ಶುಕ್ರವಾರ, ಸೆಪ್ಟೆಂಬರ್ 11, 2009

ಬದುಕಿಗೆ ಬೇಕಾಗುವ ಒಂದಷ್ಟು ಟಿಪ್ಸ್...

ಬದುಕಿಗೆ ಬೇಕಾಗುವ ಒಂದಷ್ಟು ಒಳ್ಳೆಯ ಆಲೋಚನೆಗಳು.

ಇವುಗಳನ್ನು ಬಾಬ್ ಹ್ಯಾನ್ಸೆನ್‌ ಎಂಬುವವರು ಸಂಗ್ರಹಿಸಿದ್ದಾರೆ. ಈತ ಕೊರಿಯನ್ ವಾರ್‍ ವೆಟೆರನ್ಸ್ ಅಡ್ವೈಸರಿ ಬೋರ್ಡಿನ ಮಾಜಿ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಮತ್ತು ಈಗಿನ ಯು.ಎಸ್. ಬಟಾನಿಕಲ್ ಗಾರ್ಡನ್‌ ನ್ಯಾಷನಲ್‌ ಫಂಡಿನ ಪ್ರಧಾನ ನಿರ್ದೇಶಕರು. ಏರ್‌ಬಾರ್ನ್ ಕ್ವಾರ್ಟಲ್ಲಿ ಎಂಬುದರಲ್ಲಿ ಇವೆಲ್ಲ ಪ್ರಕಟವಾಗಿದ್ದವಂತೆ. ಆತನ ಸಂಗ್ರಹವಾಕ್ಯಗಳನ್ನು ಕನ್ನಡೀಕರಿಸಿದ್ದೇನೆ (ಭಾವಾರ್ಥ ಎನ್ನಬಹುದು).

