ಹುತಾತ್ಮ ಭಗತ್ ಸಿಂಗ್ - ಇಂದು ಸೆಪ್ಟೆಂಬರ್ ೨೭, ಆತನ ಜನ್ಮದಿನ. ಇಂದಿಗೆ ೧೦೪ನೇ ವರ್ಷವಾಗುತ್ತಾ ಬಂದಿದೆ. ಭಾರತ ದೇಶ ಕಂಡ ಯುವ ಕ್ರಾಂತಿಕಾರಿ, ಹುತಾತ್ಮ ಭಗತ್ ಸಿಂಗ್ ಜನ್ಮತಾಳಿದ್ದು ಲೈಲಾಪುರ ಜಿಲ್ಲೆಯ ಬಾಂಗ (ಈಗಿನ ಪಾಕಿಸ್ತಾನ) ಎಂಬಲ್ಲಿ. ಭಗತ್ ಸಿಂಗನ ಕುಟುಂಬ ಸ್ವಾತಂತ್ರ್‍ಯಹೋರಾಟಗಾರರ ಕುಟುಂಬ. ಈತನು ಸರ್ದಾರ್ ಕಿಷನ್ ಸಿಂಗ್ ಮತ್ತು ವಿದ್ಯಾವತಿ ಇವರ ಮೂರನೇ ಮಗ. ಇವನ ಚಿಕ್ಕಪ್ಪಂದಿರೂ ಸಹ ಸ್ವಾತಂತ್ರ್‍ಯ ಹೋರಾಟಗಾರರಾಗಿದ್ದರು.
ಭಗತ್ ಸಿಂಗನ ನುಡಿಮುತ್ತು: "If the deaf are to hear, the sound has to be very loud. When we dropped the bomb, it was not our intention to kill anybody. We have bombed the British Government. The British must quit India and make her free."
ಇಂತಹ ಯುವ ಹುತಾತ್ಮನಿಗೆ ಭಾರತೀಯರೆಲ್ಲರ ನಮನಗಳನ್ನು ಅರ್ಪಿಸೋಣ. ಆತನ ವಿಚಾರಧಾರೆ, ಆತನ ಧೀ:ಶಕ್ತಿ, ದೇಶಪ್ರೇಮ, ಪ್ರಾಮಾಣಿಕತೆ, ಸಾಹಸ, ಇಂದಿನ ಯುವಜನಾಂಗದಲ್ಲಿಯೂ ಮೂಡಿಬರಲಿ.
ಹುತಾತ್ಮ ಭಗತ್ ಸಿಂಗನ ಪೂರ್ಣಪಾಠಕ್ಕೆ ಇಲ್ಲಿಗೆ ಭೇಟಿಕೊಡಿ
http://www.shahidbhagatsingh.org/index.asp?linkid=1
10 ಕಾಮೆಂಟ್‌ಗಳು:
ಇಂದಿನ ಪೀಳಿಗೆಯವರ ಜನಮಾನಸದಿ೦ದ ಮರೆಯಾಗುತ್ತಿರುವ ಅಪ್ರತಿಮ ರಾಷ್ಟ್ರ ಭಕ್ತನ ಜನ್ಮದಿನ ನೆನಪಿಸಿದ್ದೀರಿ. ಸಮಯೋಚಿತ ಬರಹ. ಗಾ೦ಧಿ ಜಯ೦ತಿ ಆಚರಿಸುವ೦ತೆ ಇ೦ತಹ ಮಹನೀಯರ ಜನ್ಮದಿನ ಯಾಕೆ ಆಚರಣೆಯಲ್ಲಿ ಇಲ್ಲವೋ ಕಾಣೆ? ಇ೦ತಹ ಜನ್ಮದಿನಗಳಿಗೆ ಸಾರ್ವತ್ರಿಕ ರಜೆ ಕೊಡಬೇಕೆ೦ದು ನಾನು ಹೇಳುತ್ತಿಲ್ಲ. ಆದರೆ ಅವರನ್ನು ಸಾರ್ಥಕ ರೀತಿಯಲ್ಲಿ ನೆನಪಿಸುವಲ್ಲಿ ಕೂಡ ನಮ್ಮ ಸರಕಾರಕ್ಕೆ ದಿವ್ಯನಿರ್ಲಕ್ಷ ಇರುವುದು ಖ೦ಡನೀಯ.
ಚಂದ್ರು ಸರ್,
ಮೇರು ವ್ಯಕ್ತಿತ್ವದ, ಸ್ವಾತಂತ್ರ್ಯ ಹೋರಾಟದಲ್ಲಿ ಮುಖ್ಯಪಾತ್ರವಹಿಸಿ ಅಮರನಾದ ಭಗತ್ ಸಿಂಗ್ ಎಷ್ಟೊ ಜನರಿಗೆ ಗೊತ್ತಿಲ್ಲದಿರುವುದು ವಿಷಾದದ ಸಂಗತಿ. ಭಗತ್ ಸಿಂಗ್ ಜನ್ಮದಿನದ ದಿನ ಅವರನ್ನು ಅವರನ್ನು ನೆಸಿಕೊಳ್ಳಲು ನೆನಪಿಸಿದ ನಿಮಗೆ ವಂದನೆಗಳು....
