ಅಚ್ಚರಿಯಾಯಿತು. ನಾನು ಬಹಳ ದಿನಗಳಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ಕೇ ಬಿಟ್ಟಿತು. ಅದೂ ಮೊದಲ ಬಾರಿಗೆ ಪುಸ್ತಕವನ್ನು ಜೋಡಿಸಿಟ್ಟಿದ್ದ ಪೆಟ್ಟಿಗೆಯೊಳಗೆ ತಕ್ಷಣವೇ ಸಿಕ್ಕಿತ್ತು. ಖುಷಿಯಾಗಿತ್ತು. ಅದು, ಗೊರೂರು ರಾಮಸ್ವಾಮಿ ಅಯ್ಯಂಗಾರರ `ಅಮೇರಿಕದಲ್ಲಿ ಗೊರೂರು'. ಬಹಳ ಖುಷಿಯಾಯಿತು. ಹೀಗೆಯೆ ಇನ್ನೂ ಬೇರೆ ಬೇರೆ ಪುಸ್ತಕಗಳ ಹೆಸರನ್ನು, ಟಿಪ್ಪಣಿಗಳನ್ನು ಓದುತ್ತಾ/ಹುಡುಕುತ್ತ ಹೋದಂತೆ, ಮತ್ತೊಂದು ಅಪರೂಪದ ಪುಸ್ತಕ ಸಿಕ್ಕಿತು. ಒಬ್ಬರಿಗೆ ಒಂದು ಪುಸ್ತಕ ಉಚಿತ ಎಂದು ಪದೇ ಪದೇ ಬಿತ್ತರಿಸುತ್ತಿದ್ದರು. ಎರಡು ಪುಸ್ತಕದಲ್ಲಿ ಯಾವುದನ್ನು ತೆಗೆದುಕೊಳ್ಳುವುದು? ಎಂಬ ಯೋಚನೆ ಶುರುವಾಯಿತು. ಸರಿ. `ಅಮೇರಿಕದಲ್ಲಿ ಗೊರೂರು' ಪ್ರಕಾಶನ ಸಂಸ್ಥೆಯ ಹೆಸರನ್ನು ನೋಡಿದೆ. ಸ್ನೇಹಿತರೊಂದಿಗೆ ಚರ್ಚಿಸಿದಾಗ, ಈ ಪುಸ್ತಕ ಸಾಹಿತ್ಯ ಪರಿಷತ್ತಿನಲ್ಲಿ ಸಿಗುತ್ತದೆ. ಆದರೆ, ಇನ್ನೊಂದು (ಆಯ್ಕೆ ಮಾಡಿದ್ದ ಮತ್ತೊಂದು ಪುಸ್ತಕ) ಅಪರೂಪದ್ದು. ಅದು ಸಿಗುವುದು ಕಷ್ಟ ಎಂದರು. ನಾನೂ ಯೋಚಿಸಿದೆ. ಕೊನೆಗೆ `.... ಗೊರೂರು' ಬಿಟ್ಟು `ಅಪರೂಪದ' ಪುಸ್ತಕ ತೆಗೆದುಕೊಂಡೆ.
ಅದು ಕೆ.ವಿ. ಅಯ್ಯರ್ ಅವರ `ರೂಪದರ್ಶಿ'. ಇದು ೧೯೫೦ ರ ಆಸುಪಾಸಿನಲ್ಲಿ ರೀಡರ್‍ಸ್ ಡೈಜೆಸ್ಟಿನಲ್ಲಿ ಪ್ರಕಟವಾಗಿದ್ದ ಒಂದೆರಡು ಪುಟದ ಬರಹವೇ ಬೃಹತ್ ಕಾದಂಬರಿಯಾಗಿ ಶ್ರೀ ಕೆ.ವಿ. ಅಯ್ಯರ್ ಅವರಿಂದ ಬರೆಯಲ್ಪಟ್ಟಿದ್ದು. `ರೂಪದರ್ಶಿ' ಓದುತ್ತಿದ್ದೇನೆ. ಸದ್ಯಕ್ಕೆ ಇಷ್ಟು ಸಾಕೆನಿಸಿದೆ. ಪೂರ್ತಿ ಓದಿದ ಮೇಲೆ `ರೂಪದರ್ಶಿ' ಯ ಬಗ್ಗೆ ಬರೆಯುವ ಎಂಬ ಆಲೋಚನೆ ಇದೆ. ನೋಡೋಣ....
ಮತ್ತೊಬ್ಬ ಮಿತ್ರ ಹರ್ಷ ಸಾಲಿಮಠರೂ ಸಿಕ್ಕದ್ದರು. ಒಟ್ಟಿನಲ್ಲಿ ಒಂದು ಪುಸ್ತಕ ಪರಿಷೆಯಿಂದಾಗಿ ಬಹಳಷ್ಟು ದಿನಗಳಿಂದ ಭೇಟಿಯಾಗದಿದ್ದ ಮಿತ್ರರ ಭೇಟಿಯಾಗಿತ್ತು.
ಚಂದ್ರಶೇಖರ ಬಿ.ಎಚ್.
2 ಕಾಮೆಂಟ್‌ಗಳು:
ಬಹಳ ಅಪರೂಪದ ಪುಸ್ತಕ ಸಿಕ್ಕಿದೆ.ಓದಿದ ಮೇಲೆ ಅದರ ಬಗ್ಗೆ ಹೇಳಿ.ನಮಸ್ಕಾರ.
ಗೋರೂರು ಅವರ 'ಹಳೆಯ ಪಳೆಯ ಮುಖಗಳು' ಚೆನ್ನಾಗಿದೆ ಸಿಕ್ಕರೆ ಓದಿ ಸರ್. if i am not wrong IBH publication
ಕಾಮೆಂಟ್ ಪೋಸ್ಟ್ ಮಾಡಿ