ಬುಧವಾರ, ಜೂನ್ 3, 2009

ಹೂವೂ ಚೆಲುವೆಲ್ಲಾ ನಂದೆಂದಿತು

Photo by Chandrashekara B.H. Jun2008
ಹೂವೂ ಚೆಲುವೆಲ್ಲಾ ನಂದೆಂದಿತು ಹೆಣ್ಣು ಹೂವ ಮುಡಿದು ತಾನೇ.... ಈ ಗೀತೆಯನ್ನು ಕೇಳದವರಾರು? ಆ ಗೀತೆಯಲ್ಲಿ ಬರುವ ಸಾಲುಗಳು ಒಂದಕ್ಕೊಂದು ಸಾಟಿಯಿಲ್ಲದಂತೆ ತನ್ನತನವ ಮೆರೆಸುವಂತಿದೆ. ಇಂತಿರುವಾಗ, ಅದೇ ಸೊಬಗಿನ ಹೂಗಳನ್ನು ನೋಡಿದಾಗ ಈ ಹಾಡು ನೆನಪಾದರೆ ಅಚ್ಚರಿಯೇನಿಲ್ಲ ಅಲ್ಲವೆ? Photo by Chandrashekara B.H. Apr2009
ಹಲವಾರು ಪ್ರಸಿದ್ಧ ವ್ಯಕ್ತಿಗಳು ಹೂಗಳ ಬಗ್ಗೆ ಕೆಲವು ನುಡಿಗಳನ್ನು ಹೀಗೆಲ್ಲಾ ಹೇಳಿರುತ್ತಾರೆ. (ಅವರ ಮಾತುಗಳನ್ನು ವಿವಿಧ ಅಂತರ್ಜಾಲ ತಾಣಗಳಿಂದ ಪಡೆದುಕೊಂಡಿರುತ್ತೇನೆ). ಅವೆಲ್ಲ ಆಂಗ್ಲ ಭಾಷೆಯಲ್ಲಿವೆ. ಅದನ್ನು ಹಾಗೆಯೇ ಇಲ್ಲಿ ಟೈಪಿಸಿರುತ್ತೇನೆ. ಏಕೆಂದರೆ, ಕನ್ನಡ ಭಾಷೆಗೆ ಅನುವಾದ ಮಾಡಲು ಸ್ವಲ್ಪ ಕಷ್ಟ ಅಥವಾ ಪದಗಳ ಕೊರತೆ ನನಗೆ ಎದುರಾಗುತ್ತಿದೆ. ಅದಕ್ಕೆ ಕ್ಷಮೆಯಿರಲಿ.
ಭಗವಾನ್ ಬುದ್ಧ: If we could see the miracle of a single flowerclearly, our whole life would change" ಬುದ್ಧ
ಕವಿ ರವೀಂದ್ರನಾಥ ಟ್ಯಾಗೋರ್‍: By plucking her petals, you do not gather the beauty of the flowers. - Rabindranath Tagore.
ಮಹಾತ್ಮಾ ಗಾಂಧೀಜಿ: Faith is not a delicate flower which would wither away under the slightest stormy weather -M.K. Gandhi
ರಾಲ್ಫ್ ವಾಲ್ಡೊ ಎಮರ್ಸನ್‌: Earth laughs in flowers. - Ralph Waldo Emerson
ಗೆರಾರ್‍ಡ್ ಡೆ ನೆರವಾಲ್‌: Every flower is a soul blossoming in Nature - Gerard De Nerval
ಡಿ. ಎಚ್. ಲಾರೆನ್ಸ್: The fairest thing in nature, a flower, still has its roots in earth and manure. -D. H. Lawrence
ಆರ್‍. ಸೌಥ್ವೆಲ್‌: We trample grass, and prize the flowers of May; yet the grass is green when the flower fades away.- R. Southwell

ಇಲ್ಲಿರುವ ಒಂದೊಂದು ವಾಕ್ಯಗಳೂ ಮಾನವನ ಜೀವನದ ಜೊತೆಯಲ್ಲಿ ಹೋಲಿಸಿದಾಗ ಎಷ್ಟು ನಿಜವೆನಿಸುತ್ತದೆ, ಅಲ್ಲವೆ? ನಿಮಗನಿಸಿದ ಭಾವನೆಗಳನ್ನು ಅಕ್ಷರ ರೂಪದ ಹೂಗಳ ಮಾಲೆಯಲ್ಲಿ ಕಳಿಸಿಕೊಡುವಿರೆಂದು ನನ್ನ ಅನಿಸಿಕೆ.
ಧನ್ಯವಾದಗಳು
ಫೋಟೋಗಳು: ಚಂದ್ರಶೇಖರ ಬಿ.ಎಚ್.

