ಸೋಮವಾರ, ಜೂನ್ 29, 2009

ಮಾತುಗಾರರು...

ಮಾತುಗಾರರನ್ನು ಅನೇಕರಾಗಿ ವಿಂಗಡಿಸಬಹುದು. ಕೆಲವರನ್ನು ಉತ್ತಮ ಮಾತುಗಾರರೆಂದರೆ, ಮತ್ತೆ ಕೆಲವರನ್ನು ವಾಚಾಳಿಗಳು ಎಂದೂ ಅನ್ನಬಹುದು. ಅವರ ಒಂದು ಪಟ್ಟಿಯನ್ನು ಹೀಗೆ ಮಾಡಬಹುದು.
ಕೆಲವು ಪ್ರಕಾರದ ಮಾತುಗಾರರನ್ನು ಈ ಪಟ್ಟಿಯಲ್ಲಿ ಸೇರಿಸಬಹುದು.

ಪ್ರಶಾಂತ, ನಿರಾಳ, ಸಮಚಿತ್ತ, ಪ್ರಸನ್ನ, ಸಮಾಧಾನಚಿತ್ತ, ಸಹನಶೀಲ, ಸಹೃದಯಿ, ವಿವೇಕವಂತ ಮಾತುಗಾರರು ಹಾಗೂ ದಿಟ್ಟೆದೆಯ, ಗಟ್ಟಿನುಡಿಗಳನ್ನಾಡುವ ಯಶಸ್ವೀ, ವಿಜಯದ ಮಾತುಗಾರರು...

ಇನ್ನೊಂದು ಪ್ರಕಾರದ ಮಾತುಗಾರರನ್ನು ಪಟ್ಟಿಮಾಡಲು ಹೋದರೆ ಅವರ ಪಟ್ಟಿ ಉದ್ದವಾಗುವುದು. ಅವರನ್ನೆಲ್ಲ ಹೀಗೆ ಹೆಸರಿಸಬಹುದು: ಬೇಸರ ಬರಿಸುವ, ಕೀಳುನುಡಿಗಳಾಡುವ, ರೇಗಿಸುವ, ಅಸಹ್ಯಕರ ನುಡಿಗಳಾಡುವ, ಚುಡಾಯಿಸುವ, ಅಕ್ಷೇಪಣೀಯ, ಹರಟೆ ಮಲ್ಲ, ಆಡಿದ್ದೇ ಆಡುವವ, ಜಿಗಟಿನ, ಒಗಟಿನ, ಪಟ್ಟುಬಿಡದ, ತಲೆತಿನ್ನುವ ಅಥವಾ ಕಚ್ಚಿಕೊಳ್ಳುವ, ಅವಿವೇಕಿ, ಆಶೆ ತೋರಿಸಿ ನಿರಾಶೆ ಮಾಡುವ ಅಥವಾ ವಂಚಕತನ ಮಾತುಗಾರ, ಹಿಂಸಿಸುವ/ ಹಿಂಸ್ರನುಡಿಗಳಾಡುವವ, ಕೊಂಕು ಅಥವಾ ವಕ್ರ ನುಡಿಗಳ, ಕುಟಿಲಬುದ್ಧಿಯ, ವಿಧ್ವಂಸಕ ನುಡಿಗಳನ್ನಾಡುವ, ಕಠಿಣ ನುಡಿಗಳಾಡುವ ಮಾತುಗಾರರು.
ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಕೇವಲ ಎರಡನೇ ಪಟ್ಟಿಯಲ್ಲಿರುವವರ ಸಂಖ್ಯೆಯೇ ಜಾಸ್ತಿಯೆನ್ನಬಹುದು. ಏಕೆಂದರೆ, ಯಾವುದೇ ಒಂದು ವಿಚಾರವನ್ನು ತೆಗೆದುಕೊಂಡರೂ ಇವರಲ್ಲಿ ಇಂತಹ ಗುಣಗಳ ಮಾತಾಡುವವರೇ ಕಾಣಬರುತ್ತಾರೆ. ಬಸ್ಸಿನಲ್ಲಿ, ಅಂಗಡಿಗಳಲ್ಲಿ, ತರಕಾರಿ ಮಾರುಕಟ್ಟೆಗಳಲ್ಲಿ... ಇನ್ನೂ ಇತರೆ ಸ್ಥಳಗಳಲ್ಲಿ ಇವರ ಸರದಿ ಜಾಸ್ತಿ.

ಉತ್ತಮ ಮಾತುಗಾರರು ಸಾಮಾನ್ಯವಾಗಿ ನೇಪಥ್ಯದಲ್ಲಿಯೇ ಇರುತ್ತಾರೆ. ಅಂತಹವರ ಸಂಖ್ಯೆ ಕಡಿಮೆಯೆಂದರೆ ಸೋಜಿಗವೇನಲ್ಲ.

