ಬುಧವಾರ, ಸೆಪ್ಟೆಂಬರ್ 15, 2010

ಬಂಗಾರದ ಮನುಷ್ಯನ ೧೫೦ನೇ ಜನ್ಮದಿನ

ಬಂಗಾರದ ಮನುಷ್ಯ ಚಿತ್ರದಲ್ಲಿನ ಹಾಡಿನಲ್ಲಿ ಸರ್‍ ಎಂ. ವಿಶ್ವೇಶ್ವರಯ್ಯನವರನ್ನು ನೆನಪಿಸಿಕೊಂಡು ಬರೆದಿರುವ ಸಾಲು ಎಂದಿಗೂ ಸ್ಫೂರ್ತಿದಾಯಕವಾದುದು ಎನ್ನಬಹುದು.

"ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ ,
ಕನ್ನಂಬಾಡಿಯ ಕಟ್ಟದಿದ್ದರೆ..
ಆಗುತ್ತಿತ್ತೆ ಈ ನಾಡು ?
ಬಂಗಾರ ಬೆಳೆವ ಹೊನ್ನಾಡು...


ಶತಾಯುಷಿ ಭಾರತ ರತ್ನ ಸರ್‍ ಎಂ.ವಿ. ಎಂದೇ ಖ್ಯಾತರಾದ ಅವರಿಂದ ಅನೇಕ ಸಾಮಾಜಿಕ ಕಾರ್ಯಗಳು ಆಗಿವೆ. ಅದರಲ್ಲಿಯೂ ಅಣೆಕಟ್ಟುಗಳು, ವಿದ್ಯುತ್‌ಚ್ಛಕ್ತಿ, ಬ್ಯಾಂಕ್‌, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಹೀಗೆ ಹತ್ತು ಹಲವು ಕೆಲಸಗಳು ಈ ಭಾರತದೇಶಕ್ಕೆ ಅವರ ಕೊಡುಗೆಯಾಗಿವೆ.

ಇಂದಿಗೆ ಅವರು ಜನಿಸಿ (ಸೆಪ್ಟೆಂಬರ್‍ ೧೫, ೧೮೬೦) ೧೫೦ ವರ್ಷವಾಗುತ್ತಿದೆ. ಅಂತಹ ಮಹಾನ್‌ಚೇತನವನ್ನು ನೆನವ ದಿನವನ್ನಾಗಿ `ಇಂಜಿನಿಯರ್‍ಸ್ ದಿನ' ಎಂಬುದಾಗಿ ಕರೆದು ವಿವಿಧ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅವರ ಜೀವನಾದರ್ಶಗಳು ನಮ್ಮ ಯುವಪೀಳಿಗೆಗೆ ಸದಾ ಸ್ಫೂರ್ತಿಯುತವಾಗಿರಲಿ. ಹೊಸಹೊಸ ಆವಿಷ್ಕಾರಗಳಿಗೆ ಬುನಾದಿಯಾಗಿ ಭಾರತಮಾತೆಯು ಮತ್ತಷ್ಟು ಪ್ರಜ್ವಲಿಸಲಿ ಎಂದು ಆಶಿಸೋಣ.

ಜನನ: ಸೆಪ್ಟೆಂಬರ್‍ ೧೮೬೦
ಮರಣ: ಏಪ್ರಿಲ್‌ ೧೨, ೧೯೬೨ (೧೦೨ ವರ್ಷಗಳು)

ಚಿತ್ರ ಕೃಪೆ: ಗೂಗಲ್ ಹುಡುಕಾಟದಲ್ಲಿ ಮಂಡ್ಯ.ನಿಕ್.ಇನ್

9 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಅವರೊಬ್ಬ ಮಹಾನ್ ವ್ಯಕ್ತಿ, ಅವರ ೧೫೦ ನೆ ಜನ್ಮ ದಿನದ೦ದು ಪುಟ್ಟ ಬರಹದೊ೦ದಿಗೆ ನೆನಪಿಸಿದ್ದೀರಿ, ಅವರ ಬಗ್ಗೆ ಇನ್ನಷ್ಟು ಬರೆಯಿರಿ.

ಸೀತಾರಾಮ. ಕೆ. / SITARAM.K ಹೇಳಿದರು...

ಮಹಾನ್ ವ್ಯಕ್ತಿಯೊಬ್ಬರ ನೆನಪಿಸಿದ್ದೀರಿ. ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ಆ ಮಹಾನ ಚೇತನ ಸದಾ ಮನಸಿನಲ್ಲಿ ಇರುತ್ತಾರೆ

V.R.BHAT ಹೇಳಿದರು...

ಚಂದ್ರು ಸರ್, ಒಬ್ಬ ವಿಶ್ವೇಶ್ವರಯ್ಯ ಜನಿಸಿ ಕರ್ನಾಟಕವೇಕೆ ಭಾರತವನ್ನೇ ಬೆಳಗಿದರು, ಇಚ್ಛಾಶಕ್ತಿಯಿಂದ ಹಲವು ಆಗದ ಕೆಲಸಗಳನ್ನು ಮಾಡಿ ತೋರಿಸಿ ಬದುಕಿರುವಾಗಲೇ ದಂತಕಥೆಯಾದರು, ನಿಸ್ವಾರ್ಥರಾದ ಇಂತಹ ಶಿಸ್ತುಬದ್ಧ ಸಜ್ಜನ ಎಂಜಿನೀಯರ್ ರನ್ನು ನಾನು ನನ್ನ ಜೀವಿತದಲ್ಲಿ ಇದುವರೆಗೆ ಕಂಡಿಲ್ಲ, ಬಹುಶಃ ಅವರಿಗೆ ಅವರೇ ಸಾಟಿ ಹೊರತು ಬೇರಾರೂ ಅಲ್ಲ, ಸಕಾಲಿಕವಾಗಿ ಅವರನ್ನು ನೆನಪಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು.

