ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿನ್ನೆಲೆಯಲ್ಲಿ ಅಥವಾ ಬೆನ್ನೆಲುಬಾಗಿ ಒಬ್ಬರಲ್ಲಾ ಒಬ್ಬರ ಪ್ರಭಾವ, ಆಸರೆ, ಆಕಾಂಕ್ಷೆ ಇವೆಲ್ಲ ಇರುತ್ತವೆ. ಹಾಗೆಯೇ ಸುಖದ ಹಿಂದೆ ದು:ಖವೂ, ದು:ಖದ ಹಿಂದೆ ಸುಖವೂ ಇರುವುದನ್ನು ಪ್ರತಿಯೊಬ್ಬರೂ ತಮಗಾದ ಅನುಭವಗಳಿಂದ ತಿಳಿದಿರುತ್ತಾರೆ. ಪ್ರತಿ ಬಾರಿಯೂ ಯಶಸ್ಸು ಒಬ್ಬನಿಗೇ ಸಲ್ಲುವುದಿಲ್ಲ ಅಥವಾ ಅವನೊಬ್ಬನ ಸ್ವತ್ತೇ ಆಗಿರುವುದಿಲ್ಲ. ಯಶಸ್ಸು ಒಬ್ಬರಿಂದ ಒಬ್ಬರಿಗೆ ಆಗಾಗ ವರ್ಗಾವಣೆಯಾಗುತ್ತಲೇ ಇರುತ್ತದೆ, ಹಾಗೆಯೇ ಇರಬೇಕು ಎಂಬ ನಿಯಮ ಇರಲೂ ಬಹುದು, ಇಲ್ಲದಿರಲೂ ಬಹುದು. ಕಷ್ಟನಷ್ಟ, ಸುಖದು:ಖಗಳೂ ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ. ಅದೊಂದು ರೀತಿಯ ಚಿಂತೆಯಿದ್ದಂತೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ, 'ಚಿಂತೆ' ಎಂಬ ಪದದ ನಡುವಿನಲ್ಲಿರುವ ಶೂನ್ಯದ ಸೂಚಕವೇ `ಚಿತೆ' ಯ ಕಡೆಗೆ ಸಾಗುವುದಾಗಿದೆ. ಇಲ್ಲಿ ಅತಿಯಾದ ಚಿಂತೆಯು ಚಿತೆಯಾಗಬಲ್ಲುದು ಎಂಬುದಷ್ಟೇ ಆಗಿದೆ.
ಸುಖ ದು:ಖಗಳೆರಡೂ ಮುಗಿಲ ಮೋಡದಂತೆ. ಅವು ಆದಷ್ಟೂ ಬೇಗನೇ ಆಗಾಗ ಕರಗುತ್ತಲೇ ಇರುತ್ತಾ ಮತ್ತೆ ಮೋಡ ಕಟ್ಟುತ್ತಾ ಗಾಳಿ ಬಂದಂತೆ ಚದುರುತ್ತಾ, ಮಳೆ ಹನಿಸುತ್ತಾ ಮರೆಯಾಗುತ್ತಲೇ ಇರುತ್ತವೆ. ಸೋಲು, ಗೆಲುವು ಅಥವಾ ಗೆಲುವು, ಸೋಲು ನಾಣ್ಯಕ್ಕಿರುವ ಎರಡು ಮುಖದಂತೆ ಎಂಬುದನ್ನು ಕೆಲವರು ಹೀಗೂ ಹೇಳಿದ್ದಾರೆ. ಇವುಗಳನ್ನು ನಾವು ಅರ್ಥೈಸಿಕೊಳ್ಳುವದರಲ್ಲಿ ಬೆರೆತಿರುತ್ತದೆ.
Happiness is like a cloud, if you stare at it long enough, it evaporates. SArah McLachlan
Behind every cloud is another cloud. Judy Garland

ಪ್ರತಿಯೊಂದು ಮೋಡದ ಅಂಚಿಗೆ ಬೆಳ್ಳಿಯ ಗೆರೆಯಿರುತ್ತದೆ. Every cloud has its silver lining but it is sometimes a little difficult to get it to the mint. says Don Marquis ಇದನ್ನು ಬದುಕಿಗೂ ಅಳವಡಿಸಿಕೊಳ್ಳಬಹುದು.
ಬಾಲ್ಯ, ಯೌವನ, ವೃದ್ಧಾಪ್ಯದಂತೆ ಪ್ರಕೃತಿಯಲ್ಲಿಯೂ ಸಹ ಬದಲಾವಣೆಗಳಿರುತ್ತವೆ. ಅಂತೆಯೇ ಮನುಷ್ಯನ ಬದುಕಿನಲ್ಲಿಯೂ ಸಹ. ಅದನ್ನೇ Nature is a mutable cloud which is always and never the same.- Ralph Waldo Emerson ರವರು ಹೇಳುತ್ತಾರೆ.