 1. ಅತ್ಯಂತ ತರುವುದು - ಇತರರಿಗೆ ಕೊಡುವುದು (ದಾನ, ಇತ್ಯಾದಿ)- ಅಪಾತ್ರರಿಗೆ ಕೊಡದಂತೆ ಎಚ್ಚರಿಕೆ ವಹಿಸುವುದು ಕ್ಷೇಮ.
 2. ಇಂತಹವರು ಅಪರೂಪವಾಗುತ್ತಿದ್ದಾರೆ - ನಿಸ್ವಾರ್ಥ ನಾಯಕರುಗಳು (ಇವರುಗಳ ಸಂಖ್ಯೆಯನ್ನಾಧರಿಸಿದರೆ ಅಳಿವಿನಂಚಿನಲ್ಲಿರುವವರು ಎನಬಹುದು)
 3. ಸ್ವಾಭಾವಿಕವಾದ ನಿಸರ್ಗದ ಸಂಪತ್ತು - ನಮ್ಮ ಯುವಶಕ್ತಿ ಅಥವಾ ಯೌವನ (ಇಂದು ಇದುವೇ ಮಾರಕವಾಗುತ್ತಿದೆಯೇ? ಅನಿಸಿದ್ದರೆ....)
 4. ಅತಿ ಕಠಿಣ ಸಮಸ್ಯಯಿಂದ ಹೊರಬರಬೇಕೆಂದರೆ - ಭಯ/ಹೆದರಿಕೆಯನ್ನು ತೊರೆಯಬೇಕು (ಆದರೆ, ಇತ್ತೀಚಿನ ದಿನಗಳಲ್ಲಿ ಅದನ್ನು ತೊರೆಯದೇ ಅನೇಕರು ಖಿನ್ನರಾಗಿ ತಮ್ಮನ್ನು ತಾವೇ ಸಾವಿನಂಚಿಗೆ ದೂಡಿಕೊಳ್ಳುತ್ತಿರುವರಲ್ಲಾ ಎಂಬ ವ್ಯಥೆಯಾಗುತ್ತಿದೆ)
 5. ಸರಿಯಾದ ನಿದ್ರಾಗುಳಿಗೆ - ಮನಸ್ಸಿನ ಶಾಂತಿ - (ಡಾಕ್ಟರು ಬರೆದುಕೊಡುವುದನ್ನೇ ಜನ ಅವಲಂಬಿಸುತ್ತಿದ್ದಾರೆ - ಅದಕ್ಕೇ ಮೆಡಿಕಲ್‌ಶಾಪುಗಳ ಮುಂದೆ ಜನಜಂಗುಳಿ ಕಂಡಿರುತ್ತೀರಿ)
 6. ಬದುಕಿನಲ್ಲಿ ಸೆಳೆಯತಕ್ಕಂತಹ ಶಕ್ತಿ - ಪ್ರೀತಿ (ಇದು ಬೇರೆಲ್ಲಿಗೋ ಕೊಂಡುಯುತ್ತಿದೆ ಯುವಜನತೆಯನ್ನು ಅಥವಾ ಅಮಾಯಕರನ್ನು)
 7. ಜೀವನವನ್ನು ವಿಧ್ವಂಸಕಗೊಳಿಸುವಂತಹುದು - ಗಾಳಿಮಾತು - ಗಾಸಿಪ್‌ (ಗಾಳಿಮಾತು ಸಿನೆಮಾ ನೆನಪಾಗಿದ್ದರೆ...???)
 8. ಅಪ್ರತಿಮ ಕಂಪ್ಯೂಟರ್‍ - ಮಾನವನ ಮಿದುಳು (ನಿಜಕ್ಕೂ ಹೌದು, ಇಲ್ಲವಾಗಿದ್ದರೆ ಇಂತಹ ದೂರದರ್ಶಿತ್ವದ ಮಾಯಾಗಣಕಗಳು ಮಾಯೆಯಾಗುತ್ತಿದ್ದವು. ಜಗತ್ತನ್ನೇ ಅಂಗೈಲಿ ಕೂರುವಂತೆ ಮಾಡುತ್ತಿದೆ ಇಂದಿನ ಗಣಕ ತಂತ್ರ, ಮೊಬೈಲು, ಇತ್ಯಾದಿ)
 9. ಅತಿ ಬೆಲೆಬಾಳುವ ಆಸ್ತಿ - ನಂಬಿಕೆ, ನಿಷ್ಠೆ (ಉಳಿಸಿಕೊಳ್ಳುವುದು ಭಾರೀ ಕಷ್ಟವೇ ಹೌದು)
 10. ಸುಂದರವಾದ ಪೋಷಾಕು - ಒಂದು ಮುಗುಳ್ನಗೆ (ಪಟ್ಟಣಿಗರಲ್ಲಿ ಇದು ಸ್ವಲ್ಪ ಕಡಿಮೆಯಾಗೇ ಸಿಗಬಹುದು ಅಥವಾ ಆಷಾಢಭೂತಿತನಕ್ಕೆ ತೋರಿಕೆಯಾಗಿರಬಹುದು)
 11. ತೃಪ್ತಿಯನ್ನೀಡುವ ಕೆಲಸ - ಅಸಹಾಯಕರಿಗೆ ಸಹಾಯಹಸ್ತ ನೀಡುವುದು (ಇಂದಿನ ಪರಿಸ್ಥಿತಿಗಳಲ್ಲಿ ಸ್ವಲ್ಪ ಅಮಾಯಕತೆಯನ್ನು ಸಹಾಯಕವಾಗಿ ಆವಾಹಿಸಿಕೊಳ್ಳುತ್ತದೆ)
 12. ವಿನಾಶಕ್ಕೆ ಕಾರಣವಾಗುವ ಅಭ್ಯಾಸ - ಚಿಂತೆ - (ಚಿಂತ್ಯಾಕ ಮಾಡತಿ ಚಿನ್ಮಯನಿದ್ದಾನೆ ಎಂದು ಚಿಂತೆಯನ್ನು ದೂರಮಾಡಲು ಯತ್ನಿಸೋಣವೇ?)

