ಬುಧವಾರ, ಆಗಸ್ಟ್ 10, 2011

ಚಿನ್ನದ ಕಾಸು... ನಾನು ಕೊಡೊಲ್ಲ!!

ಚಿನ್ನದ ಕಾಸು... ನಾನು ಕೊಡೊಲ್ಲ!!

ಮೊನ್ನೆ ಕತ್ತರಿಗುಪ್ಪೆ ಕಡೆಯಿಂದ ನಾಗರಬಾವಿ ಕಡೆಗೆ ಹೋಗುವ ಬಸ್ಸಿನಲ್ಲಿ ಬರುತ್ತಿದ್ದೆ.  ಸಂಜೆ ಮಳೆಯಲ್ಲಿ, ಟ್ರಾಫಿಕ್‌ ಜಾಮಿನಲ್ಲಿ ಬಸ್ಸು ರಿಂಗ್ ರೋಡಿನಲ್ಲಿ ಸಿಗ್ನಲಲ್ಲಿ ನಿಂತಿತು.  

ಒಬ್ಬ ಪ್ರಯಾಣಿಕ ಹತ್ತಿದ. ಆತನು ತಲುಪಬೇಕಿದ್ದ ಸ್ಥಳಕ್ಕೆ ಟಿಕೇಟು ಕೊಂಡನು. ಆದರೆ, ಅದರ ಬೆಲೆ ರೂ.೧೫.  ಈತನ ಬಳಿ ೧೦೦ ರ ಒಂದು ನೋಟು ಜೊತೆಗೆ ಒಂದಷ್ಟು ಚಿಲ್ಲರೆ ಇತ್ತು.  ನಿರ್ವಾಹಕ ರೂ. ೫ ಇದೆಯಲ್ಲ ಅದು ಕೊಡು ತೊಂಭತ್ತು ರೂಪಾಯಿ ಕೊಡುತ್ತೇನೆ ಅಂತ.  ಆದರೆ, ಈತ ಐದು ರೂಪಾಯಿನ ಕಾಯಿನ್‌ ಕೊಡಲೊಪ್ಪುತ್ತಿಲ್ಲ.  ಅದು ನನಗೆ ಬೇಕು. ಚೀಟಿಯಲ್ಲಿ ಬರೆದುಕೊಡು ಚಿಲ್ಲರೆ, ಇಳೀವಾಗ ತೊಗೋತೀನಿ ಅಂತ ಇವನ ಹಠ.  ನಿರ್ವಾಹಕ ಚಿಲ್ಲರೆ ಇದೆಯಲ್ಲ ಕೊಡು ಅಂತ ಒಂದೇ ಸಮನೆ ಕೇಳುತ್ತಿದ್ದಾನೆ.  

ಆದರೆ, ಪ್ರಯಾಣಿಕ ರೂ.೧೩ ಕೊಡುತ್ತೇನೆ. ಇಲ್ಲಾಂದರೆ, ನೂರು ರೂಪಾಯಿ ತೊಗೊಂಡು ಚೀಟಿಯಲ್ಲಿ ಉಳಿದ ಚಿಲ್ಲರೆ ಬರೆದುಕೊಡು ಅಂತ ಕೇಳುತ್ತಿದ್ದಾನೆ. ಇದರಿಂದ ನಿರ್ವಾಹಕನಿಗೆ ರೇಗಿತು. ಐದು ರೂಪಾಯಿ ಕೊಡು ಇಲ್ಲಾಂದರೆ ಬೇರೆ ಬಸ್ಸು ಹತ್ತು ಅಂತ.  ಆದರೆ, ಈ ಪ್ರಯಾಣಿಕ ಒಪ್ಪೊತ್ತಿಲ್ಲ.

ಏನಯ್ಯಾ ಮಾಡ್ತೀಯಾ ಆ ಕಾಯಿನ್‌ ಇಟ್ಕೊಂಡು ಅಂತ ನಿರ್ವಾಹಕ. ಅದಕ್ಕೆ.... ಆ ಪ್ರಯಾಣಿಕ ಹೇಳಿದ್ದು:
 
ಇದು ಗೋಲ್ಡ್ ಕಾಯಿನ್‌....
ನನಗೆ ಐದು ರೂಪಾಯಿನ ಈ ಕಾಯಿನ್‌ ಬೇಕು.
ಗೋಲ್ಡ್ ಕಾಯಿನ್ ಇದು. ನಾನು ಕೊಡೊಲ್ಲ.


