ಗುರುವಾರ, ಸೆಪ್ಟೆಂಬರ್ 3, 2009

ಹೀಗೆಲ್ಲಾ ನಾವು ಯೋಚಿಸಿದರೆ...???

ಹೀಗೆಲ್ಲಾ ನಾವು ಯೋಚಿಸಿದರೆ...???
  1. ಕೋಪದ ತೀವ್ರತೆಯು ಬುದ್ಧಿಗಿಂತ ನಾಲಗೆಯಲ್ಲಿಯೇ ಬೇಗ ಪ್ರವಹಿಸುವುದು. ಕೋಪದ ಕೈಗೆ ಬುದ್ಧಿಕೊಟ್ಟರೆ ಆಗುವ ಅನಾಹುತಗಳು ಅನೇಕ. ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರಲಾರದು.
  2. ಹಳೆಯದನ್ನು ಅಥವಾ ಭೂತಕಾಲದಲ್ಲಿ ನಡೆದವನ್ನು ಬದಲಾಯಿಸಲು ಆಗದು. ಹಾಗೆಯೇ ಈ ವರ್ತಮಾನ ಕಾಲವನ್ನು ಭವಿಷ್ಯತ್ಕಾಲದ ಬಗೆಗೆ ಚಿಂತಿಸುತ್ತಾ/ಹುಡುಕುತ್ತಾ ಹಾಳುಮಾಡಬಾರದು.
  3. ಎಲ್ಲ ಜನರ ನಗುವಿನಲ್ಲಿಯೂ ಒಂದಲ್ಲಾ ಒಂದು ಅರ್ಥವಿರುತ್ತದೆ. ನಗುವಾಗ ಬೇರೊಬ್ಬರನ್ನು ಹಂಗಿಸುವಂತೆ, ಅಣಕಿಸುವಂತೆ ನಗದೇ ಇದ್ದರೆ ಆಯಿತು. ಹಾಗೆಂದು ನಗುವನ್ನೇ ಮರೆತರೆ ನಮ್ಮನ್ನು/ನಿಮ್ಮನ್ನು ನೋಡಿ ಇತರರು ನಕ್ಕಾರು...
  4. ಎಲ್ಲದರಲ್ಲಿಯೂ ಸೌಂದರ್ಯ, ಸೊಗಸು ಇರುತ್ತದೆ. ಆದರೆ ಅವುಗಳನ್ನು ನೋಡುವ ಕಣ್ಣುಗಳು ಕಡಿಮೆಯನ್ನಬಹುದು!
  5. ಸಂತೋಷವನ್ನು ಬೇರೊಬ್ಬರು ಬಾಳಿನಲ್ಲಿ ತರಬಹುದು, ತುಂಬಬಹುದು. ಆ ಸಂತಸದ ಕ್ಷಣಗಳಿಗಾಗಿ ಸದಾ ಅವಲಂಬನೆ ಸಲ್ಲದು. ಏಕೆಂದರೆ, ಬೇರೆಯವರ ಪ್ರಭಾವದಿಂದ ಸಂತಸ ಬರುತ್ತದೆ, ಹೋಗುತ್ತದೆ. ಆದರೆ, ನಮ್ಮಲ್ಲಿಯೇ ಸಂತಸ ಕಾಣುವ ಮನಸ್ಸಿರುವಾಗ ಪರಾಧೀನತೆ ಏಕೆ?
  6. ಮನುಷ್ಯನು ಬಾಹ್ಯಶರೀರ/ಸೌಂದರ್ಯಕ್ಕೆ ಮನಸೋತರೆ, ಪರಮಾತ್ಮ ಅಂತರಂಗ ಸೌಂದರ್ಯಕ್ಕೆ ಮಾರುಹೋಗುವವನು. ಅನೇಕ ಭಕ್ತರ ಚರಿತ್ರೆಗಳಲ್ಲಿ, ಪರಮಾತ್ಮನನ್ನು ಹಾಡಿ-ಹೊಗಳಿದ ಪದಗಳಿಂದ ಇವೆಲ್ಲ ತಿಳಿಯಬಹುದು.
ಚಂದ್ರಶೇಖರ ಬಿ.ಎಚ್.
೦೩.೦೯.೨೦೦೯
--------------------------------------------------------------------------------
ನನ್ನ ಒಂದು ಹಾಸ್ಯ ಲೇಖನ `ನಗೆಮುಗುಳು' ಮಾಸಪತ್ರಿಕೆಯ ಆಗಸ್ಟ್ ೨೦೦೯ರ ಸಂಚಿಕೆಯಲ್ಲಿ ಪ್ರಕಟವಾಗಿದೆ.
--------------------------------------------------------------------------------

6 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಚಂದ್ರಶೇಖರ್...

ಎಲ್ಲ ವಾಕ್ಯಗಳೂ ಸೊಗಸಾಗಿದೆ...
ಚಿಂತನೆಗೆ ಹಚ್ಚುತ್ತವೆ...

ತಲೆಯ ಕೋಪ ನಾಲಿಗೆಗೆ ಬರಬಾರದು...
ಕೋಪ ಬಂದರೂ ಅದು ನಮ್ಮ ಕ್ರಿಯೆಗೆ ಪರಿಣಾಮ ಬೀರಬಾರದು...

ಇಷ್ಟವಾಗುತ್ತದೆ ನಿಮ್ಮ ವಿಚಾರ.. ಚಿಂತನೆಗಳು...

ತೇಜಸ್ವಿನಿ ಹೆಗಡೆ- ಹೇಳಿದರು...

ಎಲ್ಲಾ ವಾಕ್ಯಗಳೂ ಚಿಂತನೆಗೊಳಪಡಿಸುವಂತಿವೆ..ಬದುಕಿನಲ್ಲಿ ಅಳವಡಿಸಿಕೊಳ್ಳುವಂತಿವೆ.

ಕ್ಷಣ... ಚಿಂತನೆ... bhchandru ಹೇಳಿದರು...

ಸರ್‍, ನಿಮಗೆ ಈ ಚಿಂತನೆಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು. ಕೆಲವೊಂದು ಆಂಗ್ಲದಲ್ಲಿನ ನುಡಿಗಟ್ಟುಗಳೊಡನೆ ನನ್ನ ಭಾವನೆಗಳನ್ನು ಬೆರೆಸಿದ್ದೆ.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಮೇಡಂ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಸ್ನೇಹದಿಂದ,

shivu ಹೇಳಿದರು...

ಚಂದ್ರಶೇಖರ್ ಸರ್,

ವಾಕ್ಯಗಳೆಲ್ಲಾ ನಿಜಕ್ಕೂ ಯೋಚಿಸುವಂತವು.

ನಿಮ್ಮ ಹಾಸ್ಯ ಲೇಖನ ಪ್ರಕಟಣೆಗೆ ಅಭಿನಂದನೆಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಸರ್‍, ಧನ್ಯವಾದಗಳು.