ಚಿಕ್ಕಮಕ್ಕಳು `ಹೊಟ್ಟೆಕಿಚ್ಚು' ಎಂಬ ಪದವನ್ನು ತಮ್ಮ ಸಹಪಾಠಿಗಳೊಡನೆ ಆಟವಾಡುವಾಗ, ಓದುವಾಗ ಅಥವಾ ಯಾವುದೇ ವಿಷಯದಲ್ಲಿಯಾದರೂ ಸಹ ಒಬ್ಬರಿಗೊಬ್ಬರು ಉಪಯೋಗಿಸುತ್ತಿರುವುದನ್ನು ಕೇಳಿರುತ್ತೇವೆ. ಹಾಗೆಯೇ ಚಲನಚಿತ್ರಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ, ಈ ಪದದ ಬಳಕೆ ಹೆಚ್ಚು-ಕಡಿಮೆ ಹೆಚ್ಚಾಗಿಯೇ ಉಪಯೋಗಿಸುತ್ತಿರುತ್ತಾರೆ. ಇನ್ನು ರಾಜಕೀಯವಲಯದಲ್ಲಿ ಈ ಪದದ ಬಳಕೆ ವಾಕರಿಕೆ ಬರುವಷ್ಟರಮಟ್ಟಿಗೆ ಪ್ರಚಾರ ಪಡೆದಿದೆ/ಪಡೆಯುತ್ತಿದೆ.
ಇನ್ನು ಕೆಲವರು ಕೆಲವರ ಏಳಿಗೆಯನ್ನು ಕಂಡರೆ ಅವರನ್ನ ಕಂಡಾಗ, ಅವರ ಬಗ್ಗೆ ಮಾತಾಡಿದಾಗಲೆಲ್ಲ ನನಗೆ ಹೊಟ್ಟೆಯುರಿತ್ತದೆ ಎಂಬುದನ್ನು ಉಪಯೋಗಿಸುತ್ತಿರುತ್ತಾರೆ. ಹಾಗಿದ್ದರೆ ಅವರಿಗೆ ಗ್ಯಾಸ್ಟ್ರಿಕ್ ತೊಂದರೆ ಇರಬಹುದು ಅಥವಾ ಇಲ್ಲದಿರಬಹುದು. ಅಂಥವರಿಗೆ ನಾವೇನ್ ಮಾಡಬಹುದು? ಒಂದೆರಡು ಐಸ್ ಕ್ರೀಂ ಕೊಡಿಸೋದು ಅಷ್ಟೆ.
ಒಬ್ಬರನ್ನು ದ್ವೇಷಿಸುವುದನ್ನು ಹೆಚ್ಚಿಗೆ ಲವಣಾಂಶದಿಂದ ಕೂಡಿದ ನೀರಿಗೆ ಉದಾಹರಿಸುತ್ತಾರೆ. ಹೇಗೆಂದರೆ, ಉಪ್ಪು ನೀರನ್ನು ಕುಡಿದಷ್ಟೂ ದಾಹ ದಣಿಯದು, ಬಾಯಾರಿಕೆ ಆರದು. ಅದಕ್ಕೇ ಅಲ್ಲವೇ ಸಜ್ಜನರ ಸಂಗಡ ಸವಿಜೇನು ಮೆದ್ದಂತೆ ಎಂದಿರುವುದು. ಇನ್ನು ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಗಾದೆ ಮಾತು. ಆದರೆ ಈ ದ್ವೇಷ ಎಂಬುದು ಉಪ್ಪಿಗಿಂತ ಹೆಚ್ಚಿನ ರುಚಿಯುಳ್ಳದ್ದಾಗಿ ಹಾಲೂ ಸಹ ಹಾಲಾಹಲವೇ ಆಗುವ ಹಂತಕ್ಕೆ ಮುಟ್ಟಿಸುತ್ತದೆ. ಅದಕ್ಕೇ ಅಲ್ಲವೇ ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ಬಡಿದಾಟ, ಹೊಡೆದಾಟ, ಕೊಲೆ ಮುಂತಾದವನ್ನು ಪ್ರತಿನಿತ್ಯ ಪತ್ರಿಕೆಗಳಲ್ಲಿ ಪಾತ್ರಪಡೆಯುತ್ತಿರುವುದು.
ಅದಕ್ಕೆ ಕೈನ್/ಕೈನೆ (Caine) ಹೀಗೆ ಹೇಳಿದ್ದು: "To hate is like drinking salt water. The thirst grows worst."-Caine
ಇನ್ನು ನಮ್ಮ ಕುವೆಂಪುರವರ `ಓ ಕರ್ನಾಟಕ ಹೃದಯ ಶಿವ' ಕವನದಲ್ಲಿ ಬರುವ ಸಾಲುಗಳು ಎಂತಹ ಅರ್ಥಬಾಹುಳ್ಯವುಳ್ಳದ್ದು ಎಂಬುದನ್ನು ಓದಿದ ಕೂಡಲೇ ವ್ಯಕ್ತಿಯಲ್ಲಿ ಅಭಿವ್ಯಕ್ತವಾಗುತ್ತದೆ.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬೆಂಜಮಿನ್ ಫ್ರಾಂಕ್ಲಿನ್ ಹೇಳುವ ಈ ಮಾತನ್ನು ಅವಲೋಕಿಸಿದರೆ ಅದೆಷ್ಟು ವಿಶಾಲ ಅರ್ಥ ಮತ್ತು ಸತ್ಯ ಅಡಗಿದೆಯಲ್ಲವೇ?
"Be civil to all; sociable to many; familiar with few; friend to one; enemy to none."
ನಾಳೆ ದಿನ ಮೇ ೧. ಎಲ್ಲ ವಿಧದ ಕಾರ್ಮಿಕರಿಗೂ, ಕಚೇರಿವರ್ಗದವರಿಗೂ ಹಾಗೂ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಎಲ್ಲರಿಗೂ ಶುಭಾಶಯಗಳು.
2 ಕಾಮೆಂಟ್‌ಗಳು:
ಸರ್,
ಹೊಟ್ಟೆಕಿಚ್ಚಿನ ಪದವನ್ನು ಮತ್ತು ಪದದ ಅರ್ಥವನ್ನು ವೈಜ್ಞಾನಿಕವಾಗಿ ಚೆನ್ನಾಗಿ ವಿಶ್ಲೇಷಿಸಿದ್ದೀರಿ...
ಧನ್ಯವಾದಗಳು..
ಸರ್, ಈ ಪದವನ್ನು ಯಾವುದೇ ವ್ಯಕ್ತಿಯ ಮನಸ್ಸಿನಿಂದ ತೆಗೆದು ಹಾಕುವುದು ಅಷ್ಟು ಸುಲಭವಲ್ಲ ಎಂಬ ಒಂದು ಅಂಶವೇ ಈ ಒಂದು ಲೇಖನವನ್ನಾಗಿ ಬರೆಯಲು ಪ್ರೇರೇಪಿಸಿದ್ದು. ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್ಗಳು.
ಕಾಮೆಂಟ್ ಪೋಸ್ಟ್ ಮಾಡಿ