ಶನಿವಾರ, ಏಪ್ರಿಲ್ 25, 2009

ಅ ಕಾರಿನ ಹಿಂಭಾಗದಲ್ಲಿ ಒಂದು ವಿಶೇಷ ಬರಹ

ಡು ನಾಟ್‌ ಡ್ರಿಂಕ್‌ ಅಂಡ್‌ ಡ್ರೈವ್, ಮಧ್ಯ(ಮದ್ಯ)ಪಾನ ಮಾಡಿ ವಾಹನ ಚಲಿಸಬೇಡಿ. ಇತ್ಯಾದಿ ಬರಹಗಳನ್ನು ನಾಲ್ಕು ಕೂಡು ರಸ್ತೆಗಳಲ್ಲಿ, ಟ್ರ್‍ಯಾಫಿಕ್‌ ಸ್ಥಳಗಳಲ್ಲಿ ಓದಿರುತ್ತೀರಿ. ಆದರೆ,.. ಇನ್ನೊಂದು ಘೋಷಣೆಯನ್ನು ಸಾಮಾನ್ಯವಾಗಿ ಯಾರೂ ಓದಿರುವುದಿಲ್ಲ ಎಂಬುದು ನನ್ನ ಅನಿಸಿಕೆ. ಏಕೆಂದರೆ ನಾನು ಓದಿದ್ದು ಇದೇ ಮೊದಲು.

ಕಳೆದ ತಿಂಗಳು ಮೈಸೂರಿಗೆ ಹೋಗಿ ವಾಪಾಸು ಬರುವಾಗ, ರಸ್ತೆಯ ಸಿಗ್ನಲ್ಲಿನಲ್ಲಿದ್ದೆ. ನಮ್ಮ ಎದುರುಗಡೆಗೆ ಒಂದು ಕಾರು ಬಂದು ನಿಂತಿತು. ಅ ಕಾರಿನ ಹಿಂಭಾಗದಲ್ಲಿ ಒಂದು ವಿಶೇಷ ಬರಹ ಕಾಣಿಸಿತು.
ಸಾಮಾನ್ಯವಾಗಿ ಮುಂಜಾನೆ ನಿದ್ದೆಯಿಂದೆದ್ದ ಕೂಡಲೇ ಬಹಳ ಮಂದಿಗೆ ಅದು ಬೇಕು. ಕೆಲವೊಮ್ಮೆ ಅಪರೂಪಕ್ಕೆ ಸ್ನೇಹಿತರ ಭೇಟಿಯಾದರೆ ಅದು ಬೇಕು. ಕೆಲವು ಕಛೇರಿಗಳಲ್ಲಿ ಅದನ್ನು ಪೂರೈಸಲೇ ಸಹಾಯಕರು ಇರುತ್ತಾರೆ. ಯಾರೇ ಪರಿಚಿತರ ಮನೆಗೆ ಹೋದರೂ ಮೊದಲು ಕೇಳುವುದೇ ಅದನ್ನು. ಇದೇನಪ್ಪಾ, ಅದು, ಅದು, ಅದನ್ನು ಎಂದು ಬಹಳ ಒಗಟಾಗಿ, ಕಗ್ಗಂಟಾಗಿ ಬರೆಯುತ್ತಿದ್ದಾರೆ ಎನಿಸಿದರೆ, ಹೋಗಿ ಅದನ್ನು ಕುಡಿದು ಬನ್ನಿ. ಒಳ್ಳೆಯ ರಿಲ್ಯಾಕ್ಸ್‌ ಆಗುತ್ತದೆ ಎಂದು ಹೇಳಬಹುದು.

ಕಳೆದ ತಿಂಗಳ ತಾನೇ ಅವೆನ್ಯೂ ರಸ್ತೆಯಲ್ಲಿದ್ದ ಆ ಹೋಟೆಲನ್ನು ಮುಚ್ಚುವರೆಂದು ಪತ್ರಿಕೆಯಲ್ಲಿ ಓದಿದ್ದೆ. ಅಲ್ಲಿಗೆ ಜನಸಾಮಾನ್ಯರಲ್ಲದೇ ಅನೇಕ ಮಹನೀಯರು ಭೇಟಿಕೊಟ್ಟು ಆಸ್ವಾದಿಸಿದ್ದಾರೆಂದೂ ಕೇಳಿದ್ದೆ. ಒಂದೆರಡು ಬಾರಿ ನಾನೂ ಅಲ್ಲಿಗೆ ಹೋಗಿ ಆಸ್ವಾದಿಸಿದ್ದೆ. ನಿಮ್ಮಲ್ಲನೇಕರು ಅಲ್ಲಿಗೆ ಹೋಗಿ ಆಸ್ವಾದಿಸಿದ್ದಿರಬಹುದು.
ಇಷ್ಟೆಲ್ಲಾ ಅದು, ಆಸ್ವಾದ ಎಂದಾಗ ನಿಮಗೆ ಇದೀಗ ಏನು ವಿಷಯ ಎಂದು ಹೊಳೆದಿರಬಹುದು.
ಕಾರಿನ ಸಮೀಪಕ್ಕೆ ಬರುತ್ತೇನೆ. ಆ ಕಾರಿನ ಹಿಂಭಾಗದ ಒಂದು ಮೂಲೆಯಲ್ಲಿ `ಡ್ರಿಂಕ್ ಕಾಫಿ ಅಂಡ್ ಡ್ರೈವ್' ಎಂದು ಬರೆದಿತ್ತು. ಇದನ್ನು (ಕಾಫಿ) ಮಧ್ಯಪಾನ ಮಾಡಿ ವಾಹನ ಚಲಾಯಿಸಬಹುದು. ಇದನ್ನು ಹೇಳಲಿಕ್ಕೆ ಇಷ್ಟೆಲ್ಲಾ ಸರ್ಕಸ್‌ ಮಾಡಬೇಕಿತ್ತೆ ಎಂದು ನಿಮಗನ್ನಿಸಿದ್ದರೆ... ನಾನು ಒಂದು ಕಪ್ ಕಾಫಿ ಕುಡಿದು ಬರುತ್ತೇನೆ. ನೀವು???
೨೫.೪.೨೦೦೯

4 ಕಾಮೆಂಟ್‌ಗಳು:

Poornima ಹೇಳಿದರು...

sir channagide.

ಕ್ಷಣ... ಚಿಂತನೆ... Thinking a While.. ಹೇಳಿದರು...

thanks poornima avare,

shivu ಹೇಳಿದರು...

ಸರ್,

ನಾನು ಇದನ್ನು ಓದುವಾಗ್ ಕಾಫಿ ಕುಡಿಯುತ್ತಿದ್ದೆ..

Dr.Gurumurthy Hegde ಹೇಳಿದರು...

Tumbaa chennagide sir