ಶುಕ್ರವಾರ, ಜುಲೈ 17, 2009

ನಗು ನಗುತಾ ನಲೀ ನಲೀ ಏನೇ ಆಗಲಿ...

ನಗಬೇಕು, ನಗಿಸಬೇಕು,
ಅದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ

`ನಕ್ಕರೆ ಅದೇ ಸ್ವರ್ಗ' ಚಲನಚಿತ್ರದ ಈ ಹಾಡನ್ನು ಆಲಿಸಿದರೇ ಸಾಕು, ಹಾಸ್ಯ ಚಕ್ರವರರ್ತಿ ದಿ ನರಸಿಂಹರಾಜು ಅವರ ನಟನೆ ಕಣ್ಮುಂದೆ ನಿಲ್ಲುತ್ತದೆ, ಅಲ್ಲವೇ?

ಹೌದು. ಜೀವನವೆಂಬುದು ಜಂಜಾಟದ ಮಾಲೆಯೆಂದರೆ ತಪ್ಪೇನಿಲ್ಲ. ಹಾಗೆಂದ ಮಾತ್ರಕ್ಕೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಇರಬೇಕೆ? ಇನಿತಾದರೂ ನಗಬಾರದೆ?

ಮೊನ್ನೆ ಒಂದು ವಿದ್ಯುನ್ಮಾನ ಪುಸ್ತಕವನ್ನು ಓದುತ್ತಿದ್ದೆ. ಅದರ ಹೆಸರು Cheerfulness As a Life Power ಎಂದು. ಅದರಲ್ಲಿ ಬರುವ ಒಂದೆರಡು ವಿಚಾರಗಳನ್ನು ನನಗೆ ತಿಳಿದಂತೆ ಭಾವಿಸಿ ಇಲ್ಲಿ ನಿಮ್ಮೊಡನೆ ಹಂಚಿಕೊಂಡಿದ್ದೇನೆ. ಇಷ್ಟವಾದರೆ ನಕ್ಕುಬಿಡಿ, ಇಲ್ಲವಾದರೂ ಸರಿಯೇ ನಕ್ಕು-ಬಿಡಿ, ನಿಮಗೆ ಸೇರಿದ್ದು.

ಅದರಲ್ಲಿ ಮೊದಲ ಪಠ್ಯದಲ್ಲಿಯೇ ಹಾಸ್ಯಕ್ಕೆ ಇರುವ ಮೌಲ್ಯವೇನೆಂದು ತಿಳಿಸುತ್ತಾರೆ, ಲೇಖಕರು.
ವಿಲ್ಲಿಯಂ ಕೆ. ವಾಂಡರ್‍ಬೇಟ್‌ (William K. Vanderbilt) ಒಬ್ಬ ಆಗರ್ಭ ಶ್ರೀಮಂತ. ಆತನು ಒಮ್ಮೆ (Coquelin the elder) ಇವರನ್ನು ಭೇಟಿ ಮಾಡುತ್ತಾರೆ. ಮಾತುಕತೆ ಸಾಗುತ್ತದೆ.
ಒಂದೆರಡು ದಿನಗಳಲ್ಲಿ (Coquelin the elder) ಇವರಿಗೆ ಒಂದು ಪತ್ರ ಕೈಸೇರುತ್ತದೆ. ಅದರಲ್ಲಿ...
"You have brought tears to our eyes and laughter to our hearts. Since all philosophers are agreed that laughing is preferable to weeping, your account with me stands thus:--
"For tears, six times . . . $600 "For laughter, twelve times . . 2,400 ------ $3,000
"Kindly acknowledge receipt of enclosed check."


ಈಗ ಹೇಳಿ, "ಆಕಾಶವೇ ಬೀಳಲಿ ಮೇಲೆ ನಾನೆಂದು ನಗುವೆನು, ನಗಿಸುವೆನು"... ಎಂದು.

