ಶನಿವಾರ, ಸೆಪ್ಟೆಂಬರ್ 19, 2009

ದಾರಿ ಕಾಣದಾಗಿದೆ...

ಮೊನ್ನೆ ದಿನ ನಮ್ಮ ಸಂಸ್ಥೆಯ ಲೈಬ್ರರಿಯಿಂದ ನನಗೊಂದು ಫೋನ್‌ ಕಾಲ್‌.

ಆ ಕಡೆಯಿಂದ: ಚಂದ್ರು, ಇಲ್‌ ಬನ್ರೀ... ಕ್ಯಾಮೆರಾ ತನ್ರೀ...
ಈ ಕಡೆಯಿಂದ: ಯಾಕೆ? (ನನ್ನ ಪ್ರಶ್ನೆ)
ಆ ಕಡೆಯಿಂದ: ಒಂಥರಾ ಪಕ್ಷಿ ಬಂದಿದೆ... ಕಿಟಕಿ ಒಳ್ಗೆ ಐತೆ, ಈ ಕಡೆ ಗ್ಲಾಸ್‌ ತೆಗೆದರೆ ಆಫೀಸ್‌ ಒಳ್ಗೆ ಬರುತ್ತೆ, ಫೋಟೋ ಹಿಡಕ ಬನ್ರೀ,
ಈ ಕಡೆಯಿಂದ: ಸರಿ, ಬರ್‍ತೀನಿ...
©Photo: Chandrashekara B.H., Sep2009
ಅಲ್ಲಿಗೆ ಹೋದರೆ, ಆ ಹಕ್ಕಿಯ ಪರದಾಟ ಹೀಗಿತ್ತು. ಕಿಟಕಿಗೆ ಹಾಕಿದ್ದ ತಂತಿ ಜಾಲರಿಯಿಂದ ಒಳಗೆ ಹೇಗೋ ನುಸುಳಿಬಿಟ್ಟಿದೆ. ಆದರೆ, ಹೊರಹೋಗಲು ಆಗುತ್ತಿಲ್ಲ. ಅಲ್ಲಿಯೇ ಪರಪರ ಪರದಾಡುತ್ತಿದೆ. ಒಂದೆರಡು ನಿಮಿಷ ಕೂರುತ್ತೆ, ಮತ್ತೆ ತಂತಿಜಾಲರಿಯಲ್ಲಿ ತನ್ನ ಕೊಕ್ಕನ್ನು ತೂರಿಸಿ ಹೊರಹೋಗಲು ಪ್ರಯತ್ನಸುತ್ತೆ, ಸೋಲುತ್ತೆ..
ನನಗೋ ಅಷ್ಟು ಹತ್ತಿರದಿಂದ ಆ ಹಕ್ಕಿ ಫೋಟೋ ತೆಗೆಯಲು ಆಗುತ್ತಿಲ್ಲ. ಕಾರಣ ಒಂದೆಡೆ ಅದು ನಿಲ್ಲುತ್ತಿಲ್ಲ. ಎರಡನೇದು, ಕಿಟಕಿಯ ಗಾಜು ಮಸುಕಾಗಿದೆ. ಕೊನೆಗೂ ಹೇಗೋ ಕ್ಯಾಮೆರಾದಲ್ಲಿ ಸೆರೆ ಹಿಡಿದೆ. ಆಗ ಆ ಹಕ್ಕಿಯೂ ಹೀಗೆ ಬೇಡಿಕೊಳ್ಳುತ್ತಿರಬಹುದೆ? ಎನಿಸಿತು.

ದಾರಿ ಕಾಣದಾಗಿದೆ ರಾಘವೇಂದ್ರನೆ,
ದಯವ ತೋರಿ ನಡೆಸು ಬಾ (ಹೊರಕ್ಕೆ ಕರೆದುಕೋ)ಯೋಗಿವರ್ಯನೇ....


ಅಲ್ಲಿರುವುದು ದೊಡ್ಡ ಕಿಟಕಿ, ಹಾಗೂ ಹೀಗೂ ಅದು ಅಲ್ಲಿಂದ ಹೊರಹೋಗಲು ಕಾತರಿಸುತ್ತಿತ್ತು. ನಾನು, ಆತನಿಗೆ ಈ ಗಾಜನ್ನು ಸ್ವಲ್ಪವೇ ತೆಗೆದಿರು, ತನಗೆ ತಾನೇ ಅದು ಹೇಗೋ ಒಳಗೆ ಬಂದ ದಾರಿ ಹುಡುಕಿ ಹೊರಹೋಗುತ್ತದೆ, ಎಂದು ತಿಳಿಸಿ ನನ್ನ ರೂಮಿಗೆ ಬಂದೆನು.


ಮಧ್ಯಾಹ್ನದ ವೇಳೆಗೆ ಅದು ಹೇಗೋ ತಂತಿ ಜಾಲರಿಯಲ್ಲಿಯೇ ತಾನು ಸಾಗುವಷ್ಟು ಜಾಗ ಹುಡುಕಿ ಹೊರಹೋಗಿತ್ತು.
---

6 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ನಮಗೆ ಫೋಟೋಗಿಂತ ಹಕ್ಕಿಯ ಜೀವ ಮತ್ತು ಬದುಕು ಮುಖ್ಯ. ತುಂಬಾ ಒಳ್ಳೆಯ ಕೆಲಸ ಮಾಡಿದಿರಿ...

ಕ್ಷಣ... ಚಿಂತನೆ... ಹೇಳಿದರು...

thanks sir. aavattu naanu kitaki glass tegesadiddare, adu horage hoguttitto illavo tiliyuttiralilla. yakandre, aa kitakigalu 20-30 feet ettaradavu.

snehadinda,
chandru

ಸಾಗರದಾಚೆಯ ಇಂಚರ ಹೇಳಿದರು...

ಸರ್,
ಹಕ್ಕಿಯ ಜೀವ ಅಮೂಲ್ಯ ಬಿಡಿ, ಹಕ್ಕಿ ಹಾರಾಡಬೇಕು, ಭಂದಿಯಾಗಿರಬಾರದು ಅಲ್ವ, ಸ್ವತಂತ್ರತೆ ಎಲ್ಲರ ಸ್ವತ್ತು
ನೀವು ಹಕ್ಕಿಗೆ ಪುನಃ ಸ್ವಾತಂತ್ಯ್ರ ಕೊಟ್ಟಿದಿರ

ಕ್ಷಣ... ಚಿಂತನೆ... ಹೇಳಿದರು...

gurumurthy avare, dhanyavaadagalu.

ತೇಜಸ್ವಿನಿ ಹೆಗಡೆ ಹೇಳಿದರು...

ಅವರಿಗೆ ಆಟ ಪಾಪ ಹಕ್ಕಿ ಪ್ರಾಣ ಸಂಕಟ! ಅದಕ್ಕೆ ಹಾರಾಡುವ ಸ್ವಾತಂತ್ರ್ಯ ಕೊಟ್ಟು ಒಳ್ಳೆಯದನ್ನು ಮಾಡಿದ್ದೀರಿ.

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿ ಮೇಡಂ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಚಂದ್ರು