ಸದ್ಯಕ್ಕೆ ಇಷ್ಟು ಸಾಕೆನಿಸಿತು. ಕಂಸದಲ್ಲಿರುವದರ ಕಡೆಗೆ ಎಚ್ಚರಿಕೆಯ ನೋಟದಿಂದ ನೋಡಿ, ಕನ್ಸದಾಚೆಯಲ್ಲಿರುವ ಒಳ್ಳೆಯ ಆಲೋಚನೆಗಳನ್ನು ತೆಗೆದುಕೊಳ್ಳೋಣ. ಇಷ್ಟವಾಯಿತೆ? ಆಗಿದ್ದರೆ ಒಂದೆರಡು ವಾಕ್ಯಗಳನ್ನು ಕಾಮೆಂಟಿಸಿರಿ.

ಲೇಖನ: ಚಂದ್ರಶೇಖರ ಬಿ.ಎಚ್.

14 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ- ಹೇಳಿದರು...

ಎಲ್ಲಾ ಸಾಲುಗಳೂ ತುಂಬಾ ಚೆನ್ನಾಗಿವೆ. ಧನ್ಯವಾದಗಳು. "ಇವುಗಳನ್ನು ಬಾಬ್ ಹ್ಯಾನ್ಸೆನ್‌ ಎಂಬುವವರು." ಈ ಸಾಲಿನಲ್ಲಿ ಸಣ್ಣ ವ್ಯಾಕರಣ ದೋಷವಿದೆ. ಯಾವುದೋ ಒಂದು ಪದ ಮಧ್ಯದಲ್ಲಿ ಬಿಟ್ಟುಹೋಗಿದೆ. ದಯವಿಟ್ಟು ಗಮನಿಸಿ.

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಚಂದ್ರು...

ಎಲ್ಲವೂ ಚಿಂತನೆಗೆ ಯೋಗ್ಯವಾದ ಸಾಲುಗಳು...
ಒಂದು ಸಾರಿ ಎಲ್ಲವನ್ನೂ ಓದಿಕೊಂಡರೆ ಮನಸ್ಸು ಫ್ರೆಷ್ ಆಗುತ್ತದೆ..

ಚಂದದ ವಾಕ್ಯಗಳಿಗೆ ಧನ್ಯವಾದಗಳು..

PARAANJAPE K.N. ಹೇಳಿದರು...

ಚ೦ದ್ರು
ಮನಸ್ಸನ್ನು ಚಿ೦ತನೆ ಹಚ್ಚುವ ಬರಹಗಳನ್ನು ಅನುವಾದಿಸಿ ಕೊಟ್ಟಿದ್ದೀರಿ. ಚೆನ್ನಾಗಿವೆ.

AntharangadaMaathugalu ಹೇಳಿದರು...

ಚಂದ್ರು ಅವರೆ....
ಕ್ಷಣ ಚಿಂತಿಸಿ ಮರೆಯುವಂತದ್ದಲ್ಲ.... ಅನುಕ್ಷಣವೂ ಚಿಂತಿಸಿ, ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕಾದಂತಹ ವಾಕ್ಯಗಳು. ಧನ್ಯವಾದಗಳು........
ಶ್ಯಾಮಲ

Dr. B.R. Satynarayana ಹೇಳಿದರು...

ಹೊಸ ಬಗೆಯ ಯೋಚನೆ! ಯೋಗ್ಯವಾದ ಸಾಲುಗಳನ್ನೇ ಕೊಟ್ಟಿದ್ದೀರಿ.

ಕ್ಷಣ... ಚಿಂತನೆ... bhchandru ಹೇಳಿದರು...