ನಾವು ಕೇವಲ ಚಿತ್ರಗೀತೆಗಳಲ್ಲಿ, ಸಿನೆಮಾ, ದೂರದರ್ಶನ ಧಾರಾವಾಹಿಗಳಲ್ಲಿ ಮಾತ್ರ ಹಾಸ್ಯದ ತುಣುಕುಗಳನ್ನು ನೋಡಿ, ಕೇಳಿ ನಗಬೇಕಿಲ್ಲ.

ದಿನನಿತ್ಯದ ಬದುಕಿನಲ್ಲಿ, ಮಾತಿನಲ್ಲಿ, ಒಬ್ಬರೊಂದಿಗೆ ಸಂಭಾಷಿಸುವಾಗಲೂ ಸಹ ಹಾಸ್ಯ-ನಗು ಇವೆಲ್ಲ ಸಾಧ್ಯ. ಹೃದಯಕ್ಕೆ ಹಾಸ್ಯಬೇಕು. ಆಗ ಹಾರ್ಟ್‌ಫೇಲ್‌/ಅಟ್ಯಾಕ್‌ ಆಗುವುದಿಲ್ಲ.

ಮರ್ಥ್ ಇಸ್ ಗಾಡ್ಸ್ ಮೆಡಿಸಿನ್‌ - ಹೌದು ಉಲ್ಲಾಸವೇ ಒಂದು ದೇವಕೊಟ್ಟ ದಿವ್ಯೌಷಧ ಎಂದರೆ ತಪ್ಪಾಗಲಾರದು.


ಇದೇ ಪುಸ್ತಕದಲ್ಲಿ ಇನ್ನೊಂದು ಘಟನೆಯೂ ಬರುತ್ತದೆ. ಆಕೆ ಎಲ್ಲ ದುಗುಡದುಮ್ಮಾನಗಳಿಂದ ಬಸವಳಿದು ಬೇಸರಗೊಂಡಿರುತ್ತಾಳೆ. ಜೀವನವೇ ಸಾಕೆಂಬ ಜಿಗುಪ್ಸೆ ಕಾಡುತ್ತಿದೆ. ಕಡೆಗೊಂದು ನಿರ್ಧಾರಕ್ಕೆ ಬರುತ್ತಾಳೆ. ದಿನದಲ್ಲಿ ಕನಿಷ್ಠ ಮೂರು ಬಾರಿಯಾದರೂ ನಗಬೇಕು ಎಂದು. ಅದೆಂತಹ ಸನ್ನಿವೇಶವೇ ಇರಲಿ ನಗುತ್ತೇನೆ ಎಂದೂ ನಿರ್ಧರಿಸುತ್ತಾಳೆ. ಇದನ್ನೇ ತನ್ನ ಪತಿ ಮತ್ತು ಮಕ್ಕಳ ಮುಂದೆಯೂ ತಿಳಿಸುತ್ತಾಳೆ. ಅವರಿಗೆ ಇವಳ ಈ ವಿಚಾರವನ್ನು ಗೌರವಿಸಿ ಅವರೂ ಸಹ ಸಹಕರಿಸುತ್ತಾರೆ. ಅವಳು ಹೇಳುತ್ತಾಳೆ. ಈ ವಿಚಾರ ನಿನ್ನೆಯಷ್ಟೇ ನನ್ನ ಮನಸಿಗೆ ಬಂತು ಅದನ್ನು ಗಂಡನಿಗೂ ತಿಳಿಸಿದೆ. ಪ್ರತಿ ಬಾರಿಯೂ ಮಾತಾಡುವಾಗ ನಗುನಗುತ್ತಾ ಮಾತಾಡಬೇಕು ಎಂಬುದಾಗಿ.... ಸಂಜೆ ಗಂಡ ಮನೆಗೆ ಬರುತ್ತಲೇ ಈವತ್ತು ಎಷ್ಟು ಬಾರಿ ನಿತ್ಯದ ನಗೆಯಾಡಿದೆ, ಹೀಗೆ ಪ್ರಶ್ನಿಸುತ್ತಾ ನಗುತ್ತಾನೆ. ಆಕೆ ಉತ್ತರ ಕೊಡುತ್ತಾ ನಗುತ್ತಾಳೆ. ಈ ವಿಚಾರ ಅವಳ ಮಕ್ಕಳಿಂದ ಇತರ ಮಕ್ಕಳಿಗೂ ತಲುಪಿ ಅವರ ತಾಯ್ತಂದೆಗಳಿಗೆ ತಲುಪುತ್ತದೆ. ಈ ವಿಷಯ ಪತಿಯಿಂದ ಅವನ ಮಿತ್ರರಿಗೂ ತಿಳಿಯುತ್ತದೆ. ಈಕೆ ಹೀಗೆ ಹೇಳುತ್ತಾಳೆ: ನಾನು ಅಪರೂಪಕ್ಕೊಮ್ಮೆ ನನ್ನ ಪತಿಯ ಮಿತ್ರರ ಭೇಟಿಯಾದಾಗ ಅವರುಗಳು 'ಈ ದಿನ ಎಷ್ಟು ಬಾರಿ ನಕ್ಕಿರಿ?" ಎಂದು ಪ್ರಶ್ನಿಸುತ್ತಾ ನಗುತ್ತಾರೆ. ಹೀಗೆ ನನ್ನ ನಗುವಿನ ವಿಚಿತ್ರ ಹವ್ಯಾಸದಿಂದ ನನ್ನಲ್ಲಿ ಸುಮಾರು ಆರು ವರ್ಷಗಳಿಂದ ಮನೆಮಾಡಿದ್ದ ದುಗುಡ, ತಲೆನೋವು ಎಲ್ಲವೂ ದೂರಾಗಿ ಇದೀಗ ಮನೆ-ಸಂಸಾರ ಎಲ್ಲವೂ ಆನಂದವಾಗಿದೆ ಎಂದು ತಿಳಿಸುತ್ತಾಳೆ.