ಕೆಲವೊಮ್ಮೆ ಬದುಕಿನಲ್ಲಿ ಎಂತಹ ಪರಿಸ್ಥಿಯಿರುತ್ತದೆಂದರೆ, ಕೆಲವೊಂದು ಸಮಸ್ಯೆಗಳಿಂದ, ದು:ಖಗಳಿಂದ ಹೊರಬರಲು ದಾರಿಯೇ ಇಲ್ಲದ ಕಾರ್ಗತ್ತಲ ಗವಿಯಲ್ಲಿರುವಂತೆ ಆಗುತ್ತದೆ. ಆದರೆ ಅವೆಲ್ಲವುಗಳಿಂದ ಹೊರಬರುವ ದಾರಿಯು ಸಣ್ಣ ಬೆಳಕಿಂಡಿಯನ್ನು ಹೊಂದಿಯೇ ಇರುತ್ತದೆ ಎಂದರೆ ತಪ್ಪಾಗದು. ಅದರಂತೆಯೇ There's a bright spot in every dark cloud.- Bruce Beresford ಇವರ ಮಾತನ್ನು ಹೀಗೂ ನೆನಪಿಡಬಹುದಲ್ಲವೆ?
ಆ ಒಂದು ಬೆಳಕಿನ ಕಿರಣಕ್ಕಾಗಿ ನಾವು ನಮ್ಮ ಕಣ್ಗಳನ್ನು ತೆರೆದಿಡುವ.. ಹೀಗಿರುವಾಗ ನಾವು `ಬೆಳ್ಳಿ ಮೋಡದ ಅಂಚಿನಿಂದ ಮೂಡಿ ಬಂದಾ ಆಶಾಕಿರಣ...' ಎಂದು ಹಾಡಬಾರದೆ? ನೀವೇನಂತೀರಿ?
ಫೋಟೋಗಳು: ಚಂದ್ರಶೇಖರ ಬಿ.ಎಚ್. ಮೇ / ಜೂನ್ ೨೦೦೯

6 ಕಾಮೆಂಟ್ಗಳು:
ಆಶಾವಾದದ ಬಗ್ಗೆ ಸರಳವಾಗಿ ತಿಳಿಸಿದ್ದೀರ, ಮೊದಲ ಚಿತ್ರ ಇಷ್ಟ ಆಯ್ತು
ಹೌದು ಸರ್, ನೀವು ಈ ಲೇಖನದಲ್ಲಿ ಹೇಳಿರುವುದು ತುಂಬಾ ಸತ್ಯ, ನಿಮ್ಮ ಈ ಲೇಖನ ಓದಿದವರ ಮನಸ್ಸಿಗೆ ತುಂಬಾ ಸಮಾಧಾನ ತರುತ್ತದೆ. ಜೀವನದಲ್ಲಿ ಸೋಲು ಗೆಲುವು ಎರಡು ಶಾಶ್ವತವಲ್ಲ, ಒಂದರ ಹಿಂದೆ ಒಂದು ಸಾಗುತ್ತಲೇ ಇರುತ್ತವೆ..........ಇಂಥಹ ಒಳ್ಳೆಯ ಲೇಖನ ಕೊಟ್ಟ ನಿಮಗೆ ನನ್ನ ಧನ್ಯವಾದಗಳು............
ಪಾಲ ಅವರೆ, ಲೇಖನ ಮತ್ತು ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ಸಸ್ನೇಹದಿಂದ,
ಚಂದ್ರಶೇಖರ ಬಿ.ಎಚ್.
ಸವಿತಾ ಅವರೆ, ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.
ಸಸ್ನೇಹದಿಂದ,
ಚಂದ್ರಶೇಖರ ಬಿ.ಎಚ್.
ಭರವಸೆ, ಸುಖ-ದುಃಖ, ಮೋಡಗಳ ಉಪಮೆಗಳು ಚಿತ್ರ ಸಹಿತ, ಅದ್ಯಾತ್ಮದ ತಳಹದಿಯಲ್ಲಿ ಎಲ್ಲವನ್ನು ಚೆನ್ನಾಗಿ ಹೇಳಿದ್ದೀರಿ....
ಧನ್ಯವಾದಗಳು..
ಶಿವು ಸರ್, ಲೇಖನ ನಿಮಗಿಷ್ಟವಾಗಿದ್ದಕ್ಕೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ ಮತ್ತು ಬರೆಯುತ್ತಿರಿ.
ಸಸ್ನೇಹಗಳೊಂದಿಗೆ,
ಚಂದ್ರಶೇಖರ ಬಿ.ಎಚ್.
ಕಾಮೆಂಟ್ ಪೋಸ್ಟ್ ಮಾಡಿ