ಸೋಮವಾರ, ಏಪ್ರಿಲ್ 13, 2009

ಇನ್ಸ್ಟಂಟ್ ಮೇಕ್

A bird may be ever so small, it always seeks a nest of its own. - Danish Proverb




ಓಹ್‌, ಈ ಗಾದೆಮಾತನ್ನು ಒಮ್ಮೆ ಗಮನಿಸಿದರೆ ನಮಗೇನನ್ನಿಸಬಹುದು. ಹೌದಲ್ಲವೇ? ಈ ಮಾತು ಸತ್ಯಕ್ಕೆ ಸನಿಹ ಅಥವಾ ನಿಜ ಎನಿಸಬಹುದು.
ಆದರೆ...ಈ ಪರಪುಟ್ಟವಿದೆಯಲ್ಲ ತನ್ನ ಗೂಡನ್ನು ತಾನೇ ಕಟ್ಟಿಕೊಳ್ಳಲಾಗದೇ ಇರುವುದು ಏತಕ್ಕೆ? ಉತ್ತರ: ಸಿಂಪಲ್‌ ಎಂಬುದು ಈ ಪುಟ್ಟ ಸಂದರ್ಶನದಿಂದ ತಿಳಿದುಕೊಳ್ಳೋಣವೇ?
ನಾನು: ಪರಪುಟ್ಟ, ನೀನೇಕೆ ಗೂಡು ಮಾಡು ಏನನ್ನೂ ಕಟ್ಟಿಕೊಳ್ಳುವುದಿಲ್ಲ?

ಪರಪುಟ್ಟ: ಸಿಂಪಲ್ಲಾಗಿ ಹೇಳುವುದಾದರೆ ಎಲ್ಲವೂ ಈ ಆಧುನಿಕ ಯುಗದಲ್ಲಿ ಇನ್ಸ್ಟಂಟ್‌. ಕಾಫೀ ಬೇಕೆಂದರೆ ಇನಸ್ಟಂಟ್ ಕಾಫಿ ಸಿಗುತ್ತದೆ. ಉದಾ: ಬ್ರೂ ಕಾಫಿ. ಹಾಗೆಯೇ ಇನ್ಸ್ಟಂಟ್‌ ಸಾಲ ದೊರಕಿಸಿಕೊಡಲು ಹಲವಾರು ಜಾಹಿರಾತುಗಳನ್ನು ನೋಡಬಹುದು. ಹೀಗೆ ನೀವುಗಳೇ ಎಲ್ಲವನ್ನೂ ಇನ್ಸ್ಟಂಟ್‌ ಆಗಿ ಪಡೆಯಬೇಕಾದರೆ, ನಾನಾದರೂ ಏಕೆ ಗೂಡಿಗಾಗಿ ಕಷ್ಟಪಡಬೇಕು.
ನಾನು: ಹೌದಲ್ಲವೇ? ಎಂದು ಆಶ್ಚರ್ಯಚಕಿತನಾಗಿದ್ದಾಗೆ ಮತ್ತೆ ಪರಪುಟ್ಟನಿಂದ ಕುಹೂ.. ಕುಹೂ...
ಪರಪುಟ್ಟ: ನನ್ನಂತೆಯೇ `ಪರ'ನಿರುವಾಗ ನಾನೇಕೆ ಗೂಡ ಕಟ್ಟಬೇಕು?
ನಾನು: ಮತ್ತೆ ಅಚ್ಚರಿಯಿಂದ ನೋಡಿದೆ.
ಪರಪುಟ್ಟ: ಸೀತಾ ಔರ್‌ ಗೀತಾ, ಕಾಳಿಂಗ, ಭಲೇಜೋಡಿ, ರಾಣಿ ಮಹಾರಾಣಿ ಹೀಗೆ ಸಿನೆಮಾಗಳನ್ನು ನೀವು ನೋಡಿಲ್ಲವೇ? ಅಲ್ಲದೇ ಇನ್ನೂ ಅನೇಕ ಸಿನಿಮಾಗಳಲ್ಲಿ ಒಬ್ಬರಂತೆಯೇ ಇರುವ (ಹೆಚ್ಚಾಗಿ ಒಬ್ಬರು ಬುದ್ಧಿಶಾಲಿ, ಮತ್ತೊಬ್ಬ ಹೆಡ್ಡತನವುಳ್ಳವರು) ನಾಯಕ/ಕಿಯನ್ನು ತೋರಿಸಿರುತ್ತಾರೆ. ವಿಶ್ವದಲ್ಲಿ ಒಬ್ಬರಂತೆಯೇ ಏಳು ಜನರಿರುತ್ತಾರೆ ಎಂದು ನೀವೇ ಹೇಳುವಾಗ ನನ್ನಂತೆ ಪರನಿರಲಾರನೆ? ಹಾಗೆಯೇ ನಾನು ನನ್ನಂತ `ಪರನಿ'ರುವಾಗ ಎಂದ್ದದ್ದು ಎನ್ನಬೇಕೆ?
ನಾನು:
ಮೂಕವಿಸ್ಮಿತನಾದೆ!!
ಪರಪುಟ್ಟ: ಅದಕ್ಕಾಗಿ ನಾನು ಗೂಡಿನ ವಿಚಾರದಲ್ಲಿ ಅಷ್ಟಕ್ಕಷ್ಟೆ. ಕಾಕಪಕ್ಷಿಯಿರುವಾಗ ನಾನೇಕೆ ಗೂಡಿಗಾಗಿ, ಗೂಡಿನಲ್ಲಿ ಮೊಟ್ಟಿಯಿಟ್ಟು, ಕಾವುನೀಡಿ, ಮರಿಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ನನ್ನಂತೆಯೇ ರೂಪದಲ್ಲಿ ಕಾಕರಾಜನಿರುವಾಗ ಎಂದೆಲ್ಲಾ ಏನೇನೋ ಬಡಬಡಿಸುತ್ತಾ ಹಾರಿತು (ಪರಪುಟ್ಟನೆಂದು ಕೋಗಿಲೆಗೆ ಕರೆಯುತ್ತಾರೆ).
ಆಗ ನನಗೆ `ವೇದ ಸುಳ್ಳಾದರೂ ಗಾದೆ ಸುಳ್ಳಾಗದೂ' ಅನಿಸಿದರೂ ಮೇಲಿನ ಗಾದೆಯು ವಿಚಿತ್ರವಾಗಿದೆಯೇ ಅನ್ನಿಸಿದ್ದರಲ್ಲಿ ತಪ್ಪೇನಿಲ್ಲ.