4 ಕಾಮೆಂಟ್‌ಗಳು:

shivu ಹೇಳಿದರು...

ಸರ್,

ಹೂವಿನ ಫೋಟೋಗಳು ಚೆನ್ನಾಗಿವೆ. ಹೂವಿನ ಬಗೆಗಿನ ಬರಹಗಳಂತೂ ಸೂಪರ್ ಅದರಲ್ಲೂ ಈ ಕೆಳಗಿನದು

Earth laughs in flowers. - Ralph Waldo Emerson

ತುಂಬಾ ಇಷ್ಟವಾಯಿತು..

ಕ್ಷಣ... ಚಿಂತನೆ... Thinking a While.. ಹೇಳಿದರು...

ಸರ್‍, ಬಹಳಷ್ಟು ನುಡಿಗಟ್ಟುಗಳು ಇವೆ. ಆದರೆ. ಅದರಲ್ಲಿಯೂ ಕೆಲವನ್ನು ಮಾತ್ರ ಆಯ್ಕೆ ಮಾಡಿದೆ. ನಿಮಗೆ Ralph Waldo Emerson ರ
ಸಾಲು ಇಷ್ಟವಾಗಿದ್ದಕ್ಕೆ ನನಗೆ ಸಂತಸವಾಯಿತು. ಏಕೆಂದರೆ, ಮೊದಲ ನುಡಿಗಟ್ಟಾಗಿ ಇದನ್ನೇ ಆಯ್ಕೆ ಮಾಡಿದ್ದೆ. ನಂತರ ಭಾರತೀಯರದ್ದು ಮೊದಲಿರಲಿ ಎಂದು ಬದಲಾಯಿಸಿದೆ.

ಬ್ರಹ್ಮಕಮಲ ಪುಷ್ಪ ನಮ್ಮ ಪಕ್ಕದ ಮನೆಯಲ್ಲಿ ಅರಳಿತ್ತು. ಅದನ್ನು ಕಳೆದ ವರ್ಷ ತೆಗೆದಿದ್ದೆ. ಅದನ್ನೇ ಇಲ್ಲಿ ಪೋಸ್ಟ್ ಮಾಡಿದ್ದೆ.

ಧನ್ಯವಾದಗಳು.

Jonathan ಹೇಳಿದರು...

ನಮಸ್ಕಾರ ಚಂದ್ರು, ತುಂಬಾ ಸುಂದರ photos! Very nice. Here's a quote on flowers that I love, by Jean de la Bosschère, a French writer (in French, with my translation):

"Dans le subconscient des anciens, où naquirent tous les mythes, on ne pouvait croire que la plante et les fleurs ne fussent autre chose que l'apparence que les dieux voulaient bien nous en montrer."

"In the subconscious of the ancients, where all the myths were born, they couldn't believe that plants and flowers were anything other than the appearance of the gods, who wanted us to show themselves."

Jonathan

ಕ್ಷಣ... ಚಿಂತನೆ... Thinking a While.. ಹೇಳಿದರು...

ನಮಸ್ಕಾರ ಜೊನಾಥನ್, ಹೇಗಿದ್ದೀರಿ? ನನ್ನ ಬ್ಲಾಗಿಗೆ ಭೇಟಿ ಕೊಟ್ಟಿದ್ದಕ್ಕೆ ಸುಸ್ವಾಗತ ಮತ್ತು ಧನ್ಯವಾದಗಳು. ಫ್ರೆಂಚ್ Quote ತುಂಬಾ ಚೆನ್ನಾಗಿದೆ.

ಮುಂದಿನ ವಾರ ಭೇಟಿಯಾಗೋಣ.
ಚಂದ್ರು