ನಮ್ಮ ಹಿರಿಯ ಕವಿಗಳಾದ ಡಾ. ಡಿ.ವಿ.ಜಿ.ಯವರು ಈಕೆಯ ಮಾತುಗಳನ್ನೇ ಅನುಗುಣವಾಗುವಂತೆ ಹೀಗೆ ಹೇಳಿರಬಹುದೇ ಅನಿಸಬಹುದು.

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ
ನಗುತ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ-
ಮಿಗೆ ನೀನು ಬೇಡಿಕೊಳೊ -ಮಂಕುತಿಮ್ಮ

Chavasse ಹೀಗೆ ಹೇಳುತ್ತಾರೆ: ಉಲ್ಲಾಸವೆಂಬುದು ಒಂದು ತತ್ವಸಿದ್ದಾಂತ. ಅದನ್ನು ಯಾರೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಇದನ್ನು ನಾವು ಮಕ್ಕಳಿಗೆ ಎಳವಯಸ್ಸಿನಿಂದಲೇ ಅವರಲ್ಲಿ Mirth ಎಂಬುದನ್ನು ಹೀಗೆ ಕಲಿಸಬೇಕು ಎಂದು.

"Encourage your child to be merry and laugh aloud; a good hearty laugh expands the chest and makes the blood bound merrily along. Commend me to a good laugh,--not to a little snickering laugh, but to one that will sound right through the house. It will not only do your child good, but will be a benefit to all who hear, and be an important means of driving the blues away from a dwelling. Merriment is very catching, and spreads in a remarkable manner, few being able to resist its contagion. A hearty laugh is delightful harmony; indeed, it is the best of all music."
Photo & Design by Chandrashekara B.H. July2009
ಇಂದಿನ ಆಧುನಿಕ ಜಗತ್ತಿನಲ್ಲಿ ಹಾಸ್ಯೋತ್ಸವ, ನಗೆ ಜಾಗರಣೆ ಇವೆಲ್ಲವನ್ನೂ ಆಗಾಗ ಹಮ್ಮಿಕೊಳ್ಳುತ್ತಿರುತ್ತಾರೆ. ಜೊತೆಗೆ ಲಾಫಿಂಗ್‌ ಕ್ಲಬ್ಬುಗಳೂ ಸೇರ್ಪಡಯಾಗಿರುತವೆ. ಇಂತಹವುಗಳೆಲ್ಲ ನಗೆಯನ್ನು ಎಲ್ಲರಲೂ ಹಂಚಬೇಕೆಂಬ, ಜನರು ನಗುನಗುತಾ ತಮ್ಮ ನಿತ್ಯ ಜಂಜಾಟದಿಂದ ಹೊರಬರಲೆಂಬ ಆಶಯವಿರುತ್ತದೆ.