ಇವರಲ್ಲಿ ನಾವು ಯಾರಾಗಬಹುದು ಎಂದು ನಮ್ಮಲ್ಲಿಯೇ ಪ್ರಶ್ನಿಸಿಕೊಳ್ಳುವುದಾದರೆ... ನಾವೇನಾಗಬಹುದು? ಅದಕ್ಕೆ, ಕೊನೆಯದಾಗಿ ಈ ಮಾತನ್ನು ನಾವು ಆಗಾಗ ಗಮನಿಸುತ್ತಿದ್ದರೆ... Talking should always be a pleasure to the speaker and listener, never a bore.

7 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ \

ತಾವು ಅಂದಿದ್ದು ನಿಜ, ಮಾತು ಹಿತ ಮಿತವಾಗಿದ್ದರೆ ಚೆನ್ನ

ಅನಾಮಧೇಯ ಹೇಳಿದರು...

ಯಾವಾಗ, ಎಲ್ಲಿ, ಎಷ್ಟು ಮಾತನಾಡಬೇಕು ಅನ್ನೋ ಪ್ರಜ್ಞೆ ನಮ್ಮಲ್ಲಿ ಬಂತು ಅಂತಾದ್ರೆ ನಾವು 'ಪರಿಣಾಮಕಾರಿ ಮಾತುಗಾರರಾಗ್ತೀವಿ ಅಲ್ವಾ??

Ittigecement ಹೇಳಿದರು...

ಕ್ಷಣ ಚಿಂತನೆ...

ನಾವು ಎಲ್ಲಿ, ಯಾರ ಬಳಿ ಮಾತಾಡುತ್ತಿದ್ದೇವೆ ಎನ್ನುವ ಪರಿಜ್ಞಾನ ನಮ್ಮಲ್ಲಿದ್ದರೆ..
ಮಾತಿನಿಂದಾಗುವ ಅನಾಹುತಗಳನ್ನು ತಪ್ಪಿಸಬಹುದು....

ಆದರೆ ಅಂಥಹ ಪರಿಜ್ಞಾನ ಮುಗ್ಧತೆಯನ್ನು ಸಾಯಿಸಿ ಬಿಡುತ್ತದೆ...

ಏನಂತೀರಿ...?

shivu.k ಹೇಳಿದರು...

ಸರ್,

ನಾವಾಡುವ ಮಾತಿನ ಪ್ರಜ್ಞೆಯಿರಬೇಕು. ಅದಿಲ್ಲದಿದ್ದಲ್ಲಿ ಎದುರಿದ್ದರವರಿಗೆ ಬೇಸರವಾಗುವುದು ಖಂಡಿತ.

ನಮ್ಮ ದೇಹದ ೮೦% ಶಕ್ತಿಯನ್ನು ನಮ್ಮ ತಲೆಯ ಮೆದುಳು ಮತ್ತು ಬಾಯಿ ಬಳಸುತ್ತವಂತೆ. ಮಾತು ಹೆಚ್ಚಾದಾಗ ಶಕ್ತಿ ಹೆಚ್ಚು ವ್ಯಯವಾಗಿ ಮೆದುಳಿನ ಕೋಟ ಕಡಿಮೆಯಾಗುವುದರಿಂದ ನಮ್ಮ ಸೃಜನಶೀಲತೆ ಕಡಿಮೆಯಾಗುತ್ತದಂತೆ. ಅದ್ದರಿಂದ ನಮ್ಮ ಮೆದುಳಿನ ಆದೇಶದನುಸಾರವಾಗಿ ಮಾತನ್ನು ಕಡಿಮೆ, ಹಿತಮಿತವಾಗಿ ಆಡಿದರೇ ಬದುಕಿನಲ್ಲಿ ಏನಾದರೂ ಸಾಧಿಸಬಹುದಂತೆ...

ನೀವೇನಂತೀರಿ...ಸರ್,

ಕ್ಷಣ... ಚಿಂತನೆ... ಹೇಳಿದರು...

ಸಾಗರದಾಚೆಯ ಇಂಚರ,ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಸುಮನಾ ಮೇಡಂ,
ಪ್ರಕಾಶ್ ಸರ್‍

ಮಾತಿನ ಮೇಲಿನ ಹಿಡಿತದ ಪರಿಣಾಮ ಮತ್ತು ಅದರಿಂದಾಗುವ ಅನುಕೂಲ/ಅನಾನುಕೂಲಗಳನ್ನು ಕೆಲವೇ ಮಾತುಗಳಲ್ಲಿ ತಿಳಿಸಿದ್ದೀರಿ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.


ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಮಾತು ಹೇಗೆ ದೇಹ ಮತ್ತು ಮೆದುಳಿನ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.