಜೂನ್ 28, 2010

ನಗೆಯು ಬರುತಿದೆ...

©Photo: Chandrashekara B.H. Dec2009
ನಗೆಯು ಬರುತಿದೆ...

ನನ್ನದೆಂಬುದು ಯಾವುದಿದೆ ಮಾನವನಿಗೆ..
ಇರುವುದಲ್ಲೆಲ್ಲ ನಾನೇ ಅಲ್ಲವೇ?
ಎನುತ ದೇವರು ನಗುತಿರುವ!

ಇದು ನನ್ನ ಮನೆ, ಇವರು ನನ್ನವರು
ಎಂಬುದನು ಕಂಡು ನಗುತಿಹನು
ಇಲ್ಲಿಂದ ಅಲ್ಲಿಗೆ ನನ್ನ ಗೋಡೆ, ನನ್ನ ಗಡಿ,
ಒಳಗೆ ಬಂದರೆ ಬೀಳುವುದು ಒದೆ, ಹೊಡೆ-ಬಡಿ
ಎನುವ ಮಾನವನ ಕಂಡು ನಗುತಿಹನು ದೇವನು..!

ಭೂಮಿ.. ಬಾನು... ನನ್ನದು..
ನೀರು.. ಗಾಳಿ... ನನ್ನದು
ಎನುವುದಕೆ ಸಾಕ್ಷಿ ಯಾರಿಲ್ಲದಿದ್ದರೂ
ತಾನೇ ಸೃಷ್ಟಿಸಿದೆ ಎನುವ ಮನಜನ
ಕಂಡು ನಗುತಿಹನು ದೇವನು..!

ಕೊನೆಗಾಲದಲ್ಲಿ ಅರಿವಾಗಿ... ಬುದ್ಧಿ ಚಿಗುರಿ...
ಅಯ್ಯೋ ನಾನೆಂತ ಮಂಕು... ಇಲ್ಲಿ ನನ್ನದೇನಿದೆ??
ಎಲ್ಲಾ ಅವನದೇ... ಎಂಬುದನೀಗ ಅರಿತು...
ಹೇ ದೇವ... ದಾರಿತೋರು... ನನ್ನ ಮನ್ನಿಸು...
ಎಂದಾಗಲೂ ಮನುಜನು... ದೇವ...
ನಗುತಿಹನು... ನಗುತಲೇ ಇರುವನು...


- ಚಂದ್ರಶೇಖರ ಬಿ.ಎಚ್.
೨೮.೦೬.೨೦೧೦

[ಕವನದ ಕರಡ ಪ್ರತಿಗೆ ಅಕ್ಕರೆಯಿಂದ ಕೆಲವು ಬದಲಾವಣೆಗಳನ್ನು ಸೂಚಿಸಿದ ಎಸ್ಜೆಯವರಿಗೆ ನನ್ನ ಕೃತಜ್ಞತೆಗಳು.]

10 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಚೆ೦ದದ ಕವನ -ದೇವರು ಯಾವಾಗ ನಗುತ್ತಾನೆ ಅ೦ಥಾ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ಸುಂದರ ಕವನ ಸರ್
ಶೀರ್ಷಿಕೆ ಗಮನ ಸೆಳೆಯುವಂತಿದೆ

PARAANJAPE K.N. ಹೇಳಿದರು...

ಕವನ ಚೆನ್ನಾಗಿದೆ, ವಾಸ್ತವಕ್ಕೆ ಹಿಡಿದ ಕನ್ನಡಿಯ೦ತಿದೆ

AntharangadaMaathugalu ಹೇಳಿದರು...

ಚಂದ್ರೂ...
ಚೆನ್ನಾಗಿದೆ ಕವನ..... ಹುಲು ಮಾನವರ ಅಟಾಟೋಪವನ್ನು ನೋಡಿ ದೇವರು ನಗದೇ ಬೇರಿನ್ನೇನು ಮಾಡಿಯಾನು..? ಅವನ ನಗು ನಮಗೆಂದು ಅರ್ಥವಾಗುವುದೋ...ಅಲ್ವಾ..?

ಶ್ಯಾಮಲ

shivu.k ಹೇಳಿದರು...

ಚಂದ್ರು ಸರ್,

ದೇವರು ನಗುವ ಸಂದರ್ಭವನ್ನು ಕವನ ರೂಪದಲ್ಲಿ ಹೇಳಿದ್ದಕ್ಕೆ ಥ್ಯಾಂಕ್ಸ್.. ಉತ್ತಮಕವನಕ್ಕೆ ಅಷ್ಟೇ ಚೆನ್ನಾದ ಶೀರ್ಷಿಕೆ.

ಅನಂತ್ ರಾಜ್ ಹೇಳಿದರು...

ಜಗದಲಿರುವ ಮನುಜರೆಲ್ಲ ಹಗರಣ ಮಾಡುವದ ಕ೦ಡು..ನಗೆಯು ಬರುತಿದೆ..ದಾಸರ ಕೀರ್ತನೆಯನ್ನು ನೆನಪಿಸಿದ ಕವನ..ಚೆನ್ನಾಗಿ ಬರೆದಿದ್ದೀರಿ..ಚ೦ದ್ರು ..
ಹಗರಣಗಳ ಸರಣಿಯನ್ನೇ ಇ೦ದು ಕಾಣುತ್ತಿದ್ದೇವೆ..ಅಲ್ಲವೆ?

Ranjita ಹೇಳಿದರು...

ಮನುಷ್ಯನ ಆಂತರ್ಯವನ್ನು ಅರಿತು ದೇವರು ನಗುವ ಸನ್ನಿವೇಶಗಳನ್ನ ಸುಂದರವಾಗಿ ಕವನ ರೂಪದಲ್ಲಿ ಇಟ್ಟಿದ್ದೀರಿ . ಧನ್ಯವಾದಗಳು :)

V.R.BHAT ಹೇಳಿದರು...

ದೇವರ ನಗೆಯನ್ನು ಕಂಡ ಮತ್ತದನ್ನು ಬಣ್ಣಿಸಿದ ನಿಮಗೆ ಧನ್ಯವಾದಗಳು

Raghu ಹೇಳಿದರು...

ಒಳ್ಳೆಯ ಕವನ..ನಗುವಲ್ಲೇ ಜೀವನ..!
ನಿಮ್ಮವ,
ರಾಘು.

ಕ್ಷಣ... ಚಿಂತನೆ... ಹೇಳಿದರು...

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.