ಶನಿವಾರ, ಮೇ 30, 2009

ಎಲ್ಲೆಂದು ಹುಡುಕಬಲ್ಲಿರಾ??

ಮಿಡಿನಾಗರ: ನಾನಿಲ್ಲಿರುವೆ! ಎಲ್ಲೆಂದು ಹುಡುಕಬಲ್ಲಿರಾ??
**********
ಇಂದು ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಕಚೇರಿಗೆ ಹೋಗುತ್ತಿದ್ದೆ. ಅಲ್ಲೊಂದು ಕಚೇರಿ ಸಹೋದ್ಯೋಗಿಗಲ ಗುಂಪುಗೂಡಿದ್ದರು. ಅವರ ಗುಂಪನ್ನು ನೋಡಿದ ಕೂಡಲೇ ಅದು ಇರುವ ಅರಿವಾಯಿತು. ಕಚೇರಿಯಿಂದ ಮನೆಗೆ ಹೋಗುವಾಗ ಕ್ಯಾಮೆರಾ ಜೊತೆಯಲ್ಲಿಯೇ ಇಂದು ತೆಗೆದುಕೊಂಡು ಹೋಗಿದ್ದೆ. ಸರಿ ಗುಂಪಿನೆಡೆಗೆ ಸಾಗಿದೆ. ಇನ್ನೊಂದಿಬ್ಬರು ಮೊಬೈಲ್ನಲ್ಲಿ, ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು.

ಅದೊಂದು ವಿದ್ಯುತ್‌ ಜಂಕ್ಷನ್‌ ಡಬ್ಬ. ಅದರೊಳಗೆ ತನ್ನ ಪುಟಾಣಿ ಹೆಡೆಯನ್ನೆತ್ತಿ ಆಡುತ್ತಿತ್ತು ಮರಿ ನಾಗರ. ನಾನೂ ಸಹ ಒಂದು ಫೋಟೋ ತೆಗೆದೆ. ಹೆಡೆಯೆತ್ತಿದ್ದರಿಂದ ಅದರ ತಲೆಯ ಭಾಗದಲ್ಲಿನ ನಾಮದ ಗುರುತು ಕಾಣಿಸುತ್ತಿರಲಿಲ್ಲ. ಕತ್ತಿನ ಭಾಗವು ರಬ್ಬರ ಸ್ಪ್ರಿಂಗಿನಂತೆ ಕಾಣುತ್ತಿದೆ. ಹೇಗಿದೆ? ನೀವೇ ನೋಡಿ ಆನಂದಿಸಿ. **********

©Photo by Chandrashekara B.H., 30 May 2009

7 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ,

ನಿಮ್ಮ ಸಾಹಸಕ್ಕೆ ಮೆಚ್ಚಲೇಬೇಕು, ಇಂಥಹ ಸ್ವಾರಸ್ಯವನ್ನು ತಿಳಿಸುತ್ತಿರಿ

ಕ್ಷಣ... ಚಿಂತನೆ... Thinking a While.. ಹೇಳಿದರು...

ಗುರುಮೂರ್ತಿ ಸರ್‌,

ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.

ಸ್ನೇಹದೊಂದಿಗೆ,

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕ್ಷಣ ಚಿಂತನೆ....

ನನಗೆ ಹಾವೆಂದರೆ ಸ್ವಲ್ಪ ಭಯ...
ನಿಮ್ಮ ಧೈರ್ಯ ಮೆಚ್ಚಲೇ ಬೇಕು....

ಫೋಟೊ ಚೆನ್ನಾಗಿ ಬಂದಿದೆ...

ಕ್ಷಣ... ಚಿಂತನೆ... Thinking a While.. ಹೇಳಿದರು...

Prakash sir, dhanyavaadagaLu. nanagoo saha bhayavide. adare, swalpa dhairyadinda ee photo chitriside.

ಕ್ಷಣ... ಚಿಂತನೆ... Thinking a While.. ಹೇಳಿದರು...

`ಮನದ ಮಾತುಗಳ ಅಕ್ಷರದ ರೂಪವೇ ನನ್ನೀ ತೆರೆದ ಮನ' ನಿಮಗೆ ಸುಸ್ವಾಗತ.

shivu ಹೇಳಿದರು...

ಸರ್,

ನಿಮ್ಮ ದೈರ್ಯಕ್ಕೆ ಅಭಿನಂದನೆಗಳು. ಚೆನ್ನಾಗಿ ತೆಗೆದಿದ್ದೀರಿ...

ಕ್ಷಣ... ಚಿಂತನೆ... Thinking a While.. ಹೇಳಿದರು...

ಸರ್‌, ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

ಸ್ನೇಹದೊಂದಿಗೆ,