ಬುಧವಾರ, ಜೂನ್ 10, 2009

ಬದುಕು ವಿಚಿತ್ರ- ೨

ಇಲ್ಲಿಯವರೆಗೆ...

ಸದ್ಯಕ್ಕೆ ಒಂದು ದಾರಿ ಕಂಡಿದೆ. ಅದನ್ನೇ ಉಪಯೋಗಿಸೋದು ಅಂತ ನಿರ್ಧರಿಸಿದ್ದಾಳೆ.

ಹೌದು. ಇಷ್ಟುದಿನ ಇವನಿಗಾಗಿ, ಇವನ ಭವಿಷ್ಯಕ್ಕಾಗಿ ದುಡಿದಿದ್ದು ಮತ್ತು ಸಾಲ ಮಾಡಿದ್ದೂ ಸಾಕು. ಅವಮಾನಗಳನ್ನು ಸಹಿಸಿದ್ದೂ ಸಾಕು. ಮನೆ ಬಿಟ್ಟು ಹೋಗುವುದೇ ಸರಿ ಎಂದು ನಿರ್ಧರಿಸಿದ್ದಾಗಿದೆ. ಅದರಂತೆಯೇ ನಡೆದುಕೊಳ್ಳುವೆನು.

ಎಷ್ಟು ಮನೆಗಳನ್ನು ಬದಲಾಯಿಸಿದ್ದಾಗಿದೆ? ಈಗೇನಿದ್ದರೂ ಇವನೇ ಮನೆ ಬಿಟ್ಟು ಹೋಗುವುದು ಸರಿಯೆನಿಸಿದೆ. ಏಕೆಂದರೆ, ಇನ್ನು ಮನೆ ಹುಡುಕುವ, ಬಾಡಿಗೆ ಕೊಡುವ, ಅವಮಾನ ಸಹಿಸುವ ಶಕ್ತಿಯಿಲ್ಲ.

ಹೀಗೆಂದೇ ನಿರ್ಧರಿಸಿ, ಕರುಳ ಸಂಬಂಧವನ್ನು ಕಡಿದುಕೊಂಡಿದ್ದಾಳೆ. ಇನ್ನು ಅವನು ಸ್ವತಂತ್ರಹಕ್ಕಿಯಾಗಿ ಎಲ್ಲಾದರೂ ಇರಲಿ, ಹೇಗಾದರೂ ಇರಲಿ ಅವನಿಂದ ಕಾಟ ಸಹಿಸಲಾರೆ ಎಂದು ಗೋಳುತೋಡಿಕೊಂಡಾಗ... ಸಮಾಧಾನ ಮಾಡುವ ಪರಿ ತೋಚಲಿಲ್ಲ.
ಇವನ ಈ ಆಟೋಟಗಳಿಂದಾಗಿ ಒಡಹುಟ್ಟಿದವರು, ನೆಂಟರು, ಮಿತ್ರರನ್ನೆಲ್ಲ ಕಳೆದುಕೊಂಡೆ. ಆದರೆ, ಆ ಕಣ್ಣಿಗೆ ಕಾಣದ ದೇವರ ದಯೆಯಿಂದ ಇನ್ನೂ ಇದ್ದೇನೆ, ಎಂದು ಹೇಳುವಾಗ ಹೇಗೆ ಸಮಾಧಾನಪಡಿಸಿಲಿ ಎಂದೇ ತಿಳಿಯದಾಯಿತು.

ಇದೀಗ ಅವನು ಮನೆ ಬಿಟ್ಟಿದ್ದಾನೆ, ಅಲ್ಲಲ್ಲ ಮನೆಯಿಂದ ಅವನನ್ನು ಹೊರಹಾಕಿದ್ದಾಳೆ. ಅಮ್ಮ ಮನೆಯಿಂದ ಮಾತ್ರವಲ್ಲದೆ ಮನಸ್ಸಿನಿಂದಲೂ ದೂರಮಾಡಿಕೊಂಡಿದ್ದಾಳೆ.

----------ಸದ್ಯಕ್ಕೆ ಇಲ್ಲಿಯವರೆಗೆ ತಿಳಿಯಿತು. ಮುಂದಿನದು ಏನೆಂದು ತಿಳಿದಿಲ್ಲ... ----------------

4 ಕಾಮೆಂಟ್‌ಗಳು:

shivu ಹೇಳಿದರು...

ಸರ್,

ಇದು ಸರಿಯಾದ ಅಂತ್ಯವಾಗಲಿಲ್ಲ..ಇನ್ನೊಂದಿಷ್ಟು ತಿರುವು ಇದ್ದರೇ ಚೆನ್ನಿತ್ತು...

ಕ್ಷಣ... ಚಿಂತನೆ... Thinking a While.. ಹೇಳಿದರು...

ಶಿವು ಸರ್‍, ಲೇಖನದ ಬಗೆಗಿನ ಪ್ರತಿಕ್ರಿಯೆಗೆ ಧನ್ಯವಾದಗಳು. ಕಥೆಯಲ್ಲಿನ ತಿರುವು ಬೇರೆಯದೇ ಇರಬೇಕಿತ್ತು ಎಂದು ಅನಿಸುವುದು ಸಹಜ. ಆದರೆ ಇದು ಕಥೆಯಾಗಿರದೇ ಬದುಕಿನ ನೈಜ ಘಟನೆಯಾಗಿದೆ. ನನ್ನೊಬ್ಬ ಆತ್ಮೀಯರ ಜೀವನದಲ್ಲಿ ನಡೆದಂತಹುದು ಇದು. ಅದಕ್ಕೆ `ಮುಂದೇನು?" ಎಂಬ ಪ್ರಶ್ನೆ ಹಾಗೆಯೇ ಉಳಿಸಿದ್ದೇನೆ.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ,
ನಾನು ಬೇರೆಯದೇ ಆದ ಅಂತ್ಯವನ್ನು ಬಯಸುತ್ತಿದ್ದೆ,
ಅಭಿನಂದನೆಗಳು .

ಕ್ಷಣ... ಚಿಂತನೆ... Thinking a While.. ಹೇಳಿದರು...

ಸರ್‍, ಧನ್ಯವಾದಗಳು.ಇದು ಕಥೆಯಾಗಿರದೇ ಬದುಕಿನ ನೈಜ ಘಟನೆಯಾಗಿದೆ.