ನಗು ನಗುತಾ ನಲೀ ನಲೀ ಏನೇ ಆಗಲಿ... ಈ ಹಾಡನ್ನು ಗುನುಗುನುಗಿಸಿದರೂ ಸಹ ನಮ್ಮ ಜನರಲ್ಲಿ ಆಗಾಗ ಈ ಪ್ರಶ್ನೆಗಳು ಮೂಡಿದರೆ ನಾವೇನು ಮಾಡಲು ಸಾಧ್ಯ?

ನಗುವಿನ ಬಗ್ಗೆ ಒಂದು ಸೀರಿಯಸ್ ಲೇಖನ ಅಂತ ನಿಮಗನ್ನಿಸಿದರೆ/ದ್ದರೆ:

ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ...
ಎಂದುಕೊಂಡರಾಯಿತು.

12 ಕಾಮೆಂಟ್‌ಗಳು:

shivu ಹೇಳಿದರು...

ಕ್ಷಣಚಿಂತನೆ ಸರ್,

ನಗುವಿನ ಬಗ್ಗೆ ಒಂದು ಸೊಗಸಾದ ಲೇಖನ ಬರೆದಿದ್ದೀರಿ...

ದಿನನಿತ್ಯದ ಬದುಕಿನಲ್ಲಿ, ಮಾತಿನಲ್ಲಿ, ಒಬ್ಬರೊಂದಿಗೆ ಸಂಭಾಷಿಸುವಾಗಲೂ ಸಹ ಹಾಸ್ಯ-ನಗು ಇವೆಲ್ಲ ಸಾಧ್ಯ. ಹೃದಯಕ್ಕೆ ಹಾಸ್ಯಬೇಕು. ಆಗ ಹಾರ್ಟ್‌ಫೇಲ್‌/ಅಟ್ಯಾಕ್‌ ಆಗುವುದಿಲ್ಲ.

ಈ ಮಾತಂತೂ ಮಾನಸಿಕವಾಗಿ ಮತ್ತು ಆರೋಗ್ಯದ ದೃಷ್ಟಿಯಿಂದ ನಿಜವೆನಿಸುತ್ತದೆ...

ಧನ್ಯವಾದಗಳು.

ಅನಾಮಧೇಯ ಹೇಳಿದರು...

ಹೂಂ.. ನೀವು ಹೇಳಿದ್ದು ಬಿಲ್ಕುಲ್ ಸರಿಯಾಗೇ ಇದೆ. ನಾವು ನಕ್ಕೂ ಇತರರನ್ನೂ ನಗಿಸುವುದು ಬಹಳ ಒಳ್ಳೆಯದೇ. ನನ್ನದೊಂದು ಪ್ರಶ್ನೆ...ನಮ್ಮ ಮನದಲ್ಲಿ ನೋವಿದ್ದರೆ ನಗುವುದು ಸಹಜವಾಗುವುದಿಲ್ಲವಲ್ಲ... ಏನಂತೀರಿ?

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಸರ್,
ನಗು,ಉಲ್ಲಾಸ,ಸಂತಸ,ನೆಮ್ಮದಿ,ಆರೋಗ್ಯ...ಎಲ್ಲ ಒಂದಕ್ಕೊಂದು ಮಿಳಿತವಾಗಿರುವುದರ ಬಗ್ಗೆ ಚೆನ್ನಾಗಿ ಬರೆದಿರುವಿರಿ. ಆಲೋಚಿಸಿ ಆಚರಿಸುವಂತಿದೆ. ಧನ್ಯವಾದಗಳು.

