ಶುಕ್ರವಾರ, ಮಾರ್ಚ್ 30, 2012

ಶ್ರೀರಾಮ ಜಯ ರಾಮ ಜಯ ಜಯ ರಾಮ

Sri Ram Brahmachaitanya Mandira,Chintamani

ಶ್ರೀರಾಮ ಜಯ ರಾಮ ಜಯ ಜಯ ರಾಮ

ವಸಂತಾಗಮನದೊಂದಿಗೆ ಶ್ರೀರಾಮನ ಆಗಮನವೂ (ನವಮಿಯಂದು), ಭಾರತೀಯರಿಗೆ ಪರಮಪೂಜ್ಯದಿನ.  ಇಂತಹ ಸಂದರ್ಭಕ್ಕೆ ಪುಟ್ಟದೊಂದು ವಿಚಾರ.
  • ಶ್ರೀರಾಮ ಕೋಟಿ ಎಂಬುದು ಶ್ರೀರಾಮನ ಪ್ರಸಾದವೇ ಆಗಿದ್ದು ರಾಮನಾಮ ಜಪ ಮತ್ತು ನಾಮಾವಳಿಯಲ್ಲಿನ ನಾಮ ಸಂಕೀರ್ತನೆಯಾಗಿದೆ.
  • ಶ್ರೀರಾಮ ನಾಮವನ್ನು ಬರೆಯುವುದಕ್ಕೆ ಲಿಖಿತ ಜಪವನ್ನುತ್ತಾರೆ. ಇದು ಸಂಪೂರ್ಣ ಶರಣಾಗತಿಯ ಭಾವನೆಯನ್ನು ಮನದಲ್ಲಿ ತುಂಬುತ್ತದೆ.
  • ರಾಮನಾಮವನ್ನು ಯಾವುದೇ ಭಾಷೆಯಲ್ಲಿಯಾದರೂ ಬರೆಯಬಹುದು. ಇದು ಜೀವಾತ್ಮ ಮತ್ತು ಪರಮಾತ್ಮನೊಂದಿಗೆ ಸೇರಿಸುವ ತಂತುವಾಗಿದೆ.
  • ಹಿಂದಿನ ಕಾಲಗಳಲ್ಲಿ ಶ್ರೀ ರಾಮನಾಮವನ್ನು ಪುಸ್ತಕದಲ್ಲಿ ಬರೆದು, ಅವುಗಳನ್ನು ದೇವಾಲಯಗಳ ನಿರ್ಮಾಣ ಸಂದರ್ಭಗಳಲ್ಲಿ ತಳಪಾಯಲಗಳಲ್ಲಿ ಇಟ್ಟು ದೇವಾಲಯಗಳನ್ನು ಕಟ್ಟುತ್ತಿದ್ದರು. ಇದರಿಂದ ದೇವಾಲಯಗಳಿಗೆ ಮತ್ತಷ್ಟು ದಿವ್ಯತೆ ಮತ್ತು ಭದ್ರತೆಯನ್ನು ಕೊಡುತ್ತವೆಂಬುದಾಗಿ ತಿಳಿಯುತ್ತಿದ್ದರು.
  • ಶ್ರೀರಾಮನಾಮವನ್ನು ಸ್ಮರಿಸುವವರಿಗೆ ಶಾಂತತೆ, ಜ್ಞಾನದ ಪ್ರಖರತೆ ಹಾಗೂ ಜೀವನದಲ್ಲಿ ಎದುರಾಗುವ ಯಾವುದೇ ಸನ್ನಿವೇಶಗಳನ್ನು ನಿಭಾಯಿಸುವ ಶಕ್ತಿಯನ್ನು ಕೊಡುತ್ತದೆ.  ಉದಾಹರಣೆಗೆ: ಸಂತ ತುಳಸೀದಾಸರು, ತ್ಯಾಗರಾಜಸ್ವಾಮಿಗಳು, ಸಂತ ಕಬೀರ.. ಹೀಗೆ ಅನೇಕರನ್ನು ಸ್ಮರಿಸಬಹುದು.
  • ಸೂರ್ಯನು ಕತ್ತಲೆಯನ್ನು ಹೋಗಲಾಡಿಸುವಂತೆ ಶ್ರೀರಾಮನಾಮ ಜಪವು ಮನದ ಕತ್ತಲೆ, ಜೀವನದ ಅಜ್ಞಾನವನ್ನು ಹೋಗಲಾಡಿಸುವಂತಹುದು. ಅಂತಹ ಶಕ್ತಿ ಶ್ರೀರಾಮನಾಮದಲ್ಲಿದೆ. 
  • ಇದಕ್ಕೆ ಯಾವುದೇ ನಿರ್ದಿಷ್ಟ ಸಮಯ, ದಿನ, ವರ್ಷ ಎಂದು ಯೋಚಿಸದೇ ಜಪಿಸಬಹುದು, ಲಿಖಿತ ಜಪ ಆಚರಿಸಬಹುದು.  ಅದಕ್ಕೇ ಪುರಂದರದಾಸರು, ರಾಮ ಮಂತ್ರವ ಜಪಿಸೋ, ಹೇ ಮನುಜ.. ಆ ಮಂತ್ರ ಈ ಮಂತ್ರ ಜಪಿಸಿ ಕೆಡಲುಬೇಡ, ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ.
  • ಸಂತ ತುಳಸೀದಾಸರು ಹೇಳುತ್ತಾರೆ: ಯಾವಾಗ ನೀನು ರಾಮ ನಾಮವನ್ನು ನಿನ್ನ ನಾಲಗೆಯ ತುದಿಯಲ್ಲಿಡುವೆಯೋ, ಆಗ ನೀನು ನಿನ್ನ ಒಳಗೆ ಮತ್ತು ಹೊರಗೆ ದೇದೀಪ್ಯವಾದ ಜ್ಯೋತಿಯನ್ನು ಕಾಣುವೆ.
+++++++++++++++++++++++++++++++++++++++++++++++
ರಾಮ ರಮಾಪತಿ ಬ್ಯಾಂಕ್ (ramramapatibank.com) ಎಂಬುದಾಗಿ ವಾರಣಾಸಿ ಮತ್ತು ರಾಮ ರಾಮ ಬ್ಯಾಂಕ್, ಲಕ್ನೋದಲ್ಲಿ ಇದೆಯಂತೆ.

