ಮಂಗಳವಾರ, ಜುಲೈ 27, 2010

ಜೈ ಭಾರತ ಮಾತಾ! ಜೈ ಜವಾನ್‌!

ನಿನ್ನೆ ದಿನವೇ ನಮ್ಮ ನಮನವನ್ನು ಹಾಕಬೇಕಿತ್ತು. ಆದರೆ, ಅಂತರ್ಜಾಲದ ಕೊಂಡಿಯ ಸಮಸ್ಯೆಯಿಂದಾಗಿ ಬ್ಲಾಗಿನಲ್ಲಿ ಬರೆಯಲು ಆಗಲಿಲ್ಲ.. ಅದಕ್ಕಾಗಿ ವಿಷಾದಿಸುತ್ತೇನೆ. ಭಾರತ-ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್‌ ಯುದ್ಧ ೧೧ನೇ ವರ್ಷಕ್ಕೆ ಕಾಲಿಡುತ್ತಿದೆ.

ಭಾರತೀಯ ವೀರ ಯೋಧರ ತ್ಯಾಗ, ಬಲಿದಾನ, ಧೈರ್ಯ, ಸಾಹಸದಿಂದಾಗಿ ಈ ಯುದ್ಧವನ್ನು ಗೆದ್ದೆವು. ಅಂದು ಇಡೀ ಭಾರತದ ಸಮಸ್ತರೂ ವೀರಯೋಧರ ಜೊತೆಗಿದ್ದರು. ಇಲ್ಲಿ ಅರಳುತ್ತಿದ್ದ ಎಷ್ಟೋ ಯುವ ವೀರರು ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನು ಮತ್ತು ದೇಶವಾಸಿಗಳನ್ನು ರಕ್ಷಿಸಿದರು.

ವೀರ ಭಾರತೀಯ ಯೋಧರು `ವಿಜಯ' ಪತಾಕೆ ಹಾರಿಸಿ, ಈ ಯುದ್ಧದಲ್ಲಿ ವೀರಮರಣವನ್ನಪ್ಪಿದ, ಗಾಯಗೊಂಡ ಹಾಗೂ ಅವರ ಮನೆಯವರೆಲ್ಲರಿಗೂ ನಮ್ಮ ನಮನಗಳು. ಅವರೆಲ್ಲರೂ ಪ್ರಾತ:ಸ್ಮರಣೀಯರು. ಈ ಭಾರತಕ್ಕೆ ವೀರಯೋಧರನ್ನು ಕೊಟ್ಟ ತಾಯ್ತಂದೆಯರಿಗೆ ನಮ್ಮ ನಮನಗಳು. ಅವರೆಲ್ಲರಿಗೂ ದು:ಖವನ್ನು ಭರಿಸುವ ಶಕ್ತಿಯನ್ನು ಆ `ಶಕ್ತಿ' ಯು ಕೊಡಲಿ...

ಜೈ ಭಾರತ ಮಾತಾ! ಜೈ ಜವಾನ್‌!

7 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಕಾರ್ಗಿಲ್ ವಿಜಯದ ಸ೦ದರ್ಭದ ನೆನಪಿನ ನಿಮ್ಮ ಬರಹಕ್ಕೆ ನನ್ನದೂ ಜೈ.

ತೇಜಸ್ವಿನಿ ಹೆಗಡೆ ಹೇಳಿದರು...

ಜೈ ಹಿಂದ್...

ವಿ.ಆರ್.ಭಟ್ ಹೇಳಿದರು...

jai javaan! thanks

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ ಹೇಳಿದರು...

ನಿಜವಾಗಿ ಅವರೆನೆಲ್ಲ ಸ್ಮರಿಸುವದು ನಮ್ಮ ಆದ್ಯ ಕರ್ತವ್ಯ ....ಜೈ ಹಿಂದ್
--
Day dreamer

ಸಾಗರದಾಚೆಯ ಇಂಚರ ಹೇಳಿದರು...

ಅವರಿಗೆಲ್ಲ ನನ್ನ ನಮನ

ಮನದಾಳದಿಂದ............ ಹೇಳಿದರು...

ಇಂದಿನ ದಿನ ನಾವೆಲ್ಲಾ ಮನೆಯಲ್ಲಿ ನೆಮ್ಮದಿಯ ನಿದ್ದೆ ಮಾಡ್ತಾ ಇದ್ದೇವೆ ಅಂದ್ರೆ ಅದಕ್ಕೆ ಕಾರಣ ನಮ್ಮ ದೇಶದ ವೀರ ಯೋಧರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹೋರಾಡಿದ ಎಲ್ಲಾ ವೀರರಿಗೂ ನಮ್ಮ ನಮನ.......
ಜೈ ಹಿಂದ್, ಜೈ ಜವಾನ್.........

ಸೀತಾರಾಮ. ಕೆ. / SITARAM.K ಹೇಳಿದರು...

ನಮ್ಮದು ಜೈ ಜವಾನ!
ವೀರಯೋಧರಿಗೆ!