ಭಗತ್ ಸಿಂಗ್ ಬಗ್ಗೆ ಚೆನ್ನಾಗಿ ಬರೆದಿದ್ದೀರಿ... ಕ್ರಾಂತಿಕಾರಿ(ಉಗ್ರವಾದಿ)ಯಾದದ್ದರಿಂದ ಗಾಂಧೀಜಿ ಅಥವಾ ಬೇರೆ ಮಂದವಾದಿಗಳಷ್ಟು ಜನರಿಂದ ಆಕರ್ಷಣೆಗೆ ಒಳಗಾಗಿಲ್ಲವೆಂದು ನನ್ನ ಅಭಿಪ್ರಾಯ... ಆದರೆ ಸ್ವಾತಂತ್ರ್ಯ ದೊರಕಿಸಿಕೊಡಲು ಇವರ ಕೊಡುಗೆ ಅಪಾರ... ವಂದನೆಗಳು...
ಚಂದ್ರು ಸರ್,
ಭಗತ್ ಸಿಂಗ್ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ತಿಳಿಸಿದ್ದೀರಾ ಸರ್..... ಧನ್ಯವಾದ...... ಆತನ ಹೆಸರು ಕೇಳಿದರೇ ಮೈ ಜುಮ್ಮೆನ್ನುತ್ತದೆ..... ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದ....
ಪರಾಂಜಪೆ ಸರ್, ಅರ್ಥಗರ್ಭಿತ ಪ್ರಶ್ನೆ. ಆದರೆ... ನಮಗೆ ಬೇಕಿರುವುದು ಇವೆಲ್ಲ ಅಲ್ಲ ಅಲ್ಲವೇ? ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಮನದಾಳದಿಂದ, ಜನರಿಗೆ ಇವೆಲ್ಲ ತಿಳಿಸಲು ಬೇಕಿರುವ ಮಾಧ್ಯಮಗಳು ಸುಮ್ಮನಿರುವಾಗ ಸಾಮಾನ್ಯ ತಾನೇ ಏನು ಮಾಡುವುದು. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಪ್ರಗತಿ ಮೇಡಂ,
ಯಾವಾಗಲೂ ಅಷ್ಟೇ ವೇಗವಾಗಿ ಬರುವುದು ತಕ್ಷಣವೇ ಮರೆಯಾಗಿಹೋರುಗತ್ತವೆ. ಹಾಗೆಯೇ ಇಂತಹ ವೀರರು ಜನಮಾನಸದಿಂದ ಬೇಗನೇ ಮರೆತುಹೋಗುತ್ತಾರೆ.
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ದಿನೇಶ್ ಅವರೆ, ಇಂದು ಬೆಳಗ್ಗೆ ಬಂದು ಒಂದೆರಡು ಮೊಬೈಲ್ ಸಂದೇಶದಿಂದಾಗಿ ಇಲ್ಲಿ ಭಗತ್ ಸಿಂಗನ ಬಗ್ಗೆ ಪುಟ್ಟ ಮಾಹಿತಿ ಹುಡುಕಿ ಬರೆಯುವಂತಾಯಿತು.
@@@@@@@@@@
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ಸುಂದರ ಸಾಲುಗಳು, ಅದ್ಬುತ ಕಲ್ಪನೆ, ಸುಮಧುರ ಸಾಹಿತ್ಯ ,,,,,,
ಸರ್ ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ಸುಂದರ ನಿಮ್ಮ ಕವೊತೆಗಳನ್ನು ಕಂಡ ನನ್ನೀ ಮನಸು ಮೃದುವಾಗಿದೆ ಕವಿತೆಗಳು ತುಂಬಾ ಚನ್ನಾಗಿ ಮೊಡಿ ಬಂದಿವೆ , ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಒಮ್ಮೆ ಬೇಟಿ ನೀಡಿ . ನಾನು ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ
SATISH N GOWDA
ನನ್ನ ಬ್ಲಾಗ್ : ನನ್ನವಳಲೋಕ
http://nannavalaloka.blogspot.com
ನನ್ನ ಸ್ನೇಹಲೋಕ :(orkut)
satishgowdagowda@gmail.com
ಗಾಂಧಿ ನೆಹರುಗಳ ನಡುವೆ ಎಸ್ತ್ತೋ ಸ್ವತಂತ್ರ ಹುತಾತ್ಮರನ್ನು ನೆನಪೇ ಇಲ್ಲದ ಹಾಗಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