ನೀವೂ ಒಂದು ಕ್ಷಣ ಯೋಚಿಸಿದಾಗ ಈ ಗಾದೆ ಮಾತು... ಏನನ್ನಿಸಿರಬಹುದು?

4 ಕಾಮೆಂಟ್‌ಗಳು:

Ittigecement ಹೇಳಿದರು...

ಕ್ಷಣ ಚಿಂತನೆ....

ಬರಲು ತಡವಾಯಿತು ಕ್ಷಮಿಸಿ....

"ಅಪವಾದ" ಎಲ್ಲ ಕಡೆ ಇರುತ್ತದೆ...

ಕಾಗೆಯ ಗೂಡಿನಲ್ಲಿ ಪರಪುಟ್ಟನು ಮೊಟ್ಟೆ ಇಡುವದೂ ಕೂಡ ಒಂದು ಅಪವಾದ...

ಸೋಜಿಗವೆಂದರೆ...
ಎಲ್ಲ ಪರಪುಟ್ಟಗಳು.. ಎಲ್ಲಕಾಲದಲ್ಲೂ..
ಕಾಗೆಯಗೂಡಿನಲ್ಲಿ ಮೊಟ್ಟೆ ಇಡುತ್ತವಲ್ಲಾ..
ಅದು.. ಆಶ್ಚರ್ಯ...
ಇದುವರೆಗೆ ಜಗತ್ತಿನ ಒಂದು ಕಾಗೆಗೂ ಅದು ಗೊತ್ತಾಗಲಿಲ್ಲವಲ್ಲ...!

ನಮ್ಮ ರಾಜಕಾರಣಿಗಳು ಪರಪುಟ್ಟನ ಈ ವಿಷಯವನ್ನು ಮನನ ಮಾಡಿಕೊಂಡು ಬಿಟ್ಟಿದ್ದಾರೆ...

ಚೆನ್ನಾಗಿದೆ...

shivu.k ಹೇಳಿದರು...

ಸರ್,

ಕೋಗಿಲೆಯ ಜೊತೆ ಸಂಭಾಷಣೆ ಚೆನ್ನಾಗಿದೆ..

ಕಾಗೆಗೆ ಇದು ಹೇಗೆ ತಿಳಿಯುವುದಿಲ್ಲವೋ ಗೊತ್ತಿಲ್ಲ[ಕೋಗಿಲೆ ಮೊಟ್ಟೆ ಇಡುವುದು]
ಧನ್ಯವಾದಗಳು..

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಚೆನ್ನಗಿದೆ ಸಂಭಾಷಣೆ,

ಕ್ಷಣ... ಚಿಂತನೆ... ಹೇಳಿದರು...

prakash, shivu mattu saagaradhaacheya inchara avare, nimma pratikriyegalige dhanyavaadagaLu.

sasnehagalondige,