-----------
ಆ ದಿನಗಳು..
-----------
ಶಾಲೆಯಲ್ಲಿ ಕಲಿತ ಆ ದಿನಗಳು. ನಮ್ಮಗಳಿಗೆ ಆ ದಿನಗಳಲ್ಲಿ ಪಾಠ ಹೇಳಿಕೊಟ್ಟ ಶಿಕ್ಷಕಿಯರಲ್ಲಿ ಕೆಲವರನ್ನಾದರೂ ನಾವು ಮರೆತಿರುವುದಿಲ್ಲ. (ಶಿಕ್ಷಕರು ಸಂಖ್ಯೆ ಕಡಿಮೆಯಿದ್ದ ಸಂದರ್ಭಗಳೇ ಜಾಸ್ತಿ). ಮಿಸ್/ಟೀಚರ್ ಎಂದೇ ಕರೆಯುತ್ತಿದ್ದ ಆ ದಿನಗಳ ನೆನಪು ಮತ್ತೆ ನನಗೆ ಆಗಿದ್ದು ಮೊನ್ನೆ ನಮ್ಮ ಟೀಚರುಗಳನ್ನು ಭೇಟಿಮಾಡಲು ಹೊರಟಾಗ. ಹೌದು. ಬಹಳ ದಿನಗಳಿಂದ... ಅಲ್ಲ ಕೆಲವಾರು ತಿಂಗಳುಗಳಿಂದ ಇವರನ್ನೆಲ್ಲ ಭೇಟಿ ಮಾಡಬೇಕೆಂಬ ಕಾತುರತೆ ಇತ್ತು. ಆ ದಿನ ಬಂದೇ ಬಂತು. ಕಾರಣ ಹಲವು ಬಾರಿ ಆ ದಿಕ್ಕಿನಲ್ಲಿಯೇ ಹೋಗಿದ್ದರೂ ಸಹ ಕೆಲವಾರು ಕಾರಣಗಳಿಂದಾಗಿ ಅವರನ್ನೆಲ್ಲ ಮಾತಾಡಿಸಿ ಬರಲು ಆಗುತ್ತಿರಲಿಲ್ಲ. ಮೊನ್ನೆ ೫ನೇ ಎಪ್ರಿಲ್, ಹಿರಿಯರ ದಿನದಂದು ನನ್ನೊಬ್ಬ ಟೀಚರನ್ನು ಮಾತಾಡಿಸಿ ಬಂದಾಗ ಆದ ಸಂತಸ .... ಹೇಳಲು ಪದಗಳು, ವಾಕ್ಯಗಳು ಇವೆಲ್ಲ ಮೀರಿದವುಗಳು. ಅವೆಲ್ಲ ಫ್ಲಾಷ್‌ಬ್ಯಾಕ್ಗಳು - ನೆನಪಿನಂಗಳಕ್ಕೆ ಹಾರಿದವು. ಅವುಗಳ ಪುನರ್ಮನನ ಹೀಗಿದೆ.
----------------------
ನಾವ್ ನಾಲ್ವರು ಸ್ನೇಹಿತರು ಸೇರಿ ಹೋಗಿದ್ದು ೧೯೯೧ ಡಿಸೆಂಬರ್ ೨೪ರಂದು. ಆದರೆ ಏಪ್ರಿಲ್ ೫ ರಂದು ನಾನೊಬ್ಬನೇ ಹೋಗಿದ್ದೆ.
-----------------------
ಮೊನ್ನೆ ದಿನ ಕೂಡ ಇದೇ ಭಾವನೆ ವ್ಯಕ್ತವಾಯಿತು. ಜೊತೆಗೆ ಅವರಿಗೆ ನಿವೃತ್ತಿಯೂ ಆಗಿದೆ. ಒಂದಿಬ್ಬರು ಮಾತ್ರ ಇನ್ನೂ ಸರ್ವಿಸ್‌ನಲ್ಲಿದ್ದಾರೆ ಎಂದು ತಿಳಿಯಿತು. ನಂತರ ಮಾತುಕತೆಯೊಡನೆ ಮೊದಲಿನ ಶಿಕ್ಷಣ ಪದ್ಧತಿ, ಈಗಿನ ಪರಿಸ್ಥಿತಿ ಇವೆಲ್ಲ ನೆನಪಿಸಿಕೊಂಡರು. ಯಾಕೆಂದರೆ ಅವರ ಮೊಮ್ಮಗನ ಶಾಲೆಯ ಬಗ್ಗೆ ವಿಚಾರಗಳು ಹರಿದಾಡಿದಾಗ, ಆ ದಿನಗಳಲ್ಲಿ ನೀಡುತ್ತಿದ್ದ ಶಿಕ್ಷಣ + ಶಿಕ್ಷೆ, ಹೋಂವರ್ಕ್. ಜೊತೆಗೆ ಮಕ್ಕಳ ಜೊತೆಯಲ್ಲಿಯೇ ಬೆರೆಯುತ್ತಿದ್ದದ್ದು, ಆಟ + ಪಾಠ, ಇವೆಲ್ಲ ನೆನಪಿಸಿಕೊಂಡರು.
-------------
ಹೀಗೊಂದು ನೆನಪನ್ನು ಹಿರಿಯರದಿನದ ನೆನಪಿನಲ್ಲಿ ಬರೆಯಲು ಸಾಧ್ಯವಾಯಿತು.
1 ಕಾಮೆಂಟ್:
ನಿಜ, ಹಳೆಯ ನಮ್ಮ ಶಿಕ್ಷಕರನ್ನು ನೋಡಿದಾಗ ಬರುವ ಗೌರವ ಈಗಿನ ಉಪನ್ಯಾಸಕರ ಮೇಲೆ ಇರುವುದಿಲ್ಲ. ಆ ದಿನಗಳೇ ಹಾಗೆ.
ಕಾಮೆಂಟ್ ಪೋಸ್ಟ್ ಮಾಡಿ