ತೇಜಸ್ವಿನಿ ಮೇಡಂ, ಇದರಲ್ಲಿನ ವ್ಯಾಕರಣ ದೋಷವೊಂದನ್ನು ನಾನು ಗಮನಿಸಿರಿಲಿಲ್ಲ. ಎರಡು ದಿನ ಕಚೇರಿಗೆ ರಜೆಯಿದ್ದುದರಿಂದ ಕಾಮೆಂಟ್ಸ್ ನೋಡಲು ಆಗಿರಲಿಲ್ಲ. `ಸಂಗ್ರಹಿಸಿದ್ದಾರೆ' ಎಂಬ ಪದವು ಬಿಟ್ಟುಹೋಗಿತ್ತು. ಇದೀಗ ಸರಿಪಡಿಸಿದ್ದೇನೆ. ಇದನ್ನು ತಿಳಿಸಿದ್ದಕ್ಕಾಗಿ ಹಾಗೂ ಅನಿಸಿಕೆಗಳಿಗೆ ಧನ್ಯವಾದಗಳು.

ವಿಶ್ವಾಸದಿಂದ,
ಚಂದ್ರಶೇಖರ ಬಿ.ಎಚ್.

ಕ್ಷಣ... ಚಿಂತನೆ... bhchandru ಹೇಳಿದರು...

ಪ್ರಕಾಶಣ್ಣ,

ನಿಮ್ಮ ಮನಸ್ಸು ಫ್ರೆಷ್ ಆಗಿದ್ದಕ್ಕೆ ಅಭಿನಂದನೆಗಳು. ಹೀಗೆಯೆ ಬರುತ್ತಿರಿ. ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್ಗಳು.

ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ಲೇಖನ ಮತ್ತು ಚಿಂತನೆಗಳನ್ನು ಮೆಚ್ಚಿಕೊಂಡಿದ್ದೀರಿ. ಹೀಗೆಯೇ ನಿಮ್ಮ ಪ್ರೋತ್ಸಾಹ ಬರುತ್ತಿರಲಿ.
ಧನ್ಯವಾದಗಳೊಂದಿಗೆ,
ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಶ್ಯಾಮಲಾ ಮೇಡಂ, ಮೊದಲಬಾರಿಗೆ ಈ ಬ್ಲಾಗಿಗೆ ಬರುತ್ತಿದ್ದೀರಿ. ನಿಮಗೆ ಸುಸ್ವಾಗತ. ಪದೇ ಪದೇ ನೆನಪಿಸಿಕೊಳ್ಳುವಂತಹ ಚಿಂತನೆಗಳನ್ನು ಮೆಚ್ಚಿದ್ದೀರಿ. ಆ ಕ್ರೆಡಿಟ್‌ ಬಾಬ್ ಹ್ಯಾನ್ಸೆನ್‌ ಇವರಿಗೆ ಸೇರಬೇಕು. ಹೀಗೆಯೇ ಬರುತ್ತಿರಿ.

ಧನ್ಯವಾದಗಳು,

ಚಂದ್ರು

ಕ್ಷಣ... ಚಿಂತನೆ... bhchandru ಹೇಳಿದರು...

ಸತ್ಯನಾರಾಯಣ ಸರ್‍, ನಿಮ್ಮ ಭೇಟಿಗೆ ಸುಸ್ವಾಗತ. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.

ಚಂದ್ರು

ಸಾಗರದಾಚೆಯ ಇಂಚರ ಹೇಳಿದರು...

ಚಂದ್ರು ಸರ್,
ತುಂಬಾ ಒಳ್ಳೆಯ ಹಿತನುಡಿಗಳು
ತಿಳಿಸಿದ್ದಕ್ಕೆ ಧನ್ಯವಾದಗಳು

shivu ಹೇಳಿದರು...

ಕ್ಷಣ ಚಿಂತನೆ ಸರ್,

ಎಲ್ಲವೂ ಚಿಂತನೆಗೆ ಹಚ್ಚುವಂತ ಸಾಲುಗಳು.

ಇನ್ನಷ್ಟು ಬರೆಯಿರಿ....

ಕ್ಷಣ... ಚಿಂತನೆ... bhchandru ಹೇಳಿದರು...

ಗುರುಮೂರ್ತಿಯವರೆ, ಹಿತನುಡಿಗಳೆಂದು ಹಿತವಾಗಿ ತಿಳಿಸಿದ್ದೀರಿ. ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಸರ್‍, ಪ್ರಯತ್ನಿಸುತ್ತೇನೆ. ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸು.