ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು.
ಆ ಶಾರದೆಯ ಕೃಪೆಯಿಂದ ಬಹಳ ವರ್ಷಗಳ ಹಿಂದೆ ಬರೆದಿದ್ದ ಈ ಕವಿತೆಯನ್ನು, ನವರಾತ್ರಿ ಹಬ್ಬದ ಶುಭದಿನದಲ್ಲಿ - ಸರಸ್ವತಿ ಮತ್ತು ದುರ್ಗಾ ಪೂಜೆಯ ದಿನವಾದ ಇಂದು ಅರ್ಪಿಸುವ ಮನಸ್ಸಾಗಿದೆ.
ಶಾರದೆ, ನೀ ದಾರಿ ತೋರಮ್ಮ...
ಅಮ್ಮಾ ಶಾರದೆ, ನೀ ದಾರಿ ತೋರದೆ,
ನಾ ಹೇಗೆ ನಡೆಯಲಮ್ಮ
ನಿನ್ನ ದಯೆಯು ಇರದೆ
ನಾ ಹೇಗೆ ಬಾಳಲಮ್ಮ?
ದಾರಿಕಾಣದೆ ಕತ್ತಲಲಿ ಬಳಲುತಿರುವ
ನಿನ್ನ ಕಂದನಿಗೆ ಬೆಳಕನು ನೀಡಮ್ಮ
ಕತ್ತಲೆಯ ತೆರೆಯ ಸರಿಸಮ್ಮ
ಬೆಳಕಿನ ಕಾಂತಿ ಹರಿಸಮ್ಮ
ನಿನ್ನ ಕಂದನ ಮೊರೆಯ ಕೇಳಮ್ಮ
ದಯಮಾಡಮ್ಮ, ಕೃಪೆದೋರಮ್ಮ
ಜ್ಞಾನಮಾರ್ಗಕೆ ದಾರಿ ತೋರು ಬಾರಮ್ಮ
ಹೇ ಭಾರತಿಯೇ, ಶಾರದಾ ಮಾತೆಯೆ
ನಿನ್ನ ಕಂದನಿಗೆ ಬೆಳಕನು ನೀಡಮ್ಮ
ಕತ್ತಲೆಯ ತೆರೆಯ ಸರಿಸಮ್ಮ
ಬೆಳಕಿನ ಕಾಂತಿ ಹರಿಸಮ್ಮ
ನಿನ್ನ ಕಂದನ ಮೊರೆಯ ಕೇಳಮ್ಮ
ದಯಮಾಡಮ್ಮ, ಕೃಪೆದೋರಮ್ಮ
ಜ್ಞಾನಮಾರ್ಗಕೆ ದಾರಿ ತೋರು ಬಾರಮ್ಮ
ಹೇ ಭಾರತಿಯೇ, ಶಾರದಾ ಮಾತೆಯೆ
ಚಂದ್ರಶೇಖರ ಬಿ. ಎಚ್. ೨೩೬೯೧
3 ಕಾಮೆಂಟ್ಗಳು:
ಕ್ಷಣ ಚಿಂತನೆ ಸರ್,
ನಿಮ್ಮ ನವರಾತ್ರಿ ಹಬ್ಬದ ಶುಭದಿನದಲ್ಲಿ ತಾಯಿ ಶಾರದೆ ಬಗ್ಗೆ ಬರೆದ ಕವನ ತುಂಬಾ ಚೆನ್ನಾಗಿದೆ...
ನವರಾತ್ರಿ-ದಸರಾ ಹಬ್ಬದ ಶುಭಾಶಯಗಳು.
ದಸರಾ ಹಬ್ಬದ ಶುಭಾಶಯಗಳು, ಚಂದದ ಸಾಲುಗಳು
ಶಿವೂ ಮತ್ತು ಗುರುಮೂರ್ತಿ ಸರ್, ಧನ್ಯವಾದಗಳು.
ತಮಗೂ ಸಹ ದಸರಾ ಹಬ್ಬದ ಶುಬಾಶಯಗಳು.
ಸ್ನೇಹದಿಂದ,
ಚಂದ್ರು
ಕಾಮೆಂಟ್ ಪೋಸ್ಟ್ ಮಾಡಿ