ಅಮ್ಮಾ.. ಅಮ್ಮಾ...
ಎರಡಕ್ಷರದಲಿ ಕರೆವೆ ನಿನ್ನನು
ಅಮ್ಮಾ.. ಅಮ್ಮಾ...
ನೀ ಕಂಡೆ ಆನಂದ ಅದರಲಿ
ಅಮ್ಮಾ.... ಅಮ್ಮಾ...
ನಿನ್ನ ಪ್ರೀತಿ ವಾತ್ಸಲ್ಯ
ಗಗನದೆತ್ತರ
ಅದಕಿಲ್ಲ ನನ್ನ ಉತ್ತರ...
ಕಿವಿಗೊಡಲಿಲ್ಲ ನಿನ್ನ
ಭವಿತವ್ಯದ ನುಡಿಗಳಿಗೆ
ಮೂಕವಾಗಿದೆ ಮನ
ನೊಂದಿದೇ ಈಗ...
ಒಂದಿನಿತು ಪೆಟ್ಟಾದರೂ
ನೀ ಮರುಗುತಿದ್ದೆ
ಅರಿಯಲಾರದೆ ಹೋದ
ನಾನೆನಿತು ಪೆಟ್ಟುಕೊಟ್ಟೆನೋ
ನಿನಗೆ...
ಪದ ನುಡಿವಾಗ ನಡೆವಾಗ
ತಡವರಿಸಿದಾಗ
ಆಸರೆಯಾಗಿ ನೀ ಬರುತಿದ್ದೆ
ಅಹಂ ಎಂಬ ನುಡಿ ನಡೆಯ ಕಲಿತ
ನಾನೇಕೆ ಸನ್ನಡತೆ ಮರೆತೆ...
ಅಮ್ಮಾ... ಅಮ್ಮಾ....
ನಾ ಬಿದ್ದಾಗ ದಾರಿ ತಪ್ಪಿದಾಗ
ಕೈ ಹಿಡಿದು ಊರುಗೋಲಾದೆ
ಊರುಗೋಲಾಗಬೇಕಿದ್ದ ನಾ
ಏಕೆ ನಿನ್ನ ದೂಡಿದೆ...
ನಾನೆಷ್ಟೆ ಪ್ರಶ್ನಿಸಿದರೂ ನೀ
ಚೆಂದದಲಿ ಉತ್ತರಿಸುತಿದ್ದೆ
ನೀ ಕೇಳಿದಾ ಪ್ರಶ್ನೆಗೆ
ನಾ ಸಹನೆ ಕಳೆದುಕೊಂಡಿದ್ದೆ...
ಛೆ... ನಾನೆಂತಹ ದುಷ್ಟ...
ಅರಿಲಾರದೆ ಹೋದೆ
ನಿನ್ನ ಮನಸಿನಾ ಕಷ್ಟ...
ನಾ ಅಮ್ಮಾ.. ಎಂದಾಗ
ನೀ ಪಡುವೆ ಸಂತೋಷ...
ಅಮ್ಮಾ ಎಂಬ ಕರೆಯ
ಕೇಳುವುದೇ ನಿನಗಿಷ್ಟ..
ಹೇಗೆ ಬಣ್ಣಿಸಲಿ ನಿನ್ನ
ಈ ಪ್ರೀತಿ ಮಮಕಾರ...
ಅಕ್ಷರಗಳಿಗೆ ಸಿಗದಿದರ ಸಾರ...
ಅಮ್ಮಾ.....ನಿನಗಿದೋ ನಮಸ್ಕಾರ...
ಎರಡಕ್ಷರದಲಿ ಕರೆವೆ ನಿನ್ನನು,
ಅಮ್ಮಾ.. ಅಮ್ಮಾ...
ನೀ ಕಂಡೆ ಆನಂದ ಅದರಲಿ
ಅಮ್ಮಾ....... ಅಮ್ಮಾ.....
ಅಮ್ಮಾ.. ಅಮ್ಮಾ...
ನೀ ಕಂಡೆ ಆನಂದ ಅದರಲಿ
ಅಮ್ಮಾ.... ಅಮ್ಮಾ...
ನಿನ್ನ ಪ್ರೀತಿ ವಾತ್ಸಲ್ಯ
ಗಗನದೆತ್ತರ
ಅದಕಿಲ್ಲ ನನ್ನ ಉತ್ತರ...
ಕಿವಿಗೊಡಲಿಲ್ಲ ನಿನ್ನ
ಭವಿತವ್ಯದ ನುಡಿಗಳಿಗೆ
ಮೂಕವಾಗಿದೆ ಮನ
ನೊಂದಿದೇ ಈಗ...
ಒಂದಿನಿತು ಪೆಟ್ಟಾದರೂ
ನೀ ಮರುಗುತಿದ್ದೆ
ಅರಿಯಲಾರದೆ ಹೋದ
ನಾನೆನಿತು ಪೆಟ್ಟುಕೊಟ್ಟೆನೋ
ನಿನಗೆ...
ಪದ ನುಡಿವಾಗ ನಡೆವಾಗ
ತಡವರಿಸಿದಾಗ
ಆಸರೆಯಾಗಿ ನೀ ಬರುತಿದ್ದೆ
ಅಹಂ ಎಂಬ ನುಡಿ ನಡೆಯ ಕಲಿತ
ನಾನೇಕೆ ಸನ್ನಡತೆ ಮರೆತೆ...
ಅಮ್ಮಾ... ಅಮ್ಮಾ....