Savitha.B.C ಹೇಳಿದರು...

ಹೌದು ಚಂದ್ರು ಸರ್ ನೀವು ಹೇಳಿದ ಹಾಗೆ ಪ್ರತಿಯೊಬ್ಬರೂ ತಾವು ನಕ್ಕು ಇತರರನ್ನು ನಗಿಸುವುದನ್ನು ರೂಡಿಸಿಕೊಳ್ಳಬೇಕು, ಆದರೆ ನನ್ನ ಅನಿಸಿಕೆ ಮನಸ್ಸಿನ ತುಂಬ ಬರಿ ನೋವು ಇದ್ದಾಗ ಸಹಜ ನಗು ಬರುವುದು ಸಾಧ್ಯವೇ? ಹಾಗೆ ನಕ್ಕರು ಅದು ತೋರ್ಪಡಿಕೆಯ ನಗು ಮಾತ್ರ ಆಗಿರುತ್ತದೆ ಎಂಬ ಅನಿಸಿಕೆ ನನ್ನದು.
ಅದರೂ ಇಂಥಹ ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.

Savitha.B.C ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Savitha.B.C ಹೇಳಿದರು...

ಹೌದು ಚಂದ್ರು ಸರ್ ನೀವು ಹೇಳಿದ ಹಾಗೆ ಪ್ರತಿಯೊಬ್ಬರೂ ತಾವು ನಕ್ಕು ಇತರರನ್ನು ನಗಿಸುವುದನ್ನು ರೂಡಿಸಿಕೊಳ್ಳಬೇಕು, ಆದರೆ ನನ್ನ ಅನಿಸಿಕೆ ಮನಸ್ಸಿನ ತುಂಬ ಬರಿ ನೋವು ಇದ್ದಾಗ ಸಹಜ ನಗು ಬರುವುದು ಸಾಧ್ಯವೇ? ಹಾಗೆ ನಕ್ಕರು ಅದು ತೋರ್ಪಡಿಕೆಯ ನಗು ಮಾತ್ರ ಆಗಿರುತ್ತದೆ ಎಂಬ ಅನಿಸಿಕೆ ನನ್ನದು.
ಅದರೂ ಇಂಥಹ ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... Think a while ಹೇಳಿದರು...

ಶಿವು ಸರ್‍,

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಸರ್‍, ಕೆಲವು ಸಂಗತಿಗಳು ನಿಜವೆಂದು ವೈದ್ಯಲೋಕ ಒಪ್ಪಿಕೊಂಡಿದೆ ಎಂದು ಪತ್ರಿಕೆಗಳಲ್ಲಿ ಘಟನೆಗಳನ್ನು ತಿಳಿಸಿದ್ದಾರೆ. ಅದನ್ನು ಆಧರಿಸಿ ನಾನು ಈ ಲೇಖನ ಬರೆಯಲು ಪ್ರಯತ್ನಿಸಿದೆ.

ಧನ್ಯವಾದಗಳು.

ಕ್ಷಣ... ಚಿಂತನೆ... Think a while ಹೇಳಿದರು...

ಸುಮನಾ ಮೇಡಂ, ನಿಮ್ಮ ಪ್ರಶ್ನೆಯೂ ಸರಿಯಾಗಿದೆ. ನನಗೂ ಇಂತಹ ಪ್ರಶ್ನೆಯು ಉದ್ಭವಿಸಿತ್ತು. ಇಂದು ಬೆಳಗ್ಗೆ ಒಂದು ಎಸ್ಸಮ್ಮೆಸ್‌ ಸಂದೇಶ ಬಂದಿತ್ತು. ಅದು ಹೀಗಿದೆ: "Easy to cry in pain. Easy to laugh in jon. But crying in joy and laughing in pain shows the real deepness of situations and ability of a person"

ಇಂತಹ ವ್ಯಕ್ತಿತ್ವದವರನ್ನೇ ಸ್ಥಿತಪ್ರಜ್ಞರೆಂದು ಕರೆಯುವರೇನೋ ಅನಿಸಿದೆ.

ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ಕ್ಷಣ... ಚಿಂತನೆ... Think a while ಹೇಳಿದರು...

ಮಲ್ಲಿಕಾರ್ಜುನ ಸರ್‌, ನಗುವು ಆರೋಗ್ಯವನ್ನು ಕಾಪಾಡುತ್ತದೆ ಎನ್ನುವುದಕ್ಕೆ ಸರಳ ಉದಾಹರಣೆ ಕೊಡಬಹುದಾದರೆ, ಯಾರಾದರೂ ಹುಷಾರಿಲ್ಲವೆಂದು ಡಾಕ್ಟ್ರ ಬಳಿ ಹೋದಾಗ ಅವರೊಡನೆ ನಮ್ಮ ಆರೋಗ್ಯದ ಬಗ್ಗೆ ತಿಳಿಸುವಾಗ ವೈದ್ಯರ ಮುಗುಳ್ನಗೆಯೇ ಎಷ್ಟೋ ವೇಳೆ ರೋಗಿಗೆ ನೆಮ್ಮದಿ, ಧೈರ್ಯ, ಸಾಂತ್ವನ ನೀಡಬಹುದು.

ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... Think a while ಹೇಳಿದರು...

ಸವಿತಾ, ನಿಮಗೆ ಹಾಗನ್ನಿಸುವುದು ಸಹಜ. ಆದರೆ, ಅದನ್ನು ನೋವನ್ನು ನುಂಗಿ ನಗುವುದು ಕಷ್ಟದ ಸಂಗತಿ. ಆದರೂ ಸಹ ಕೆಲವರಲ್ಲಿ ಅಂತಹ ಗುಣಗಳಿರುತ್ತವೆ. ನಮ್ಮ ಕಚೇರಿಯಲ್ಲೇ ಒಬ್ಬರಿದ್ದಾರೆ ನೀವು ಗಮನಿಸಿರಬಹುದು. ಕ್ಲೂ: ಹೆಸರಿನಲ್ಲಿಯೇ `ಮುನಿ'ಸಿದ್ದರೂ ಮಾತಾಡುವಾಗೆಲ್ಲ ನಗೆಯೇ ಚಿಮ್ಮುತ್ತಿರುತ್ತದೆ.

ಅಭಿಪ್ರಾಯಗಳಿಗೆ ಥ್ಯಾಂಕ್ಸ್‌.

ಗೋಪಾಲ್ ಮಾ ಕುಲಕರ್ಣಿ ಹೇಳಿದರು...

:):):):) tumba chennagi ardiddira. mattomme naguve. :)

ಕ್ಷಣ... ಚಿಂತನೆ... Think a while ಹೇಳಿದರು...

ಗೋಪಾಲ್ ಮಾ ಕುಲಕರ್ಣಿ ಯವರೆ, ಬ್ಲಾಗಿಗೆ ಸ್ವಾಗತ. ಲೇಖನ ಮೆಚ್ಚಿದ್ದಕ್ಕೆ ಹಾಗೂ ನಕ್ಕಿದ್ದಕ್ಕೆ, ಮತ್ತೊಮ್ಮೆ ನಗುವುದಕ್ಕೆ ನನಗೂ ಖುಷಿಯಾಯಿತು. ನಿಮ್ಮೆಲ್ಲರ ಪ್ರೋತ್ಸಾಹವೇ ಬರೆಯಲು ಸ್ಫೂರ್ತಿ ಕೊಡುತ್ತದೆ. ಹೀಗೆ ಬರುತ್ತಿರಿ.

ಚಂದ್ರಶೇಖರ ಬಿ.ಎಚ್.