ಗುರುವಾರ, ಮಾರ್ಚ್ 12, 2009

ಅಜ್ಞಾನತಿಮಿರಾಂಧಸ್ಯ

"Ignorance is the night of the mind, but a night without moon and star." -Confucius
ಈ ಮೇಲಿನ ಮಾತನ್ನು ಕನಫ್ಯೂಷಿಯಸ್ ಹೇಳಿಕೆಯ ಅನುವಾದವನ್ನು ಅಥವಾ ಭಾವಾರ್ಥವನ್ನು ಭಾರತೀಯರ ಸಂಸ್ಕೃತ ಸುಭಾಷಿತಗಳಲ್ಲಿ, ಶ್ಲೋಕಗಳಲ್ಲಿ ಕಾಣಬಹುದು. ಜ್ಞಾನವೇ ಬೆಳಕು, ಅಜ್ಞಾನವೇ ಇರುಳು ಎಂದು ಕಸ್ತೂರಿ ಕನ್ನಡದಲ್ಲಿಯೂ ಹೇಳಬಹುದು. ಇಲ್ಲಿಯೂ ಸಹ ಜ್ಞಾನವೆಂದರೆ ಅದೊಂದು ರೀತಿಯ ಪ್ರಖರ ಜ್ಯೋತಿಯಂತೆ, ಸೂರ್ಯನಂತೆ. ಅದೇ ಅಜ್ಞಾನವಾದರೆ, ನೀರಸ ರಾತ್ರಿಯಲ್ಲಿ ಅದರಲ್ಲಿಯೂ ಚಂದ್ರನ ಬೆಳಕಿಲ್ಲದ ಮೋಡಮುಸುಕಿದ ಆಕಾಶದಲ್ಲಿ ಇರುವಂತೆಯೇ ಆಗಿದ್ದು ಕತ್ತಲಕೂಪದಲ್ಲಿ ಬೀಳುವುದೇ ಆಗಿದೆ. ಶ್ರೀ ಗುರು ಸ್ತೋತ್ರದಲ್ಲಿ ಗುರುವಿನ ಮಹತ್ವವನ್ನು ಸಾರಿದ್ದು ಹೀಗೆ ಹೇಳಲಾಗಿದೆ.
ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮ:
ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಕಣ್ಣುಗಳನ್ನು ಜ್ಞಾನವೆಂಬ ಶಲಾಕೆ (ಸೂಜಿ) ಯಿಂದ ತೆರೆದು ಅಜ್ಞಾನವನ್ನು ಹೊಡೆದೋಡಿಸುವವರು ಯಾರೋ ಅಂತಹ ಗುರುವಿಗೆ ನಮನಗಳು.
ಫೋಟೋ: ಚಂದ್ರಶೇಖರ ಬಿ.ಎಚ್.,೨೦೦೯

5 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ- ಹೇಳಿದರು...

ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಈಶ್ವರ ಎಂದು ತಿಳಿದು ಅಂತಹ ಗುರುವಿಗೆ ಶತ ಪ್ರಣಾಮಗಳು ಎನ್ನುವ ಶ್ಲೋಕವೂ ಇದೆ. ಹಿಂದಿನ ಕಾಲದಲ್ಲಿ.. ಅಂತಹ ಉತ್ತಮ ಗುರು ಶಿಷ್ಯರಿಗೆ ಸಿಕ್ಕಿರುತ್ತಿದ್ದರು. ಹಿಂದೆ ಗುರು, ಮುಂದೆ ಗುರಿಯಿದ್ದರೆ ಏನನ್ನೂ ಸಾಧಿಸಬಹುದೆಂದು ಸ್ವತಃ ಏಕಲವ್ಯನೇ ತೋರಿಸಿದ್ದಾನೆ.

ಸುಂದರ ಚಿತ್ರಗಳು.

ತಮಸೋಮಾ ಜ್ಯೋತಿರ್ಗಮಯ....

ಕ್ಷಣ... ಚಿಂತನೆ... Thinking a While.. ಹೇಳಿದರು...

ಧನ್ಯವಾದಗಳು ಮೇಡಂ. ಗುರು ಸ್ತೋತ್ರ ಪೂರ್ತಿಯಾಗಿ ಬರೆಯೋಣವೆಂದು ಕೊಂಡಿದ್ದೆ. ಆದರೆ ಸಂದರ್ಭಕ್ಕೆ ಅನುಸರಿಸಿ ೨ ಸಾಲನ್ನು ಮಾತ್ರ ಬರೆದೆ. ಮುಂದೊಮ್ಮೆ ಗುರು ಸ್ತೋತ್ರದ ಎಲ್ಲ ಶ್ಲೋಕಗಳನ್ನು ಬರೆಯಬೇಕೆಂದಿದ್ದೇನೆ.

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕ್ಷಣ ಚಿಂತನೆ...

ತುಂಬಾ ಮಾರ್ಮಿಕವಾಗಿದೆ...

shivu ಹೇಳಿದರು...

ಸರ್,

ನಿಮ್ಮ ಲೇಖನಕ್ಕೆ ತಕ್ಕಂತೆ ನಾನು ಸದ್ಯಕ್ಕೆ ಇದೇ ಸ್ಲೋಕವನ್ನು ಪ್ರತಿದಿನ ಸಂಜೆ ಹೇಳುತ್ತಿದ್ದೇನೆ...ಕಾರಣ ನೀವು ಹೇಳಿದಂತೆ ನಮಗೆ ಗುರು ಸಿಕ್ಕಿದ್ದಾರೆ...ಅವರಿಂದ ಪ್ರತಿಸಂಜೆ ಕಾಯಕಲ್ಪ ಶಿಬಿರದಲ್ಲಿ ಈ ಮಂತ್ರವನ್ನು ಪ್ರತಿದಿನ ಹೇಳುತ್ತಿದ್ದೇವೆ...ಧನ್ಯವಾದಗಳು...

ಕ್ಷಣ... ಚಿಂತನೆ... Thinking a While.. ಹೇಳಿದರು...

ಶಿವು ಅವರೆ, ನಿಮ್ಮ ಪ್ರತಿಕ್ರಿಯೆಗೆ ಧನ್ನವಾದಗಳು.

ವಿಶ್ವಾಸದೊಂದಿಗೆ,