ಪರಿಸರ ದಿನಾಚರಣೆ... ಎಂದರೆ??
- ಆ ಒಂದು ದಿನ ಗಿಡ ನೆಟ್ಟು, ನೀರುಣಿಸಿ, ಫೋಟೋ ತೆಗೆಸಿಕೊಳ್ಳುವುದೆ?
- ಆ ಒಂದು ದಿನ ಸುತ್ತಮುತ್ತಲು ಬಿದ್ದಿರಬಹುದಾದ ಪ್ಲಾಸ್ಟಿಕ್ ದೂರ ಹಾಕುವುದೆ?
- ಆ ಒಂದು ದಿನ ಎಲ್ಲೆಲ್ಲೂ, ಎಲ್ಲರಿಗೂ ಸಸಿಗಳನ್ನು ಹಂಚುವುದೆ?
- ಆ ಒಂದು ದಿನ ಸಸಿ ನೆಡುವ ಕಾರ್ಯಕ್ರಮಕ್ಕೆಲ್ಲ ಹಾಜರಾಗುವುದೆ?
- ಇಷ್ಟೇನಾ ಪರಿಸರ ದಿನಾಚರಣೆಯ ಮಹತ್ವ?!
ಇಲ್ಲ. ಇಲ್ಲಾ... ಇನ್ನೂ ಏನೋ ಮಹತ್ವದ ದಿನವೇ ಇದಾಗಿರುತ್ತದೆ.
ಹಾಗಾದರೆ, ನಿಜವಾದ ಅರ್ಥದಲ್ಲಿ ಪರಿಸರ ದಿನಾಚರಣೆ ಎಂದರೆ ಏನು?ಇದು ಒಂದು ಯಕ್ಷ ಪ್ರಶ್ನೆಯಾಗಿದೆ? ನಿಮ್ಮಗಳ ಅನಿಸಿಕೆಯೇನು ಎಂದು ಆಲೋಚಿಸುತ್ತಿರುವೆ.
5 ಕಾಮೆಂಟ್ಗಳು:
ಇದೇ ಕಾಳಜಿ ಎಲ್ಲಾ ದಿನಗಳಲ್ಲೂ ಬೆಳೆಸಿಕೊಳ್ಳೋಣ ಅಂತ, ಸಂಕೇತವಾಗಿ
ಪ್ರತಿ ದಿನವೂ ಪರಿಸರ ಪ್ರಜ್ಞೆ ಉಳಿಸಿಕೊಳ್ಳಬೇಕು...
ಪರಿಸರ ಪ್ರೇಮಿಗಳಾಗಿರಬೇಕು....
''ಗಿಡಗಳನ್ನು ನಾವು ಉಳಿಸಿದರೆ ಗಿಡಗಳು ನಮ್ಮನ್ನು ಉಳಿಸುತ್ತವೆ'' ಜಾಗತಿಕ ತಾಪಮಾನ ಮುಂಬರುವ ದಿನಗಳಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಸವಾಲು ನಿರ್ಮಿಸುತ್ತದೆ. ಪರಿಸರ ಉಳಿಸುವಿಕೆ ಹಾಗೂ ಬೆಳೆಸುವಿಕೆ ಇ ನಿಟ್ಟಿನಲ್ಲಿ ಉತ್ತಮ ವಿಧಾನ. ಎಲ್ಲರೂ ಪರಿಸರ ಉಳಿಸಲು ಕಂಕಣ ಬದ್ಧರಾಗೋಣ.
ಸರ್,
ನಾವು ಇವತ್ತೊಂದು ದಿನ ಫೂರ್ತಿ ಪರಿಸರ ಕಾಳಜಿ ಬೆಳಸಿಕೊಳ್ಳುವ- ಮಾತಾಡುವ ಬದಲು ಪ್ರತಿದಿನವೂ ಅದರ ಅರಿವಿನಲ್ಲಿ ಕಾಳಜಿಯಲ್ಲಿ ಜೀವನ ಮಾಡಿದರೆ ಸಾಕು ಅನ್ನಿಸುತ್ತೆ..
ಮಾನ್ಯರೇ, ನಿಮ್ಮೆಲ್ಲರ ಅಭಿಪ್ರಾಯಗಳನ್ನು ಓದಿದೆ. ಎಲ್ಲರಲ್ಲಿಯೂ ಪರಿಸರದ ಕಾಳಜಿಯೊಂದಿಗೆ ಅದನ್ನು ಉಳಿಸಿಕೊಂಡು ಪ್ರತಿದಿನವೂ ಸಾಗಬೇಕೆಂಬ ಅಭಿಲಾಷೆ, ಸಂಕಲ್ಪ ವ್ಯಕ್ತಪಡಿಸಿರುತ್ತೀರಿ. ನನ್ನ ಅಭಿಪ್ರಾಯಗಳೂ ಸಹ ಇದೇ ಆಗಿದೆ. ಆದರೆ, ನಮ್ಮ ಜನರಲ್ಲಿ ಜಾಗೃತಿಯ ಅರಿವು ಇದೊಂದು ದಿನಕ್ಕಷ್ಟೇ ಅಥವಾ ಒಂದು ಒಂದೂವರೆ ತಾಸು ಮಾತ್ರ ಇರುತ್ತದೆ ಎನಿಸುತ್ತದೆ. ಏಕೆಂದ್ರೆ, ಉದಾಹರಣೆಗೆ ಪರಿಸರ ದಿನದ ಕಾರ್ಯಕ್ರಮಗಳು ಮುಗಿದ ನಂತರ ಸುತ್ತಲಾ ಕಣ್ಣಾಡಿಸಿದರೆ ಸಾಕು `ಸಸಿ'ಗಳ ಬೇರುಗಳನ್ನು ಸುತ್ತಿರುವ ಪ್ಲಾಸ್ಟಿಕ್ಗಳು ಸುತ್ತಮುತ್ತಲೂ ಹರಡಿರುತ್ತವೆ. ಎಲ್ಲೋ ಒಂದೆರಡು ಮಂದಿ ಮಾತ್ರ ಅವುಗಳನ್ನು ಕಸದ ತೊಟ್ಟಿಗೋ, ರಸ್ತೆಯಂಚಿನ ಹಳ್ಳಕ್ಕೋ ಹಾಕಿ ಕೈ ತೊಳೆದುಕೊಳ್ಳುತ್ತಾರೆ. ಇವರಲ್ಲಿ ಜಾಗೃತಿ ಮೂಡಿಸುವ ಕೆಲಸ ಪ್ರತಿದಿನವೂ ಆಗುತ್ತಿರಬೇಕು.
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಸಸ್ನೇಹಗಳೊಂದಿಗೆ,
ಕಾಮೆಂಟ್ ಪೋಸ್ಟ್ ಮಾಡಿ