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ ಹೇಳಿದರು...

ಅಂತಹ ಮಹಾನ್ ವ್ಯಕ್ತಿಯನ್ನು ನೆನೆಯಲು ಉತ್ತಮ ಅವಕಾಶ ...ನಿಮ್ಮ ಆಶಯ ಸಾಕಾರವಾಗಲಿ

balasubramanya ಹೇಳಿದರು...

ಮಂಡ್ಯದ ಜನರ ಜೀವನಾಡಿ ಕನ್ನಂಬಾಡಿ ಆಣೆಕಟ್ಟು ಕಟ್ಟಿ ಮಂಡ್ಯ ನೆಲಕ್ಕೆ ಹಸಿರ ಕಾಣಿಕೆ ನೀಡಿ ರೈತರ ಬಾಳಿಗೆ ಹಾಸ ಭಾಸ್ಯ ಬರೆದರೂ. ಇಂದಿಗೂ ಇವರ ನೆನಪುಗಳು ರೈತರ ಎತ್ತಿನ ಗಾಡಿಗಳ ಮೇಲೆ ಚಿತ್ರಗಳಾಗಿ ರಾರಾಜಿಸುತ್ತಿವೆ . ಈ ಭಾರತ ರತ್ನ ತಾಯಿ ಭಾರತಿಯ ಕೀರ್ತಿ ಪತಾಕೆಯನ್ನು ಏಡನ್ ನಗರದಲ್ಲೂ ಹಾರಿಸಿದ್ದು ವಿಶೇಷವೆ ಸರಿ. ನಿಮ್ಮ ಈ ಲೇಖನಕ್ಕೆ ನಾನಾ ಸಲಾಂ . ಶ್ರೀ ರಂಗ ಪಟ್ಟಣದ ಬಗ್ಗೆ ಕಾವೇರಿ ರಂಗ ಬ್ಲಾಗ್ http://shwethadri.blogspot.com ಗೆ ಭೇಟಿ ನೀಡಿ ನಿಮ್ಮ ಅನಿಸಿಕೆ ತಿಳಿಸಿ.

AntharangadaMaathugalu ಹೇಳಿದರು...

ಚಂದ್ರೂ....

ನಾವು ಮುದ್ದೇನ ಹಳ್ಳಿಗೆ ಹೋಗಿದ್ದು ಎಲ್ಲಾ ನೆನಪಾಯ್ತು. ನಿಜಕ್ಕೂ ಮಹಾನ್ ಚೇತನ, ಸಕಾಲ ಬರಹ ಹಾಕಿ ಎಲ್ಲರೂ ನೆನಪಿಸಿಕೊಳ್ಳುವಂತೆ ಮಾಡಿದ್ದೀರಿ. ಧನ್ಯವಾದಗಳು.

ಶ್ಯಾಮಲ

ಅನಂತ್ ರಾಜ್ ಹೇಳಿದರು...

ಕರ್ನಾಟಕ ಕೈಗಾರಿಕಾಕರಣದ ಮೂಲಧಾತುವಾಗಿದ್ದ ಸರ್ಎ೦ವಿ ಅವರ ಕಾರ್ಯವ್ಯಾಪ್ತಿ ದೇಶವ್ಯಾಪಿ ಮಾತ್ರವಲ್ಲದೆ ವಿದೇಶಕ್ಕೂ ಪಸರಿಸಿತ್ತು. ಅವರ ಜನ್ಮೋತ್ಸವವನ್ನು ಅಭಿಯ೦ತರ ದಿನಾಚರಣೆಯಾಗಿ ಆಚರಿಸುವುದರ ಮೂಲಕ ಅವರನ್ನು ನೆನಪಿಸಿಕೊಳ್ಳುತ್ತ ಕೃತಜ್ಞತೆಯನ್ನು ತೋರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಕೂಡ. ಉತ್ತಮ ವಿಚಾರ-ಮಾಹಿತಿಗಾಗಿ ಚ೦ದ್ರು ಅವರಿಗೆ ಧನ್ಯವಾದಗಳು.

ಅನ೦ತ್

ದಿನಕರ ಮೊಗೇರ ಹೇಳಿದರು...

ಚಂದ್ರು ಸರ್,
ಹೌದು... ಅವರ ಕೊಡುಗೆಗೆ ತಕ್ಕ ಸನ್ಮಾನ ಅವರಿಗೆ ಸಿಗಲಿಲ್ಲ..... ಈಗ ಕಟ್ಟಿರುವ ರಸ್ತೆ, ಸೇತುವೆ ಎರಡು ಮೂರು ವರ್ಷ ಬಂದರೆ ದೊಡ್ಡ ಸಾಧನೆ.... ಆದರೆ ವಿಶ್ವೇಶ್ವರಯ್ಯನವರು ಕಟ್ಟಿದ ಕಟ್ಟಡ ಆಣೆಕಟ್ಟುಗಳು ಇಂದಿಗೂ ಜೀವಂತ ವಾಗಿದೆ.... ಅವರ ಜಾಣ್ಮೆಗೆ ಒಂದು ದೊಡ್ಡ ಸಲಾಮ್.....