ಶನಿವಾರ, ಜೂನ್ 6, 2009

ಬಣ್ಣಾ, ನನ್ನ ಒಲವಿನ ಬಣ್ಣಾ...

Phot: Chandrashekara B.H. June 4 2009 at ISEC
Phot: Chandrashekara B.H. June 4 2009 at ISEC

ಏಳು ಸ್ವರವು ಸೇರಿ ಸಂಗೀತವಾಯಿತು,
ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು


ಮಿಲನ ಚಿತ್ರದ ಹಾಡು:
ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ....
ಆದರೆ ಇಲ್ಲಿ ಮಳೆ ನಿಂತು ಹೋದ ಮೇಲೆ ರೈನ್‌ಬೋ ಒಂದು ಕಂಡಿದೆ.

ಹೌದು, ಮೊನ್ನೆ ಸಂಜೆ (೪.೬.೨೦೦೯) ಮಳೆ ನಿಂತ ಮೇಲೆ ಮೂಡಿಬಂದ ಕಾಮನಬಿಲ್ಲನ್ನು ಕಂಡು ಮನಸ್ಸು ಖುಷಿಯಾಯಿತು. ಜೊತೆಗೆ, ಸಂಜೆಯ ಸೂರ್ಯಾಸ್ತದ ವೇಳೆ ಬಾನಿನಲ್ಲಿ ರಂಗಿನೋಕುಳಿ ನಡೆದಿತ್ತು. ಚಂದಿರ ಮೋಡದ ಮರೆಯಲ್ಲಿ ಆಗಾಗ ಇಣುಕುತ್ತಿದ್ದ. ಆಗೆಲ್ಲ ಬಂದ ಯೋಚನೆಯ ಹರಿವನ್ನು ಇಲ್ಲಿ ಹೀಗೆ ಹರಿಸಲು ಪ್ರಯತ್ನಿಸಿದ್ದೇನೆ.

ಜೀವನದಲ್ಲಿ ಕನಸು ಕಾಣದವರಾರು? ವಯೋಮಾನದ ಹಿಂಜರಿತವಿಲ್ಲದೇ ಎಲ್ಲರೂ ಕನಸನ್ನು ಕಾಣುತ್ತಾರೆ. ಕಾಣಲೇಬೇಕು. ಇಲ್ಲವಾದರೆ ಬದುಕಿನ ಬಂಡಿಯ ಚಕ್ರದ ಕಡಾಣಿ ಕಳೆದಂತೆ ಆಗುತ್ತದೆ.

ಕನಸು ಕಾಣಲು ಕಾಸು ಕೊಡಬೇಕೆ? ಬದುಕಿನಲ್ಲಿ ಏನೆಲ್ಲಾ ಆಶಯಗಳನ್ನು ಇಟ್ಟುಕೊಳ್ಳಬೇಕೆಂದರೆ... ಅದನ್ನೇ ಕೆಲವಾರು ಸಾಹಿತಿಗಳು ಹೀಗೆ ಹೇಳುತ್ತಾರೆ.
When you reduce life to black and white, you never see rainbows. Rachel Houston


“After fifteen minutes nobody looks at a rainbow” - Johann Wolfgang von Goethe

"Sunshine is delicious, rain is refreshing, wind braces us up, snow is exhilarating; there is really no such thing as bad weather, only different kinds of good weather." -John Ruskin ಜಾನ್‌ ರಸ್ಕಿನ್‌ ರ ಈ ಮಾತನ್ನು ಗಮನದಿಂದ ಓದಿದರೆ, "ಪ್ರಕೃತಿಯಲ್ಲಿ ವಾತಾವರಣದಂತೆಯೇ ಮನುಷ್ಯನ ಬದುಕಿನಲ್ಲಿಯೂ ಬದಲಾವಣೆಗಳು ಸಹಜ" ಎಂದನಿಸದೇ ಇರದು.

