ಬುಧವಾರ, ಮಾರ್ಚ್ 23, 2011

ಮೇರೆ ರಂಗದೇ ಬಸಂತಿ... : ಶಹೀದರುಗಳಿಗೆ ನಮನ

ಇಂದು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರನ್ನು ಗಲ್ಲಿಗೇರಿಸಿದ ದಿನ (೨೩ ಮಾರ್ಚ್ ೧೯೩೧). ಈ ಹುತಾತ್ಮರೂ ಇನ್ನೂ ತಾರುಣ್ಯದಲ್ಲಿದ್ದಾಗಲೇ ಭಾರತಮಾತೆಯನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಲು ಪಣತೊಟ್ಟು, ಪಾರ್ಲಿಮೆಂಟಿನಲ್ಲಿ ಬಾಂಬೆಸೆದು, ಆಂಗ್ಲರ ಪರವಾದ ನ್ಯಾಯಕ್ಕೆ (ಅದು ಯಾವಾಗಲೂ ಹಾಗೆಯೇ ಅಲ್ಲವೇ ಆಳುವವನಿಗೇ ಅಧಿಕಾರ ಮತ್ತು ಕಾನೂನು ತನ್ನ ಮಾತಿನಂತೆ ನಡೆಯುವುದು) ತಮ್ಮನ್ನು ದೇಶಕ್ಕಾಗಿ ಅರ್ಪಿಸಿಕೊಂಡರು. ದೇಶಕ್ಕಾಗಿ ಚಿಂತಿಸಿದರು, ದುಡಿದರು ಹಾಗೂ ತಮ್ಮ ಯೌವನಾವಧಿಯಲ್ಲಿಯೇ ಹುತಾತ್ಮರಾಗಿ ಚಿರಕಾಲ ಜನಮಾನಸದಲ್ಲಿ ಉಳಿದರು. ಇವರೆಲ್ಲ ಪ್ರಾತ:ಸ್ಮರಣೀಯರು. ಅವರು ಅಂದು ನೀಡಿದ ಘೋಷವಾಕ್ಯ ಇಂದಿಗೂ ಪ್ರಸ್ತುತವೆನಿಸುತ್ತದೆ:

“If the deaf are to hear, the sound has to be very loud. When we dropped the bomb, it was not our intention to kill anybody.

ದೇಶಭಕ್ತಿಯ ಪ್ರತಿರೂಪಗಳಾದ ಈ ಹುತಾತ್ಮರುಗಳಿಗೆ ನಮ್ಮೆಲ್ಲರ ನಮನ ಸಲ್ಲಿಸೋಣ.

4 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಸಕಾಲಿಕ ಬರಹ, ಇ೦ತಹ ಹುತಾತ್ಮರು ಇ೦ದು ಕಾಲಗರ್ಭದಲ್ಲಿ ಹೂತು ಹೋಗಿದ್ದಾರೆ. ನೆನಪಿಸುವವರೇ ವಿರಳ.

AntharangadaMaathugalu ಹೇಳಿದರು...

ನಿಜವಾಗಿ ನೆನಯ ಬೇಕಾದ ಇಂತಹ ಹುತಾತ್ಮರನ್ನೂ, ಅವರುಗಳ ತ್ಯಾಗಗವನ್ನು ಯಾರೂ ಎಲ್ಲೂ ಪ್ರಾಮುಖ್ಯತೆ ಕೊಟ್ಟು ಹೇಳದೇ ಇರುವುದೇ ಇವರುಗಳ ಪರಿಚಯ ನಮ್ಮಲ್ಲಿ ಪ್ರಚಲಿತದಲ್ಲಿ ಇಲ್ಲದೆ ಹೋಗಿದೆ. ನಿಮ್ಮೊಂದಿಗೆ ನನ್ನದು ಒಂದು ನಮನ ಚಂದ್ರು... ಧನ್ಯವಾದಗಳು...

ಶ್ಯಾಮಲ

shivu.k ಹೇಳಿದರು...

ಉತ್ತಮ ಬರಹ...ಅವರನ್ನು ನೆನೆಸಿಕೊಳ್ಳಲೇಬೇಕು...

ದಿನಕರ ಮೊಗೇರ ಹೇಳಿದರು...

sakaalika baraha...
nijavaagiyu neneyabekaadavaru ivaru...