ಬುಧವಾರ, ಆಗಸ್ಟ್ 4, 2010

ಹೊತ್ತು.. ಹೋಯಿತು....


ಹೊತ್ತು.. ಹೋಯಿತು....

ಬರಿದೇ ಹೋಯಿತು ಹೊತ್ತು
ತಮವನುಳಿಸಿ ಈ ದಿನವೂ |
ನಾಳೆ ಹೇಗೋ? ಏನೋ? ಎಂಬ
ಚಿಂತೆ ಮೂಡಿಸಿ ಮೂಡಿಸಿ ಪ್ರತಿಕ್ಷಣವೂ ||

ಬರಿದೇ ಹೋಯಿತು ಹೊತ್ತು
ರವಿ ಮೂಡಿದಾಗಿನಿಂದ, ತಾನು ಮತ್ತೆ
ಬರುವೆನೆನುತ, ತಾ ಹೋಗುವ ದಿಕ್ಕಿನೆಡೆಗೆ|
ತಳಮಳವ ಹೃದಯದಲಡಗಿಸಿ, ಹುದುಗಿಸಿ,
ಎಲ್ಲ ಭಾವಗಳನುಳಿಸಿ, ತಾನು
ಮೆಲ್ಲ ಮೆಲ್ಲನೇ ದೂರಕೆ ಹೋಯಿತು ||

ಎಷ್ಟೆಷ್ಟೋ ವಿಧದಲಿ ಮನದೊಂದಿಗೆ ಮಾತಾಡಿ,
ನಾ ಹೋಗುವೆ ಮತ್ತೆ ಬರುವೆನೆನುತ, ಹೀಗಾಡಿ
ಇನ್ನಾದರೂ ಮಾಡುತಿರು ಹೊಸತೇನಾದರೂ ಸುಮ್ಮನಿರದೆ|
ಹುಡುಕುತಿರು ನಿನ್ನೊಳಗೆ ನೀ, ಹುಟ್ಟುವ ಚಿಂತೆಗೆ
ಚಿಂತನೆಯ ಧಾರೆಯೆರೆಯುತಿರು, ಮರೆಯದಿರು
ಮತ್ತೆ ಬರುವೆ ನಾ ನಾಳೆಗೆ, ಎನುತ ಹೋಯಿತು||

ಬರಿದೇ ಹೋಯಿತು ಹೊತ್ತು
ತಮವನುಳಿಸಿ ಈ ದಿನವೂ |
ನಾಳೆ ಹೇಗೋ? ಏನೋ? ಎಂಬ
ಚಿಂತೆ ಮೂಡಿಸಿ ಮೂಡಿಸಿ ಪ್ರತಿಕ್ಷಣವೂ ||

ಚಂದ್ರಶೇಖರ ಬಿಎಚ್. ೪.೮.೨೦೧೦

9 ಕಾಮೆಂಟ್‌ಗಳು:

ಮನದಾಳದಿಂದ............ ಹೇಳಿದರು...

ಹೊತ್ತು ಯಾರಿಗೂ ಕಾಯುವುದೇ ಇಲ್ಲ.......
ನಿನ್ನೆಯ ನೆನಪ ಬಿಟ್ಟು
ನಾಳೆಯ ಚಿಂತೆ ಕೊಟ್ಟು
ತಾ ನಡೆವುದು ಗಮ್ಯದೆಡೆಗೆ..........
ಚನ್ನಾಗಿದೆ.

PARAANJAPE K.N. ಹೇಳಿದರು...

ಚೆನ್ನಾಗಿದೆ

Dr.D.T.Krishna Murthy. ಹೇಳಿದರು...

'ಬರಿದೆ ಹೋಯಿತು ಹೊತ್ತು'!ಸುಂದರವಾಗಿ ಮೂಡಿಬಂದ ಭಾವನಾ ಲಹರಿ.ಇಷ್ಟವಾಯ್ತು.

shivu.k ಹೇಳಿದರು...

ಒಂದು ಸುಂದರ ಕವನ. ಬರಿದೇ ಹೋಯಿತು ಹೊತ್ತು ತುಂಬಾ ಚೆನ್ನಾಗಿ ಬರೆದಿದ್ದೀರಿ..

ಪ್ರಗತಿ ಹೆಗಡೆ ಹೇಳಿದರು...

ಹೌದು, ಹೊತ್ತು ಬರಿದೆ ಹೋಗುತ್ತಿದೆ... ಕವನ ಚೆನ್ನಾಗಿದೆ...

Dileep Hegde ಹೇಳಿದರು...

ಸುಂದರ ಕವನ

shridhar ಹೇಳಿದರು...

Kavana chennagide sir

ಕ್ಷಣ... ಚಿಂತನೆ... ಹೇಳಿದರು...

ಕವನ ನಿಮಗೆಲ್ಲ ಮೆಚ್ಚಿಗೆಯಾಗಿ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆಯೆ ಇರಲಿ.

ಸೀತಾರಾಮ. ಕೆ. / SITARAM.K ಹೇಳಿದರು...

ಕವನ ಚೆನ್ನಾಗಿದೆ.