ಥಳುಕು ಬಳುಕಿನ ಬದುಕಿನಲ್ಲಿಯೂ ಸಹ ಜನರ ಏಳಿಗೆ, ಬೀಳಿಗೆ ಒಂದೆರಡು ಕ್ಷಣಗಳು ಸಮಾಜದಲ್ಲಿ ಸ್ಪಂದಿಸಿ ಎಲ್ಲವನ್ನೂ ಮರೆಯುತ್ತಾರೆ ಪ್ರತಿಯೊಬ್ಬ ಮಾನವನೂ ಅತ್ತ ಲಕ್ಷ್ಯವಿಡುವುದಿಲ್ಲೆಂಬುದನ್ನು ಹೋಲಿಸಿಕೊಳ್ಳಬಹುದು ಅಲ್ವೆ?

ಜೀವನ ಸಂಘರ್ಷದಲ್ಲಿ ಮನುಷ್ಯನು ಸುಖದು:ಖವೇನೇ ಬರಲಿ ಜಿ.ಕೆ. ಚೆಸ್ಟರಟನ್‌ ಅವರ ಈ ಮಾತನ್ನು ನೆನಪಿನಲ್ಲಿಟ್ಟುಕೊಂಡರೆ ಬದುಕು ರೋಚಕಗಳ ಸಂಗಮವಲ್ಲವೇ? "And when it rains on your parade, look up rather than down. Without the rain, there would be no rainbow." - G. K. ಚೆಸ್ತೆರ್ತೋನ್
ಸಮಯವಿದ್ದರೆ, ನಿಮಗಿಷ್ಟವಾದರೆ,ಕಾಮೆಂಟ್ ಬಾಕ್ಸಿನಲ್ಲಿ ಬಣ್ಣಿಸಿರಿ ಎಂದು ವಿನಂತಿಸಿಕೊಳ್ಳುತ್ತೇನೆ.
ಸಸ್ನೇಹಗಳೊಂದಿಗೆ,

8 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ಕನಸು ಕಾಣುವ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನ. ನೀವು ರೈನ್‍ಬೌ ನೋಡಿ ಬದುಕಿನ ಕನಸು ಕಾಣುತ್ತಿದ್ದರೇ ಅದೇ ದಿನ ನಾನು ಮಳೆ ಜರ್ಕಿನ್ ಕ್ಯಾಮೆರಾಗೂ ಜರ್ಕಿನ್ ಹಾಕಿ ಒಂದು ಬಸ್ ಸ್ಟಾಪಿನಲ್ಲಿ ಮಳೆಯಲ್ಲಿ ನೆನೆಯುವವರ ಫೋಟೋ ತೆಗೆಯಲು ಹೋಗಿದ್ದೆ. ನನ್ನ ಲೇಖನಕ್ಕೆ ಆ ಚಿತ್ರ ಬೇಕಿತ್ತು ಸಿಗಲಿಲ್ಲ. ಆದ್ರೆ ಕನಸಂತೂ ಇದ್ದೇ ಇದೆ. ನಾನು ಪೂರ್ತಿ ಮಳೆಯಲ್ಲಿ ನೆನೆದರೂ ಪರ್ವಾಗಿಲ್ಲ...ಅಂಥ ಫೋಟೋ ಬೇಕೆನ್ನುವುದು ಸದ್ಯದ ನನ್ನ ಕನಸು...
ನೀವೇನಂತೀರಿ...

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಚಂದ್ರಶೇಖರ್ ಸರ್,
ಆಗಸ ನೋಡುವುದೇ ಕಡಿಮೆಯಾಗಿರುವ ಈ ಒತ್ತಡದ ದಿನಗಳಲ್ಲಿ ನಿಮ್ಮ ಚಿತ್ರಬರಹ ಹೊಸ ಆಸೆ, ಕನಸು, ಸ್ಫೂರ್ತಿ ಬಿತ್ತುತ್ತಿದೆ. ಧನ್ಯವಾದಗಳು.

