ಸೋಮವಾರ, ಮಾರ್ಚ್ 2, 2009

ideal ಹುಡುಕಾಟ ಮತ್ತು ದೇವರು


ಹುಡುಕಾಟ - ಇಂದು ನನ್ನ ಮೊಬೈಲಿಗೆ ಒಂದು ಸಂದೇಶವನ್ನು ನನ್ನ ಸಹೋದ್ಯೋಗಿಯ ಪುಟ್ಟ ಮಗಳು ಕಳಿಸಿದ್ದಳು. ಅದು ಹೀಗಿತ್ತು.
Never keep on going behind the things that you know you won't get. Instead try the one which is always near your hand.
ಈ ಮೇಲಿನ ಮಾತು ಎಷ್ಟು ಔಚಿತ್ಯಪೂರ್ಣದ್ದು. ಈ ಮಾತುಗಳನ್ನು ನಾವು ಲೌಕಿಕ ಹಾಗೂ ಆಧ್ಯಾತ್ಮಿಕವಾಗಿ ಯೋಚಿಸಿದರೆ ಹೇಗಿರುತ್ತದೆ? ಇದನ್ನೇ ಶ್ರೀ ರಾಮಕೃಷ್ಣ ಪರಮಹಂಸರು ಹೀಗೆ ಹೇಳುತ್ತಿದ್ದರಂತೆ. "ಮನೆಯ ಹತ್ತಿರದಲ್ಲಿಯೇ ಇರುವ ದೇವಮಂದಿರವನ್ನು ಬಿಟ್ಟು ದೂರದೂರದ ಊರುಗಳಾಚೆ ಇರುವ ದೇವಾಲಯಗಳಿಗೆ ಜನರು ಹೋಗುವುದರಲ್ಲಿ ಆಸಕ್ತರು" ಎಂದು. ಇದನ್ನೇ ಕವಿವಾಣಿಯೊಂದು "ಎಲ್ಲೋ ಹುಡುಕುವೆ ಇಲ್ಲದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ..." ಎಂಬುದನ್ನು ನೆನೆಯಬಹುದು. ಹಾಗೆಯೇ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: In one word, this ideal is that you are divine. ನೀವೇನಂತೀರಿ ?
ಫೋಟೋ: ಚಂದ್ರಶೇಖರ ಬಿ.ಎಚ್. ಡಿಸೆಂಬರ್‍ ೨೦೦೭

4 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ಹೀಗೆ ಅಲೆದಾಡುತ್ತಾ ನಿಮ್ಮ ಬ್ಲಾಗಿಗೆ ಬಿದ್ದೆ...ಮೊದಲ ಏಟಿಗೆ ನನಗೆ ಅದ್ಯಾತ್ಮಿಕತೆ ದರ್ಶನ....ನನಗೂ ಅದ್ಯಾತ್ಮದಲ್ಲಿ ತುಂಬಾ ಆಸಕ್ತಿಯಿದೆ....
ನಿಮ್ಮ ಬರವಣಿಗೆ ಸೆಳೆಯುತ್ತಿದೆ...ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತಿದ್ದೇನೆ...
ಆಹಾಂ! ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ....ಅದರಲ್ಲಿ ಫೋಟೋಗಳಿವೆ ಮತ್ತು ಲೇಖನಗಳಿವೆ....ಸದ್ಯಕ್ಕೆ ಮನಸಾರೆ ನಗಲು....ನಡೆದಾಡುವ ಭೂಪಟವನ್ನು ನೋಡಲು ಬನ್ನಿ....
ಪ್ರೀತಿಯಿಂದ
ಶಿವು.

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ,

ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಹೀಗೆಯೇ ಪ್ರೋತ್ಸಾಹ ನಿಮ್ಮಿಂದ ಬರುತ್ತಿರಲಿ. ನಿಮ್ಮ ಛಾಯಾಕನ್ನಡಿಯಲ್ಲಿ ಆಗಾಗ ಇಣುಕುತ್ತಿರುತ್ತೇನೆ. ಸದ್ಯಕ್ಕೆ ಇಷ್ಟು ...

ಸಿಗೋಣ.
ಧನ್ಯವಾದಗಳು ಮತ್ತೊಮ್ಮೆ.

Ittigecement ಹೇಳಿದರು...

ಕ್ಷಣ ಚಿಂತನೆ..

ನಿಮ್ಮ ಮಾತು.., ನುಡಿಗಟ್ಟು..

ವಿವರಣೆ..
ಎಲ್ಲವೂ ಚೆನ್ನಾಗಿವೆ..

ಮುಂದುವರೆಸಿರಿ..

ಅಭಿನಂದನೆಗಳು..

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಅವರೆ ನೀವುಗಳು ನೀಡುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದಗಳು. ಸಾಧ್ಯವಾದಾಗಲೊಮ್ಮೆ ಭೇಟಿಯಾಗೋಣ.