ಗುರುವಾರ, ಏಪ್ರಿಲ್ 2, 2009

ಶ್ರೀರಾಮ ನವಮಿ
ಶ್ರೀ ವಿರೋಧೀ ನಾಮ ಸಂವತ್ಸರ ಚೈತ್ರ ಮಾಸ ವಸಂತ ಋತು ಶುಕ್ಲ ಪಕ್ಷದ ನವಮಿಯಂದು ಪುರಷೋತ್ತಮ ಶ್ರೀ ರಾಮನ ಜನ್ಮದಿನ. ಈ ದಿನವನ್ನು ಶ್ರೀರಾಮ ನವಮಿ ಎಂದೇ ಕರೆಯುತ್ತಾರೆ. ಶ್ರೀ ರಾಮನವಮಿ ಆಚರಣೆಯನ್ನು ಭಕ್ತಿಯಿಂದ ಆಚರಿಸುತ್ತಾರೆ. ಈ ದಿನದಂದು ಪಾನಕ, ಕೋಸಂಬರಿ ಸಮಾರಾಧನೆಯನ್ನು ಎಲ್ಲೆಲ್ಲಿಯೂ ಕಾಣಬಹುದು. ಹಳ್ಳಿಗಳಲ್ಲಿ, ನಗರಗಳಲ್ಲಿ ವಿಶೇಷವಾಗಿ ಶ್ರೀರಾಮ ನವಮಿ ಕಾರ್ಯಕ್ರಮಗಳು ಸಂಗೀತ ದಿಗ್ಗಜರಿಂದ ಗಾಯನ, ಹೋಮ-ಹವನ ಇತ್ಯಾದಿಗಳು ನಡೆಸಲ್ಪಡುತ್ತವೆ.
ಶ್ರೀ ಪುರಂದರದಾಸರು ಹೀಗೆ ಕೇಳುತ್ತಾರೆ.
ರಾಮ ಮಂತ್ರವ ಜಪಿಸೋ ಹೇ ಮನುಜ


ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ


ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ
ಹಾಗೆಯೇ,
ರಾಮಾ ಎಂಬ ಎರಡಕ್ಷರದ ಮಹಿಮೆಯನು


ಪಾಮರರು ತಾವೇನು ಬಲ್ಲಿರಯ್ಯಾ?ಶ್ರೀ ರಾಮ ನಾಮದ ಬಗ್ಗೆ ಮಹಾತ್ಮಾಗಾಂಧಿಯವರಿಗಿದ್ದಂತಹ ಭಾವನೆಯನ್ನು ಅವರು ತಮ್ಮ My Experiments with Truth ನಲಲಿ ಹೀಗೆ ಹೇಳುತ್ತಾರೆ:
"To me...Rama, described as the Lord of Sita, son of Dasharatha, is the all-powerful essence whose name, inscribed in the heart, removes all suffering-mental, moral and physical. (H, 2-6-1946, p158)"
[http://www.mkgandhi.org/momgandhi/chap15.htm]
ಶ್ರೀ ತುಲಸೀದಾಸರ ಒಂದು ರಚನೆ:
ರಾಮ ಜಪು ರಾಮ ಜಪು ರಾಮ ಜಪು ಬಾವರೇ
ಘೋರ ಭವನೀರನಿಧಿ ನಾಮ ನಿಜ ನಾವ ರೇ
ಏಕ ಹೀ ಸಾಧನ ಸಬ ರಿದ್ಧಿ ಸಿದ್ಧಿ ಸಾಧಿ ರೇ
ಗ್ರಸೇ ಕಲಿ ರೋಗ ಜೋಗ ಸಂಜಮ ಸಮಾಧಿ ರೇ
ಭಲೋ ಜೋ ಹೈ ಪೋಚ ಜೋ ಹೈ ದಾಹಿನೋ ಜೋ ಬಾಮ ರೇ
ರಾಮನಾಮ ಹೀ ಸೋ ಅಂತ ಸಬ ಹೀ ಕೋ ಕಾಮ ರೇ
ಜನ ನಭಬಾಟಿಕ ರಹೀ ಹೈ ಫಲಿ ಫೂಲಿ ರೇ
ಧುವಾ ಕೈಸೇ ಧೌರಹರ ದೇಖಿ ತೂನ ಭೂಲಿ ರೇ
ರಾಮ ನಾಮ ಛಾಡಿ ಜೋ ಭರೋಸೋ ಕರೈ ಔರ ರೇ
ತುಲಸೀ ಪರೋಸೋ ತ್ಯಾಗಿ ಮಾಗೈ ಕೂರ ಕೌರ ರೇ
-- ತುಲಸೀದಾಸ
ಎಲ್ಲರಿಗೂ ಶ್ರೀ ರಾಮ ರಕ್ಷೆಯಿರಲಿ.
(ಇಲ್ಲಿ ಶ್ರೀರಾಮನ ಗೀತೆಗಳನ್ನು ಓದಿ/ ಕೇಳಿ ಆನಂದಿಸಬಹುದು http://bhakthigeetha.blogspot.com/ )

2 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ತಮಗೆ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು

ಕ್ಷಣ... ಚಿಂತನೆ... Thinking a While.. ಹೇಳಿದರು...

ಇಂಚರ ಅವರೆ,

ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.

ದಿನದಲ್ಲೊಂದು `ಕ್ಷಣ' ಈ ತಾಣಕ್ಕೆ ನಿಮ್ಮ ಭೇಟಿಯಾಗುತ್ತಿರಲಿ ಮತ್ತು ನಿಮ್ಮೆಲ್ಲ ಅನಿಸಿಕೆಗಳು ವ್ಯಕ್ತವಾಗುತ್ತಿರಲಿ.

ವಿಶ್ವಾಸದಿಂದ,