ಮಂಗಳವಾರ, ಮೇ 19, 2009

ಇದು ಅರವತ್ತನೇ ಪೋಸ್ಟು.

ಇದು ನನ್ನ ಅರವತ್ತನೇ ಪೋಸ್ಟು. ಅರವತ್ತಕ್ಕೆ ಅರಳುಮರುಳು ಎಂಬ ಗಾದೆ ಮಾತಿದೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಂಬೋಧಿಸುತ್ತಾ... ಈ ಪುಟ್ಟ ಪದಗಳಾಟವನ್ನು ಬರೆದಿದ್ದೇನೆ.
*********
ತನಗೆ ಬೇಕಾದ ಸಂಗತಿಗಳನ್ನು ಕೇಳಿ ಪಡೆಯುವ, ತನ್ನಗನ್ನಿಸಿದ ಯೋಚನೆ/ಯೋಜನೆಗಳ ವಿವರಿಸುವ, ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುವ, ಹೊಗಳುವ, ತೆಗಳುವ, ಸುಳ್ಳಿನ ಮಾಲೆ ಹೆಣೆಯುವ, ತನ್ನಲಗಿನ ಹರಿತದಿಂದ ಮನೆ-ಮನ ಮುರಿಯುವ, ಕೂಡಿಸುವ, ಕಳೆಯುವ, ಭಾಗಿಸುವ, ನಗಿಸುವ, ಕಿರುಚುವ, ಅರಚುವ, ಹಾಡಿ ಆನಂದಿಸುವ, ಅತ್ತು ರೋದಿಸುವ, ಅವಾಚ್ಯವನಾಡಿಸುವ, ಹಿತನುಡಿಗಳನಾಡಿಸುವ ಗುಣವೇ ಇದಕ್ಕಿರುವುದಲ್ಲದೇ, ಅನೇಕ ರುಚಿಕರ/ವರ್ಜ್ಯ ಪದಾರ್ಥಗಳ ಸ್ವಾದಿಸುವ ಗುಣವನ್ನೂ ಇದು ಹೊಂದಿರುವಾಗ, ಕೇವಲ ಈ ಮಾತನ್ನು ಹೇಳುವುದು ತರವೇ?
"The same tongue which screams also laughs.'"-Master Po
ಅದಕ್ಕೇ ಅಲ್ಲವೇ ಶ್ರೀಪುರಂದರದಾಸರು `ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು, ನಾಲಗೆ...' ಎಂದದ್ದು. ************
ಹೀಗೆಲ್ಲ ನನಗನಿಸಿತು. ನಿಮಗೇನನ್ನಿಸಿತು ಎಂದು `ಬರಹ'ದ ಮೂಲಕ ತಿಳಿಸುವಿರಲ್ಲಾ?

4 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ಅರವತ್ತನೆ ಪೋಷ್ಟಿಗೆ ಅಭಿನಂದನೆಗಳು.

PaLa ಹೇಳಿದರು...

ಅರವತ್ತರ ಅಭಿನಂದನೆ,, ಶತಕದತ್ತ ಸುಗಮವಾಗಿ "ಕ್ಷಣ ಚಿಂತನೆ" ಹೆಜ್ಜೆ ಹಾಕಲಿ

Ittigecement ಹೇಳಿದರು...

ಅರವತ್ತನೆ ಅಂಕಣಕ್ಕೆ ಅಭಿನಂದನೆಗಳು...

ಇದು ನೂರಾಗಿ, ಸಾವಿರವಾಗಲಿ...

ಶುಭ ಹಾರೈಕೆಗಳು...

ಕ್ಷಣ... ಚಿಂತನೆ... ಹೇಳಿದರು...

ಶಿವು, ಫಾಲಚಂದ್ರ, ಪ್ರಕಾಶ್ ಸರ್‌ ನಿಮಗೆಲ್ಲರಿಗೂ ಹಾಗೂ ನನ್ನ ಬರಹವನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಎಲ್ಲ ಮಿತ್ರರಿಗೂ, ನಿಮ್ಮೆಲ್ಲರ ಶುಭ ಹಾರೈಕೆಗಳಿಗೂ ಧನ್ಯವಾದಗಳು.