ಗುರುವಾರ, ಏಪ್ರಿಲ್ 9, 2009

ತಾಳೆ ಹೂವ ಎದೆಯಿಂದಾ... ಕೇರೆಹಾವುಗಳ ನಾ ಕಂಡೆ

ನಿನ್ನೆ ದಿನ ಬೆಳಗ್ಗೆ ೯.೪೫ಕ್ಕೆ ನಮ್ಮ ಕಚೇರಿಯ ನನ್ನ ಕೊಠಡಿಗೆ ಆಗಿನ್ನೂ ಕಾಲಿಡುತ್ತಿದ್ದೆ. ಅಷ್ಟರಲ್ಲಿಯೇ ಕ್ಯಾಮೆರಾ ತಂದಿದೀರಾ? ಇಲ್ಲಿ ತಗೊಂಬಾಪ್ಪಾ ಎಂದು ಕೇಳಿ ಹೊರಬಂದರೆ... ಬೇಗ ತನ್ನಿ, ಫೋಟೋ ತೊಗೊಳ್ಳಿ ಎಂದರು ಸಹೋದ್ಯೋಗಿಯೊಬ್ಬರು. ಸರಿ ಎಂದು ಅವರ ಜೊತೆ ಹೊರಟೆ. ಕಚೇರಿಯ ಕಿಟಕಿಯಿಂದ ನೋಡಿದರೆ, ಅಲ್ಲಿ:

೧೯೮೪ ರಲ್ಲಿ ಬಿಡುಗಡೆಯಾದ ಡಾ. ವಿಷ್ಣುವರ್ಧನ್‌ ಮಾಧವಿ, ಆರತಿ, ನಟಿಸಿರುವ `ಖೈದಿ' ಚಿತ್ರದ ಹಾಡು! ನೀವೂ ಸಹ ಆ ಹಾಡನ್ನು ಕೇಳಿ ಅಥವಾ ನೋಡಿಯೇ ಇರುತ್ತೀರಿ. ಆ ಹಾಡಿನ ಸೊಗಸಾದ ಸಾಲು...

ತಾಳೆ ಹೂವ ಎದೆಯಿಂದಾ, ಜಾರಿ ಜಾರಿ ಹೊರಬಂದಾ
ನಾಗಿಣಿ ನಾನಾದಾಗ, ನಿನ್ನರಸಿ ಬಂದಾಗ
ಕದ್ದೋಡುವೆಯೋ, ಮುದ್ದಾಡುವೆಯೋ......

ಅಲ್ಲಿ ದೂರದಲ್ಲಿ ಎರಡು ಹಾವುಗಳು ಮೇಲಿನ ಹಾಡನ್ನು ನೆನಪಿಸುವಂತೆ ಆಡುತ್ತಿದ್ದವು. ಬೆಳಗಿನ ಬಿಸಿಲು ಜೊತೆಗೆ ಅಲ್ಲಲ್ಲಿ ಮರದ ನೆರಳು ಇವೆಲ್ಲದರ ನಡುವೆ ಹಾವುಗಳ ಆಟ ಸಾಗಿತ್ತು. ಆ ದೃಶ್ಯವನ್ನು ಸೆರೆಹಿಡಿದದ್ದಾಯಿತು (ಕ್ಯಾಮೆರಾದಲ್ಲಿ).

ಆದರೆ ಹಾಡಿನ ಸಾಲಿನಲ್ಲಿರುವಂತೆ ಇಲ್ಲಿ ಇದ್ದದ್ದು ಬೇರೆ ಜಾತಿಯ ಮರಗಿಡಗಳೇ ಹೊರತು ತಾಳೆ ಹೂವಿನ ವನವಲ್ಲ. ಒಟ್ಟಿನಲ್ಲಿ ಇದೂ ಒಂದು ಕ್ಷಣ ನನ್ನ ನೆಚ್ಚಿನ ಚಿತ್ರನಟನ ನೆನಪನ್ನು ತರಿಸಿತು.

ಡಾ. ವಿಷ್ಣವರ್ಧನ್ ಅವರ http://www.vishnuvardhan.com ಇಲ್ಲಿದೆ . ಒಮ್ಮೆ ಭೇಟಿ ಕೊಡಬಹುದು.

ಈ ಕ್ಷಣಕ್ಕೆ ಇದನ್ನು ಓದಿದಾಗ ನಿಮಗೇನನ್ನಿಸಿತು ಎಂದು ನಾ ಕ್ಷಣ ಯೋಚಿಸಬಹುದೇ?

5 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕ್ಷಣ ಚಿಂತನೆ...
ಧೈರ್ಯ ಮಾಡಿ ಫೋಟೊ ಹಿಡಿದು ಬಂದಿದ್ದೀರಲ್ಲ...

ನನಗೆ ಹಾವು ಕಂಡರೆ ಸ್ವಲ್ಪ ಭಯ...

ಸಾಗರದಾಚೆಯ ಇಂಚರ ಹೇಳಿದರು...

nimma dharyakke hatsoff, vishnuvardhan website ge thanks, ottinalli namagoo haavina sarasada darshana madisidira

ಕ್ಷಣ... ಚಿಂತನೆ... Thinking a While.. ಹೇಳಿದರು...

Sirs, naaviruva jaagada hesarE haagide. haagaagi illi avugala sanKye jaasti. namagoo bhaya ide. aadre ee photo tegeevaaga (one person told me not to take snaps) ardha mahadi mele nintiddeveu. kaarana namage allindale ee haavugalu kaanisuttiddaddu.

Thanks for your comments both of you sir.

shivu ಹೇಳಿದರು...

ಸರ್,

ಇಂಥ ಸನ್ನಿವೇಶಗಳು ಅಪರೂಪ...ಇದನ್ನು ನೋಡಿದಾಗ ಎಲ್ಲರೂ ಭಯಪಡುತ್ತಾರೆ....ಅಂತದ್ದರಲ್ಲಿ ನೀವು ಫೋಟೊ ತೆಗೆದಿದ್ದೀರಲ್ಲ....
ಅಭಿನಂದನೆಗಳು...

ಶಿವು..

ಕ್ಷಣ... ಚಿಂತನೆ... Thinking a While.. ಹೇಳಿದರು...

Dear all, thank you very much.