ಮಂಗಳವಾರ, ಸೆಪ್ಟೆಂಬರ್ 8, 2009

ಬೇಸರವೆ?

ಬೇಸರವೆ?

ಏನು?!
ಬೇಜಾರು ಎಂದಿರಾ??
ಹಾಗಿದ್ದರೆ,
ನೋಡಬನ್ನಿ ನಮ್ಮೂರ
ಬಜಾರು.
ಖಾಲಿಯಾದಾವು ಜೋಕೆ
ನಿಮ್ಮ ತುಂಬಿದ ಜೇಬು
ಮೂರು-ನೂರು!
ಆದರೂ, ಪಡಬೇಡಿ
ಬೇಜಾರು ಬಜಾರಿಗೆ ಬಂದು
ಬೇಜಾರಾಯಿತೆಂದು ಇಲ್ಲಿಂದ
ಬೇಗ ಜಾರದಿರಿ.

- ಚಂದ್ರಶೇಖರ ಬಿ.ಎಚ್.

4 ಕಾಮೆಂಟ್‌ಗಳು:

shivu ಹೇಳಿದರು...

ಕ್ಷಣ ಚಿಂತನೆ ಸರ್,...

ಬೇಜಾರಿನ ಬಗ್ಗೆ ಬರೆದ ಕವನ ಬೇಜಾರಿಲ್ಲದೇ ಚೆನ್ನಾಗಿ ಮೂಡಿಬಂದಿದೆ....

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಸರ್‍, ನೀವು ಬೇಸರವಿಲ್ಲದೇ ಕವಿತೆಯನ್ನು ಎಂಜಾಯ್‌ ಮಾಡಿದ್ದಕ್ಕೆ ಧನ್ಯವಾದಗಳು.
ಸ್ನೇಹದಿಂದ,

ಅನಾಮಧೇಯ ಹೇಳಿದರು...

ಬೇಜಾರಿನಿಂದ ನಿಮ್ಮ ಬಜಾರಿಗೆ ಬಂದ್ರೆ ಏನೂ ಬೇಜಾರೆ ಇಲ್ಲಂತೀರ.. ಹಾಗಾದ್ರೆ ಬೇಗ ಅಡ್ರೆಸ್ ಕೊಡಿ ಮತ್ತೆ :P

ಕ್ಷಣ... ಚಿಂತನೆ... bhchandru ಹೇಳಿದರು...

ಸುಮನಾ ಮೇಡಂ, ಖಂಡಿತ ನಮ್ಮೂರಿನ ಬಜಾರ್‌ಗೆ ನಿಮಗೆ ಸ್ವಾಗತ. ವಿಳಾಸ ಗಾಂಧೀಬಜಾರಿಗೆ ಬರಬಹುದು ಅಥವಾ ಇದ್ದೇ ಇದೆ ಜನತಾ ಬಜಾರು, ಬಿಗ್ ಬಜಾರು, ಫುಡ್ ಬಜಾರು ಇತ್ಯಾದಿ. :-)

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಚಂದ್ರು