ನನಗೆ ಇನ್ನೂ ಇಂತಹ ನೂರು ಕಾಯಿನ್‌ ಕೊಡು ತೊಗೊತೀನಿ. ಈ ಕಾಯಿನ್‌ ಕೇಳಬೇಡ. ನೂರು ರೂಪಾಯಿ ಕೊಟ್ಟಿದೀನಿ ಚಿಲ್ಲರೆ ನಿನ್ನತ್ರ ಇದೆ ಕೊಡು. ಇಲ್ಲಾ ಬರೆದುಕೊಂಡು, ಸುಮ್ನೆ ತಲೆ ತಿನ್ಬೇಡ ಎಂದಾಗ...

ನಿರ್ವಾಹಕ ಬಯ್ದುಕೊಳ್ಳುತ್ತಾ.. ನಿನ್ನಂತ ೫-೬ ಜನ ಇದ್ರೆ ನನ್ನ ಕೆಲಸ ಹೋಗುತ್ತೆ, ಅಷ್ಟೆ. ಟಿಕೇಟು ಕೊಡಕ್ಕೆ, ಚಿಲ್ರೆ ಕೊಡಕ್ಕೆ ಆಗಲ್ಲ.. ಎಂದು ಗೊಣಗುತ್ತಾ...ಮರುಮಾತಿಲ್ಲದೇ, ನಿರ್ವಾಹಕ ನೂರು ರೂಪಾಯಿ ತೊಗೊಂಡು ಚಿಲ್ಲರೆ ಕೊಟ್ಟನು.  

ಹೌದು. ಜನಕ್ಕೆ `ಚಿನ್ನ' ಎಂದರೆ ಅಂತಹ ಆಸೆ.  ಚಿನ್ನ/ಬಂಗಾರ ಕೊಳ್ಳಲಾಗದಿದ್ದರೂ ಈ ಐದು ರೂಪಾಯಿನ ಗೋಲ್ಡ್ ಕಲರ್‌ ಕಾಯಿನ್‌ನಲ್ಲೇ ಬಂಗಾರ ಕೊಂಡು ಅನುಭವ ಅವನಿಗಾಗುತ್ತಿರಬೇಕು.  ಅವನ ಹವ್ಯಾಸವೋ ಮತ್ತೊಂದೋ ಒಟ್ಟಿನಲ್ಲಿ ಈ ಘಟನೆ `ಚಿನ್ನ'ದ ರೂಪದ ಯಾವುದೇ ಆದರೂ ಮನುಷ್ಯನನ್ನು ತನ್ನ ಬಲೆಗೆ ಕೆಡವಿಕೊಳ್ಳುತ್ತೆ ಎನ್ನಬಹುದು.

ಏನಂತೀರಿ?

ಚಂದ್ರಶೇಖರ ಬಿ.ಎಚ್.
೧೦/೦೮/೨೦೧೧

4 ಕಾಮೆಂಟ್‌ಗಳು:

Dr.D.T.Krishna Murthy. ಹೇಳಿದರು...

ಚಿನ್ನದ ಮೋಹ ಏನೆಲ್ಲಾ ಮೋದಿ ಮಾಡುತ್ತದೆ !ಅಲ್ಲವೇ?
ಚೆಂದದ ಬರಹ .ಅಭಿನಂದನೆಗಳು.

ಕನಸು ಹೇಳಿದರು...

ಹೌದು ಸರ್
ಇಂಥ ನೂರಾರು ಘಟನೆಗಳು
ನಾನು ನೋಡಿದ್ದೆನೆ.ನೀವು ನೋಡಿದ ಘಟನೆಗಳನ್ನು
ಒಂದು ಲೇಖನದೊಂದಿಗೆ ನಮ್ಮೋಂದಿಗೆ ಹಂಚಿಕೊಂಡಿದ್ದಕ್ಕೆ
ಧನ್ಯವಾದಗಳು,
ಕನಸು

ಸೀತಾರಾಮ. ಕೆ. / SITARAM.K ಹೇಳಿದರು...

ವಿಚಿತ್ರ ವ್ಯಾಮೋಹ...ಅಲ್ಲವೇ?

ಅನಂತ್ ರಾಜ್ ಹೇಳಿದರು...

ಉತ್ತಮ ಲೇಖನ ಚ೦ದ್ರು. ವ್ಯಾಮೋಹದ ವರ್ತುಲದಲ್ಲೇ ಸುತ್ತುವುದು ಬದುಕಿನ ಜಟಾಕಾಬ೦ಡಿ. :)