ನಾ ಬಿದ್ದಾಗ ದಾರಿ ತಪ್ಪಿದಾಗ
ಕೈ ಹಿಡಿದು ಊರುಗೋಲಾದೆ
ಊರುಗೋಲಾಗಬೇಕಿದ್ದ ನಾ
ಏಕೆ ನಿನ್ನ ದೂಡಿದೆ...
ನಾನೆಷ್ಟೆ ಪ್ರಶ್ನಿಸಿದರೂ ನೀ
ಚೆಂದದಲಿ ಉತ್ತರಿಸುತಿದ್ದೆ
ನೀ ಕೇಳಿದಾ ಪ್ರಶ್ನೆಗೆ
ನಾ ಸಹನೆ ಕಳೆದುಕೊಂಡಿದ್ದೆ...
ಛೆ... ನಾನೆಂತಹ ದುಷ್ಟ...
ಅರಿಲಾರದೆ ಹೋದೆ
ನಿನ್ನ ಮನಸಿನಾ ಕಷ್ಟ...
ನಾ ಅಮ್ಮಾ.. ಎಂದಾಗ
ನೀ ಪಡುವೆ ಸಂತೋಷ...
ಅಮ್ಮಾ ಎಂಬ ಕರೆಯ
ಕೇಳುವುದೇ ನಿನಗಿಷ್ಟ..
ಹೇಗೆ ಬಣ್ಣಿಸಲಿ ನಿನ್ನ
ಈ ಪ್ರೀತಿ ಮಮಕಾರ...
ಅಕ್ಷರಗಳಿಗೆ ಸಿಗದಿದರ ಸಾರ...
ಅಮ್ಮಾ.....ನಿನಗಿದೋ ನಮಸ್ಕಾರ...
ಎರಡಕ್ಷರದಲಿ ಕರೆವೆ ನಿನ್ನನು,
ಅಮ್ಮಾ.. ಅಮ್ಮಾ...
ನೀ ಕಂಡೆ ಆನಂದ ಅದರಲಿ
ಅಮ್ಮಾ....... ಅಮ್ಮಾ.....
- ಚಂದ್ರಶೇಖರ ಬಿ.ಎಚ್.
ಇದನ್ನು ತಿದ್ದಿತೀಡಿದವರಿಗೆ ಧನ್ಯವಾದಗಳು.
ಇದನ್ನು ತಿದ್ದಿತೀಡಿದವರಿಗೆ ಧನ್ಯವಾದಗಳು.
17 ಕಾಮೆಂಟ್‌ಗಳು:
ಅಮ್ಮನ ಪ್ರೀತಿಗೆ ಕೊನೆ ಮೊದಲು ಉಂಟೆ?
ಅರ್ಥಪೂರ್ಣ ಕವನ.........
ಆಕೆ ಎಲ್ಲವನ್ನ ಮನ್ನಿಸುವಳು ...ಚನ್ನಾಗಿದೆ
ಅಮ್ಮ ಕ್ಷಮಯಾ ಧರಿತ್ರಿ...ಆವಳ ಪ್ರೀತಿಗೆ ಕೊನೆಯುಂಟೆ!
ಮೊಗೆದಷ್ಟು ಮುಗಿಯದ ಬತ್ತದ ಪ್ರೀತಿಯ ಒರತೆ ಅಮ್ಮನಲ್ಲಿರುವ೦ತೆ ಅಮ್ಮನ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಚೆನ್ನಾಗಿದೆ
ಹೆತ್ತವಳ ವಾತ್ಸಲ್ಯದ ಅಕ್ಕರೆಯ ಕರೆಗೆ ಕರಗದಿರಲು೦ಟೆ?
ನೆನಪಿಸಿದಕ್ಕೆ ಧನ್ಯವಾದಗಳು
ಅನ೦ತ್
chennaagide sir :)
Nice !
ಅಮ್ಮನನ್ನು ನೆನೆದು ಬರೆವ ಪದ್ಯಗಳಿಗೆ, ಗದ್ಯಗಳಿಗೆ ಕೊನೆಯೇ ಇಲ್ಲ. ಎಷ್ಟು ಬಣ್ಣಿಸಿದರೂ ಮುಗಿಯದು ಅಮ್ಮನ ಮಮತೆಯ ಪರಿ..... ಚೆನ್ನಾಗಿದೆ ಚಂದ್ರೂ....
ಶ್ಯಾಮಲ
ಮನದಾಳದಿಂದ, ಧನ್ಯವಾದಗಳು.
ಶಿವು ಅವರೆ, ಈ ಮಾತು ನೆನಪಿಸಿದ್ದಕ್ಕಾಗಿ ಧನ್ಯವಾದಗಳು.
ಪರಾಂಜಪೆ ಸರ್, ನಿಮ್ಮ ಮಾತು ನಿಜ...
ಅನಂತ್ ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು...ಹೀಗೆಯೆ ಬರುತ್ತಿರಿ.
ನನ್ನ ಮನದ ಭಾವಕೆ... ನಿಮಗೆ ಸ್ವಾಗತ.. ಹೀಗೆಯೆ ಬರುತ್ತಿರಿ...
ಶ್ರೀಧರ್ ಮತ್ತು ಭಟ್ ಅವರೆ ನಿಮ್ಮಗಳಿಗೆ ಧನ್ಯವಾದಗಳು.
ಅಂತರಂಗದ ಮಾತುಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು...
ammana bagegina kaavya sarvakaalakku sumadhurave!
adannu bere helabekilla allave?
ಕಾಮೆಂಟ್ ಪೋಸ್ಟ್ ಮಾಡಿ