ಜಲನಯನ ಹೇಳಿದರು...

ಚಂದ್ರಶೇಖರ್ ಸರ್,
ಬಣ್ಣಗಳು ಬಿಳಿಯ ಸಮ್ಮಿಳಿತ ಅಂಶಗಳು ಎಂದು ಊಹಿಸಲೂ ಸಾಧ್ಯವಿಲ್ಲ ಎನ್ನುವವರಿಗೆ..ಕಣ್ಣಿಗೆ ಯಾವುದೇ ಬಣ್ಣವಿಲ್ಲದೇ ಗೋಚರಿಸುವ ಸೂರ್ಯನ ಕಿರಣ ಮಳೆಯ ಹನಿಗಳ ಮಧ್ಯೆ ತೂರಿ ಸರಿಯಿ ಬದಿಗೆ ಎನ್ನುವಂತೆ ತಳ್ಳುವಾಗ ತನ್ನ ಬಣ್ಣಗಳನ್ನು ಪಸರಿಸಿ ಮೂಡಿಸುವ ನಿಸರ್ಗ-ಸತ್ಯ ದರ್ಶನ. ಮಳೆಬಿಲ್ಲಿನ ಏಳು ಬಣ್ಣಗಳು, ಮತ್ತೆ ಒಂದೇ ಸಮಯದಲ್ಲಿ ಎರಡು ಮೂರು ಮಳೆಬಿಲ್ಲು ಮೂಡುವುದು ಇನ್ನೂ ವೈಶಿಷ್ಠ್ಯಪೂರ್ಣವಾದುದು.
ಒಳ್ಳೆಯ ಪೋಸ್ಟ್....

Ittigecement ಹೇಳಿದರು...

ಕ್ಷಣ ಚಿಂತನೆ...

ಮಳೆಯಿಂದ "ಮಳೆಬಿಲ್ಲು.."

ಕಷ್ಟ ಬಂದಾಗ ನಾಲ್ಕೂ ದಿಕ್ಕಿಗೆ ನೋಡ ಬೇಕು...
ಒಂದಲ್ಲ ಒಂದು ದಾರಿ ಇದ್ದಿರುತ್ತದೆ...

ಪ್ರಕ್ರತಿ ಸೊಂದರ್ಯದಿಂದ...
ಬದುಕು , ಆಧ್ಯಾತ್ಮದೆಡೆಗೆ ಸಾಗುವ ನಿಮ್ಮ ಲೇಖನ
ಬಹಳ ಇಷ್ಟವಾಯಿತು....

ಫೋಟೊ ಕೂಡ ಚೆನ್ನಾಗಿದೆ...

ಅಭಿನಂದನೆಗಳು...
ಈ ಥರಹದ ಲೇಖನ ಇನ್ನಷ್ಟು ಬರಲಿ...

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಕನಸು ನನಸಾಗಲಿ ಎಂದು ಆಶಿಸುತ್ತೇನೆ.

ಕ್ಷಣ... ಚಿಂತನೆ... ಹೇಳಿದರು...

ಮಲ್ಲಿಕಾರ್ಜುನ ಸರ್‍, ನಾವು ಸಂಜೆ ವೇಳೆ ೩-೪ ಜನ ಸಹೋದ್ಯೋಗಿಗಳು ಪ್ರತಿದಿನವೂ ಸಂಚಾರಕ್ಕೆ (ವಾಕಿಂಗ್) ಹೋಗುತ್ತೇವೆ. ಕಾಲುದಾರಿಯಲ್ಲಿ ನಡೆಯುತ್ತಾ, ರಿಂಗ್ ರಸ್ತೆಯಲ್ಲಿ ಸುತ್ತ ಮುತ್ತೆಲ್ಲಾ ನೋಡುತ್ತಾ ಹೋಗುವಾಗ ನಾವು ಎತ್ತರ ಪ್ರದೇಶದಲ್ಲಿರುತ್ತೇವೆ. ಜೊತೆಗೆ ಆಕಾಶದೆಡೆಗೆ ಕಣ್ಣು ಹಾಯಿಸುವುದೂ ಒಂದು ಕೆಲಸ. ಮಳೆ ಬರುತ್ತಾ? ಮೋಡ ಕಟ್ಟಿದೆಯಾ? ಹೀಗೆ ಮಾತಾಡುತ್ತಾ ಸಾಗುವಾಗ ಆಕಾಶ + ಚಂದ್ರ, ನಕ್ಷತ್ರ ವೀಕ್ಷಣೆಯಾಗುವುದಿದೆ.

