ನಿನ್ನೆಯ ದಿನ ದೂರದರ್ಶನ ವಾಹಿನಿಯೊಂದರಲ್ಲಿ ಇನ್ನು ಮುಂದೆ ನೀರನ್ನೂ ಸಹ ಪೆಟ್ರೋಲ್ಬಂಕಿನಲ್ಲಿ ಪೆಟ್ರೊಲ್, ಡೀಸೆಲ್ ಖರೀದಿಸಿದಂತೆ ಖರೀದಿಸುವ ದಿನಗಳೂ ಹತ್ತಿರವಿಲ್ಲ ಎಂದು ಚರ್ಚೆ ನಡೆಯುತ್ತಿತ್ತು. ಜಲ, ನೀರು, ಪಾನಿ, ವಾಟರ್ ಯಾವುದೇ ಹೆಸರಿನಿಂದ ಕರೆದರೂ ಇದು ಜಗತ್ತಿನ ಜೀವಿಗಳ ಜೀವನಾಡಿ. ಇದರ ಸದುಪಯೋಗ ಅಥವಾ ಅಲಭ್ಯ ಎಂತಹ ಪ್ರಬಲ ಹೊಡೆತ ಕೊಡುತ್ತದೆ ಎಂದು ಅರಿವಾಗುವುದು ನೀರಿಗಾಗಿ ಬವಣೆ ಪಟ್ಟಿದ್ದರೆ ಮಾತ್ರ ಅರ್ಥವಾಗುತ್ತದೆ. ನೀರಿಲ್ಲದೆ ಮರವಿಲ್ಲ ಗಿಡವಿಲ್ಲ, ಬೆಳೆಯಿಲ್ಲ ನೀರು ನೀರಲ್ಲದೆ ಬೇರಿಲ್ಲ ಒಟ್ಟಿನಲ್ಲಿ ಜಗದಲ್ಲಿ ಜೀವಿಗಳಿಲ್ಲ. ಸಕಲ ಜೀವಗಳ ನಾಡಿ ಮಿಡಿತ ಈ ಜಲರಾಶಿ. ಅದು ಕಲುಷಿತ ಅಥವಾ ಕೊರತೆಯುಂಟಾದರೆ ಆಗುವ ತೊಂದರೆಗಳು ಅನೇಕ. ಇಂದು ಹಳ್ಳಿ, ನಗರ, ಪಟ್ಟಣ, ರಾಜ್ಯ, ದೇಶ ಹೀಗೆ ನೀರಿಲ್ಲದೆ ಬದುಕಿಲ್ಲ. ಒಂದು ಲೀಟರ್ ನೀರಿಗೆ ರೂ.೧೫ರಿಂದ ೨೦ರ ವರೆಗೂ ಬೆಲೆಯಿಟ್ಟು ಮಾರುತ್ತಾರೆ.
ಮಾರ್ಚ್ ೨೨. ಇಂದು ವಿಶ್ವ ಜಲದಿನ ಎಂಬುದಾಗಿ ಆಚರಿಸುತ್ತಾರೆ. ಈ ವರ್ಷದ ಘೋಷಣೆ " ವಾಟರ್ ಫಾರ್ ಸಿಟೀಸ್'. ಇದು ಸೂಕ್ತವಾದ ಘೋಷಣೆಯೇ ಆಗಿದೆ ಎನ್ನಬಹುದು. ಹಳ್ಳಿ, ಹೊಲಗದ್ದೆ, ಮನೆ ಮಾರು ಎಲ್ಲ ಬಿಟ್ಟು ಇಂದು ಜನಜೀವನ ಪಟ್ಟಣಗಳಿಗೆ ವಲಸೆಯಾಗುತ್ತಿರುವುದು, ನೀರಿನ ಹಾಹಾಕಾರವಿರುವುದು ಇವೆಲ್ಲ ಸೇರಿಯೇ ಹೀಗೆ ಘೋಷಣೆ ಮಾಡಿರಬಹುದು (ಇದು ನನ್ನ ಅನಿಸಿಕೆಯಷ್ಟೆ). ವಿಶ್ವ ಜಲ ದಿನದಂದಾದರೂ ಕಡಿಮೆ ನೀರಿನ ಬಳಕೆ ಮಾಡುತ್ತ ಈ ಬೇಸಿಗೆಯನ್ನು ನೀರಿನ ಬವಣೆಯಿಂದ ತೊಂದರೆಗೊಳಗಾಗದಂತೆ ಎಲ್ಲರಿಗೂ ನೀರು ಸಿಗಲೆಂದು ಜಲರಾಶಿಯನ್ನು ಕೇಳಿಕೊಳ್ಳುತ್ತ ಎಲ್ಲರಲ್ಲೂ ಜಾಗೃತಿ ಮೂಡಿಬರಲಿ.
ಹೆಚ್ಚಿನ ಮಾಹಿತಿಗಾಗಿ ಈ ಅಂತರ್ಜಾಲಗಳನ್ನು ನೋಡಬಹುದು:
http://www.uneca.org/awich/Announcements%202010/WWD%202011%20First%20AnnouncementREV.pdf
http://www.worldwaterday2011.org/
http://www.indiawaterportal.org/
http://expressbuzz.com/cities/bangalore/quenching-bangalore%E2%80%99s-thirst-is-a-big-challenge/258686.html
ಚಂದ್ರಶೇಖರ ಬಿ.ಎಚ್.
೨೨-೦೩-೨೦೧೧
೨೨-೦೩-೨೦೧೧
ಕಳೆದ ವರ್ಷದ ಲೇಖನ ಇಲ್ಲಿದೆ: http://kshanachintane.blogspot.com/2010/03/blog-post_22.html
3 ಕಾಮೆಂಟ್ಗಳು:
ಸಕಾಲಿಕ ಬರಹ.ಜಲಜಾಗೃತಿ ಇ೦ದಿನ ಅಗತ್ಯ
ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಚಂದ್ರೂ..
ಬರಹ ಕಾಳಜಿಯಿಂದ ಕೂಡಿದೆ. ಎಲ್ಲರೂ ಅರಿತು ಜಲ ಸಂರಕ್ಷಣೆ ಮಾಡಬೇಕು...
ಶ್ಯಾಮಲ
ಕಾಮೆಂಟ್ ಪೋಸ್ಟ್ ಮಾಡಿ