ಸೋಮವಾರ, ಏಪ್ರಿಲ್ 11, 2011

ಶ್ರೀ ರಾಮ ಜಯ ರಾಮ ಜಯ ಜಯ ರಾಮ

|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

ಚೈತ್ರ ಶುಕ್ಲ ನವಮಿ. ಅಂದು ಅಯೋಧ್ಯಾ ರಾಜನಾದ, ದಶರಥ ಪುತ್ರ ಶ್ರೀ ರಾಮನ ಜನ್ಮದಿನ. ಇದನ್ನು ಸರಳವಾದ ಹಬ್ಬವನ್ನಾಗಿ ಆಚರಿಸುತ್ತಾರೆ. ವಸಂತನಾಗಮನದೊಂದಿಗೆ ಬೇಸಗೆಯೂ ಅಡಿಯಿರಿಸಿರುವಾಗ ಬರುವಂಥಹ ಈ ಹಬ್ಬವು ನಿಜಕ್ಕೂ ಖುಷಿ ಕೊಡುತ್ತದೆ. ಬಿಸಿಲ ಬೇಗೆಯ ನೀಗಿಸಲು ಪಾನಕ, ಕೋಸಂಬರಿ, ಮಜ್ಜಿಗೆ ಸಮಾರಾಧನೆ ಮಾಡುತ್ತಾ ಸರಳವಾಗಿ ಹಬ್ಬವನ್ನು ಆಚರಿಸುತ್ತಾರೆ. ಶ್ರೀರಾಮ ನವಮಿಯಿಂದ ಒಂಭತ್ತು ದಿನಗಳವರೆಗೂ ಕೆಲವರು ಪೂಜೆ, ರಾಮಾಯಣ ಪಠಣ, ಇತ್ಯಾದಿ ಹಮ್ಮಿಕೊಳ್ಳುತ್ತಾರೆ. ಬೆಂಗಳೂರಿನ ಶ್ರೀರಾಮ ಮಂಡಳಿ ಪ್ರತಿವರ್ಷವೂ ಕೋಟೆ ಹೈಸ್ಕೂಲು ಮೈದಾನದಲ್ಲಿ ಸಂಗೀತ ಕಾರ್ಯಕ್ರಮವನ್ನು ಪ್ರಖ್ಯಾತ ಸಂಗೀತಗಾರರನ್ನು ಕರೆಸಿ, ಸಂಗೀತ ಸುಧೆಯನ್ನೇ ಹರಿಸುತ್ತಾರೆ (http://sriramasevamandali.org/) . ರಸ್ತೆ ರಸ್ತೆಗಳಲ್ಲಿ ಮಜ್ಜಿಗೆ, ಕೋಸಂಬರಿ, ಪಾನಕ ಹಂಚುವುದನ್ನೂ ಕಾಣಬಹುದು.

ಎಲ್ಲರಿಗೂ ಶ್ರೀರಾಮನು ಸಕಲ ಸನ್ಮಂಗಳವನ್ನುಂಟು ಮಾಡಲಿ.

ಜೈ ಶ್ರೀರಾಮ್‌

5 ಕಾಮೆಂಟ್‌ಗಳು:

AntharangadaMaathugalu ಹೇಳಿದರು...

ಚಂದ್ರೂ...

ನಿಮಗೂ... ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಮಾತುಗಳು ಓದಿ, ನಾ ಮತ್ತೆ ನಮ್ಮೂರಿನ ರಾಮ ದೇವಸ್ಥಾನಕ್ಕೆ ಹೋಗಿ ಬಿಟ್ಟೆ. ಆ ಸಂಭ್ರಮಕ್ಕೆ ನಿಜಕ್ಕೂ.. ಬೇರಾವುದೇ ಸಾಟಿ ಇಲ್ಲ.. ಧನ್ಯವಾದಗಳು...

ಶ್ಯಾಮಲ

PARAANJAPE K.N. ಹೇಳಿದರು...

ಸರ್ವರಿಗೂ ರಾಮನವಮಿ ಹಬ್ಬದ ಶುಭಾಶಯ ಗಳು

ಅನಂತರಾಜ್ ಹೇಳಿದರು...

ತಮಗೂ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು.

ಅನ೦ತ್

shivu.k ಹೇಳಿದರು...

ಸರ್,

ನನಗೆ ರಾಮನವಮಿ ಮಜ್ಜಿಗೆ ಮತ್ತು ಪಾನಕ ತುಂಬಾ ಇಷ್ಟ ಇವತ್ತು ಅದನ್ನು ಕುಡಿಯಲು ಹೋಗುತ್ತಿದ್ದೇನೆ. ನಿಮಗೆ ರಾಮನವಮಿ ಹಬ್ಬದ ಶುಭಾಶಯಗಳು.

ದಿನಕರ ಮೊಗೇರ ಹೇಳಿದರು...

ನಿಮಗೂ ರಾಮ ನವಮಿಯ ಶುಭಾಶಯ... ಸರ್, ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......