ಇಂದಿನ ವೇಗದ, ಒತ್ತಡದ ಬದುಕಿನಲ್ಲಿ ಆಕಾಶ ನೋಡುವ ಮಂದಿ ಕಡಿಮೆಯೆಂದೇ ಹೇಳಬಹುದು. ಸಂಜೆ ಕೆಲಸ + ಆಟ ಮುಗಿಸಿ ಮನೆಗೆ ಬಂದಾಗ, ನಮ್ಮ ಪಕ್ಕದ ಮನೆಯ ಗೋಡೆಯಲ್ಲಿನ ಬಣ್ಣ ವ್ಯತ್ಯಯವಾಯಿತೆಂದರೆ (ಬೆಳಿಕಿನ ಬಣ್ಣ) ತಕ್ಷಣ ಹೊರಬಂದು ನೋಡುವು ಅಭ್ಯಾಸವಾಗಿದೆ. ಹೀಗಾಗಿಯೇ ಈ ಕನಸಿನ ಚಿತ್ರ ತೆಗೆಯಲು, ಅದನ್ನು ವಾಕ್ಯಗಳಲ್ಲಿ ಹೇಳಲು ಸಾಧ್ಯವಾಗಿದ್ದು. ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಜಲನಯನ ಅವರೆ, `ಕ್ಷಣ ಚಿಂತಿಸಿ' ಈ ಬ್ಲಾಗಿಗೆ ಭೇಟಿಕೊಟ್ಟಿದ್ದಕ್ಕೆ ಸ್ವಾಗತ. ನಿಮ್ಮ ಅಭಿಪ್ರಾಯದಂತೆ ಇವೆಲ್ಲವೂ ಪ್ರಕೃತಿಯಲ್ಲಿ ರೋಚಕತೆಗಳು. ನನ್ನ ಕಚೇರಿ ಮಿತ್ರರೊಬ್ಬರು ೨-೩ ಮಳೆಬಿಲ್ಲುಗಳ ಬಗ್ಗೆ ತಿಳಿಸಿದ್ದರು. ಇಲ್ಲಿ ನೀವೂ ಸಹ ತಿಳಿಸಿದ್ದೀರಿ. ಅಂತಹ ಒಂದು ಅವಕಾಶಕ್ಕಾಗಿ ಕಾಯುತ್ತಾ, ಧನ್ಯವಾದಗಳೊಂದಿಗೆ,

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಸರ್‍,
ನಿಮ್ಮ ಈ ಮಾತುಗಳನ್ನು ಒಪ್ಪಲೇಬೇಕು. ಏಕೆಂದರೆ, ಪ್ರತಿಯೊಂದು ಸಮಸ್ಯೆಗಳಿಗೂ ಸಕಾರಾತ್ಮಕ ಪರಿಹಾರಗಳಿರುತ್ತವೆ. ಅದನ್ನು ಕಾಣುವ, ಒಪ್ಪಿಕೊಳ್ಳುವ, ಆಶಾವಾದಿಯ ಮನಸ್ಸು ಇರಬೇಕು ಎಂಬುದನ್ನು ನೀವು ಒಂದೇ ವಾಕ್ಯದಲ್ಲಿ ತಿಳಿಸಿದ್ದಕ್ಕೆ ಧನ್ಯವಾದಗಳು.