Ram Nam Bank: Banking with a difference
Pravin Kumar, TNN May 1, 2002, 01.02am IST
LUCKNOW: This is a bank which offers no interest, has no credit schemes, organises no loan ''melas.'' It doesn't deal in money at all. Still, the number of its ''account-holders'' is on the rise, and they include Muslims too. Welcome to the 17-year-old Ram Ram Bank, which deposits ''Ram naam'' and not currency.

Scribbling ''Ram naam'' has always been a popular way of remembering the Lord. One need not go to a temple. A businessman can do it sitting at his cash counter, an office-goer can do it whenever he gets a break and a housewife can do it while doing her daily chores.

(Source: http://articles.timesofindia.indiatimes.com/2002-05-01/lucknow/27128531_1_deposit-account-holders-lord-ram)

ಇಲ್ಲಿ ಶ್ರೀರಾಮನಾಮ (ಶ್ರೀ ರಾಮ ತಾರಕ ನಾಮ - ಶ್ರೀ ರಾಮ ಜಯರಾಮ ಜಯಜಯರಾಮ) ಲಿಖಿತಜಪದ ಸಾವಿರ, ಸಾವಿರ, ಲಕ್ಷದಷ್ಟನ್ನು ಭಕ್ತರು ಬರೆದ ಪುಸ್ತಕಗಳನ್ನು ಇಟ್ಟಿರುವರಂತೆ.
+++++++++++++++++++++++++++++++++++++++++++++++
ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು. 
ಶ್ರೀ ರಾಮ ಕೃಪೆ ಎಲ್ಲರಿಗೂ ಸಿಗಲಿ.

1 ಕಾಮೆಂಟ್‌:

ಅನಂತ್ ರಾಜ್ ಹೇಳಿದರು...

ಶ್ರೀರಾಮ ನಾಮದ ಲಿಖಿತ ಜಪದ ವಿಶೇಷತೆ ಹಾಗೂ ಮಾಹಿತಿಯನ್ನೊಳಗೊ೦ಡ ಉತ್ತಮ ಲೇಖನವನ್ನು ಪ್ರಸ್ತುತಿಸಿದ್ದೀರಿ. ಅಭಿನ೦ದನೆಗಳು ಚ೦ದ್ರು. ನಿಮಗೂ ಶ್ರೀರಾಮ ನವಮಿಯ ಶುಭಾಶಯಗಳು.

ಅನ೦ತ್